Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, February 15, 2017

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 28/2017 ಕಲಂ: 78(3) Karnataka Police Act.
ದಿ:14.02.2017 ರಂದು ಸಂಜೆ 05.10 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಗಿಣಗೇರಿ ಗ್ರಾಮದ ಅಂಚೆ ಕಚೇರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಮೇಶ ತಂದೆ ಈರಪ್ಪ ಮುಚಿಗೇರ ಈತನು ರಸ್ತೆಯಲ್ಲಿ ಹೋಗು ಬರುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಜನರಿಂದ ಹಣ ಪಡೆದು ಮಟ್ಕಾ ನಂಬರ್ ಚೀಟಿ ಬರೆದು ಕೊಡುತ್ತಿದ್ದಾಗ ಶ್ರೀ ಗುರುರಾಜ. ಕಟ್ಟಿಮನಿ, ಪಿ.ಎಸ್.ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 730=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 45/2017 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ಗಾಯಾಳು ಶ್ರೀ ಶರಣಪ್ಪ ತಂದೆ ಯಮನಪ್ಪ ವಾಲೆಕಾರ, ವಯಸ್ಸು: 35 ವರ್ಷ ಜಾತಿ: ಕುರುಬರ, ಉ: ಒಕ್ಕತಲನ ಸಾ: ಡಣಾಪೂರ, ತಾ: ಗಂಗಾವತಿ ಇವರ ನುಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ದಿನಾಂಕ: 14-02-2017 ರಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಲಕ್ಷ್ಮಣ ತಂದೆ ಕಲ್ಲಪ್ಪ ಹಡಪದ, ವಯಸ್ಸು: 40 ವರ್ಷ ಹಾಗೂ ಮಹರಾಜ ತಂದೆ ವಿರೇಶಪ್ಪ 35 ವರ್ಷ ಮೂರು ಜನರು ಕೂಡಿಕೊಂಡು ಮೂರು ಗಾಲಿಯ ನಂಬರ್ ಇರಲಾರದ ಹೊಸ ಪ್ಯಾಸೆಂಜರ್ ಮಹೀಂದ್ರ ಅಲ್ಪಾ ಅಟೋ ನೇದ್ದರಲ್ಲಿ ಶ್ರೀರಾಮನಗರ ಕಡೆಯಿಂದ ಡಣಾಪೂರ ಕ್ರಾಸ ಕಡೆಗೆ ತಾಯಮ್ಮನ ಗುಡಿ ಹತ್ತಿರ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ನಾವು ಕುಳಿತ ಅಟೋ ಓಡಿಸುತ್ತಿದ್ದ ಮಹಾರಾಜ ಈತನು ಅಟೋವನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಮತ್ತು ಗಂಗಾವತಿ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಸಹ ತನ್ನ ಹಿಂಭಾಗದಲ್ಲಿ ಒಬ್ಬ ಮಹಿಳೆಯನ್ನು ಕೂಡಿಸಿಕೊಂಡು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ಇಬ್ಬರು ಒಬ್ಬರಿಗೊಬ್ಬರು ಪರಸ್ಪರ ಟಕ್ಕರು ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಇದರಿಂದಾಗಿ ನನಗೆ ಹೊಟ್ಟೆಗೆ ಒಳಪೆಟ್ಟಾಗಿ ಹಾಗೂ ಬಲ ಮೊಣಕಾಲಿಗೆ ಗಾಯವಾಗಿದ್ದು ಲಕ್ಷ್ಮಣ ಈತನಿಗೆ ಮೂಗಿನ ಹತ್ತಿರ ಎಲಬು ಮುರಿದು ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೋಟಾರ ಸೈಕಲ ನಡೆಸುತ್ತಿದ್ದ ವ್ಯಕ್ತಿಯ ಹೆಸರನ್ನು ವಿಚಾರಿಸಲು ಹುಸೇನಬಾಷಾ ತಂದೆ ಮೌಲಸಾಬ ವಯಸ್ಸು: 40 ವರ್ಷ ಸಾ: ಲಿಂಗರಾಜ ಕ್ಯಾಂಪ್ ಗಂಗಾವತಿ ಅಂತಾ ತಿಳಿಸಿದ್ದು ಆತನಿಗೆ ಹಣೆಗೆ ಬಲಗೈ ರಟ್ಟೆಗೆ ತೀವ್ರ ರಕ್ತಗಾಯವಾಗಿದ್ದು ಹಿಂಭಾಗ ಕುಳಿತುಕೊಂಡಿದ್ದವಳ ಹೆಸರು ಮೌಲಾಬೀ ಗಂಡ ಮೌಲಸಾಬ 30 ವರ್ಷ ಸಾ: ಮಹಿಬೂಬನಗರ ಗಂಗಾವತಿ ಅಂತಾ ತಿಳಿಸಿದ್ದು ಅವಳಿಗೆ ಬಲಗೈ ರಟ್ಟೆಗೆ ತೀವ್ರ ಒಳಪೆಟ್ಟಾಗಿ ಅಲ್ಲಲ್ಲಿ ರಕ್ತ ಗಾಯಗಳಾಗಿದ್ದು ಇತ್ತು. ಅಪಘಾತದ ನಂತರ ಮಹಾರಾಜ ಈತನು ಅಲ್ಲಿಂದ ಓಡಿ ಹೋಗಿದ್ದನು. ಮೋಟಾರ ಸೈಕಲ ನೋಡಲು ಹಿರೋ ಹೊಂಡಾ ಸಿಡಿ ಡೀಲಕ್ಸ್ ನಂಬರ್ ಕೆ.ಎ-37/ಎಲ್-8365 ಅಂತಾ ಇದ್ದು ಕೂಡಲೇ ಮರಳಿ ಟೋಲ ಅಂಬ್ಯುಲೆನ್ಸ್ ವಾಹನದಲ್ಲಿ ನಮಗೆ ಮೂರು ಜನರನ್ನು ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದಾಗ ತೀವ್ರವಾಗಿ ಗಾಯಗೊಂಡಿದ್ದ ಹುಸೇನಬಾಷಾ ಎಂಬಾತನು ಸಹ ಸಂಜೆ 7:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.   
3] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 09/2017 ಕಲಂ: 279, 338 ಐ.ಪಿ.ಸಿ:.
ದಿನಾಂಕ 14-02-2017 ರಂದು ಬೆಳಿಗ್ಗೆ 5-05 ಗಂಟೆಗೆಯ ಸುಮಾರಿಗೆ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿಗೆ  ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿ ಶ್ರೀ ಮುದುಕಪ್ಪ ಹದ್ದಿನ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:11-02-2017 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿಯ ತಾಯಿ ಕರಕಮ್ಮ ಹದ್ದಿನ ಇವರು ಕಲ್ಲಣ್ಣವರ ಓಣಿಗೆ ಹೋಗಲು ಕೊಪ್ಪಳ ನಗರದ ಅಜಾದ ಸರ್ಕಲ್ ಸಮೀಪ ಜವಾಹರ ರಸ್ತೆಯನ್ನು ದಾಟುತ್ತಿರುವಾಗ  ಅಜಾದ ಸರ್ಕಲ್ ಕಡೆಯಿಂದ ಮೋಟಾರ್ ಸೈಕಲ್ ನಂ. KA-37/EC-4550 ನೆದ್ದರ ಸವಾರನು ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಾಯಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಕರಕಮ್ಮ ಈಕೆಗೆ ತಲೆಗೆ ತೆರಚಿದಗಾಯ ಹಾಗೂ ಒಳಪೆಟ್ಟು ಆಗಿ ಮೂಗಿನಿಂದ & ಕಿವಿಯಿಂದ ರಕ್ತ ಬಂದಿದ್ದು ಸರಿಯಾಗಿ ಮಾತನಾಡಲು ಬರುತ್ತಿಲ್ಲ ಅಂತಾ ಮುಂತಾಗಿದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 08/2017 ಕಲಂ: 143, 147, 323, 326, 504, 506 ಸಹಿತ 149 .ಪಿ.ಸಿ.
