Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, February 2, 2017

1] ಸಂಚಾರಿ  ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 08/2017 ಕಲಂ 279, 338, 304(ಎ) ಐ.ಪಿ.ಸಿ:.
ದಿನಾಂಕ. 01-02-2017 ರಂದು ಬೆಳಿಗ್ಗೆ 8-40 ಗಂಟೆಗೆ ಫಿರ್ಯಾದಿಯ ತನ್ನ ಆಟೋವನ್ನು ಚಲಾಯಿಸಿಕೊಂಡು ಕೊಪ್ಪಳದ ನಗರದ ಗದಗ-ಹೊಸಪೇಟೆ ಎನ್.ಹೆಚ್. 63 ರಸ್ತೆಯ ಮೇಲೆ ಬಿ.ಇ.ಓ ಆಫೀಸ್ ಸಮೀಪ ಅಶೋಕ ಸರ್ಕಲ್ ಕಡೆಗೆ ಹೊಗುತ್ತಿರುವಾಗ ಗಾಯಾಳು ಅನ್ವರ ಅಲಿ ತನ್ನ ಸೈಕಲ್ ತೆಗೆದುಕೊಂಡು ಅಶೋಕ ಸರ್ಕಲ್ ಕಡೆಗೆ ಹೊಗುತ್ತಿರುವಾಗ ಹಿಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ. KA-37/F-0432 ನೆದ್ದರ ಚಾಲಕ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸೈಕಲ್ ಸವಾರ ಅನ್ವರ ಅಲಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಆತನು ಬಸ್ಸಿನ ಮುಂದಿನ ಎಡಗಾಲಿಯಲ್ಲಿ ಬಿದ್ದಿದ್ದು ಇದರಿಂದ ಅನ್ವರ ಅಲಿ ಇತನಿಗೆ ಬಲಕಾಲ ತೊಡೆಗೆ, ಸೊಂಟದ ಹತ್ತಿರ, ಮೂತ್ರ ಜನಕಾಂಗದ ಹತ್ತಿರ ಮತ್ತು ಕೆಳ ಹೊಟ್ಟೆಗೆ ಬಾರಿ ರಕ್ತಗಾಯ ಗಾಯವಾಗಿರುತ್ತವೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ  ನಂ. 08/2017 ಕಲಂ. 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡ ಗಾಯಾಳು ಅನ್ವರ ಅಲಿ ತಂದೆ ಶಾಬುದ್ದೀನ್ ಏಕ್ಲಾಸಪೂರ ವಯ. 18 ಜಾತಿ. ಮುಸ್ಲಿಂ ಉ. ಕೂಲಿ ಕೆಲಸ ಸಾ. ದೇವರಾಜ ಅರಸ ಕಾಲೋನಿ ಕೊಪ್ಪಳ ಇತನಿಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವಾಗ, ಇಂದು ದಿನಾಂಕ. 01-02-2018 ರಂದು ಮದ್ಯಾಹ್ನ 1-30 ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ಅದರ ಪ್ರಕಾರ ಚಿಕಿತ್ಸೆ ಪಡೆಯುತ್ತಿರುವ ಅನ್ವರ ಅಲಿ ಇತನು ಚಿಕಿತ್ಸೆ ಫಲಕಾರಿಯಾಗದೇ ಇಂದು ಮದ್ಯಾಹ್ನ 1-20 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಮಾಹಿತಿ ನೀಡಿದ ಪ್ರಕಾರ ಈ ಪ್ರಕರಣದಲ್ಲಿ ಕಲಂ. 304 (ಎ) ಐಪಿಸಿ ಯನ್ನು ಅಳವಡಿಸಲು ಮಾನ್ಯ ನ್ಯಾಯಾಲಯಕ್ಕೆ ಪತ್ರವನ್ನು ಬರೆದು ಕಳುಹಿಸಲಾಗಿದೆ.
2] ಕುಕನೂರ  ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ 379  ಐಪಿಸಿ.

ದಿನಾಂಕ:01-02-2017 ರಂದು 8-00 ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರರು ತಾವು ತಮ್ಮ ಮನೆಯ ಮುಂದೆ ರಾತ್ರಿ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ ಹಿರೋ ಹೊಂಡಾ ಸ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆ.ಎ.37 ಆರ್.0542 ನೇದ್ದರ ಚಾಸ್ಸಿ ನಂ. MBLHA10EJ9HJ42904, ಇಂಜಿನ್ ನಂ.HA10EA9HJ96641 ನೇದ್ದು ಅಂ.ಕಿ.20,000=00 ರೂ. ಬೆಲೆ ಬಾಳುವದನ್ನು ದಿನಾಂಕ:25-01-2017 ರಂದು ರಾತ್ರಿ 11—00 ಪಿಎಂ.ದಿಂದ ದಿನಾಂಕ:26-01-2017 ರಂದು ಬೆಳಗಿನ ಜಾವ 3.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ತಾವು ತಮ್ಮ ಮನೆಯಲ್ಲಿ ವಿಷಯ ತಿಳಿಸಿ ಕುಕನೂರದಲ್ಲಿ ಅಲ್ಲಲ್ಲಿ ಹುಡುಕಾಡಿ ಸಿಗದೇ ಇದ್ದುದರಿಂದ ಮತ್ತೆ ಬೆಳಿಗ್ಗೆ ತಮ್ಮ ಅಳಿಯ ಸಂಗಪ್ಪನೊಂದಿಗೆ ಕಲ್ಲೂರು, ಯಲಬುರ್ಗಾ, ಕುಷ್ಟಗಿ, ಕೊಪ್ಪಳ, ಗದಗ ಕಡೆಗೆ ತಿರುಗಾಡಿ ಹುಡುಕಾಡಿದ್ದು ಎಲ್ಲಿಯೂ ಸಿಗದೇ ಇದ್ದುದರಿಂದ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

0 comments:

 
Will Smith Visitors
Since 01/02/2008