Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, January 9, 2017

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 01/2017 ಕಲಂ 87 Karnataka Police Act.

ಪಿ.ಎಸ್.. ಹಾಗೂ ಸಿಬ್ಬಂದಿಯವರು ಇಂದು ಸಾಯಾಂಕಾಲ 16-15 ಗಂಟೆಗೆ ಹನಮಸಾಗರದ ಹೈಸ್ಕೂಲದಲ್ಲಿ ಜಂಪ್ ರೋಪ್ ಕ್ರೀಡಾಕೂಟದ ಬಂದೋಬಸ್ತ್ ದಲ್ಲಿದ್ದಾಗ ಮನ್ನೇರಾಳ ಗ್ರಾಮದಲ್ಲಿ ಮಂಗಲ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಅಲ್ಲೇ ಹಾಜರಿದ್ದ ಇಬ್ಬರು ಪಂಚರಾದ 1] ಚಂದಪ್ಪ ತಂದೆ ಬಸಪ್ಪ ಗುನ್ನಾಳ 2] ಚಂದನಗೌಡ ತಂದೆ ಬಸನಗೌಡ ಪೊಲೀಸ್ ಪಾಟೀಲ್ ಇಬ್ಬರು, ಸಾ: ಮನ್ನೇರಾಳ ರವರೊಂದಿಗೆ ಸರಕಾರಿ ಜೀಪ್ ಮತ್ತು ಮೋಟಾರ್ ಸೈಕಲ್ ಮೇಲೆ ಹೊರಟು ಮನ್ನೇರಾಳ ಗ್ರಾಮ ತಲುಪಿ ರೋಡಿನಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಚಾಲಕನನ್ನು ಜೀಪ್ ಹತ್ತಿರ ಬಿಟ್ಟು 100 ಮೀಟರ್ ಕಾಲು ನಡೆಗೆಯಲ್ಲಿ ಹೋಗಿ ಮಂಗಲ ಭವನದ ಹಿಂದೆ ಮರೆಯಾಗಿ ನಿಂತು ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಲಿ ತೊಡಗಿದ್ದ 9 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 860/- ನಗದು ಸಿಕ್ಕಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿ ಯಾದಿಯೊಂದಿಗೆ ವಿನಂತಿಸಿಕೊಂಡು ಮಾನ್ಯ ನ್ಯಾಯಾಲಯದ ಅನುಮತಿ ಆದೇಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 05/2017 ಕಲಂ 279, 338, 283 ಐ.ಪಿ.ಸಿ:.
ಫಿರ್ಯಾದಿದಾರರಾದ ಶ್ರೀ ಶೇಖರಪ್ಪ ಕವಲೂರ. ಸಾ: ದದೇಗಲ್ ಇವರು ಠಾಣೆಗೆ ಫಿರ್ಯಾದಿಯನ್ನು ನೀಡಿದ್ದು ದಿ:08-01-17 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರು ತನ್ನ ಸ್ನೇಹಿತನೊಂದಿಗೆ ತಮ್ಮ ಹೊಲದಿಂದಾ ವಾಫಾಸ್ ಊರಿಗೆ ಅಂತಾ ತಮ್ಮ ಮೋಟಾರ ಸೈಕಲ್ ದಲ್ಲಿ ಗದಗ-ಕೊಪ್ಪಳ ನ್.