ದಿನಾಂಕ: 14-02-2017 ರಂದು ಬೆಳಿಗ್ಗೆ 10-00 ಗಂಟೆಗೆ ಶರಣಪ್ಪ ಕುರಿ ಸಾ: ಹನಮನಾಳ ರವರು ಠಾಣೆಗೆ ಹಾಜರಾಗಿ ತಮ್ಮ ಬೆರಳಚ್ಚು ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿಯ ಊರಿನ ಫಿರ್ಯಾದಿಯ ಜನಾಂಗದವರಾದ 1] ಮಂಜಪ್ಪ, 2] ಸಿಂಧೂರಪ್ಪ, ರವರು ಫಿರ್ಯಾದಿಗೆ ಊರಲ್ಲಿ ಆವಾಗವಾಗ ನೀ ಏನ್ ದೊಡ್ಡ ಹಿರಿಯ ಏನಲೇ ಅಂತಾ ತಕರಾರು ಮಾಡಿ ಆತನ ಮೇಲೆ ದ್ವೇಷ ಇಟ್ಟು, ನಂತರ ದಿನಾಂಕ: 13-02-2017 ರಾತ್ರಿ 09-30 ಗಂಟೆಗೆ ರಂಗಾಪೂರ ಕ್ರಾಸ್ ಹತ್ತಿರದ ಲಾಲಸಾಬ ಡಾಬಾದಲ್ಲಿ ಊಟ ಮಾಡಿ ಹೊರಗಡೆ ಬಂದು ಚೇರಿನ ಮೇಲೆ ಕೂಡಲು ಹೋದಾಗ ಆರೋಪಿ 1] ಮಂಜಪ್ಪ, 2] ಸಿಂಧೂರಪ್ಪ 3] ಪವಾಡೆಪ್ಪ, 4] ರಾಮಪ್ಪ, 5] ರಂಗಪ್ಪ ರವರು ಕೂಡಿ ಫಿರ್ಯಾದಿಗೆ ಏನ್ ಲೇ ಶರಣ ಊರಾಗ ಏನ್ ದೊಡ್ಡ ಹಿರಿಯ ಆಗಿ ಯನಲೇ ಮಗನೆ ನಾವು ಐದು ಜನ ಅದೀವಿ ನಿನ್ನ ಒಂದು ಗತಿ ಕಾಣಸ್ತೀವಿ ಮಗನೇ ಅಂತಾ ನನಗೆ ಅವಾಚ್ಯವಾಗಿ ಬೈದಾಡಿದರು. ಆಗ ನಾನೇನು ದೊಡ್ಡವನಲ್ಲ ನಾನು ನಿಮಗೆ ಏನು ಅಂದಿಲ್ಲ ನನಗ್ಯಾಕ್ ಬೈತೀರಿ ಅಂತಾ ಕೇಳಿದಾಗ ಮಂಜಪ್ಪನು ನನ್ನ ತೆಕ್ಕೆ ಬಿದ್ದನು. ಆತನ ತಮ್ಮ ಸಿಂಧೂರ ಅಲ್ಲಿಯೇ ಇದ್ದ ಒಡಗಟ್ಟಿಗೆ ತೆಗೆದುಕೊಂಡು ತಲೆಗೆ ಹೊಡೆದನು. ನಾನು ಸತ್ನೆಪ್ಪೊ ಅಂತಾ ಕೆಳಗೆ ಕುಸಿದಾಗ ಪವಾಡೆಪ್ಪ ಮತ್ತು ರಾಮಪ್ಪ ರವರು ಕಾಲಿನಿಂದ ಒದ್ದರು. ರಂಗಪ್ಪ ಮೇಟಿ ಈತನು ಶರಣ ಹೆಂಗ ಸೋಗು ಮಾಡತಾನ ನೋಡು ಅಂತಾ ಅಂದವನೆ ಕೈಯಿಂದ ಬೆನ್ನಿಗೆ ಗುದ್ದಿ ಕಾಲಿನಿಂದ ಒದ್ದು, ಇವತ್ತ ಇವನ್ನ ಜೀವ ಸಹಿತ ಬಿಡುವುದು ಬ್ಯಾಡ್ ಅಂತಾ ಅಂದಾಗ. ಅಲ್ಲಿಯೇ ಇದ್ದ ಅಮರೇಶ ತಿಮ್ಮನಟ್ಟಿ, ಮತ್ತು ಬಸನಗೌಡ ತಂದೆ ಗೌಡಪ್ಪ ಕೊಟ್ನಳ್ಳಿ, ಲಕ್ಷ್ಮಪ್ಪ ತಂದೆ ಶಾಸಪ್ಪ ಕುರಿ ರವರು ಜಗಳ ಬಿಡಿಸಿದರು. ಆಗ ಡಾಬಾದ ಮಾಲೀಕ ಲಾಲಸಾಬನು ಈ ರೀತಿ ಮಾಡುವುದು ಸರಿಯಲ್ಲ ಅಂತಾ ತಿಳಿ ಹೇಳಿ ಕಳುಹಿಸಿದರು. ಜಗಳದಲ್ಲಿ ನನ್ನ ತಲೆಗೆ ಭಾರಿ ರಕ್ತಗಾಯವಾಯಿತು. ನಂತರ ಒಂದು ಖಾಸಗಿ ವಾಹನದಲ್ಲಿ ನಮ್ಮೂರಿಗೆ ಬಂದು ರಾತ್ರಿಯಾಗಿದ್ದರಿಂದ ಮನೆಯಲ್ಲಿದ್ದು ನಾನೇ ಉಪಚಾರ ಮಾಡಿಕೊಂಡು ಇಂದು ಹಿರಿಯರನ್ನು ವಿಚಾರಿಸಿ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅದೆ.
5] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 09/2017 ಕಲಂ: 143, 147, 148, 323, 324, 109, 354, 504,506 ಸಹಿತ 149 .ಪಿ.ಸಿ.

ದಿನಾಂಕ: 14-02-2017 ರಂದು ಸಾಯಂಕಾಲ 18-50 ಗಂಟೆಗೆ ಫಿರ್ಯಾದಿದಾರರಾದ ದ್ರಾಕ್ಷಾಯಣಿ ಗಂಡ ಮಹಾಂತಗೌಡ ಪಾಟೀಲ ಸಾ: ಬಂಡ್ರಗಲ್ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿ ಫಿರ್ಯಾದಿಯನ್ನು ಹಾಜರಪಡಿಸಿದ್ದರ ಸಾರಾಂಶವೇನೆಂದರೆ. ಫಿರ್ಯಾದಿದಾರರು ತಮ್ಮ ಮಕ್ಕಳೊಂದಿಗೆ ತಮ್ಮ ತವರುಮನೆಯಾದ ಹುನಗುಂದ ತಾಲೂಕ ಇಂಗಳಗಿ ಗ್ರಾಮದಲ್ಲಿ ಹಾಗೂ ಗಂಡನ ಮನೆಯಾದ ಕುಷ್ಟಗಿ ತಾಲೂಕ ಬಂಡರಗಲ ಗ್ರಾಮದಲ್ಲಿ ವಾಸವಿದ್ದು ಬಂಡರಗಲ ಗ್ರಾಮದಲ್ಲಿಯ ತನ್ನ ಪಾಲಿಗೆ ಬಂದಿದ್ದ ಮನೆಯನ್ನು ಕಟ್ಟಿಸಲು ಕೂಲಿಕಾರರಿಂದ ಸ್ವಚ್ಚ ಮಾಡಿಸುವಾಗ ಆರೋಪಿತರಾದ 1]ದೊಡ್ಡಬಸಪ್ಪ ಸಜ್ಜಲಗುಡ್ಡ 2] ವಿದ್ಯಾ ಸಜ್ಜಲಗುಡ್ಡ 3] ಸೋಮನಗೌಡ ಪಾಟೀಲ 4] ಶಿವವ್ವ ಪಾಟೀಲ ಹಾಗೂ ಇತರರು ಸೇರಿ ದಿನಾಂಕ: 10-02-2017 ರಂದು ಮುಂಜಾನೆ 10-00 ಗಂಟೆಗೆ ಬಾಯಿ ಮಾತಿನಿಂದ ಜಗಳ ವಾಡಿ ನಂತರ ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ಫಿರ್ಯಾದಿ ಪುನಃ ಮನೆ ಸ್ವಚ್ಚ ಮಾಡುವಾಗ ರೋಪಿತರು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಆರೋಪಿ ಶಿವವ್ವ ಮತ್ತು ವಿದ್ಯಾ ಫಿರ್ಯಾದಿ ಮೇಲೆ ಏಕಾಏಕಿ ಬಂದು ಕೈಯಿಂದ ಕಪಾಳಕ್ಕೆ ಹಾಗೂ ಕಲ್ಲುಗಳಿಂದ ಬೆನ್ನಿಗೆ ಹೊಡೆದು ದುಖಃಪಾತ ಗೊಳಿಸಿದ್ದು, ಆರೋಪಿ ದೊಡ್ಡಬಸಪ್ಪ ಮತ್ತು ಸೋಮನಗೌಡ ರವರು ಫಿರ್ಯಾದಿಗೆ ಆ ಬೋಸೂಡಿದೇನ ಕೇಳತೀರಿ ಹೊಡಿರಿ ಅಂತಾ ಪ್ರಚೋದನೆ ನೀಡಿ, ಸದರಿ ದೊಡ್ಡಬಸಪ್ಪ ಮತ್ತು ಭೀಮನಗೌಡ ರವರು  ಫಿರ್ಯಾದಿಯ ಸೀರೆಯನ್ನು ಜಗ್ಗಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದು ಅದೆ. ಆಗ ಅಲ್ಲಿಯೇ ಇದ್ದ ಸೋಮನಗೌಡ ತಂದೆ ಮುದಕನಗೌಡ ಪಾಟೀಲ ಮತ್ತು ಆಂಜನೇಯ ತಂದೆ ಮಾರೆಪ್ಪ ಗಟ್ಟಿಗುಂಡು ರವರು ಜಗಳ ಬಿಡಿಸಿ ತಿಳಿಹೇಳಿದ್ದು ನಂತರ ಆರೋಪಿತರು ಫಿರ್ಯಾದಿಗೆ ಈ ದಿವಸನೀನು ಉಳಿದುಕೊಂಡಿ ಮುಂದೆ ನಿನ್ನ ಜೀವಸಹಿತ ಉಳಿಸುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ನಂತರ  ಫಿರ್ಯಾದಿ ಊರಲ್ಲಿಯ ಹಿರಿಯರು ಯಾರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಡಿರಿ ಅಂತಾ ಹೇಳಿ ಇಲ್ಲಿಯೇ ಊರಲ್ಲಿ ಬಗಹರಿಸೋಣ ಅಂತಾ ಹೇಳಿದ್ದರಿಂದ ಹಾಗೂ ಆರೋಫಿತರು ಊರಲ್ಲಿ ಗುರು ಹಿರಿಯರು ಮಾತುಕೇಳದೆ ಇದ್ದುದ್ದರಿಂದ ಫಿರ್ಯಾದಿ ಇಂದು ತಡವಾಗಿ ಠಾಣೆಗೆ ಬಂದು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ನೀಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008