Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, February 10, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 21/2017 ಕಲಂ: 78(3) Karnataka Police Act.
ದಿನಾಂಕ:-09-02-2017 ರಂದು ರಾತ್ರಿ 9-40 ಗಂಟೆಗೆ ಪಿ.ಎಸ್.ಐ ಸಾಹೇಭರು ಒಂದು ಮಟ್ಕಾ ದಾಳಿ ಮೂಲ ಪಂಚನಾಮೆ, ವರದಿ ಮತ್ತು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಆರೋಪಿಯನ್ನು ಹಾಜರುಪಡಿಸಿದ್ದು ಸದ್ರಿ ಸಾರಾಂಶದಲ್ಲಿ ಇಂದು ದಿನಾಂಕ:-09-02-2017 ರಂದು ರಾತ್ರಿ 8-25 ಗಂಟೆಯ ಸುಮಾರಿಗೆ ಕಾರಟಗಿ ಎ.ಪಿ.ಎಮ್.ಸಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಆರೋಪಿ ತಾಯಪ್ಪ ತಂದಿ ದುರಗಪ್ಪ ಕ್ವಾಸಗಿ ವಯಾ-28 ವರ್ಷ ಸಾ. 1 ನೇ ವಾರ್ಡ ಕಾರಟಗಿ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನಿಂದ ನಗದು ಹಣ 710=00 ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 06/2017 ಕಲಂ: 279, 338. ಐಪಿಸಿ
ದಿನಾಂಕ: 09-02-2017 ರಂದು ರಾತ್ರಿ 8-45 ಗಂಟೆ ಸುಮಾರಿಗೆ ಗಾಯಾಳಯ ಹನುಮಂತನು ತನ್ನ ಮೋಟಾರ್ ಸೈಕಲ್ ನಂ. ಕೆಎ-37/ಈಬಿ-7833 ನೇದ್ದನ್ನು ಬನ್ನಿಕೊಪ್ಪದಲ್ಲಿಯ ತನ್ನ ಮಾವನ ಮನೆಯಿಂದ (ಪಿರ್ಯಾದಿದಾರ) ಪೆಟ್ರೋಲ್ ಹಾಕಿಸಿಕೊಂಡು ಬರಲು ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಪಕ್ಕದಲ್ಲಿರುವ ಪೆಟ್ರೋಲ್ ಬಂಕಿಗೆ ಹೋಗಿದ್ದು, ರಾತ್ರಿ 9-00 ಗಂಟೆ ಸುಮಾರಿಗೆ ಹನುಮಂತನು ತನ್ನ ಮೋಟಾರ್ ಸೈಕಲ್ ಇಂಡಿಕೇಟರ್ ಹಾಕಿ ಪೆಟ್ರೋಲ್ ಬಂಕ್ ಕಡೆಗೆ ಟರ್ನ ಮಾಡುತ್ತಿರುವಾಗ ಆರೋಪಿತನು ಕಾರ್ ನಂ. ಕೆಎ-35/ಎನ್-2333 ನೇದ್ದನ್ನು ಗದಗ ಕಡೆಯಿಂದ ಕೊಪ್ಪಳ ಕಡೆಗೆ ಅತಿಜೋರಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ. ಇದರಿಂದಾಗಿ ಹನುಮಂತನಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 33/2017 ಕಲಂ: 279,  337, 338, 304[A] IPC & 187 IMV Act

