1] ಕಾರಟಗಿ ಪೊಲೀಸ್ ಠಾಣೆ ಗುನ್ನೆ. ನಂ: 51/2017
ಕಲಂ: 279, 337, 338, 304(ಎ) ಐ.ಪಿ.ಸಿ:.
ದಿನಾಂಕ 31-03-2017 ರಂದು ನಮ್ಮ ಓಣಿಯ ನಾಗಮ್ಮ ಇವರ ಸಂಬಂದಿಕರೊಬ್ಬರು ಕವಿತಾಳದಲ್ಲಿ ತೀರಿಕೊಂಡಿದ್ದರಿಂದ ನಮಗೂ ಅವರು ಪರಿಚಯಸ್ಥರಿದ್ದರಿಂದ ಅವರ ಶ್ರಮಕ್ಕಾಗಿ ನಾನು ನಮ್ಮ ತಾಯಿ ಈರಮ್ಮ ನಮ್ಮ ಓಣಿಯ ನಾಗಮ್ಮ , ಇವರ ಮನೆಯವರಾದ ಗಂಗಮ್ಮ, ಫಕೀರಮ್ಮ, ಶ್ಯಾಮಮ್ಮ ಗಂಡ ಗೋವಿಂದಪ್ಪ, ಅವರ ಪರಿಚಯಸ್ಥರಾದ ಮುತ್ತಮ್ಮ ರಾಮನಗರ, ಪಂಪಾಪತಿ ತಂದಿ ಅಂಬಣ್ಣ ಕಾರಟಗಿ, ಲಿಂಗರಾಜ ತಂದೆ ಫಕೀರಪ್ಪ ಕೊಂಡಿ ಸಾ. ಮುಷ್ಟರೂ ಎಲ್ಲರೂ ಕೂಡಿಕೊಂಡು ಕವಿತಾಳಗೆ ಹೋಗಲೇಂದು ನಾಗಮ್ಮ ಇವರ ಪರಿಚಯಸ್ಥರಾದ ಮರಳಿ ಗ್ರಾಮದ ಹೊನ್ನೂರಸಾಬ ತಂದೆ ಹೊನ್ನೂರಸಾಬ ಚೋಟೆ ಇವರ ಕ್ರಷರ್ ವಾಹನ ನಂ ಕೆಎ-34/ಎ-6243 ನೇದ್ದನ್ನು ತಗೆದುಕೊಂಡು ಈ ದಿನ ದಿನಾಂಕ 31-03-2017 ರಂದು ಬೆಳಿಗ್ಗೆ 9-15 ಗಂಟೆಯ ಸುಮಾರಿಗೆ ಕಾರಟಗಿ-ಸಿಂಧನೂರ ರಸ್ತೆಯ ಮೇಲೆ ಕಾರಟಗಿಯ ಕೆ.ಇ.ಬಿ ಜೆಸ್ಕಾಂ ಹತ್ತಿರ ಸಿಂದನೂರ ಕಡೆಗೆ ಹೋಗುತ್ತಿದ್ದಾಗ ಕ್ರಷರ್ ವಾಹನದ ಚಾಲಕ ತಾನು ನಡೆಸುತ್ತಿದ್ದ ವಾಹವನನ್ನು ಅತೀವೇಗವಾಗಿ ಮತ್ತು ಅಲಕ್ಷತದಿಂದ ಯರ್ರಾಬಿರ್ರಿಯಾಗಿ ನಡೆಯಿಸಿಕೊಂಡು ಹೋಗಿ ಎದುರಿಗೆ ಸಿಂದನೂರ ಕಡೆಯಿಂದ ಬರುತ್ತಿದ್ದ ಬುಲೇರೊ ವಾಹನ ನಂ ಕೆಎ-35/ಎಂ-2497 ನೇದ್ದನ್ನು ಗಮಸಿದೇ ಅದಕ್ಕೆ ಠಕ್ಕರ್ ಮಾಡಿ ಅಪಘಾತಪಡಿಸಿದ್ದು ಅಲ್ಲದೆ ವಾಹನವನ್ನು ನಿಯಂತ್ರಿಸದೇ ರಸ್ತೆಯ ಪಕ್ಕದಲ್ಲಿ ಇದ್ದ ಮರಕ್ಕೆ ಠಕ್ಕರ್ ಮಾಡಿ ವಾಹನ ಪಲ್ಟಿ ಮಾಡಿಸಿ ಅಪಘಾತಪಡಿಸಿದ್ದರಿಂದ ವಾಹನದಲ್ಲಿದ್ದ ನನಗೆ ಮತ್ತು ನಮ್ಮ ತಾಯಿ ಹಾಗೂ ಮೇಲ್ಕಾಣಿಸಿದ ಇತರೆ 7 ಜನರಿಗೆ ಗಾಯಪೆಟ್ಟುಗಳಾಗಿದ್ದು ಅಲ್ಲದೆ ಸಣ್ಣ ಹುಸೇನ್ ಸಾಬ ತಂದಿ ಹೊನ್ನೂರಸಾಬ ಚೋಟೆ ವಯಾ-22 ವರ್ಷ ಸಾ. ಮರಳಿ ಈತನ ತಲೆಗೆ ತೀವ್ರ ಸ್ವರೂಪದ ಗಾಯಪೆಟ್ಟುಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 62/2017
ಕಲಂ: 279, 338, 304(ಎ) ಐ.ಪಿ.ಸಿ
ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:31-03-2017 ರಂದು 00-30 ಎ.ಎಮ್ ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ನಾಗಪ್ಪನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಗಾಯಾಳು ಆರೈಕೆಯಲ್ಲಿದ್ದ ಅವರ ಹೆಂಡತಿ ಶ್ರೀಮತಿ ನಾಗಮ್ಮ ಇವರ ಹೇಳಿಕೆ
ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ದಿ:30.03.2017 ರಂದು ರಾತ್ರಿ 7-00 ಗಂಟೆಗೆ ತನ್ನ ಗಂಡ ನಾಗಪ್ಪನು ಮನೆಯಿಂದ ಹೊರಗಡೆ ಹೋಗಿದ್ದು, ನಂತರ ರಾತ್ರಿ 9-45 ಗಂಟೆಯ ಅವಧಿಯಲ್ಲಿ ಕೊಪ್ಪಳ-ಕಿನ್ನಾಳ ರಸ್ತೆಯ ಚಿಲವಾಡಗಿ ಸಮೀಪದ ಓಜನಹಳ್ಳಿ ಕ್ರಾಸ್
ಸಮೀಪದಲ್ಲಿ ನಡೆದುಕೊಂಡು ಹೊರಟಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು
ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಹೋಗುವಾಗ ತನ್ನ ಗಂಡನಿಗೆ ಟಕ್ಕರ ಕೊಟ್ಟು
ಅಪಘಾತ ಮಾಡಿ ನಿಲ್ಲಿಸದೇ ಹೋಗಿದ್ದರಿಂದ ತನ್ನ ಗಂಡನಿಗೆ ಭಾರಿಗಾಯಗಳಾಗಿದ್ದು ಇರುತ್ತದೆ. ಅಪಘಾತ
ಮಾಡಿ ನಿಲ್ಲಿಸದೇ ಹೋಗಿರುವ ವಾಹನ ಮತ್ತು ಚಾಲಕನಿಗೆ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ವಾಪಾಸ್ ಠಾಣೆಗೆ 02-30 ಎ.ಎಮ್ ಕ್ಕೆ ಬಂದು ಸದರಿ ದೂರಿನ ಮೇಲಿಂದ ಕೊಪ್ಪಳ [ಗ್ರಾ] ಠಾಣೆ ಗುನ್ನೆ ನಂ:62/2017. ಕಲಂ: 279,338 ಐಪಿಸಿ &
187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ
ಕೈಗೊಂಡಿದ್ದು ಅದೆ. ನಂತರ ಸದರಿ ಪ್ರಕರಣದಲ್ಲಿಯ ಗಾಯಾಳು ನಾಗಪ್ಪ ಡಪ್ಪಿ. ಸಾ:ಚಿಲವಾಡಗಿ ಇತನು ಕೊಪ್ಪಳದ ಜಿಲ್ಲಾ
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿ:31-03-2017 ರಂದು 6-55 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ತೀವ್ರ ಗಾಯಾಳು
ನಾಗಪ್ಪ ಢಪ್ಪಿ ಇತನು ಮೃತಪಟ್ಟಿದ್ದರಿಂದ, ಸದರ ಪ್ರಕರಣದಲ್ಲಿ ಕಲಂ: 304[ಎ] ಐಪಿಸಿ ನೇದ್ದನ್ನು ಸೇರ್ಪಡೆ ಮಾಡಿ ತಪಾಸಣೆ ಕೈಗೊಳ್ಳಲಾಗಿರುತ್ತದೆ.
3] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ. ನಂ: 26/2017
ಕಲಂ: 457, 380 ಐ.ಪಿ.ಸಿ:.
ದಿನಾಂಕ:30-03-2017 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 31-03-2017 ರಂದು ಮುಂಜಾನೆ
07-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿಯರ್ಾದಿದಾರರ ಮನೆಯ ಮುಖ್ಯ ಬಾಗಿಲಿಗೆ ಇರುವ ಚೀಲಕ
ತೆಗೆದು ಪಡಸಾಲಿಯಲ್ಲಿ ಇಟ್ಟಿದ್ದ ಅಲಮಾರದ ಲಾಕನ್ನು ಯಾವುದೇ ರೀರಿಯಿಂದ ತೆಗೆದು ಅದರಲ್ಲಿಟ್ಟಿದ್ದ
1] ನಗದು ಹಣ 50,000/- ರೂ 2] 1/2 ತೊಲೆಯ ಬಂಗಾರದ ಬೊರಮಳ ಸರ ಅ.ಕಿ 13,000/- 3] 1/2 ತೊಲೆ ಬಂಗಾರದ
ಚೈನ ಸರ ಅ.ಕಿ. 13,000/- 4] 1/4 ತೊಲೆಯ ಬಂಗಾರದ
ಸುತ್ತುಂಗುರ ಅ.ಕಿ. 6,000/- ರೂ ಹೀಗೆ ಒಟ್ಟು 82,000/- ರೂ ಬೆಲೆಬಾಳುವ ಆಭರಣಗಳು ಮತ್ತು ನಗದು
ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.