Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, January 21, 2017

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 01/2017 ಕಲಂ : 87 Karnataka Police Act.
ದಿನಾಂಕ:20-01-2017 ರಂದು ಸಂಜೆ 18:45 ಗಂಟೆಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ 07 ಜನ ಆರೋಪಿತರನ್ನು ಹಾಜರಪಡಿಸಿದ್ದು, ವರದಿಯಲ್ಲಿ ತಾವರಗೇರಾ ಠಾಣಾ ವ್ಯಾಪ್ತಿಯ ತಾವರಗೇರಾ ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 4350-00, ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ 07 ಜನ  ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 10/2017 ಕಲಂ : 78(3) Karnataka Police Act:.
ದಿನಾಂಕ:20-01-2017 ರಂದು ಸಂಜೆ 06.30 ಗಂಟೆಗೆ ಶ್ರೀ ಗುರುರಾಜ ಕಟ್ಟಿಮನಿ, ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆ ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:20-01-2017 ರಂದು ಸಂಜೆ 05.00 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕೋಳುರ ಗ್ರಾಮದ ಹಾಲಿನ ಡೈರಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಹನಮಪ್ಪ ಈಳಿಗೇರ ಈತನು ರಸ್ತೆಯಲ್ಲಿ ಹೋಗು ಬರುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಜನರಿಂದ ಹಣ ಪಡೆದು ಮಟ್ಕಾ ನಂಬರ್ ಚೀಟಿ ಬರೆದು ಕೊಡುತ್ತಿದ್ದಾಗ ಪಿ.ಎಸ್.ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 530=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 10/2017 ಕಲಂ : 279, 304(ಎ) ಐ.ಪಿ.ಸಿ:.
ದಿನಾಂಕ 21-01-2017 ರಂದು 01-30 ಎ.ಎಂ.ಕ್ಕೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ: 20-01-2017 ರಂದು ರಾತ್ರಿ 8-45 ಗಂಟೆ ಸುಮಾರಿಗೆ ಬೂದಗುಂಪಾ-ದನಕನದೊಡ್ಡಿ ರಸ್ತೆಯಲ್ಲಿ ಬರುವ ಹನಮಪ್ಪ ತಂದೆ ಯಮನಪ್ಪ ಬುಳ್ಳಾಪೂರ ಇವರ ಹೊಲದ ಹತ್ತಿರ ರಸ್ತೆಯ ತಿರುವಿನಲ್ಲಿ ಆರೋಪಿತನು ಚಲಾಯಿಸುತ್ತಿದ್ದ ಹೊಸ ಮೋಟರ ಸೈಕಲ್ (ನೊಂದಣಿಯಾಗಿದ್ದು ನಂಬರ ಬಂದಿರುವುದಿಲ್ಲ) ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುವಾಗ ರಸ್ತೆ ತಿರುವಿನಲ್ಲಿ ಮೋಟರ ಸೈಕಲ್ ನಿಯಂತ್ರಣಗೊಳ್ಳದೇ ರಸ್ತೆ ಪಕ್ಕದಲ್ಲಿರುವ ಲೈಟಿನ ಕಂಬಕ್ಕೆ ಡಿಕ್ಕಿಪಡಿಸಿದ್ದರಿಂದ ಸಣ್ಣಹುಲಗಪ್ಪನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
4] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 03/2017 ಕಲಂ: 302, 201  .ಪಿ.ಸಿ.