ಹೆಚ್-63 ರಸ್ತೆಯ ಕೋಳೂರ ಕ್ರಾಸ್ ಇನ್ನೂ ಮುಂದೆ 100 ಮೀಟರ ಅಂತರ ದಲ್ಲಿ ಬರುತ್ತಿದ್ದಾಗ, ಅದೇ ಸಮಯಕ್ಕೆ ತಮ್ಮ ಮುಂದೆ ಕೊಪ್ಪಳದ ಕಡೆಗೆ ಮೋಟಾರ ಸೈಕಲ್ ನಂ: ಕೆಎ-37/ಇಸಿ-1080 ನೇದ್ದರ ಚಾಲಕನು ತನ್ನ ಗಾಡಿಯ ಹಿಂದೆ ತಿಮ್ಮಯ್ಯ ಎಂಬುವವರಿಗೆ ಕೂಡ್ರಿಸಿಕೊಂಡು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ಹೋಗುವಾಗ ತನ್ನ ಮುಂದೆ ರಸ್ತೆಯ ಮಧ್ಯದಲ್ಲಿ ಟೈರ ಪಂಕ್ಚರ ಆಗಿ ನಿಲ್ಲಿಸಿದ್ದ ಕ್ಯಾಂಟರ ವಾಹನದ ನಂ: ಕೆಎ-25/ಬಿ-4284 ನೇದ್ದನ್ನು ಗಮನಿಸದೇ ನಿರ್ಲಕ್ಷ್ಯತನದಿಂದಾ ಕ್ಯಾಂಟರ ಹಿಂದೆ ಹಾಯಿಸಿ ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮೋಟಾರ ಸೈಕಲ್ ಸವಾರ ಪರಸಪ್ಪ ಹಡಪದ. ಹಾಗೂ ಹಿಂಬದಿ ಸವಾರ ತಿಮ್ಮಯ್ಯ ಎಂಬುವವರಿಗೆ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 01/2017 ಕಲಂ 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 08-01-2017 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ವಾಯುವಿಹಾರದಿಂದ ವಾಪಸ  ಯಲಬುರ್ಗಾ ಪಟ್ಟಣದ ಓಜನಹಳ್ಳಿ ಪೆಟ್ರೋಲ ಬಂಕ ಹತ್ತಿರ ಬರುತ್ತಿದ್ದಾಗ ಟಾಕ್ಟರ ನಂ;ಕೆ.37/ಟಿಬಿ-2383 ಮತ್ತು ಅದರ ಟ್ರೆಲರ ನಂ:ಕೆ.-37/ಟಿಬಿ-2384 ನೇದ್ದರ ಚಾಲಕನು ತನ್ನ ಟಾಕ್ಟರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಯಲಬುರ್ಗಾ ಪಟ್ಟಣದ ಓಜನಹಳ್ಳಿ ಪೆಟ್ರೋಲ ಬಂಕಗೆ ಯಾವುದೇ ಸಿಗ್ನಲ್ ಕೊಡಲೇ ಒಮ್ಮಿಂದೊಮ್ಮಲೇ ಬಲಕ್ಕೆ ತೆಗೆದುಕೊಂಡಿದ್ದರಿಂದ ಅದೇ ವೇಳೆಗೆ ಕೊಪ್ಪಳಕಡೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಕಡೆಗೆ ಮೋ.ಸೈಕಲ ನಂ:ಕೆ.-37/ಡಬ್ಲು -9094 ನೇದ್ದನ್ನು ತಳ್ಳಿಕೊಂಡು ಬರುತ್ತಿದ್ದ 1] ರವಿಕುಮಾರ ತಂದೆ ಗವಿಸಿದ್ದಪ್ಪ ಸುಂಕದರ ಸಾ: ಬೆಣಕಲ್ಲ 2] ಕಳಕೇಶ ತಂದೆ ನಾಗಪ್ಪ ಬಾಚಲಾಪೂರ ಸಾ: ಯಲಬುರ್ಗಾ ರವರಿಗೆ ಟಾಕ್ಟರ ಚಾಲಕನು ಜೋರಾಗಿ ಟಕ್ಕರಕೊಟ್ಟು ಅಪಘಾತ ಪಡಿಸಿದ್ದರಿಂದ ಸದರಿ ಇಬ್ಬರಿಗೂ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಮತ್ತು ಅಪಘಾತ ಪಡಿಸಿದ  ಟಾಕ್ಟರ ಚಾಲಕನು ಓಡಿ ಹೋಗಿದ್ದು ಆತನ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ.   ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 08/2017 ಕಲಂ  323, 354, 504, 506 ಸಹಿತ 34 ಐ.ಪಿ.ಸಿ:.
