Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 14, 2017

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 12/2017 ಕಲಂ: 87 Karnataka Police Act.
ದಿನಾಂಕ: 13-02-2017 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ಮುಧೋಳ ಗ್ರಾಮದ ಮುಧೋಳ-ಚಿಕ್ಕೊಪ್ಪ ರಸ್ತೆಯ ಮೇಲೆ ದಕ್ಷಿಣ ಭಾಗದ ನಟರಾಜ ದೇಸಾಯಿ ಇವರ ಹೊಲದಿಂದ ಸ್ವಲ್ವ ದೂರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 5 ಜನರು ಸಿಕ್ಕಿ ಬಿದ್ದಿದ್ದು 03 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 4700=00 ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ. ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 12/2017 ರಲ್ಲಿ ದಾಖಲಿಸಿಕೊಳ್ಳಲಾಗಿದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 26/2017 ಕಲಂ: 78(3) Karnataka Police Act.
ದಿನಾಂಕ:-13-02-2017 ರಂದು ಮದ್ಯಾಹ್ನ 7-00 ಗಂಟೆಯ ಸುಮಾರಿಗೆ  ಕಾರಟಗಿಯ ಎ.ಪಿ.ಎಂ.ಸುಇ 2 ನೇ ಗೇಟ್ ಹತ್ತಿರ ಆರೋಪಿ ನಂ 1 ರಾಮು @ ರಮೇಶ ತಂದೆ ಹನುಮಂತಪ್ಪ @ ಕಾಳಿಂಗಪ್ಪಈಳಿಗೇರ ಆರೋಪಿ ನಂ 2 ಶರಣಪ್ಪ ತಂದೆ ಬಸಪ್ಪ ಗದ್ದಿ ಸಾ.ಇಬ್ಬರೂ ಕಾರಟಗಿ ರವರು ಮಟ್ಕಾ ಜೂಜಾಟದಲ್ಲಿ ತೊಡಿಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತರ ಕಡೆಯಿಂದ ರೂ.4520=00 ನಗದು ಹಣ ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಸದರ್ ಆರೋಫಿತರು ಪಟ್ಟಿಯನ್ನು ಯಾರಿಗೆ ಕೊಡುತ್ತಿರಿ ಅಂತಾ ಕೇಳಲಾಗಿ ಪಟ್ಟಿಯನ್ನು ಶರಣಪ್ಪ ಬೂದುಗುಂಪಾ ಈತನ ತಗೆದುಕೊಂಡು ತಾನೇ ಇಟ್ಟುಕೊಳ್ಳುತ್ತಾನೆ ಅಂತಾ ತಿಳಿಸಿದ್ದು ಸದರಿ ಮಟಕಾ ಜೂಜಾಟದ ನಗದು ಹಣ ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಆರೋಪಿತರನ್ನು ತಾಭಾಕ್ಕೆ ತಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 18/2017 ಕಲಂ: 379 ಐ.ಪಿ.ಸಿ:.

ದಿನಾಂಕ 13-02-2017 ರಂದು ರಾತ್ರಿ 8-00 ಗಂಟೆಗೆ ಫಿರ್ಯಾಧಿದಾರರಾದ ಸಿದ್ದೇಶ ಜೆಬಿ ತಂದೆ ಬಸವರಾಜ ಸಾ: ಬಂಡ್ರಿ ಬಸವೇಶ್ವರ ನೀಲಯ ಗಣೇಶ ನಗರ ಕೊಪ್ಪಳ ಇವರು ಲಿಖಿತ ಫಿರ್ಯಾದಿಯನ್ನು ನೀಡಿದ್ದು, ಫಿರ್ಯದಿದಾರರು ತಮ್ಮ ಹೆಸರಿನಲ್ಲಿರುವ ತಮ್ಮ ಟಿ.ವಿ.ಎಸ್ ಎಕ್ಸ್ ಎಲ್ ಮೋಟಾರ ಸೈಕಲ್ ನಂ ಕೆ.ಎ 37 ಕ್ಯೂ 6999 ನೇದ್ದನ್ನು ತಮ್ಮ ಸ್ವಂತ ಕೆಲಸಕ್ಕೆ ಉಪಯೋಗಿಸುತ್ತಿದ್ದು ಇದನ್ನ, ದಿನಾಂಕ 11-02-2017 ರಂದು ರಾತ್ರಿ 10-00 ಗಂಟೆಗೆ ಗಣೇಶನಗರದಲ್ಲಿರುವ ತಮ್ಮ ಮನೆಯ ಮುಂದೆ ನಿಲ್ಲಿಸಿ ತಾವು ತಮ್ಮ ಮನೆಯೋಳಗೆ ಹೋಗಿ ನಂತರ ಮುಂಜಾನೆ 6-00 ಗಂಟೆಯ ಸುಮಾರಿಗೆ ಮನೆಯ ಹೊರಗಡೆ ಬಂಧು ನೋಡಿದಾಗ ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ ತಾವು ಸುತ್ತಾಮುತ್ತಾ ಹುಡುಕಾಢಿದರೂ ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ. ಆ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008