Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, February 20, 2017

1]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 11/2017 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ: 19-02-2017 ರಂದು ರಾತ್ರಿ 20-10 ಗಂಟೆಗ ಫಿರ್ಯಾದಿದಾರರಾದ ಮಹಾಂತೇಶ ತಂದೆ ಸಂಗಪ್ಪ ಹಡಪದ ಸಾ: ಹನಮಸಾಗರ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ. ಫಿರ್ಯಾದಿಯ ಮಗನಾದ ರಮೇಶ ಹಾಗೂ ಆತನ ಹೆಂಡತಿ ರೇಖಾ ರವರು ತಮ್ಮ ಮೋಟಾರ ಸೈಕಲ ನಂ: ಕೆ.-37 ಡಬ್ಲೂ-2409 ನೇದ್ದರ ಮೇಲೆ ಹನಮಸಾಗರದಿಂದ ಕುಷ್ಟಗಿ ಕಡೆಗೆ ಗಜೇಂದ್ರಗಡದ ಸರ್ಕಲ ಹತ್ತಿರ ಹೊರಟಾಗ ಹಿಂದುಗಡೆ ಹನಮಸಾಗರ ಕಡೆಯಿಂದ ಮೋಟಾರ ಸೈಕಲ ನಂ: ಕೆ.-19 ಇಜಿ-9023 ನೇದ್ದರ ಚಾಲಕ ನಾಗರಾಜ ತಂದೆ ರಾಜನಗೌಡ ಗೌಡ್ರ ಸಾ: ಕಡಿವಾಲ ಈತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿ ರಮೇಶನ ಮೋಟಾರ ಸೈಕಲ್ಲಿಗೆ ಠಕ್ಕರಕೊಟ್ಟು ಅಪಘಾತಪಡಿಸಿದ್ದು ಹಾಗೂ ಇನ್ನೊಬ್ಬ ವೀರಭದ್ರಯ್ಯ ತಂದೆ ಬಸಯ್ಯ ಕೋಡಿಹಾಳ ಸಾ: ಕಡಿವಾಲ ಈತನು ತನ್ನ ಹೆಚ್.ಎಫ್. ಡಿಲಕ್ಸ ಮೋಟಾರ ಸೈಕಲ ನೇದ್ದನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿದ ಮೋಟಾರ ಸೈಕಲಗಳಿಗೆ ಠಕ್ಕರಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಯ ಮಗ ರಮೇಶನಿಗೆ ತಲೆಗೆ ಬಾರಿ ರಕ್ತಗಾಯವಾಗಿದ್ದು ಇರುತ್ತದೆಉಳಿದವರಿಗೆ ಸಣ್ಣ ಪುಟ್ಟ ತೆರಚಿದಗಾಯಗಳಾಗಿದ್ದು ಇರುತ್ತದೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 29/2017 ಕಲಂ: 376, 323, 342, 506, IPC & 4, 16, POCSO ACT-2012 & 3 (2)  ( V-A) SC/ ST Act-1989 

ದಿನಾಂಕ:-19-02-2017 ರಂದು  ರಾತ್ರಿ 10-35 ಗಂಟೆಗೆ ಪಿರ್ಯಾದಿ ವಯಾ-16ವರ್ಷ ಸಾ. ದೇವಿಕ್ಯಾಂಪ್ ತಾ. ಗಂಗಾವತಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ, ಈಗ್ಗೆ ಒಂದು ವರ್ಷದ ಕೆಳಗೆ ನಮ್ಮೂರಿನ ಹನುಮೇಶ ತಂದಿ ಫಕೀರಪ್ಪ ನಾಯಕ ಈತನು ನಾನು ಶಾಲೆಗೆ ಹೋಗುವಾಗ ನನ್ನ ಹಿಂದೆ ಹಿಂದೆ ಬಂದು ನನಗೆ ಪ್ರೀತಿಸುವಂತೆ ಒತ್ತಾಯಿಸಿದ್ದರಿಂದ ನಾನು ನಮ್ಮ ಮನೆಯಲ್ಲಿ ಹೇಳಿ ಆತನಿಗೆ ಮತ್ತು ಅವರ ಮನೆಯವರಿಗೆ ಕರೆಯಿಸಿ ಹಿರಿಯರ ಮುಂದೆ ಹನುಮೇಶನಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದರು. ದಿನಾಂಕ:-19-02-2017 