1] ಸಂಚಾರಿ ಪೊಲೀಸ್ ಠಾಣೆ ಗುನ್ನೆ. ನಂ: 14/2017
ಕಲ0: 279, 337 ಐ.ಪಿ.ಸಿ:
ದಿನಾಂಕ. 15-03-2017
ರಂದು ಸಂಜೆ 6-30 ಗಂಟೆಗೆ
ಫಿರ್ಯಾದಿದಾರರು ಠಾನೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು ಅದರ
ಸಾರಾಂಶವೆನೆಂದರೆ,
ಮೊನ್ನ ದಿನಾಂಕ. 13-03-2017 ರಂದು ಮದ್ಯಾಹ್ನ 12-10 ಗಂಟೆಗೆ ಫಿರ್ಯಾದಿ ತಮ್ಮ
ಮೋಟಾರ್ ಸೈಕಲ್ ನಂ. KA-37/W-7439 ನೆದ್ದರ ಹಿಂದೆ ತನ್ನ ಸ್ನೇಹಿತ ಬಾಪಿರೆಡ್ಡಿ ಇತನನ್ನು ಕೂಡಿಸಿಕೊಂಡು ಕೊಪ್ಪಳ ನಗರದ
ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಅಶೋಖ ಸರ್ಕಲ್ ದಲ್ಲಿ ಹಳೇ ಡಿ.ಸಿ ಕ್ರಾಸ್ ಕಡೆಗೆ ಹೊಗುತ್ತಿರುವಾಗ, ಹಿಂದಿನಿಂದ ಅಪೆ ಗೂಡ್ಸ ವಾಹನ ನಂಬರ. KA-37/A-5748 ನೆದ್ದರ ಚಾಲಕನು ವಾಹನವನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲ್ ಗೆ ಟಕ್ಕರಮಾಡಿ
ಅಪಘಾತಮಾಡಿದ್ದರಿಂದ ಪೀರ್ಯಾದಿಗೆ ಮತ್ತು ಮೊಟಾರ್ ಸೈಕಲ್ ಹಿಂದೆ ಕುಳಿತ ಬಾಪಿರೆಡ್ಡಿ ಇತನಿಗೆ
ತೆರಚಿದಗಾಯಗಳು ಆಗಿರುತ್ತವೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ. ನಂ: 18/2017
ಕಲ0: 341, 323, 355, 504, 506 ಐ.ಪಿ.ಸಿ:
ದಿನಾಂಕ:15-03-2017 ರಂದು ಮುಂಜಾನೆ 07-15 ಗಂಟೆಯ ಸುಮಾರಿಗೆ
ಪಿರ್ಯಾದಿದಾರನು ಹಿರೇಮ್ಯಾಗೇರಿ ಗ್ರಾಮದ ಶರಣಯ್ಯ ಕಪ್ಲಿ ಇವರ ಹೊಟೇಲ ಮುಂದೆ
ನಿಂತುಕೊಂಡಿದ್ದಾಗ ಆರೋಪಿತನಾದ ಸಂಗಪ್ಪ ಗುರಿಕಾರ ಈತನು ಫಿರ್ಯಾದಿಗೆ ನಮ್ಮ ಬಗ್ಗೆ ಪಂಚಾಯಿತಿಗೆ ಅರ್ಜಿ
ಕೊಟ್ಟು ಮಾಹಿತಿ ಕೇಳುತ್ತೀ ಏನು ಅಂತಾ ಅಂದು ಫಿರ್ಯಾದಿಗೆ ಕೈಯಿಂದ, ಚಪ್ಪಲಿಯಿಂದ ಬೆನ್ನಿಗೆ
ಮತ್ತು ಕಪಾಳಕ್ಕೆ ಹೊಡಿ-ಬಡಿ ಮಾಡುತ್ತಿದ್ಧಾಗ ಬಿಡಿಸಲು ಬಂದ ಫಿರ್ಯಾದಿಯ ಅಣ್ಣನ ಮಗನಾದ ವಿರೇಶ ಕರಮುಡಿ
ಈತನಿಗೆ ಸಹ ಕೈಯಿಂದ ಹೊಡಿ-ಬಡಿ ಮಾಡಿ, ಆರೋಪಿತನು ಫಿರ್ಯಾದಿಗೆ ಮತ್ತು ಆತನ ಅಣ್ಣನ ಮಗನಾದ ವಿರೇಶ
ಕರಮುಡಿ ಇಬ್ಬರಿಗೂ ನಿಮ್ಮನ್ನು ಜೀವ ಸಹಿತ ಬೀಡುವದಿಲ್ಲಾ ನಿಮ್ಮ ಜೀವ ತೆಗೆಯುತ್ತೇನೆ ಅಂತಾ ಜೀವದ ಭಯ ಹಾಕಿದ್ದು ಇರುತ್ತದೆ. ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ. ನಂ: 19/2017
ಕಲ0: 341, 323, 504, 506 ಸಹಿತ 34 ಐ.ಪಿ.ಸಿ:
ದಿನಾಂಕ:15-03-2017 ರಂದು
ಮುಂಜಾನೆ 07-15 ಗಂಟೆಯ ಸುಮಾರಿಗೆ ಪಿರ್ಯಾದಿದಾರನು ಹಿರೇಮ್ಯಾಗೇರಿ
ಗ್ರಾಮದ ಶರಣಯ್ಯ ಕಪ್ಲಿ ಇವರ ಚಹಾದ ಅಂಗಡಿಯ ಮುಂದೆ ನಿಂತುಕೊಂಡಿದ್ದಾಗ ಆರೋಪಿತರಾದ ಸಿದ್ರಾಮಪ್ಪ ಕರಮುಡಿ