ದಿನಾಂಕ: 20-01-2017 ರಂದು ಫಿರ್ಯದಿದಾರರಾದ ಬಸನಗೌಡ ರೋಣದ ಸಾ: ಬಾಚನಗುಡ್ಡ ರವರು ಮಧ್ಯಾಹ್ನ 14-30 ಗಂಟೆಗೆ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿಯ ಮಗಳು ಕಸ್ತೂರೆವ್ವ ಈಕೆಯನ್ನು ಈಗ್ಗೆ 12 ವರ್ಷಗಳ ಹಿಂದೆ ಜಾಹಗೀರಗುಡದೂರ ಗ್ರಾಮದ ಚನ್ನವೀರಯ್ಯ ಹಿರೇಮಠ ಈತನ ಸಂಗಡ ಮದುವೆ ಮಾಡಿಕೊಟ್ಟಿದ್ದು , ಇವರಿಗೆ 9 ವರ್ಷದ ಬಸಲಿಂಗಯ್ಯ ಅಂತಾ ಮಗನಿದ್ದು, ಫಿರ್ಯಾದಿಯ ಮಗಳ ಕಸ್ತೂರೆವ್ವ ಗಂಡನು ಊರಲ್ಲಿ 2 ವರ್ಷಗಳಿಂದ ಬೇರೆಯವರ ಸಂಗಡ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಕಸ್ತೂರೆವ್ವ ಊರಿಗೆ ಬಂದಾಗ ಫಿರ್ಯಾದಿಗೆ ತಿಳಿಸಿದ್ದು, ಫಿರ್ಯಾದಿ ಅಳಿಯನಿಗೆ ಬುದ್ದಿ ಹೇಳಿದ್ದು, ಈಗ 15 ದಿನಗಳ ಹಿಂದೆ ಫಿರ್ಯಾದಿಯ ಮಗಳು ಕಸ್ತೂರೆವ್ವ ತವರು ಮನೆಗೆ ಹೋದಾಗ ತನ್ನ ಗಂಡ ಚನ್ನವೀರಯ್ಯ ಬೈಯುವುದು, ಬಡೆಯುವುದು, ಮಾಡುತ್ತಿದ್ದ ಬಗ್ಗೆ ತಿಳಿಸಿದ್ದರಿಂದ ಮಗಳಿಗೆ ಸಮಾಧಾನ ಮಾಡಿ ಹಿರಿಯರೊಂದಿಗೆ ಜಾಹಗೀರಗುಡದೂರ ಗ್ರಾಮಕ್ಕೆ ಬಂದು ಬುದ್ದಿವಾದ ಹೇಳಿ ಊರಲ್ಲಿ ಬಿಟ್ಟು ಹೋಗಿದ್ದು, ನಂತರ ನಿನ್ನೆ ದಿನಾಂಕ: 19-01-2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಮಗಳು ಕಸ್ತೂರೆವ್ವ ಫೋನ್ ಮಾಡಿ ತನ್ನ ಗಂಡ ಚನ್ನವೀರಯ್ಯ ಪುನಃ ಕಿರಿಕಿರಿ ಮಾಡುತ್ತಿದ್ದ ಬಗ್ಗೆ ತಿಳಿಸಿ ನಾಳೆ ಬೆಳಿಗ್ಗೆ ಬರುವಂತೆ ಹೇಳಿದ್ದು ಇರುತ್ತದೆ. ಈ ದಿವಸ ಹಗಲು 12-00 ಗಂಟೆಗೆ ಫಿರ್ಯಾದಿಯ ಅಳಿಯ ವೀರಯ್ಯ ಸಂಕನೂರಮಠ ಈತನು ಫೋನ್ ಮಾಡಿ ನಿಮ್ಮ ಮಗಳು ತನ್ನ ಮನೆಯಲ್ಲಿ ಸುಟ್ಟು ಸತ್ತಿರುತ್ತಾಳೆ ಎಂದು ತಿಳಿಸಿದ್ದರಿಂದ ಫಿರ್ಯಾದಿ ಕೂಡಲೇ ತಾನು, ತನ್ನ ಹೆಂಡತಿ, ತನ್ನ ಮಗಳು ಹಾಗೂ ತನ್ನ ಸಹೋದರರೊಂದಿಗೆ ಜಾಹಗೀರಗುಡದೂರ ಗ್ರಾಮಕ್ಕೆ ಬಂದು ಮಗಳ ಮನೆಯಲ್ಲಿ ನೋಡಲು ಮನೆಯಲ್ಲಿಯ ಬಚ್ಚಲದಲ್ಲಿ ಕಸ್ತೂರೆವ್ವ ಪೂರ್ತಿಯಾಗಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಳು, ನಂತರ ಫಿರ್ಯಾದಿಯು ಮಗಳ ಸ್ಥಿತಿಗತಿಯನ್ನು ನೋಡಲು ಕಸ್ತೂರೆವ್ವಳ ಗಂಡನಾದ ಚನ್ನವೀರಯ್ಯ ಇವನು ತನ್ನ ಅನೈತಿಕ ಸಂಬಂಧದ ಬಗ್ಗೆ ಕಸ್ತೂರೆವ್ವಳು ಅಡ್ಡಿಯಾಗುತ್ತಾಳೆ ಅಂತಾ ತಿಳಿದು ಆಕೆಗೆ ಮೊದಲು ಹೊಡೆದು ಸಾಯಿಸಿ ನಂತರ ಆಕೆಯನ್ನು ತಮ್ಮ ಮನೆಯ ಬಚ್ಚಲದಲ್ಲಿ ಕೂಡಿಸಿ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದು ಕಂಡು ಬಂದಿದ್ದು, ಈ ಘಟನೆ ಇಂದು ಬೆಳಿಗ್ಗೆ 9-00 ಗಂಟೆಗೆ ಆಗಿರಬಹುದು ಫಿರ್ಯಾದಿಯ ಮಗಳು ಕಸ್ತೂರೆವ್ವಳಿಗೆ ತನ್ನ ಗಂಡನಾದ ಚನ್ನವೀರಯ್ಯ ತಾನು ಅನೈತಿಕ ಸಂಬಂಧ ಹೊಂದಿದ ಬಗ್ಗೆ ತನ್ನ ಹೆಂಡತಿ ಅಡ್ಡಿ ಪಡಿಸುತ್ತಾಳೆ ಅಂತಾ ಆಕೆಯನ್ನು ಇಲ್ಲದಂತೆ ಮಾಡಿದರಾಯುತು ಅಂತಾ ತನಗೆ ಯಾರೂ ಕೇಳುವವರು ಇರುವುದಿಲ್ಲ ಅಂತಾ ಹೊಡೆದು ಕೊಲೆ ಮಾಡಿ ಸುಟ್ಟಿದ್ದು ಕಾರಣ ಚನ್ನವೀರಯ್ಯನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
5] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 02/2017 ಕಲಂ: 454, 380  .ಪಿ.ಸಿ.

