1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ. ನಂ: 36/2017
ಕಲಂ: 295(ಎ) ಐ.ಪಿ.ಸಿ:.
ದಿನಾಂಕ: 29-03-2017 ರಂದು ರಾತ್ರಿ 11-00 ಗಂಟೆಗೆ ಸದರಿ ಫಿರ್ಯಾದಿ ಅಬ್ದುಲ ಖಯೂಮ್
ಬಳ್ಳಾರಿ ಸಾ: ಕೊಪ್ಪಳ. ಈತನು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: 29-03-2017 ರಂದು ಸಂಜೆ 7-00 ಗಂಟೆಗೆ ನಾನು ನನ್ನ ಸ್ಯಾಮಸಂಗ್
ಮೊಬೈಲ್ ನಲ್ಲಿ ಸಾಮಾಜಿಕ ಜಾಲ ತಾಣ ಫೇಸಬುಕ್ ನೋಡುತ್ತಿದ್ದಾಗ ಶಿವಲಿಂಗ್ ಇದೆ ಎಂದು ಸುಳ್ಳು ಪೋಟೋ
ರಚನೆ ಮಾಢಿ ಮುಸ್ಲಿಂ ಪವಿತ್ರ ಸ್ಥಳವಾದ ಮೆಕ್ಕಾದಲ್ಲಿ ಶಿವಲಿಂಗ ತೋರಿಸಿ ಇದನ್ನು ಎಲ್ಲಾ ಹಿಂದೂಗಳು
ತಪ್ಪದೇ ಶೇರ್ ಮಾಡಿ ಎಂದು ಕೇಳಿರುತ್ತಾನೆ. ಮತ್ತು ಇದರಿಂದ ಕೊಮುಗಲಬೆಗೆ ಪ್ರಚೋದಿಸುವ ಪ್ರಯತ್ನ ಮಾಡಿರುತ್ತಾನೆ.
ಇದರಿಂದ ಮುಸ್ಲಿಂ ಭಾವನೆಗೆ ಧಕ್ಕೆ ಉಂಟಾಗಿರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 62/2017
ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:31-03-2017 ರಂದು 00-30 ಎ.ಎಮ್ ಕ್ಕೆ ಜಿಲ್ಲಾ
ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ನಾಗಪ್ಪನು ಮಾತನಾಡುವ
ಸ್ಥಿತಿಯಲ್ಲಿರಲಿಲ್ಲ, ಗಾಯಾಳು ಆರೈಕೆಯಲ್ಲಿದ್ದ ಅವರ
ಹೆಂಡತಿ ಶ್ರೀಮತಿ ನಾಗಮ್ಮ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ,
ದಿ:30.03.2017 ರಂದು ರಾತ್ರಿ 7-00 ಗಂಟೆಗೆ ತನ್ನ ಗಂಡನು
ಮನೆಯಿಂದ ಹೊರಗಡೆ ಹೋಗಿದ್ದು, ನಂತರ ರಾತ್ರಿ 9-45 ಗಂಟೆಯ ಅವಧಿಯಲ್ಲಿ
ಕೊಪ್ಪಳ-ಕಿನ್ನಾಳ ರಸ್ತೆಯ ಚಿಲವಾಡಗಿ ಸಮೀಪದ ಓಜನಹಳ್ಳಿ ಕ್ರಾಸ್ ಸಮೀಪದಲ್ಲಿ ನಡೆದುಕೊಂಡು
ಹೊರಟಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ
ಅಲಕ್ಷ್ಯತನದಿಂದಾ ಓಡಿಸಿಕೊಂಡು ಹೋಗುವಾಗ ತನ್ನ ಗಂಡನಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿ
ನಿಲ್ಲಿಸದೇ ಹೋಗಿದ್ದರಿಂದ ತನ್ನ ಗಂಡನಿಗೆ ಭಾರಿಗಾಯಗಳಾಗಿದ್ದು ಇರುತ್ತದೆ. ಅಪಘಾತ ಮಾಡಿ
ನಿಲ್ಲಿಸದೇ ಹೋಗಿರುವ ವಾಹನ ಮತ್ತು ಚಾಲಕನಿಗೆ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ
ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment