1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 35/2017 ಕಲಂ: 279, 337, 338 & 304(ಎ) ಐ.ಪಿ.ಸಿ:.
ದಿನಾಂಕ
:- 15-02-2017 ರಂದು ಮದ್ಯಾಹ್ನ 01-30 ಗಂಟೆಗೆ ಪಿರ್ಯಾದಿದಾರನಾದ ಯಮನೂರಪ್ಪ ತಂದೆ ಹುಲಗಪ್ಪ ಬೋವಿ ಸಾ : ಹನಮಸಾಗರ ಈತನು
ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಪಿರ್ಯಾದಿಯ
ಸಾರಾಂಶವೆನೆಂದರೆ, ಪಿರ್ಯಾದಿ ತಂದೆ
ತಾಯಿಗೆ ತಾವು ನಾಲ್ಕು ಜನ ಗಂಡು ಮಕ್ಕಳು ಇಬ್ಬರೂ ಹೆಣ್ಣು ಮಕ್ಕಳು ಇರುತ್ತೇವೆ. ಗಂಡು ಮಕ್ಕಳ
ಪೈಕಿ 1) ಬಸಪ್ಪ 2) ಸೂಚಪ್ಪ 3) ಸಿದ್ದಪ್ಪ
ಮತ್ತು 4) ನಾನು ಯಮನೂರಪ್ಪ
ಹೀಗೆ ಇರುತ್ತೇವೆ. ನನ್ನ ಅಣ್ಣ
ಬಸಪ್ಪ ಈತನು ಹುಟ್ಟಿದಾಗಿನಿಂದಲು ಅಂಗವಿಕಲನಿದ್ದು ಗುಡಿ ಗೋಪುರಗಳ ಶಿಲ್ಪಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದನು. ಈತನು ನಿನ್ನೆ
ದಿನಾಂಕ :14-02-2017 ರಂದು
ತನ್ನ ವಯಕ್ತಿಕ ಕೆಲಸದ ನಿಮಿತ್ಯ ತನ್ನ ಮಹೇಂದ್ರ ಕಂಪನಿ 3 ಗಾಲಿ ಸ್ಕೂಟಿ ವಾಹನ ನಂ. ಕೆ.ಎ-37-ಇ.ಎ-8400 ನೇದ್ದನ್ನು ತೆಗೆದುಕೊಂಡು ಕುಷ್ಟಗಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ
ಹೋದನು. ನಿನ್ನೆ ರಾತ್ರಿ 08-00 ಗಂಟೆಯ
ಸುಮಾರಿಗೆ ಕುಷ್ಟಗಿ ಗ್ರಾಮದ ನಮ್ಮ ಸಂಬಂದಿಕರಾದ ಮುತ್ತಣ್ಣ ಹೊಸಮನಿ ಈತನು ಪೋನ ಮಾಡಿ ನಿನ್ನ
ಅಣ್ಣ ಬಸಪ್ಪನು ತನ್ನ 3 ಗಾಲಿ ಸ್ಕೂಟಿ
ವಾಹನವನ್ನು ಸ್ಕೀಡ ಮಾಡಿಕೊಂಡು ಬಿದ್ದಿರುತ್ತಾನೆ. ಅಂತಾ ತಿಳಿಸದ ಮೇರೆಗೆ ನಾನು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ
ನಿಜವಿದ್ದು ಸದರಿ ನನ್ನ ಅಣ್ಣ ಬಸಪ್ಪ ಈತನು ರಾತ್ರಿ 07-30 ಗಂಟೆಯ ಸುಮಾರಿಗೆ ವಾಪಸ ಹನಮಸಾಗರಕ್ಕೆ ಬರುವಾಗ ತನ್ನ ಸ್ಕೂಟಿ
ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತದಿಂದ ನಡೆಯಿಸಿಕೊಂಡು ಒಮ್ಮಿಂದೊಮ್ಮಲೇ ಬ್ರೇಕ್ ಮಾಡಿ
ನಿಯಂತ್ರಣ ತಪ್ಪಿ ಸ್ಕೀಡ ಮಾಡಿಕೊಂಡು ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ನನ್ನ ಅಣ್ಣ
ಬಸಪ್ಪನಿಗೆ ಬಲಗೈ ಮೊಣಕೈ ಹತ್ತಿರ, ಬೆನ್ನಿಗೆ ತೆರಚಿದಗಾಯಗಳಾಗಿದ್ದು, ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಕುಷ್ಟಗಿ
ಕಡೆಗೆ ಹೋಗುವ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ನಾನು ನಮ್ಮ ಸಂಬಂದಿಕರಾದ ಮುತ್ತಣ್ಣ
ಹೊಸಮನಿ ಇಬ್ಬರೂ ಕೂಡಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ
ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 35/2017 ಕಲಂ 279, 337,
338 ಐ.ಪಿ.ಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಂತರ ಇಂದು ದಿನಾಂಕ ;15-02-2017 ರಂದು ಸಂಜೆ 05-30 ಗಂಟೆಗೆ ದೂರವಾಣಿ ಮುಖಾಂತರ ಪ್ರಕರಣದಲ್ಲಿನ
ಗಾಯಾಳು ಮತ್ತು ಆರೋಪಿತನಾದ ಬಸಪ್ಪ ಈತನು ಇಂದು ಸಂಜೆ 05-00 ಗಂಟೆಗೆ ಮೃತಪಟ್ಟಿರುವುದಾಗಿ ಮಾಹಿತಿ
ಬಂದ ಮೇರೆಗೆ ಪ್ರಕರಣದಲ್ಲಿ ಕಲಂ 304 (ಎ) ಐ.ಪಿ.ಸಿ ನೇದ್ದನ್ನು ಅಳವಡಿಸಿಕೊಂಡಿದ್ದು ಇರುತ್ತದೆ.
0 comments:
Post a Comment