1] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 49/2017 ಕಲಂ: 87 Karnataka Police Act.
ದಿನಾಂಕ:- 18-02-2017 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ
ಮುಷ್ಟೂರು ಗ್ರಾಮದಲ್ಲಿ ಮಾಬುಸಾಬ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ
ಅಂತಾ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರಿಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲು ಇಬ್ಬರು
ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಪಿ.ಸಿ. ನಂ: 363, 38, ಹೆಚ್.ಸಿ. 191 ಹಾಗೂ ಜೀಪ ಚಾಲಕ
ಎ.ಹೆಚ್.ಸಿ. 17 ಕನಕಪ್ಪ ಇವರನ್ನು ಸಂಗಡ ಕರೆದುಕೊಂಡು ಮುಷ್ಟೂರು ಗ್ರಾಮದ ಊರ ಮುಂದೆ ಜೀಪನ್ನು
ನಿಲ್ಲಿಸಿ ಎಲ್ಲರೂ ಕೂಡಿಕೊಂಡು ನಡೆದುಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ
ಮಾಬುಸಾಬ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಜನರು ದುಂಡಾಗಿ ಕುಳಿತು ಹಣವನ್ನು
ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್
ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ ಮಧ್ಯಾಹ್ನ 3:00 ಗಂಟೆಯಾಗಿತ್ತು. ಕೂಡಲೇ ಅವರ
ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 04 ಜನರು ಸಿಕ್ಕಿಬಿದ್ದಿದ್ದು. ವಿಚಾರಿಸಲು ಅವರು ತಮ್ಮ
ಹೆಸರುಗಳು (1) ಶೇಖರಪ್ಪ ತಂದೆ ದುರುಗಪ್ಪ, ಕುರಿ, ವಯಸ್ಸು 34 ವರ್ಷ, ಜಾತಿ: ಕುರುಬರು ಉ: ಒಕ್ಕಲುತನ
ಸಾ: ಮುಷ್ಟೂರು (2) ಶೇಖರಪ್ಪ ತಂದೆ ನಿಂಗಪ್ಪ ಗಡ್ಡಿ, ವಯಸ್ಸು 40 ವರ್ಷ, ಜಾತಿ: ಕುರುಬರು ಉ: ಚಾಲಕ
ಸಾ: ಮುಷ್ಟೂರು (3) ಶಶಿಕುಮಾರ ತಂದೆ ಫಕೀರಪ್ಪ ಹರಿಜನ, 40 ವರ್ಷ, ಜಾತಿ: ಮಾದಿಗ ಉ: ಒಕ್ಕಲುತನ ಸಾ:
ಮುಷ್ಟೂರು (4) ಹನುಮಂತ ತಂದೆ ಹನುಮಂತ ಹರಿಜನ, ವಯಸ್ಸು 32 ವರ್ಷ, ಜಾತಿ: ಮಾದಿಗ ಉ: ಒಕ್ಕಲುತನ ಸಾ:
ಮುಷ್ಟೂರು ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 4,150/- ಗಳು,
52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಟಾವೆಲ್ ಸಿಕ್ಕಿದ್ದು, ಪ್ರಕರಣ ದಾಖಲು
ಮಾಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 28/2017 ಕಲಂ: 87 Karnataka Police Act.
ದಿನಾಂಕ:-18-2-2017 ರಂದು ಸಾಯಂಕಾಲ 7-35 ಗಂಟೆಯ ಸುಮಾರಿಗೆ ಪಿ.ಎಸ್.ಐ ಸಾಹೇಬರು
ಇಸ್ಪೀಟ್ ದಾಳಿ ಮೂಲ ಪಂಚನಾಮೆ ಮುದ್ದೆಮಾಲು ಆರೋಪಿತರೊಂದಿಗೆ ವರದಿಯನ್ನು ಹಾಜರುಪಡಿಸಿದ್ದು
ಸದ್ರಿ ವರದಿಯಲ್ಲಿ ಇಂದು ದಿನಾಂಕ:-18-02-2017 ರಂದು ಸಾಯಂಕಾಲ 5-40 ಗಂಟೆಯ ಸುಮಾರಿಗೆ
ಸಾಲುಂಚಿಮರ- ಕಿಂದಿಕ್ಯಾಂಪ್ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಇಸ್ಪೀಟ್
ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ದಾಳಿ ಮಾಡಲು 7 ಜನರು ಸಿಕ್ಕಿಬಿದ್ದಿದ್ದು 2ಜನರು ಓಡಿ
ಹೋಗಿರುತ್ತಾರೆ ಸಿಕ್ಕಿಬಿದ್ದವರ ಕಡೆಯಿಂದ ರೂ.4220=00 ನಗದು ಹಣ ಇಸ್ಪೀಟ್ ಜೂಜಾಟದ
ಸಾಮಾಗ್ರಿಗಳನ್ನು ಪಂಚರ ಸಮಕ್ಷಮದ ಜಪ್ತ ಮಾಡಿಕೊಂಡಿದ್ದು ಇದೆ ಅಂತಾ ಮುಂತಾಗಿ ಇದ್ದ ವರದಿಯ
ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 31/2017 ಕಲಂ: 295(ಎ) ಐ.ಪಿ.ಸಿ:
ದಿ:18-02-2017 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹ್ಮದ್ ಸಲೀಮ ಗೊಂಡಬಾಳ. ಸಾ: ಪಲ್ಟನ್ ಓಣಿ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:17-02-2017 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾಧಿದಾರರು ಕೊಪ್ಪಳದ ಮರ್ದಾನಲಿ ದರ್ಗಾದ ಹತ್ತಿರ ಉರುಸ
ಕಾರ್ಯಕ್ರಮದಲ್ಲಿದ್ದಾಗ, ಜನರು ಗುಂಪು ಸೇರಿದ್ದು ಅವರಲ್ಲಿ ತಮ್ಮ ಸ್ನೇಹಿತ ದಸ್ತಗಿರ ಕುಕನೂರ
ಇವರ ಮೊಬೈಲ್ ದಲ್ಲಿ ಮುಸ್ಲಿಂ ಧರ್ಮದ ಮಕ್ಕಾದಲ್ಲಿರುವ ಕಾಬಾದ ಮೇಲೆ ಹಿಂದೂ ಧರ್ಮದ ಆಂಜನೇಯ
ಮೂರ್ತಿಯ ಫೋಟೋವನ್ನು ಅಂಟಿಸಿರುವ ದೃಶ್ಯದ ಫೋಟೋ ಕಂಡಿದ್ದು, ನಾಗರಾಜ ಮೊ ನಂ: 86600 21882, ಎಂಬ ವ್ಯಕ್ತಿಯು ಮತೀಯ
ಭಾವನೆಗಳಿಗೆ ಬುದ್ದಿಪೂರ್ವಕವಾಗಿ ಮತ್ತು ದ್ವೇಷ ಭಾವನೆಯಿಂದ ಆಘಾತವನ್ನುಂಟು ಮಾಡುವ
ಉದ್ದೇಶದಿಂದಾ ಈ ರೀತಿ ದೃಶ್ಯ ನಿರೂಪಣೆಗಳಿಂದ ಫೇಸಬುಕ್ ದಲ್ಲಿ ಫೋಟೋವನ್ನು ಪೋಸ್ಟ ಮಾಡಿ ಮತೀಯ
ನಂಬಿಕೆಗಳಿಗೆ ಅಪಮಾನ ಮಾಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು
ಅದೆ.
0 comments:
Post a Comment