Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, February 9, 2017

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 10/2017 ಕಲಂ:279,304 [ಎ] ಐಪಿಸಿ.
ದಿನಾಂಕ:08-02-2017 ರಂದು ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಅಪಘಾತದ ಬಗ್ಗೆ ಎಂ.ಎಲ್.ಸಿ.ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರರ ಕುಲಸ್ಥರಾದ ಯಂಕಪ್ಪ ಮಾದರ ಇವರ 3 ವರ್ಷದ ಮಗು ನೀಲಮ್ಮ ತಂದೆ ಯಂಕಪ್ಪ ಇವಳು ಇಂದು ಮದ್ಯಾಹ್ನ16-00 ಗಂಟೆಯ ಸುಮಾರು ಎಂ, ಗೂಡದೂರ ಗ್ರಾಮದಲ್ಲಿ ಆಟ ಆಡಿ ತಗ್ಗಿಹಾಳ-ಎಂ.ಗುಡದೂರ ರಸ್ತೆಯ ಮೇಲೆ ಆಚೆ ಕಡೆಯಿಂದ ಇಚೆ ಕಡಗೆ ಮನೆಗೆ ಬರುತ್ತಿರುವಾಗ ತೆಗ್ಗಿಹಾಳ ಕಡೆಯಿಂದ ನಮೂದಾದ ಆರೋಪಿತನಾದ ಯಲ್ಲಾಲಿಂಗ ತಂದೆ ಕುಂಟೆಪ್ಪ ತೋಗರಿ ಸಾ:ಗೌರಿಪುರ ತಾ:ಕುಷ್ಟಗಿ ಈತನು ಹಿಂದುಗಡೆ ವಿರೇಶ ರಾಮದುರ್ಗ ಈತನನ್ನು ಕೂಡಿಸಿಕೊಂಡು ಒಂದು ನಂಬರ್ ಇಲ್ಲದ ನಂಬರ ಇಲ್ಲದ ಹಿರೋ ಹೊಂಡಾ ಸ್ಲೆಂಡರ್ ಮೊಟಾರ್ ಸೈಕಲನ್ನು ಅತಿವೇಗ ಹಾಗೂ ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮನೆಗೆ ಹೊರಟಿದ್ದ ನೀಲಮ್ಮಳಿಗೆ ಟಕ್ಕರುಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಿಂದ ಮಗುವಿಗೆ ಹಣೆಗೆ, ಕೆನ್ನೆಗೆ, ಎಡಹುಬ್ಬಿಗೆ, ತೆರಚಿದ ಭಾರಿ ರಕ್ತಗಾಯವಾಗಿದ್ದು ನಾನು ಹಾಗೂ ಮನೆಯ ಮುಂದೆ ಕುಳಿತ ಘಟನೆ ನೋಡಿದ ಆಕೆಯ ತಾಯಿ ಶರಣಮ್ಮ ಹಾಗೂ ಅಜ್ಜಿ ದುರಗಮ್ಮ ಸೇರಿ ಯಾರೋ 108 ವಾಹನಕ್ಕೆ ಫೊನ್ ಮಾಡಿದ್ದರಿಂದ ಸ್ಥಳಕ್ಕೆ ಬಂದ 108 ವಾಹನದಲ್ಲಿ ಗಾಯಗೊಂಡ ಮಗು ನೀಲಮ್ಮಳನ್ನು ಇಲಾಜು ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ತಂದು ಸಾಯಂಕಾಲ 17-30 ಗಂಟೆಯ ಸುಮಾರು ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಮಗುವನ್ನು ಪರಿಕ್ಷಿಸಿದ ವ್ಶೆದ್ಯರು ಮಗು ಮೃತಪಟ್ಟ ಬಗ್ಗೆ ತಿಳಿಸಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ನಂಬರ್ ಇಲ್ಲದ ಹಿರೋ ಹೊಂಡಾ ಸ್ಲೆಂಡರ್ ಮೊಟಾರ್ ಸೈಕಲನ ಚಾಲಕ ಯಲ್ಲಾಲಿಂಗ ತಂದೆ ಕುಂಟೆಪ್ಪ ತೋಗರಿ ಸಾ:ಗೌರಿಪುರ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿಯ ಸಾರಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 11/2017 ಕಲಂ: 279,283,337,338. ಐಪಿಸಿ
