Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, February 1, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 27/2017 ಕಲಂ 279, 338 ಐ.ಪಿ.ಸಿ:.
ದಿನಾಂಕ. 31-01-2016 ರಂದು ಸಂಜೆ 7:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗೋಪಿನಾಥ ತಂದೆ ವೆಂಕೋಬ ವಯಸ್ಸು: 41 ವರ್ಷ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೆನಂದರೆ. “ ದಿನಾಂಕ: 22-01-2017 ರಂದು ಮಧ್ಯಾಹ್ನ 3:45 ಗಂಟೆಯ ಸುಮಾರಿಗೆ ಫಿರ್ಯಾದಿ ಚಿಕ್ಕಪ್ಪನ ಮಗನಾದ ವಿಜಯಕುಮಾರನು ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಒಂದು ಮೋಟಾರ ಸೈಕಲ ಪಕ್ಕದಲ್ಲಿ ನಿಂತಿರುವಾಗ ಆತನ ಹಿಂಭಾಗದಿಂದ ಅಂದರೆ ಗಂಗಾವತಿ ಕಡೆಯಿಂದ ರವೀಂದ್ರ ಟಿ. ತಂದೆ ಲಿಂಗಪ್ಪ ಟಿ. ಹೊಸ ಹಿರೋ ಹೆಚ್.ಎಫ್. ಡೀಲಕ್ಸ್ ಕಂಪನಿಯ (ಚಾಸ್ಸಿ ನಂ: ನೋಡಲು MBLHA11ATG9KO9464 ) ನೇದ್ದರ ಚಾಲಕ ಸಾ: ಚಿಕ್ಕಜಂತಕಲ್ ಎಂಬಾತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ಟಕ್ಕರು ಕೊಟ್ಟು ಅಪಘಾತ ಮಾಡಿದ್ದರಿಂದ ಎಡಗೈ ಮುಂಗೈ ಹತ್ತಿರ ಪೆಟ್ಟಾಗಿ ಎಡಬುಜಕ್ಕೆ, ಎಡಗಡೆ ಸೊಂಟಕ್ಕೆ ತೀವ್ರ ಒಳಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇರದೇ ಇದ್ದುದರಿಂದ ಚಿಕಿತ್ಸೆ ಕುರಿತು ಶ್ರೀರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲು ವೈಧ್ಯರು ಯಾರೂ ಇರದೇ ಇದ್ದುದರಿಂದ ಗಂಗಾವತಿಯಿಂದ ಬಳ್ಳಾರಿಯ ಆಶಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿಸಿ ಅಲ್ಲಿಂದ ವೈಧ್ಯರ ಸಲಹೆ ಮೇರೆಗೆ ಬೆಂಗಳೂರಿನ ನೀಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ವಾಪಸ್ಸು ದಿನಾಂಕ: 26-01-2017 ರಂದು ಬಳ್ಳಾರಿಯ ಆಶಾ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಆದರೆ ಅಪಘಾತ ಮಾಡಿದ ಮೋಟಾರ ಸೈಕಲ ಮಾಲಿಕರು ಈ ಬಗ್ಗೆ ಕೇಸು ಮಾಡುವದು ಬೇಡ ಆಸ್ಪತ್ರೆಯ ಖರ್ಚು ಕೊಡುತ್ತೇವೆ ಅಂತಾ ಹೇಳಿ ಹೋದವರು ಇಲ್ಲಿಯವರಗೆ ಬಾರದೇ ಇದ್ದುದರಿಂದ ಮತ್ತು ಇಲ್ಲಿಯವರಗೆ ವಿಜಯಕುಮಾರನಿಗೆ ಚಿಕಿತ್ಸೆ ಮಾಡಿಸುವದರಲ್ಲಿ ನಿರತನಾಗಿದ್ದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ಈ ದೂರನ್ನು ಕೊಟ್ಟಿರುತ್ತೇನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
2] ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ 279, 337, 338  ಐಪಿಸಿ.
