1] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 41/2017 ಕಲಂ: 87 Karnataka Police Act.
ದಿನಾಂಕ:- 12-02-2017 ರಂದು ಮಧ್ಯಾಹ್ನ 1:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ
ವ್ಯಾಪ್ತಿಯ ಜೀರಾಳ ಕಲ್ಗುಡಿ ಸೀಮಾದಲ್ಲಿ ಶರಣೇಗೌಡ ಎಂಬುವವರ ಜಮೀನಿನ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ
ರವರಿಗೆ ಬಂದ ಮೇರೆಗೆ ದಾಳಿ ಮಾಡಲು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಪಿ.ಸಿ. ನಂ:
237, 363, 110, 120, ಹೆಚ್.ಸಿ. 44 ಹಾಗೂ ಚೀಪ ಚಾಲಕ ಎ.ಹೆಚ್.ಸಿ. ಕನಕಪ್ಪ ಇವರನ್ನು ಸಂಗಡ
ಕರೆದುಕೊಂಡು ಜೀರಾಳ ಕಲ್ಗುಡಿ ಗ್ರಾಮದ ಊರ ಮುಂದೆ ಜೀಪನ್ನು ನಿಲ್ಲಿಸಿ ಎಲ್ಲರೂ ಕೂಡಿಕೊಂಡು
ನಡೆದುಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಶರಣೇಗೌಡ ಎಂಬುವವರ ಜಮೀನ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಮೂವರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ
ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು,
ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 03 ಜನರು ಸಿಕ್ಕಿಬಿದ್ದಿದ್ದು.
ವಿಚಾರಿಸಲು ಅವರು ತಮ್ಮ ಹೆಸರುಗಳು (1) ವಾಸಪ್ಪ ತಂದೆ ಕೆರೆಯಪ್ಪ ವಯಸ್ಸು 30 ವರ್ಷ, ಜಾತಿ: ಭಜಂತ್ರಿ
ಉ: ಆಟೋ ಚಾಲಕ ಸಾ: ಹಳೇ ಜೀರಾಳ ಕಲ್ಗುಡಿ (2) ಕನಕಪ್ಪ ತಂದೆ ಬಸಪ್ಪ, ವಯಸ್ಸು 32 ವರ್ಷ, ಜಾತಿ: ಉಪ್ಪಾರ
ಉ: ಕುರಿ ಕಾಯುವುದು ಸಾ: ಹೊಸ ಜೀರಾಳ ಕಲ್ಗುಡಿ (3) ನಾಗರಾಜ ತಂದೆ ಪಂಪನಗೌಡ, ವಯಸ್ಸು 28 ವರ್ಷ,
ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಹಳೇ ಜೀರಾಳ ಕಲ್ಗುಡಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ
ಸ್ಥಳದಿಂದ ಜೂಜಾಟದ ನಗದು ಹಣ ರೂ. 990-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ
ಒಂದು ಟಾವೆಲ್ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ
ಗುನ್ನೆ ನಂ: 27/2017 ಕಲಂ: 379 ಐ.ಪಿ.ಸಿ:.
ದಿನಾಂಕ:
06-02-2017 ರಂದು ಪಿರ್ಯಾದಿದಾರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿಸಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು
ಅದರ ಸಾರಾಂಶವೇನಂದರೆ, ದಿನಾಂಕ: 25-01-2017 ರಂದು ರಾತ್ರಿ 09-00 ಗಂಟೆ ಸುಮಾರಿಗೆ ಹುಲಗಿಯ ಎಸ್.ಆರ್.ಲಾಡ್ಜನ
ಮುಂದೆ ತಮ್ಮ ಬಜಾಜ ಮೋಟರ ಸೈಕಲ್ ನಂ.ಕೆ.ಎ.35/ಇ.ಎ.0877 ನೇದ್ದನ್ನು ಹ್ಯಾಂಡಲ್ ಲಾಕ ಮಾಡಿ ನಿಲ್ಲಿಸಿ
ಲಾಡ್ಜನಲ್ಲಿ ಮಲಗಿದ್ದು ಬೆಳಿಗ್ಗೆ 06-00 ಎ.ಎಂ.ಸುಮಾರಿಗೆ ಎದ್ದು ನೋಡಲಾಗಿ ಮೋ.ಸೈ.ಇರುವದಿಲ್ಲಾ
ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಮುಂತಾಗಿದ್ದ ಪಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
0 comments:
Post a Comment