Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, January 10, 2017

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 02/2017 ಕಲಂ : 279, 337, 338 ಐ.ಪಿ.ಸಿ:.
ದಿನಾಂಕ: 09-01-2017 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಹಾಗೂ ಆಕೆಯ ಹೊಲದ ಪಕ್ಕದವರಾದ ಈರಪ್ಪ ಬಂಡಿಹಾಳ, ಹನಮವ್ವ ಗಂಡ ಈರಪ್ಪ ಬಂಡಿಹಾಳ ರವರು ಈರಪ್ಪ ಬಂಡಿಹಾಳ ಈತನ ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು ವಾಪಾಸ್ ಸಂಗನಾಳ ಗ್ರಾಮದ ಕಡೆಗೆ ಸಂಗನಾಳ ಸೀಮಾದಲ್ಲಿ ಬರುವ ಫಕೀರಸಾಬ ನದಾಪ್ ಇವರ ಹೊಲದ ಹತ್ತಿರ ಯಲಬುರ್ಗಾಸಂಗನಾಳ ರಸ್ತೆಯ ಎಡಮಗ್ಗಲು ಹೋಗುತ್ತಿದ್ದಾಗ ಎತ್ತಿನ ಬಂಡಿಯ ಹಿಂದುಗಡೆಯಿಂದ ಆರೋಪಿತನು ತನ್ನ ಮೋಟಾರ ಸೈಕಲ ನಂ : ಕೆ.-37/ವಾಯ್-3252 ನೇದ್ದರ ಹಿಂದುಗಡೆ ಗಾಯಾಳು ಮರ್ದಾನಸಾಬ ನದಾಫ್ ಈತನನ್ನು ಕೂಡಿಸಿಕೊಂಡು ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಹೋಗುತ್ತಿದ್ದ ಎತ್ತಿನ ಬಂಡಿಗೆ ಠಕ್ಕರ್ ಕೋಟ್ಟು ಅಪಘಾತ ಪಡಿಸಿದ್ದರಿಂದ ಎತ್ತಿನ ಬಂಡಿ ಸಮೇತ ಪಿರ್ಯಾದಿ ಹಾಗೂ ಗಾಯಾಳುಗಳು ರಸ್ತೆಯ ಎಡ ಮಗ್ಗಲು ಬಿದ್ದಿದ್ದು ಇದರಿಂದ ಎತ್ತಿನ ಬಂಡಿಯಲ್ಲಿದ್ದ ಪಿರ್ಯಾದಿದಾರಳಿಗೆ ಹಾಗೂ ಇತರೇ ಇಬ್ಬರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದುಆರೋಪಿ ಮತ್ತು ಆತನ ಹಿಂದುಗಡೆ ಕುಳಿತಿದ್ದ ಗಾಯಾಳು ಮರ್ದಾನಸಾಬ ನದಾಫ ಇವರಿಗೆ ಸಾದಾ & ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 02/2017 ಕಲಂ 279, 337, 338 ಐ.ಪಿ.ಸಿ:.

ದಿನಾಂಕ 09-01-2017 ರಾತ್ರಿ 7-35 ಸುಮಾರಿಗೆ ನಾನು ಮನೆಯಲ್ಲಿ ಇದ್ದಗಾ ನಮಗೆ ಪರಿಚಯಸ್ತರಿದ್ದ ಶ್ರೀನಿವಾಸ್ ಆಯೊಧ್ಯ ರವರು ಪೊನ್ ಮುಖಂತರ ಗಂಗಾವತಿಯ ತುಂಗಾಭದ್ರ ರೈಸ್ ಮೀಲ್ ಕೊಳಿ ಫಾರಂ ಮದ್ಯೆದಲ್ಲಿ ನಿಮ್ಮ ತಂದೆಗೆ ಏಕ್ಸಿಡೆಂಟ್ ಆಗಿದೆ ಬೇಗ ಬಾ ಅಂತಾ ತಿಳಿಸಿದರು ನಾನು ಕೂಡಲೇ ನನ್ನ ಮಾವನಾದ ರಾಮು ತಂದೆ ಕೃಷ್ಣಮೂರ್ತಿ ಇವರನ್ನು ಕರೆದುಕೊಂಡು ಘಾಟಣಾ ಸ್ಥಳಕ್ಕೆ ಬಂದು ನೋಡಲಾಗಿ ನಿಜವಿದ್ದು ನಮ್ಮ ತಂದೆ ಮೋಟಾರು ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದಿದ್ದು ಸದರಿಯವರಿಗೆ ವಿಚಾರಮಾಡಲಾಗಿ ನಮ್ಮ ತಂದೆಯವರು ತಮ್ಮ ಮೋಟಾರು ಸೈಕಲ್ ನಂ ಕೆಎ 37 ಎಕ್ಸ್ 5324 ನ್ಭೆದ್ದನ್ನು ಗಂಗಾವತಿಯಿಂದ ಚಾಲನೆ ಮಾಡಿಕೊಂಡು ಎಡಕ್ಕೆ ಬರುವಾಗ ಬರುವಾಗ ರಾತ್ರಿ 7-20 ಪಿಎಂಗೆ ರಸ್ತೆ ಮದ್ಯೆ ಅಂದರೆ ತುಂಗಾಭದ್ರ ರೈಸ್ ಮೀಲ್ ಮತ್ತು ಕೊಳಿ ಫಾರಂ ಮದ್ಯೆದಲ್ಲಿ ಒಬ್ಬ ಆಟೋ ಚಾಲಕ ತನ್ನ ಎದರುಗಡೆಯಿಂದ ಅತಿ ಜೋರಾಗಿ ಮತ್ತು ಅಲಕ್ಪ್ಷತನದಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮೋಟಾರ್ ಸೈಕಲ್ಗೆ ಟಕ್ಕರ್ ಕೊಟ್ಟಿದ್ದು ಇರುತ್ತದೆ ಅಂತಾ ಹೇಳಿದರು ನನ್ನ ತಂದೆಗೆ ಬಲಗಾಲ ಪಾದ, ಬಲಗಾಲು ಬೆರಳ ಮೇಲೆ ಹಾಗೂ ಬಲಕೈ ರಟ್ಟೆಗೆ ಬಲವಾದ ರಕ್ತ ಗಾಯ ಮತ್ತು ಒಳಪೆಟ್ಟಾಗಿದ್ದು ಹಾಗೂ ಬಲಗಣ್ಣಿನ ಹುಬ್ಬಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ ಅಲ್ಲಿಯೇ ಇದ್ದ ಆಟೋ ಚಾಲಕನ ಹೆಸರು ಕೇಳಲಾಗಿ ಅಯ್ಯಪ್ಪ ತಂದೆ ಲಕ್ಷ್ಮಣ :47 ಜಾ:ಚಲುವಾದಿ :ಡ್ರೈವರ್ ಸಾ:ಬೆಳಗೂಡ ಕಂಪ್ಲಿ ಅಂತಾ ಹೇಳಿದನು ಆಟೋ ನಂಬರ್ ನೋಡಲಾಗಿ ಮಹೇಂದ್ರ ಅಪ್ಪೆ ಕೆಎ35 7444 ಅಂತಾ ಇರುತ್ತದೆ ಪ್ರಕರಣ ದಾಖಲಿಸಿ ತನಿಖೆ ಕೈಗೂಂಡಿದೆ.

0 comments:

 
Will Smith Visitors
Since 01/02/2008