ದಿನಾಂಕ:20-01-2017 ರಂದು 4-30 ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿದ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 20-01-2017 ರಂದು ಮುಂಜಾನೆ 08-30 ಗಂಟೆಗೆ ಪಿರ್ಯಾದಿದಾರನು ತನ್ನ ಹೆಂಡತಿ, ಸೊಸೆಯಂದಿರೊಂದಿಗೆ ಭಾನಾಪುರ ಸೀಮಾದಲ್ಲಿಯ ತಮ್ಮ ಹೋಲದಲ್ಲಿ ಹುಳಗಡ್ಲಿ ಕೀಳಲು ಹೋಗಿದ್ದು, ನಂತರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಿರ್ಯಾದಿದಾರನು ತನ್ನ ಇಬ್ಬರೂ ಸೊಸೆಯಂದಿರೊಂದಿಗೆ ವಾಪಸ್ ಮನೆಗೆ ಬಂದಿದ್ದು, ತನ್ನ ಮನೆಯ ಬಾಗಿಲಿಗೆ ಹಾಕಿದ ಬೀಗ ಕಂಡುಬಂದಿರುವದಿಲ್ಲ, ಬಾಗಿಲು ಮಾತ್ರ ಮುಚ್ಚಿದ್ದು ಇತ್ತು. ಆಗ ಪಿರ್ಯಾದಿದಾರನು ಮನೆಯಲ್ಲಿ ಹೋದಾಗ ಕೋಣೆಯಲ್ಲಿಯ ಟ್ರಂಕಿಗೆ ಹಾಕಿದ ಬೀಗ ಕೆಳಗೆ ಬಿದ್ದಿರುತ್ತದೆ. ಸದರಿ ಟ್ರಂಕಿನಲ್ಲಿದ್ದ 1). 15 ಗ್ರಾಂ ತೂಕವಿರುವ ಬಂಗಾರದ 02 ನೆಕ್ಲೆಸ್ ಗಳು ಅಂ.ಕಿ. 75,000/-ರೂ. 2). 15  ಗ್ರಾಂ ತೂಕದ ಬಂಗಾರದ ಚೈನ್ ಸರ ಅಂ.ಕಿ. 37,500/-ರೂ. 3). 10  ಗ್ರಾಂ ತೂಕವಿರುವ ಬಂಗಾರದ 02 ಚೈನ್ ಸರಗಳು ಅಂ.ಕಿ. 50,000/-ರೂ. 4). 05 ಗ್ರಾಂ ತೂಕದ ಬಂಗಾರದ ಬೆಂಡೊಲೆ ಮತ್ತು ಕಿವಿ ಸುತ್ತೊಲೆ ಅಂ.ಕಿ. 12,500/-ರೂ. 5). 05 ಗ್ರಾಂ ತೂಕದ ಬಂಗಾರದ ಉಂಗುರ ಅಂ.ಕಿ. 12,500/-ರೂ.  6). 05 ಗ್ರಾಂ ತೂಕವಿರುವ ಬಂಗಾರದ 02 ಉಂಗುರಗಳು ಅಂ.ಕಿ. 25,000/-ರೂ. ಹಾಗೂ 7). 25,000/-ರೂ. ನಗದು ಹಣ, ಹೀಗೆ ಒಟ್ಟು ಸುಮಾರು 2,37,500/-ರೂ, ಬೆಲೆಬಾಳುವ ಬಂಗಾರದ ಆಭರಣಗಳನ್ನು ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

0 comments:

 
Will Smith Visitors
Since 01/02/2008