ಫಿರ್ಯಾದಿ ಶ್ರೀ ಸೋಮಲಿಂಗಪ್ಪ ತಂದೆ ಪರಸಪ್ಪ ಕನಕಗಿರಿ, ನಮ್ಮ ಪಿತ್ರಾರ್ಜಿತ ಆಸ್ತಿ
ಸಂಭಂದವಾಗಿ ನನಗೆ ಮತ್ತು ನನ್ನ ತಮ್ಮನಾದ ಮೈಲಾರೆಪ್ಪ ವಯಸ್ಸು: 45 ವರ್ಷ ಇಬ್ಬರ ಮಧ್ಯ ವಿವಾದ ಉಂಟಾಗಿ
ವೈಷಮ್ಯವಿದ್ದು ಆಗಾಗ್ಗೆ ನನ್ನೊಂದಿಗೆ ವಿನಾಕಾರಣ ತಂಟೆ ತಕರಾರು ತಗೆಯುತ್ತಾ ಜಗಳ ಮಾಡುತ್ತಾ ಬಂದಿರುತ್ತಾರೆ.
ನಿನ್ನೆ ದಿನಾಂಕ: 31-12-2016 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಮ್ಮೂರ ಗ್ರಾಮ ಪಂಚಾಯತ ಕಾರ್ಯಲಯದ
ಮುಂಭಾಗ ಡಾಂಬರ್ ರೋಡ ಮರುನಿರ್ಮಾಣ ಕಾರ್ಯಕ್ರಮವಿದ್ದುದರಿಂದ ನಾನು ಕಾರ್ಯಕ್ರಮ ನೋಡಿ ವಾಪಸ್ಸು ನಮ್ಮ
ಮನೆಯ ಕಡೆಗೆ ಹೋಗುತ್ತಿರುವಾಗ ನನ್ನ ತಮ್ಮನಾದ ಮೈಲಾರೆಪ್ಪ 45 ವರ್ಷ, ಆತನ ಹೆಂಡತಿಯಾದ ಶ್ರೀಮತಿ ನಾಗಮ್ಮ
40 ವರ್ಷ ಹಾಗೂ ಅವರ ಮಕ್ಕಳಾದ ದಿವಾಕರ 25 ವರ್ಷ, ಶಿವಕುಮಾರ 23 ವರ್ಷ ಎಲ್ಲರೂ ಸೇರಿ ನನಗೆ ಏಕಾಏಕಿಯಾಗಿ
ಅಡ್ಡಗಟ್ಟಿ ತಡೆದು ನಿಲ್ಲಿಸಿ “ ಏನಲೇ ಸೂಳೆ ಮಗನೇ ನೀನು ನಮ್ಮ ಪಾಲಿಗೆ ಬಂದ ಜಮೀನಿನಲ್ಲಿ ಪಾಲು ಕೇಳುತ್ತೀಯಾ
ಎಲ್ಲಿ ಇದೆ ನಿನ್ನ ಜಮೀನು ನಿನ್ನದು ಬಹಾಳ ಆಗಿದೆ ” ಅಂತಾ ನಾಗಮ್ಮಳು ನನ್ನ ಮೈಮೇಲಿನ ಅಂಗಿ ಹಿಡಿದು
ಎಳೆದಾಡಿ ಕಪಾಳಕ್ಕೆ ಹೊಡೆಬಡೆ ಮಾಡಿದಾಗ ನನ್ನ ತಮ್ಮ ಮತ್ತು ತಮ್ಮನ ಮಕ್ಕಳು ಎಲ್ಲರೂ ಸೇರಿ ದರದರನೇ
ನನ್ನ ಅಂಗಿಯ ಕೊರಳು ಪಟ್ಟಿ ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿ ಕಾಲಿನಿಂದು ಒದ್ದಿದ್ದು ಇರುತ್ತದೆ.
ನಂತರ ಅಲ್ಲಿಯೇ ಇದ್ದ ನಮ್ಮೂರ ಮೇಹೇಂದ್ರಕುಮಾರ, ಬೆಟದಪ್ಪ, ಬೆಟದಪ್ಪ ಹುರಕಡ್ಲಿ, ಹಾಗೂ ಲಿಂಗಪ್ಪ
ಎಲ್ಲರೂ ಸೇರಿ ಜಗಳ ಬಿಡಿಸಿದರು. ಆಗ ಮೇಲಿನ ನಾಲ್ಕು ಜನರು ನನಗೆ “ ಇದೊಂದು ಸಾರಿ ಉಳಿದುಕೊಂಡಿ ಮಗನೇ
ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ” ಅಂತಾ ಜೀವದ ಬೆದರಿಕೆ ಹಾಕಿ
ಅಲ್ಲಿಂದ ಹೊರಟು ಹೋದರು. ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 02/2017 ಕಲಂ 143, 147, 354, 323, 504, 506 ಸಹಿತ 149 ಐ.ಪಿ.ಸಿ:
0 comments:
Post a Comment