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ದೇವಿಕ್ಯಾಂಪ್ ದಲ್ಲಿರುವ ನಮ್ಮ ಮನೆಯಲ್ಲಿ ಓದುತ್ತಾ ಕುಳಿತುಕೊಂಡಿದ್ದಾಗ್ಗೆ ನಮ್ಮೂರಿನ ಹನುಮೇಶ ತಂದಿ ಪಕೀರಪ್ಪ ನಾಯಕ ವಯಾ25 ವರ್ಷ ನಮ್ಮ ಅಪ್ಪನನ್ನು ಕೇಳಿಕೊಂಡು ನೆಪ ಮಾಡಿಕೊಂಡು ಮನೆಗೆ ಬಂದು  ಒಂದು ಮೋಬೈಲ್ ನ್ನು ಎಸೆದು ಹೋಗಿ 10 ನಿಮಿಷ ಬಿಟ್ಟು ನನಗೆ ಕೊಟ್ಟು ಹೋದ ಮೋಬೈಲ್ ಗೆ ಹನುಮೇಶನು ಕರೆ ಮಾಡಿ ಮಾತನಾಡಿ ನಿಮ್ಮಪ್ಪನ ದುಡ್ಡು ನಿನ್ನ ಕೈಯಲ್ಲಿ ಕೊಡುತ್ತೇನೆ. ಬಾಬು ತಂದಿ ರಾಮರಾವ್ ಇವರ ಮನೆಗೆ ಬರುವಂತೆ ಹೇಳಿ ಕರೆಯಿಸಿಕೊಂಡು ಅವರ ಮನೆಯಲ್ಲಿ ಬಾಬು ಮತ್ತು ಆತನ ಹೆಂಡತಿ ಇರುವುದರಿಂದ ಮನೆಯ ಒಳಗಡೆ ಹೋದಾಗ್ಗೆ ಅಷ್ಟರಲ್ಲಿ ಬಾಬು ಮತ್ತು ಆತನ ಹೆಂಡತಿ ನಾನು ಮನೆಯ ಒಳಗಡೆ ಹೋಗುತ್ತಿದ್ದಂತೆ ತಾವು ಹೊರಗಡೆ ಬಂದು ಮನೆಯ ಬಾಗಿಲು ಹಾಕಿಕೊಂಡರು ಒಳಗಡೆ ಹನುಮೇಶನು ನನಗೆ ಕೈಹಿಡಿದು ಎಳೆದಾಡಿದನು ನಾನು ಎಷ್ಟು ಕೊಸರಿದರು ಬಿಡದೇ ಅವರ ಮನೆಯಲ್ಲಿದ್ದ ಒಂದು ರೂಮಿನೊಳಗೆ ಎಳೆದುಕೊಂಡು ಹೋಗಿ ನಾನು ಚಿಕ್ಕವಳು ಅಂತಾ ಹೇಳಿದರು ಕೇಳದೆ ನನಗೆ ನೀನು ಬೇಕು ಅಂತಾ ಹೇಳಿ ನನಗೆ ಬಲವಂತವಾಗಿ ಎಳೆದಾಡಿ ನನ್ನ ಕಪಾಳಕ್ಕೆ ಮುಗಿಗೆ ಕಣ್ಣಿಗೆ ಹೊಡೆದು ನಾನು ಹಾಕಿಕೊಂಡಿದ್ದ ಚೂಡಿದಾರದ ಪ್ಯಾಂಟ್ ಬಟ್ಟೆಯನ್ನು ಬಿಚ್ಚಿ ಬಲವಂತವಾಗಿ ಸಂಭೋಗ ಮಾಡಿದನು. ಆದರೂ ನನಗೆ ಬಿಡದೇ ಮತ್ತೆ ಹಿಡಿದುಕೊಂಡಿದ್ದನು ನಾನು ಅಪ್ರಾಪ್ತಳು ಅಂತಾ ಗೊತ್ತಿದ್ದು ಕೂಡಾ ನನಗೆ ಮನೆಯಿಂದ ಹೊರಗಡೆ ಹೋಗದಂತೆ ಮನೆಯ ಬಾಗಿಲು ಹಾಕಿಕೊಂಡು ಮದ್ಯಾಹ್ನ 2-30 ಗಂಟೆಯಿಂದ 4-00 ಗಂಟೆಯ ವರೆಗೂ ನನಗೆ ಒಳಗಡೆ ಇಟ್ಟುಕೊಂಡಿದ್ದನು ನನಗೆ ಅತ್ತರೇ ನಿನ್ನನ್ನು ಕೊಂದು ಬಿಡುತ್ತೇನೆ. ಅಂತಾ ಹೇದರಿಸುತ್ತಿದ್ದನು ನಂತರ ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಮ್ಮ ದೊಡ್ಡಮ್ಮಳಾದ ಕಮಲಾಕ್ಷಿ ಗಂಡ ಶಂಕರ ಪವಾರ್ ಇವರು ಬಂದ ನಂತರ ದೊಡ್ಡಮ್ಮನ ಕೈಕೊಸರಿಕೊಂಡು ಓಡಿಹೋಗಿರುತ್ತಾನೆ  ನಾನು ಅಪ್ರಾಪ್ತಳು ಮತ್ತು ಹಿಂದೂಳಿದ ಲಂಬಾಣಿ ಜನಾಂಗದವಳು ಅಂತಾ ಗೊತ್ತಿದ್ದು ಬಾಬು ಮತ್ತು ಆನತ ಹೆಂಡತಿ ಲಕ್ಷ್ಮೀ ಮನೆಯ ಒಳಗಡೆ ಹಾಕಿದಾಗ ಬಲವಂತವಾಗಿ ಹಠಸಂಭೋಗ ಮಾಡಿದ ಹನುಮೇಶನ ಮೇಲೆ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯಾ ದೊರಕಿಸಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008