Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 23, 2017

1]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 45/2017 ಕಲಂ: 279, 338 IPC And 187 IMV Act
ದಿನಾಂಕ:-22-03-2017 ರಂದು ರಾತ್ರಿ 8-50 ಗಂಟೆಯ ಸುಮಾರಿಗೆ ದೂರು ದಾರರಾದ ಅರ್ಜುನ ತಂದಿ ಕಾಳಿಮುತ್ತು ವಯಾ-27 ವರ್ಷ ಜಾ. ಬೋವಿ ಸಾ. ಬಂಡಿ ಬಸಪ್ಪ ಕ್ಯಾಂಪ್ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ದಿನಾಂಕ:-22-03-2017 ರಂದು ನಮ್ಮ ತಮ್ಮನಾದ ಶಂಕರ ತಂದಿ ಕಾಳಿಮುತ್ತು ರವರು ನಮ್ಮೂರಿನ ಪಕ್ಕದ ಊರಿನ ಬಸವನದುರ್ಗಾ ಗ್ರಾಮದವರಾದ ಶರಣಪ್ಪ ತಂದಿ ಯಮನೂರಪ್ಪ ಇವರ ಟ್ರ್ಯಾಕ್ಟರ್ ನಂ ಕೆ.ಎ37/ಟಿ.ಎ-6920 ಟ್ರ್ಯೇಲರ್ ನಂ ಕೆ.ಎ-37 ಟಿಎ 6921 ನೆದ್ದರಲ್ಲಿ ಕೂಲಿಕೆಲಸಕ್ಕೆ ಕಾರಟಗಿ ಹೋಗಿದ್ದಾಗ್ಗೆ ಬೆಳಿಗ್ಗೆ 10-15 ಗಂಟೆಯ ಸುಮಾರಿಗೆ ಸದ್ರಿ ಟ್ರ್ಯಾಕ್ಟರ್ ಚಾಲಕನು ಸದ್ರಿ ಟ್ರ್ಯಾಕ್ಟರ್ ನ್ನು ಕಾರಟಗಿ ಗಂಗಾವತಿ ರಸ್ತೆಯ ಮೇಲೆ ಮಂಜುನಾಥ ಧರೋಜಿ ಇವರ ಗ್ರಾನೇಟ್ ಅಂಗಡಿಯ ಹತ್ತಿರ ಅತೀ ವೇಗ ಅಲಕ್ಷತನದಿಂದ ಚಲಾಯಿಸಿ ಟ್ರ್ಯಾಕ್ಟರ್ ನಿಯಂತ್ರಣ ಕಾಯ್ದುಕೊಳ್ಳದೇ ರಸ್ತೆಯ ಪಕ್ಕದಲ್ಲಿರುವ   ಮಂಜುನಾಥ ಧರೋಜಿ ಇವರ ಗ್ರ್ಯಾನೇಟ್ ಅಂಗಡಿಯ ಹೊರಗಡೆ ಇದ್ದ ಗ್ರ್ಯಾನೇಟ್ ಕಲ್ಲಿಗೆ ಟಕ್ಕರ್ ಕೊಟ್ಟು ಅಪಗಾತ ಪಡಿಸಿ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿದ್ದರಿಂದ ಟ್ರ್ಯಾಕ್ಟರ್ ಟ್ರೇಲರ್ ಪಾಲ್ಟಿ ಆಗಿ ಬಿದ್ದು ನಮ್ಮ ತಮ್ಮ ಶಂಕರ್ ಈತನು ಟ್ರ್ಯಕ್ಟರ್ ದಿಂದ ಪುಟಿದು ಕೆಳಗಡೆ ಬಿದ್ದು ತಲೆಗೆ ಕಣ್ಣಿಗೆ ಗಂಭೀರ ಸ್ವಾರೂಪದ ಗಾಯಗಳಾಗಿ ಮಂಜುನಾಥ ಇವರಿಗೆ ಸಂಬಂದಿಸಿದ ಗ್ರಾನೇಟ್ ಕಲ್ಲುಗಳು ಡ್ಯಾಮೇಜ್ ಆಗಿದ್ದು ಅಂತಾ ತಿಳಿದು ನಾನು ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಮ್ಮ ತಮ್ಮನಿಗೆ ನೋಡಿ ಹೆಚ್ಚಿನ ಚಿಕಿತ್ಸೆ ಕುರಿತು ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಈಗ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 56/2017 ಕಲಂ. 109 ಸಿ.ಆರ್.ಪಿ.ಸಿ..