ದಿನಾಂಕ 31-01-2017 ರಂದು ಬೆಳಗ್ಗೆ 8-00 ಗಂಟೆಗೆ ಪಿರ್ಯಾದಿದಾರನು ಆರೋಪಿತನ ಮೋಟಾರು ಸೈಕಲ್ಲ ಹಿರೋ ಸ್ಪಂಡರ್ ಪ್ಲಸ್ ಮೋ/ಸೈ ನಂ ಕೆ.. 35-ಇಎ 0727  ನೇದ್ದರ ಹಿಂದೆ ಕುಳಿತುಕೊಂಡು ತಮ್ಮೂರಿಗೆ ಹೊರಟಿರುವಾಗ ಕಂಪ್ಲಿ ರಸ್ತೆಯ ಶ್ರೀ ಉದ್ಬವ ಲಕ್ಷ್ಮೀ ಗುಡಿ ಹತ್ತಿರ ಆರೋಪಿತನು ಸದರಿ ಮೋಟಾರು ಸೈಕಲ್ಲನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೊರಟಿರುವಾಗ ರಸ್ತೆಯಲ್ಲಿ ಅಡ್ಡವಾಗಿ ನಾಯಿಅಡ್ಡ ಬಂದಿದ್ದರಿಂದ ಆರೋಪಿತನು ತನ್ನ ಮೋಟಾರು ಸೈಕಲ್ಲನ್ನು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಮೋ/ಸೈ ಸ್ಕಿಡ್ ಆಗಿ ಮೋಟಾರುಸೈಕಲ್ಲ ಸಮೇತ  ಬಿದ್ದಿದ್ದರಿಂದ ಪಿರ್ಯಾದಿದಾರನಿಗೆ ಬಲಕೈ ಮೋಣಕೈಗೆ ಭಾರಿ ಒಳಪೆಟ್ಟಾಗಿದ್ದುಮತ್ತು ಮೂಗಿಗೆತರೆಚಿದಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 08/2017 ಕಲಂ 326 324 323 504 506 ಸಹಿತ 34 ಐಪಿಸಿ
ದಿನಾಂಕ 31-01-2017 ರಂದು ಮುಂಜಾನೆ 10-30 ಗಂಟೆಗೆ ಫಿರ್ಯಾದಿದಾರ ಶ್ರೀ ಭೀಮಪ್ಪ ತಂದೆ ದುರಗಪ್ಪ ಚನ್ನದಾಸರ ಸಾ: ಹುಲಸನಹಟ್ಟಿ ಇವರು ಫಿರ್ಯಾದಿ ನೀಡಿದ್ದು, ದಿನಾಂಕ 31-01-2017 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಯಂಕಮ್ಮ ಮತ್ತು ಮಗ ಮಹಾದೇವಮ್ಮ, ಮೊಮ್ಮಗ ಶಿವಾನಂದ ರವರೊಂದಿಗೆ ನಮ್ಮ ಮನೆಯ ಮುಂದೆ ಕುಳಿತುಕೊಂಡಾಗ ಆ ಸಮಯದಲ್ಲಿ ನನ್ನ ಮಗ ಬಸಪ್ಪ, ಆತನ ಹೆಂಡತಿ ಶಂಕ್ರಮ್ಮ, ಮೊಮ್ಮಗ ಶರಣಪ್ಪ ರವರು ಕೂಡಿಕೊಂಡು ನಮ್ಮ ಮನೆಯ ಹತ್ತಿರ ಬಂದು ನನ್ನ ಮೊಮ್ಮಗ ಶರಣಪ್ಪ ಈತನು ಲೇ ಮುದಿಯವಾ ನಮ್ಮ ಹೊಲವನ್ನು ನಮ್ಮ ಹೆಸರಿನಲ್ಲಿ ಮಾಡಿಸಿಕೊಡಲೇ ಅಂತಾ ಅಂದನು, ಆಗ ನನ್ನನ್ನೇನು ಕೇಳುತ್ತೀ ನಿಮ್ಮಪ್ಪನಿಗೆ ಕೇಳು ಅಂತಾ ಅಂದೆನು, ಅಲ್ಲಿಯೇ ಇದ್ದ ಮಹಾದೇವಮ್ಮಳು ನಮ್ಮ ಹತ್ತಿರ ಬಂದು ಶರಣಪ್ಪನಿಗೆ ಯಾಕೇ ಹಿರಿಯರ ಜೊತೆ ಹೇಂಗ್ಯಾ ಮಾತಾಡುತ್ತೀ ಸರಿಯಾಗಿ ಮಾತಾನಾಡು ಅಂತಾ ಶರಣಪ್ಪನಿಗೆ ಬುದ್ದಿ ಹೇಳಿದಳು. ಆಗ ಶರಣಪ್ಪನು ಒಮ್ಮೇಲೆ ಸಿಟ್ಟಿಗೆ ಲೇ ಭೂಸುಡೀ ಸೂಳೇ, ನಮ್ಮಗೇನು ಸೆಂಟ್ ಹೇಳುತ್ತೀ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ರಾಡ್ದಿಂದ ಮಹಾದೆವಮ್ಮಳ ಬಾಯಿಗೆ, ಹಣೆಗೆ ಜೋರಾಗಿ ಬಡೆದನು. ಇದರಿಂದ ಮಹಾದೇವಮ್ಮಳ ಹಲ್ಲು ಮುರಿದು ಸಡಿಲಾಗಿರುತ್ತವೆ ತಲೆಗೆ ಭಾರಿ ರಕ್ತ ಗಾಯವಾಗಿರುತ್ತದೆ. ನನ್ನ ಮಗ ಬಸಪ್ಪನು ನನ್ನ ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಹೊಟ್ಟೆಗೆ, ಬೆನ್ನಿಗೆ ಗುದ್ದಿದನು. ಶಂಕ್ರಮ್ಮಳು ಬಡಿಗೆಯಿಂದ ನನ್ನ ಹಣೆಗೆ ಹೊಡೆದಳು. ನನ್ನ ಮೊಮ್ಮಗ ಶಿವಾನಂದನಿಗೆ ಶರಣಪ್ಪನು ಕೈಯಿಂದ ಕಪಾಳಕ್ಕೆ ಬಡೆದು ಒಳ ಪೆಟ್ಟು ಮಾಡಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008