ನಿನ್ನೆ ದಿನಾಂಕ: 07-01-2017 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ನಾನು ಹೊಸ ಹಿರೆಬೆಣಕಲ್ ಗ್ರಾಮದಲ್ಲಿ ಅಂಗಡಿಗೆ ಸೊಳ್ಳೆ ಬತ್ತಿ ತರಲು ಹೋಗಿ ವಾಪಸ್ಸು ಮನೆಗೆ ಬರುತ್ತಿರುವಾಗ ಹನುಮಂತ ದೇವರ ಗುಡಿ ಹತ್ತಿರ ನನ್ನ ಗಂಡನಾದ ಶಿವಪ್ಪ ಮತ್ತು ಆತನ ಅಣ್ಣಂದಿರಾದ ರಾಮಣ್ಣ, ಹನುಮಪ್ಪ ಮೂರು ಜನರು ಕೂಡಿಕೊಂಡು ಬಂದು “ ಏನಲೇ ಬೊಸುಡಿ ನೀನು ಯಾರು ಜೊತೆಗೆ ಇದ್ದಿಯಾ ಸೂಳೇ, ನಿನಗೆ ಎಷ್ಟು ಜನರು ಬೇಕು ” ಅಂತಾ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಾಡುತ್ತಿರುವಾಗ ನಾನು ಅವರಿಗೆ ನೀವ್ಯಾಕೇ ನನ್ನೊಂದಿಗೆ ಜಗಳಕ್ಕೆ ಬರುತ್ತಿರಾ ನಿಮ್ಮ ನನ್ನ ಸಂಭಂದ ಮುಗಿದು ಹೋಗಿದೆ ಮತ್ತೆ ಯಾಕೇ ನನ್ನ ತಂಟೆಗೆ ಬರುತ್ತೀರಿ ಅಂತಾ ಹೇಳಿದ್ದಕ್ಕೆ ಅವರು ಸಿಟ್ಟಿಗೆ ಬಂದು ಮೂರು ಜನರು ನನ್ನನ್ನು ಕುತ್ತಿಗೆ ಹಿಡಿದು ಮೈಕೈ ಮುಟ್ಟಿ ಎಳೆದಾಡಿ ಕೈಗಳಿಂದ ಹೊಡೆಬಡೆ ಮಾಡಿ ಮಾನಭಂಗ ಮಾಡಿರುತ್ತಾರೆ. “ ಲೇ ಸೂಳೆ ನೀನು ಗಂಡನನ್ನು ಬಿಟ್ಟು ಹೇಗೆ ಬಾಳ್ವೆ ಮಾಡುತ್ತೀ ನೋಡುತ್ತೇವೆ ಇನ್ನೊಮ್ಮೆ ಸಿಗು ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲಾ ” ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.  ನನಗೆ ಕುತ್ತಿಗೆ ಹತ್ತಿರ ಚೂರಿದ ಗಾಯವಾಗಿದ್ದರಿಂದ  ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬಂದು ಚಿಕಿತ್ಸೆ   ಚಿಕಿತ್ಸೆ ಪಡೆದು ನಂತರ ಮನೆಯಲ್ಲಿ ಚೆರ್ಚಿಸಿ ಈ ದಿವಸ ತಡವಾಗಿ ಠಾಣೆಗೆ ಬಂದು ಈ ನನ್ನ ಹೇಳಿಕೆ ದೂರನ್ನು ಕೊಟ್ಟಿರುತ್ತೇನೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 09/2017 ಕಲಂ  341, 323, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:- 08-01-2016 ರಂದು ರಾತ್ರಿ 7:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಉಮೇಶ ತಂದೆ ಮಾರೆಪ್ಪ ಭಜೆಂತ್ರಿ, ಫೀರ್ಯಾದಿಯನ್ನು ನೀಡಿದ್ದು, " ನಮಗೂ ಮತ್ತು ನಮ್ಮ ಚಿಕ್ಕಪ್ಪನಾದ ದುರುಗಪ್ಪ ತಂದೆ ಅಮರಪ್ಪ, ಇವರಿಗೂ ಹೊಲದ ಬದುವಿನ ವಿಚಾರದಲ್ಲಿ ವೈಷಮ್ಯ ಇರುತ್ತದೆ. ನಿನ್ನೆ ದಿನಾಂಕ:    07-01-2017 ರಂದು ಸಂಜೆ 5:30 ಗಂಟೆಯ ಸುಮಾರಿಗೆ ನಾನು ನಮ್ಮೂರು ಲಕ್ಕಮ್ಮ ದೇವಿ ಹೋಟಲ ಹತ್ತಿರ ಬರುತ್ತಿರುವಾಗ 1] ದುರುಗಪ್ಪ ತಂದೆ ಅಮರಪ್ಪ, 50 ವರ್ಷ ಹಾಗೂ ಆತನ ಮಕ್ಕಳಾದ 2] ರಮೇಶ 26 ವರ್ಷ, 3] ಹನುಮೇಶ, 24 ವರ್ಷ, ಹಾಗೂ ಮಗಳ ಗಂಡನಾದ 4] ಹುಲಗಪ್ಪ ತಂದೆ ನಾಗಪ್ಪ 40 ವರ್ಷ ಸಾ: ಕನಕಗಿರಿ ಇವರುಗಳು ಕೂಡಿಕೊಂಡು ನನ್ನ ಹತ್ತಿರ ಬಂದು ನನಗೆ ಅಕ್ರಮವಾಗಿ ಅಡ್ಡಗಟ್ಟಿ ತಡೆದು ನಿಲ್ಲಿಸಿ “ ಏನಲೇ ಸೂಳೇ ಮಗನೇ ನೀನು ಗದ್ದೆ ಕಣಿವೆ ಸವರಿದ್ದಕ್ಕೆ ಬಹಾಳ ಮಾತನಾಡಿದ್ದೀ ಮಗನೇ ನಿನ್ನನ್ನು ಇವತ್ತು ಮುಗಿಸಿಬಿಡುತ್ತೇವೆ ” ಅಂತಾ ಹೇಳಿ ಎಲ್ಲರೂ ಮೈಮೇಲೆ ಬಿದ್ದು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಒಮ್ಮಲೇ ನನ್ನ ಮೈಮೇಲಿನ ಅಂಗಿ ಹಿಡಿದು ಎಳೆದಾಡಿದಾಗ ರಮೇಶನು ಕೈಗಳಿಂದ ಮುಖಕ್ಕೆ ಗುದ್ದಿದನು. ನಂತರ ಅಲ್ಲಿಯೇ ಇದ್ದ ನನ್ನ ಅಣ್ಣನಾದ ನಾಗರಾಜನು ಬಿಡಿಸಲು ಬಂದಾಗ ಆತನಿಗೂ ಸಹ ಹನುಮೇಶ, ಹುಲಗಪ್ಪ, ಇಬ್ಬರೂ ಸೇರಿ ಆತನಿಗೂ ಸಹ ಕೈಗಳಿಂದ ಮುಖಕ್ಕೆ ಎದೆಗೆ ಹೊಡೆಬಡೆ ಮಾಡಿ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರ ದುರುಗಪ್ಪ ತಂದೆ ಬಡಕಪ್ಪ, ವಯಸ್ಸು: 26 ವರ್ಷ, ಹಾಗೂ ಮಾಳಪ್ಪ ತಂದೆ ಕನಕಪ್ಪ 36 ವರ್ಷ ಇವರುಗಳು ಬಂದು ಜಗಳ ಬಿಡಿಸಿದರು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
6] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 10/2017 ಕಲಂ  341, 323, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ:- 08-01-2017 ರಂದು ರಾತ್ರಿ 8:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ದುರುಗಪ್ಪ ತಂದೆ ಅಮರಪ್ಪ ಭಜಂತ್ರಿ, ಫಿರ್ಯಾದಿಯನ್ನು ನೀಡಿದ್ದು, " ನನ್ನ ಹೆಂಡತಿಯ ಅಕ್ಕಳ ಗಂಡನಾದ ಮಾರೆಪ್ಪನಿಗೂ ನಮಗೂ ಈಗ್ಗೆ ಸುಮಾರು 5-6 ವರ್ಷಗಳಿಂದ ಜಮೀನಿನ ಬದುವಿನ ಸಂಭಂದವಾಗಿ ವೈಷಮ್ಯ ಉಂಟಾಗಿ ಜಗಳ ಮಾಡುತ್ತಾ ಬಂದಿರುತ್ತಾರೆ. ನಿನ್ನೆ ದಿನಾಂಕ: 07-01-2017 ರಂದು ಮುಂಜಾನೆ 7:30 ಗಂಟೆಯ ಸುಮಾರಿಗೆ ನಾನು ಗದ್ದಿ ಕೆಲಸಕ್ಕೆ ಹೋಗುತ್ತಿರುವಾಗ  (1) ಮಾರೆಪ್ಪ-65 ವರ್ಷ ಹಾಗೂ ಆತನ ಮಕ್ಕಳಾದ (2) ನಾಗರಾಜ-32 ವರ್ಷ ಮತ್ತು (3) ಉಮೇಶ-30 ವರ್ಷ ಎಲ್ಲರೂ ಸಾ: ಹೊಸ ಜೀರಾಳ ಕಲ್ಗುಡಿ ಇವರುಗಳು ಕೂಡಿಕೊಂಡು ನನ್ನ ಹತ್ತಿರ ಬಂದು ನನಗೆ ಅಕ್ರಮವಾಗಿ ಅಡ್ಡಗಟ್ಟಿ ತಡೆದು ನಿಲ್ಲಿಸಿ “ ಏನಲೇ ಸೂಳೇ ಮಗನೇ ಎಷ್ಟು ಹೇಳಿದರೂ ಸಹ ಪದೇ ಪದೇ ನಮ್ಮ ಜಮೀನಿನಲ್ಲಿ ಬಂದು ಕಣಿವೆ ಸವರುತ್ತೀಯಾ ” ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಿರುವಾಗ “ ನಾನು ನಿಮ್ಮ ಜಮೀನಿನ ಕಣಿವೆ ಸವರಿಲ್ಲಾ, ನೀವೇ ಕಣಿವೆ ಸವರಿ ಪದೆ ಪದೇ ನಮ್ಮೊಂದಿಗೆ ಯಾಕೆ ಜಗಳ ಮಾಡುತ್ತೀರಿ ” ಅಂತಾ ಹೇಳಿದ್ದಕ್ಕೆ ಅವರು ಒಮ್ಮಲೇ ಸಿಟ್ಟಿಗೆ ಬಂದು ನನಗೆ ಕೈಗಳಿಂದ ಬೆನ್ನಿಗೆ ಮುಖಕ್ಕೆ ಹೊಡೆಬಡೆ ಮಾಡುತ್ತಿರುವಾಗ ಅಲ್ಲಿಯೇ ಇದ್ದ ನನ್ನ ಮಕ್ಕಳಾದ ರಮೇಶ ಮತ್ತು ಹನುಮಂತ ಇವರುಗಳು ಜಗಳ ಬಿಡಿಸಲು ಬಂದಾಗ ಅವರಿಗೂ ಸಹ ಎಲ್ಲರೂ ಸೇರಿ ಕೈಗಳಿಂದ ಹೊಡೆಬಡೆ ಮಾಡಿದರು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008