ದಿನಾಂಕ:07-02-2017 ರಂದು ರಾತ್ರಿ 23-30 ಗಂಟೆಗೆ ಬಾಗಲಕೋಟ ಕೆರುಡಿ ಆಸ್ಪತ್ರೆಯಿಂದ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ವಿಚಾರಣೆ ಕುರಿತು ಬಾಗಲಕೋಟೆಗೆ ಹೋಗಿ ಗಾಯಾಳು ಫಿರ್ಯಾಧಿದಾರರಾದ ಸಂತೋಷ ತಂದೆ ಓಂ ಪ್ರಕಾಶ ಸಹಾನಿಯಾ ವಯ:33 ಉ:ಪೇಂಟರ್ ಸಾ:ಲಾಸಡಿ ಜಿ:ತಾ:ಘೋರಮಪುರ ರಾ:ಉತ್ತರ ಪ್ರದೇಶ ಹಾ/ವ:ಇಲಕಲ್ಲ ರವರ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಪಿರ್ಯಾದಿದಾರರು ಹಾಗೂ ಆರೋಪಿ ನಂ:1 ಲಾಲದಾರಿ ತಂದೆ ರಾಮಬೀಸ್ ಸಹಾನಿ ವಯ:39, ಉ:ಪೇಂಟರ್ ,       ರವರು ಸುಮಾರು 2 ವರ್ಷದಿಂದ ತಮ್ಮ ತಮ್ಮ ವೃತಿಯನ್ನು ಮಾಡಿಕೊಂಡು ಇಲಕಲ್ಲದಲ್ಲಿ ವಾಸವಾಗಿದ್ದು ಇರುತ್ತದೆ. ದಿನಾಂಕ:07-01-2017 ರಂದು ಫಿರ್ಯಾಧಿದಾರರು ಹಾಗೂ ಲಾಲಾದಾರಿ ಇಬ್ಬರೂ ಸೇರಿ ಪೆಟಿಂಗ್ ಕೆಲಸದ ನಿಮಿತ್ತ ನಮ್ಮ ಗೆಳೆಯ ಕನ್ಯಾಸಿಂಗ್ ಈತನ ನಂಬರ್ ಇಲ್ಲದ ಹೊಸ ಬಿಳಿ ಬಣ್ಣದ ಹೊಸ ಹಿರೋ ಮ್ಯಾಸ್ಟರೋ ಕಂಪನಿ. ಸ್ಕುಟಿ ಚಾಸ್ಸಿ ನಂ: MBLJF33AAG4G12030 ಇರುವ ಬೈಕನ್ನು ತೆಗೆದುಕೊಂಡು ರಾತ್ರಿ 20-30 ಗಂಟೆಯ ಸುಮಾರು ತಾವರಗೇರಾ-ಕುಷ್ಟಗಿ ರಾಜ್ಯ ಹೆದ್ದಾರಿಯ ಮೇಲೆ ಅತಿವೇಗ ಹಾಗೂ ಅಲಕ್ಷ್ಯತನದಿಂದ ನಡೆಯಿಸಿದ್ದು ಹಾಗೂ ಅಲ್ಲಿ ಸಾರ್ವಜನಿಕರು ಓಡಾಡುವ ರಾಜ್ಯ ರಸ್ತೆಯಲ್ಲಿ ಅಲಕ್ಷ್ಯತೆಯಿಂದ ನಿಲ್ಲಿಸಿ ಹೋಗಿದ್ದ ಒಂದು ಟ್ರಾಕ್ಟರ್ಗೆ ಹಿಂದಿನಿಂದ ಟಕ್ಕರು ಕೊಟ್ಟಿದ್ದರಿಂದ ಅಪಘಾತವಾಗಿ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದು ಇರುತ್ತದೆ. ಕಾರಣ ಅಫಘಾತ ಮಾಡಿದ ನಮ್ಮ ಬೈಕ ಚಾಲಕ ಲಾಲದಾರಿ ಸಹಾನಿ ಹಾಗೂ ರಾಜ್ಯ ಹೆದ್ದಾರಿಯ ಮೇಲೆ ಅಲಕ್ಷಯತೆಯಿಂದ ಟ್ರ್ಯಾಕ್ಟರ್ ನಂ: ಕೆ.ಎ-37-ಟಿಎ-5056 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹಿಂದಿ ಭಾಷೆಯಲ್ಲಿ ಹೇಳಿದ ಹೇಳಿಕೆಯನ್ನು ಕನ್ನಡಕ್ಕೆ ಅನುವಾದ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 20/2017 ಕಲಂ: 279,  338, 304[A], IPC & 187 IMV Act