ದಿನಾಂಕ 23-03-2017 ರಂದು ಬೆಳಿಗ್ಗೆ 05:30 ಗಂಟೆಗೆ ಕುಷ್ಟಗಿ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುವ ಕುರಿತು ನನ್ನೊಂದಿಗೆ ಪಿಸಿ-109 ಅಮರೇಶ ಇವರನ್ನು ಕರೆದುಕೊಂಡು ತಿರುಗಾಡುತ್ತಾ ಕುಷ್ಟಗಿ ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನದ ಹತ್ತಿರ ಬಂದಾಗ ಇಲ್ಲಿ ಒಬ್ಬ ವ್ಯಕ್ತಿ ಆ ಕಡೆ ಈ ಕಡೆ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದು ಆಗ ನಮ್ಮನ್ನು ನೋಡಿ ತನ್ನ ಇರುವಿಕೆಯನ್ನು ಬದಲಾಯಿಸಿದಾಗ ನಾವು ಅವನನ್ನು ಕೂಡಲೇ ಹೋಗಿ ಹಿಡಿದುಕೊಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು ಪುನಃ ಪುನಃ ವಿಚಾರಿಸಿದಾಗ ತನ್ನ ಹೆಸರು ಬಸವರಾಜ ತಂದೆ ಅಮರೇಗೌಡ ಪೊಲೀಸ್ ಪಾಟೀಲ್ ವಯ : 24 ವರ್ಷ ಜಾ : ಲಿಂಗಾಯತ ಉ : ಸೆಂಟ್ರೀಂಗ್ ಕೆಲಸ ಸಾ : ಹಿರೇಅರಳಿಹಳ್ಳಿ ತಾ : ಯಲಬುರ್ಗಾ ಅಂತಾ ಹೇಳಿದ್ದು ಇಲ್ಲಿ ಬಂದ ಬಗ್ಗೆ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು, ಸದರಿಯವನು ಇಲ್ಲಿ ಯಾವದೇ ತನ್ನ ಸಂಬಂಧಿಕರಾಗಲಿ ತನ್ನ ಗೆಳಯರಾಗಲಿ ಯಾರು ಇಲ್ಲದೇ ಇದ್ದು ಮತ್ತು ಪರಸ್ಥಳಿಯವನಾಗಿದ್ದು ಹೀಗಾಗಿ ಸದರಿಯವನು ಯಾವುದೇ ಸ್ವತ್ತಿನ ಅಪರಾಧ ಮಾಡಲು ಬಂದಿರಬಹುದು ಅಂತಾ ಬಲವಾಗಿ ಸಂಶಯ ಬಂದಿದ್ದು ಅಲ್ಲದೇ ಅವನನ್ನು ಹಾಗೆಯೇ ಬಿಟ್ಟಲ್ಲಿ ಸ್ವತ್ತಿನ  ಅಪರಾಧ ಮಾಡಬಹುದು ಅಂತಾ ಕಂಡು ಬಂದ ಮೇರೆಗೆ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ್ ಪೊಲೀಸ್ ಠಾಣೆ ಗುನ್ನೆ ನಂ: 51/2017 ಕಲಂ. 279, 337, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ: 22-03-2017 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ಅಗಳಕೇರಿ-ಗಂಗಾವತಿ ರಸ್ತೆಯಲ್ಲಿ ಅಗಳಕೇರಿ ಗ್ರಾಮದ ಸಾದರಮಠ ಸರ್ಕಲ್ ಹತ್ತಿರ ಪಿರ್ಯಾದಿದಾರರು ಮತ್ತು ಆತನ ತಮ್ಮ ಇಬ್ಬರು ಸೇರಿಕೊಂಡು ತಮ್ಮ ಮೋಟರ ಸೈಕಲ್ ನಂ. ಕೆಎ-37/ಡಬ್ಲ್ಯೂ-8974 ನೇದ್ದರಲ್ಲಿ ಹೋಗುತ್ತಿರುವಾಗ ಅದೇ ಸಮಯಕ್ಕೆ ಆರೋಪಿತನು ತನ್ನ ಟಿಪ್ಪರ ಲಾರಿ ನಂ. ಕೆಎ-35/ಬಿ-8974 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮುಂದೆ ಹೊರಟಿದ್ದ ಪಿರ್ಯಾದಿದಾರರ ಮೋಟರ ಸೈಕಲ್ನ್ನು ಓವರಟೇಕ್ ಮಾಡಿಕೊಂಡು ಹೋಗಿ ಸರ್ಕಲ್ನಲ್ಲಿ ಒಮ್ಮೆಲೆ ತನ್ನ ವಾಹನವನ್ನು ತಿರುಗಿಸಿ ಮೋಟರ ಸೈಕಲಗೆ ಡಿಕ್ಕಿಪಡಿಸಿ ಅಪಘಾತ ಪಡಿಸಿದ್ದರಿಂದ ಮೋಟರ ಸೈಕಲನಲ್ಲಿ ಹಿಂದೆ ಕುಳಿತಿದ್ದ ಸಣ್ಣಹೊನ್ನೂರಸ್ವಾಮಿ ತಂದೆ ಹುಸೇನಪ್ಪ ವಡ್ಡರ ವಯ: 23 ವರ್ಷ, ಜಾತಿ: ವಡ್ಡರ, ಉ: ಒಕ್ಕಲುತನ ಸಾ: ಅಗಳಕೇರಿ ಇತನು ಲಾರಿಯ ಮಧ್ಯದ ಮತ್ತು ಹಿಂದಿನ ಗಾಲಿಯ ಮಧ್ಯದಲ್ಲಿ ಸಿಕ್ಕಿಕೊಂಡು ತಲೆಗೆ, ಮುಖಕ್ಕೆ ಭರಿ ರಕ್ತಗಾಯವಾಗಿದ್ದು, ಎದೆಗೆ, ಬೆನ್ನಿಗೆ ಗಾಯಗಳಾಗಿದ್ದು, ಎರಡು ಕಾಲುಗಳು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008