ದಿನಾಂಕ : 09-02-2017 ರಂದು ಕುಷ್ಟಗಿ ತಾಲೂಕಿನ ಬ್ಯಾಲಿಹಾಳ ಗ್ರಾಮದ ನಮ್ಮ ದೊಡ್ಡಮ್ಮನ ಮಗನಾದ ಸೋಮಪ್ಪ ತಂದೆ ನಾಗಪ್ಪ ಡೊಳ್ಳಿನ ವಯಾ : 28 ವರ್ಷ ಇತನ ನಿಶ್ಚಿತಾರ್ಥ ಕಾರ್ಯಕ್ರಮವಿದ್ದ ಕಾರಣ ನಾನು ಮತ್ತು ನಮ್ಮ ತಾಯಿಯಾದ ಶಾಂತಮ್ಮ ವಯಾ : 40 ವರ್ಷ ಇಬ್ಬರೂ ಇಂದು ಬೆಳಿಗ್ಗೆ ಬ್ಯಾಲಿಹಾಳ ಗ್ರಾಮಕ್ಕೆ ಬಂದು ಸದರಿ ನಮ್ಮ ದೊಡ್ಡಮ್ಮನ ಮಗನಾದ ಸೋಮಪ್ಪ ಇವರ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮುಗಿಸಿಕೊಂಡು ನಂತರ  ನನ್ನನ್ನು ಮತ್ತು ನನ್ನ ತಾಯಿಯಾದ ಶಾಂತಮ್ಮ ರವರನ್ನು ನಮ್ಮೂರಿಗೆ ಬಿಟ್ಟು ಬರುವ ಸಲುವಾಗಿ ಸದರಿ ನಮ್ಮ ದೊಡ್ಡಮ್ಮನ ಮಗನಾದ ಸೋಮಪ್ಪ ಇತನು ತನ್ನ ಹಿರೋ ಸ್ಪ್ಲೆಂಡರ್ ಪ್ರೋ ಮೋ.ಸೈ ನಂ : ಕೆ.ಎ-37/ಇಬಿ-8205 ನೇದ್ದನ್ನು ತೆಗೆದುಕೊಂಡು ನಮ್ಮನ್ನು ಮೋ.ಸೈ ಮೇಲೆ ಕುಳ್ಳಿರಿಸಿಕೊಂಡು ಹೊರಟಿದ್ದು ನಂತರ ರಾತ್ರಿ 7-00 ಗಂಟೆಯ ಸುಮಾರಿಗೆ ನಾವು ಬ್ಯಾಲಿಹಾಳ ದಾಟಿ ಚಿಕ್ಕನಂದಿಹಾಳ ಕ್ರಾಸ್ ಹತ್ತಿರ ಸೋಮಪ್ಪ ಇತನು ರಸ್ತೆಯ ಪಕ್ಕದಲ್ಲಿ ತನ್ನ ಮೋ.ಸೈ ನ್ನು ನಡೆಸಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಮೋ.ಸೈ ಗೆ ಟಕ್ಕರ ಕೊಟ್ಟಿದ್ದರಿಂದ ನಾವು ಮೋ.ಸೈ ಸಮೇತ ಕೆಳಗೆ ಬಿದ್ದಿದ್ದು ಆಗ ನಮಗೆ ಟಕ್ಕರ ಕೊಟ್ಟ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು,  ನಂತರ ನೋಡಿಕೊಳ್ಳಲಾಗಿ ಸದರಿ ಅಪಘಾತದಿಂದ ನನಗೆ ಎಡಗಾಲು ಮೊಣಕಾಲಿಗೆ ಭಾರಿ ರಕ್ತ ಗಾಯ, ಎಡಗಾಲು ಹಿಮ್ಮಡಿಗೆ ರಕ್ತ ಗಾಯ ಹಾಗೂ ಬಲಗಡೆ ಸೊಂಟಕ್ಕೆ ತೆರಚಿದ ಗಾಯವಾಗಿದ್ದು ನಮ್ಮ ತಾಯಿಯಾದ ಶಾಂತಮ್ಮ ಇವರಿಗೆ ಬಲಗಾಲು ಮೊಣಕಾಲಿಗೆ ಭಾರಿ ರಕ್ತ ಗಾಯ, ಎಡಗಾಲು ಮೊಣಕಾಲಿಗೆ ತೆರಚಿದ ಗಾಯ, ಎಡಗಡೆ ಭುಜಕ್ಕೆ ಎಡಗಡೆ ಕಿವಿಗೆ ತೆರಚಿದ ಗಾಯವಾಗಿದ್ದು,  ಮೋ.ಸೈ ನಡೆಸುತ್ತಿದ್ದ ಸೋಮಪ್ಪನಿಗೆ ಬಲಗಾಲು ಮೊಣಕಾಲಿಗೆ ಹಾಗೂ ಬೆರಳುಗಳಿಗೆ ತೆರಚಿದ ಗಾಯ ಎಡಗಾಲು ಮೊಣಕಾಲಿಗೆ ತೆರಚಿದ ಗಾಯ ಬಲಗೈ ಮೊಣಕೈಗೆ ತೆರಚಿದ ಗಾಯ, ಎಡ ಗೈ ಮುಂಗೈ ಹತ್ತಿರ ಒಳಪೆಟ್ಟಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008