ದಿನಾಂಕ : 08-02-2017 ರಂದು ರಾತ್ರಿ 10-05 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕರಿಯಪ್ಪ ತಂದಿ ವಿರೇಶಪ್ಪ ಯರಡೋಣ ವಯಾ-45 ವರ್ಷ ಜಾ. ಕುರಬರು ಸಾ. ಗೊಬ್ಬರಕಲ್ ತಾ. ಸಿಂಧನೂರು ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ:-08-02-2017 ರಂದು ನಾನು ಮತ್ತು ನಮ್ಮೂರಿನ ಆದೇಪ್ಪ ಒಂದು ಮೋಟಾರ್ ಸೈಕಲ್ ಮೇಲೆ ಮತ್ತು ಕಳಸಪ್ಪ ತಂದಿ ಯಮನೂರಪ್ಪ ಗಡದರ ವಯಾ-30ವರ್ಷ ಮತ್ತು ಹನುಮಂತಪ್ಪ ತಂದಿ ಸೋಮಣ್ಣ ಇವರು ಒಂದು ಮೋಟಾರ್ ಸೈಕಲ್ ಮೇಲೆ ನಮ್ಮ ಸಂಬಂದಿಕರನ್ನು ಮಾತನಾಡಿಸಿಕೊಂಡು ಬರಲೆಂದು ಕಂಪ್ಲಿ ಬಳಾಪೂರಕ್ಕೆ ಹೋಗಿ ವಾಪಸ ನಮ್ಮ ನಮ್ಮ ಮೋಟಾರ್ ಸೈಕಲ್ ಮೇಲೆ ನಮ್ಮೂರಿಗೆ ಹೋರಟಿದ್ದಾಗ್ಗೆ ಕಳಸಪ್ಪ ಇತನು ತನ್ನ ಮೋಟಾರ್ ಸೈಕಲ್ ನಂ ಕೆ.ಎ-36ಡಬ್ಲ್ಯೂ 2216 ನೆದ್ದರ ಮೇಲೆ ಹನುಮಂತಪ್ಪನನ್ನು ಕೂಡಿಸಿಕೊಂಡು ಚನ್ನಳ್ಳಿ ಕ್ರಾಸ್ ದಿಂದ ಚನ್ನಳ್ಳಿ ರಸ್ತೆಯ ಮೇಲೆ ಎಸ್.ಎನ್.ಸಿ ರೈಸ್ ಮೀಲ್ ಹತ್ತಿರ ರಸ್ತೆಯ ಎಡಭಾಗದಲ್ಲಿ ಚಲಾಯಿಸಿಕೊಂಡು ಹೋರಟಿದ್ದಾಗ್ಗೆ ಸಾಯಂಕಾಲ 7-00 ಗಂಟೆಯ ಸುಮಾರಿಗೆ ಎದರುಗಡೆಯಿಂದ ಟ್ರ್ಯಾಕ್ಟರ್ ನಂ ಕೆ.ಎ-36/ಟಿ.ಎ-4957 ಟ್ರೇಲರ್ ನಂ ಕೆ.ಎ-36 ಟಿ.ಎ 22 ನೆದ್ದರ ಚಾಲಕ ತನ್ನ ಟ್ರ್ಯಾಕ್ಟರ್ ನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಳಸಪ್ಪನ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಕಳಸಪ್ಪ ಮತ್ತುಹನುಮಂತಪ್ಪ ಇವರು ಮೋಟಾರ್ ಸಮೇತ ಕೆಳಗಡೆ ಬಿದ್ದು ಕಳಸಪ್ಪನಿಗೆ ತಲೆಗೆ ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಹನುಮಂತಪ್ಪನಿಗೆ ಗಂಭೀರ ಸ್ವರೂಪದ ಗಾಯಗಳಾಗಿರುತ್ತವೆ ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಠಗಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 31/2017 ಕಲಂ.143,147,148,323,324,504,506 ಸಹಿತ 149 ಐಪಿಸಿ ದಿನಾಂಕ : 08-02-2017 ರಂದು ಮದ್ಯಾಹ್ನ 01-15 ಗಂಟೆಗೆ ಪಿರ್ಯಾದಿದಾರರಾದ ಶಿವಕುಮಾರ ತಂದೆ ವಾಲಪ್ಪ ರಾಠೋಡ ವಯಾ 27 ವರ್ಷ ಉ : ಒಕ್ಕಲುತನ ಸಾ : ಚಿಕ್ಕಕೊಡಗಲಿತಾಂಡಾ ರವರು ಠಾಣೆಗೆ ಬಂದು ಒಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಪಿರ್ಯಾದಿಯ ಸಾರಾಂಶವೆನೆಂದರೆ, ಮಿಯ್ಯಾಪೂರ ಗ್ರಾಮದ ಸೀಮಾದಲ್ಲಿ ನಮ್ಮ ಜಮೀನು ಸರ್ವೇ ನಂ.47 ಇದ್ದು ಈ ಹೊಲದಲ್ಲಿ ಮರಳು ಇದ್ದು ಅದನ್ನು ತೆಗೆಯಲು ಆರೋಪಿತರು ಅಕ್ರಮಕೂಟ ರಚಿಸಿಕೊಂಡು ದಿನಾಂಕ :07-02-2017 ರಂದು ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ಬಂದಿದ್ದು ಆಗ ಫಿರ್ಯಾದಿದಾರರು ಸದರಿ ಹೊಲವು ಸರಿಯಾಗಿ ಸರ್ವೆ ಆಗದ ಕಾರಣ ಅದರಲ್ಲಿ ಮರಳನ್ನು ತೆಗೆಯಬೇಡಿರಿ ಅಂತಾ ಹೇಳಿ ಕಳುಹಿಸಿದ್ದು ನಂತರ ನಮ್ಮ ಮಾತನ್ನು ಕೇಳದೇ ರಾತ್ರಿ 12-00 ಗಂಟೆಯ ಸುಮಾರಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಫಿರ್ಯಾದಿದಾರರಿಗೆ ಹಾಗೂ ಇತರರಿಗೆ ಕೈಯಿಂದ ಕಟ್ಟಿಗೆಯಿಂದ ಹಾಗೂ ಕಲ್ಲಿನಿಂದ ಹೊಡಿ ಬಡಿ ಮಾಡಿದ್ದುನಮ್ಮೆಲ್ಲರನ್ನು ಮುಗಿಸಿಬಿಡುತ್ತೇವೆ ಅಂತಾ ಅವ್ಯಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಕುಷ್ಠಗಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 32/2017 ಕಲಂ.143,147,148,323,324,504,506,ಸಹಿತ 149  ಐಪಿಸಿ.

ದಿನಾಂಕ :- 08-02-2017 ರಂದು ಮದ್ಯಾಹ್ನ 2-30 ಗಂಟೆಗೆ ಫಿರ್ಯಾದಿದಾರರಾದ ಶರಣಪ್ಪ ತಂದೆ ಹನುಮಪ್ಪ ಮಾದರ ವಯಾ 36 ವರ್ಷ ಜಾ : ಹಿಂದೂ ಮಾದರ ಉ : ಒಕ್ಕಲುತನ ಸಾ : ಮಿಯ್ಯಾಪೂರ ರವರು ಠಾಣೆಗೆ ಬಂದು ಒಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಪಿರ್ಯಾದಿಯ ಸಾರಾಂಶವೆನೆಂದರೆ, ನಮ್ಮ ಗ್ರಾಮದ ಚಂದಪ್ಪ ತಂದೆ ಯಮನಪ್ಪ ತಮ್ಮಣ್ಣವರ ರವರು ತಮ್ಮ ಹೊಲದಲ್ಲಿ ಬೋರ ಹಾಕಿಸಿದ್ದು, ಅವರು ಬೋರ ಪೂಜಾ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದು ನನಗೆ ಮತ್ತು ನಮ್ಮೂರಿನ ಹಿರಿಯರಿಗೆ ಪೂಜಾ ಕಾರ್ಯಕ್ರಮಕ್ಕೆ ಬರಲು ತಿಳಿಸಿದ್ದರಿಂದ ನಾವೆಲ್ಲರೂ ಕೂಡಿ ನಿನ್ನೆ ದಿನಾಂಕ : 07-02-2017 ರಂದು ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ಪೂಜಾ ಕಾರ್ಯಕ್ರಮಕ್ಕೆ ಬಂದು ಪೂಜಾ ಕಾರ್ಯಕ್ರಮವನ್ನು ಮುಗಿಸಿದ್ದು ನಂತರ ನಮಗೆ ರಾತ್ರಿ ಊಟದ ವ್ಯವಸ್ಥೆ ಇದೆ ಊಟ ಮಾಡಿಕೊಂಡು ಹೋಗಿರಿ ಅಂತಾ ತಿಳಿಸಿದ್ದರಿಂದ ನಮ್ಮಂತೆ ಚಂದಪ್ಪ ತಮ್ಮಣ್ಣನವರ ರವರ ಪರಿಚಸ್ಥರಾದ ಹಾಗೂ ಊರ ಮಗ್ಗಲು ಇರುವ ಚಿಕ್ಕಕೊಡಗಲಿ ತಾಂಡಾ ಎಲ್.ಟಿ ಗ್ರಾಮದವರಾದ 1) ಕಮಲೆಪ್ಪ ತಂದೆ ವಿಠ್ಠಪ್ಪ ರಾಠೋಡ 2) ರಂಗಪ್ಪ ತಂದೆ ಬಂದೆಪ್ಪ ರಾಠೋಡ ರವರು ಸಹ ಬಂದಿದ್ದರು. ನಂತರ ರಾತ್ರಿ 11-30 ಗಂಟೆಯ ಸುಮಾರಿಗೆ ಚಿಕ್ಕಕೊಡಗಲಿ ತಾಂಡಾದ ಆರೋಪಿತರೆಲ್ಲರಿಗೂ ಹಾಗೂ ಕಮಲೆಪ್ಪ ರಾಠೋಡ ಮತ್ತು ರಂಗಪ್ಪ ರಾಠೋಡ ಇವರೊಂದಿಗೆ ಮಿಯ್ಯಾಪೂರ ಸೀಮಾದಲ್ಲಿರುವ ಮರಳನ್ನು ತುಂಬುವ ವಿಷಯವಾಗಿ ವಯಕ್ತಿಕ ದ್ವೇಶ ಇದ್ದು. ಇವರಿಬ್ಬರದು ಊರಲ್ಲಿ ಬಹಳ ಆಗೈತಿ ಅಂತಾ ಮಹಾಂತೇಶ ರಾಠೋಡ ಮತ್ತು ಕುಮಾರ ರಾಠೋಡ ರವರು ಇವತ್ತು ಅವರಿಗೆ ಸರಿಯಾಗಿ ಬುದ್ದಿ ಕಲಿಸೋಣ ನಮ್ಮ ತಂಟೆಗೆ ಬಾರದಂತೆ ಮಾಡೋಣ ಅಂತಾ ಸುಮಾರು 10-15 ಜನರನ್ನು ಮೋಟಾರ ಸೈಕಲ್ ಮೇಲೆ ಕರೆದುಕೊಂಡು ಬಂದು ಕಮಲೆಪ್ಪ ಮತ್ತ ರಂಗಪ್ಪ ರವರು ಹೊಲದಲ್ಲಿ ಊಟ ಮಾಡುತ್ತಿರುವಾಗ ಲೇ ಕಮಲ್ಯಾ ಮತ್ತು ರಂಗ್ಯಾ ನಿಮ್ಮನ್ನು ಎಷ್ಟು ದಿವಸ ಅಂತಾ ನೋಡೋದು ನಾವು ಮಾಡುವ ದಂದೆಯನ್ನು ಹಾಳು ಮಾಡುತ್ತಿಯಾ ಅಂತಾ ಜಗಳ ತೆಗೆದರು. ಆಗ ನಾನು ಮತ್ತು ನಮ್ಮ ಗ್ರಾಮದ ಜನರು ಅವರಿಗೆ ಇವತ್ತು ಜಗಳ ಮಾಡಬೇಡಿರಿ ಪೂಜಾ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅಂತಾ ಬುದ್ದಿ ಹೇಳಲು ಹೋದ ನನಗೆ ಮತ್ತು ಬಾಲನಗೌಡ ಇಬ್ಬರಿಗೆ ಲೇ ಸೂಳೇ ಮಕ್ಕಳೇ ನೀವು ಯಾರೂ ಇವತ್ತು ಅವನ ಬಿಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಎಲ್ಲರೂ ಗುಂಪಗೂಡಿಕೊಂಡು ಕೈಯಿಂದ ಬಡಿದರು ಮತ್ತು ಕಾಲಿನಿಂದ ಒದ್ದು ನಮಗೆ  ಕಟ್ಟಿಗೆಯಿಂದ ಬೆನ್ನಿಗೆ ಹೊಡೆದರು ಮತ್ತು ಕಲ್ಲಿನಿಂದ ಬಲಬುಜಕ್ಕೆ ಗುದ್ದಿದರು, ಬಿಡಿಸಲು ಬಂದ ವಿರುಪಾಕ್ಷಗೌಡ ಮ್ಯಾಗೇರಿ, ಶರಣಗೌಡ ಪಾಟೀಲ, ಬಸವರಾಜ ತಂದೆ ಶಿವಪ್ಪ ಹೊಸೂರ, ಚಂದಪ್ಪ ತಂದೆ ಶಿವಪ್ಪ ಉಪ್ಪೇರಿ ಇವರಿಗೂ ಸಹ ಎಳೆದಾಡಿ ನೂಕಾಡಿ ಅವಾಚ್ಯವಾಗಿ ಬೈದು ನಿಮಗೂ ಹೊಡಿತಿವಿ ಬಡಿತಿವಿ ಅಂತಾ ಹೆದರಿಸಿ ನೀವು ಸರಿರಿ ಅವರಿಬ್ಬರ ಜೀವವನ್ನು ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008