ಮತ್ತು ಆತನ ಅಣ್ಣನ ಮಗನಾದ ವಿರೇಶ ಕರಮುಡಿ ಇಬ್ಬರೂ ಕೂಡಿಕೊಂಡು ಪಿರ್ಯಾದಿಯನ್ನು ಮುಂದೆ ಹೋಗದಂತೆ
ತಡೆದುನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡಿಬಡಿ ನಿನ್ನ ಜೀವ ಸಹಿತ ಬೀಡುವದಿಲ್ಲಾ ನಿನ್ನ ಜೀವ ತೆಗೆಯುತ್ತೇವೆ ಅಂತಾ ಜೀವದ ಭಯ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ಧಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ
ಗುನ್ನೆ. ನಂ: 49/2017 ಕಲ0: 323, 324, 504, 506(2) ಸಹಿತ 34 ಐ.ಪಿ.ಸಿ:
ದಿನಾಂಕ:
15-03-2017 ರಂದು ಸಾಯಂಕಾಲ 6-30 ಗಂಟೆಗೆ ವಿರುಪಾಕ್ಷಪ್ಪ ಹೆಚ್.ಸಿ-95 ಇವರು
ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಪಿರ್ಯಾದಿದಾರರಾದ ಶಿವಪ್ಪ ತಂದೆ ಅಂಬ್ರಪ್ಪ ಜಬ್ಬಲಗುಡ್ಡ
ಸಾ: ಬೂದಗುಂಪಾ ಇವರ ಹೇಳಿಕೆ ಪಿರ್ಯಾದಿಯನ್ನು ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ದಿನಾಂಕ: 13-03-2017
ರಂದು ರಾತ್ರಿ 7-00 ಗಂಟೆ ಸುಮಾರಿಗೆ ಆರೋಪಿತರು ಪಿರ್ಯಾದಿದಾರರ ಹೊಲದಲ್ಲಿ ಹೋಗಿ ಅರ್ಧ
ಎಕರೆ ಭೂಮಿಯ ಸಲುವಾಗಿ ಜಗಳ ತೆಗೆದು ಅರ್ಧ ಎಕರೆ ಭೂಮಿಯನ್ನು ಕೊಡುವುದಿಲ್ಲ ಸೂಳೆ ಮಗನೆ ಎಂದೆ
ಅವಾಚ್ಯ ಶಬ್ದಗಳಿಂದ ಬೈದಾಡಿ ಆರೋಪಿ ನಂ. 1 & 2 ನೇದವರು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಚಾಕುವಿನಿಂದ ತಿವಿಯಲು
ಪ್ರಯತ್ನ ಮಾಡಿದ್ದ, ಆರೋಪಿ ನಂ.3 ನೇದವನು ಹೊಡೆಯಿರಿ ಆ ಸೂಳೆ ಮಗನನ್ನು ಎಂದು ಅವಾಚ್ಯವಾಗಿ
ಬೈದಾಡಿರುತ್ತಾರೆಂದು ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೇನೆ.
5] ಹನಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ: 23/2017 ಕಲಂ: 323, 504, 506 ಸಹಿತ 34 ಐ.ಪಿ.ಸಿ.
ದಿನಾಂಕ:
15-03-2017 ರಂದು ರಾತ್ರಿ 19-40 ಗಂಟೆಗೆ
ಫಿರ್ಯಾದಿದಾರರಾದ ಶ್ರೀಮತಿ ಶಿವಮ್ಮ ಗಂಡ ಬಸಪ್ಪ ತಾವರಗೇರ ಸಾ: ಹೂಲಗೇರಿ ರವರ ಠಾಣೆಗೆ ಹಾಜರಾಗಿ ತಮ್ಮ ಗಣಕೀಕೃತ ಫಿರ್ಯಾದಿ ಹಾಜರಪಡಿಸದ್ದರ
ಸಾರಾಂಶವೇನೆಂದರೆ,
ಫಿರ್ಯಾದಿಯ ಗಂಡ ಈಗ್ಗೆ 47 ವರ್ಷದ ಹಿಂದೆ
ಫಿರ್ಯಾದಿಯನ್ನು ಹೂಲಗೇರಿಯಲ್ಲಿ ಬಿಟ್ಟು, ಡಾವಣಗೇರಿ ಕಡೆಗೆ ವ್ಯಾಪಾರ
ಮಾಡಲು ಹೋಗಿ ಅಲ್ಲಿಯೇ ಬೇರೆ ಮದುವೆ ಮಾಡಿಕೊಂಡು ಹೂಲಗೇರಿಗೆ ಬರದೇ ಅಲ್ಲಿಯೇ ಇದ್ದುದರಿಂದ ಇಲ್ಲಿ
ಹೂಲಗೇರಿ ಗ್ರಾಮದಲ್ಲಿ
3 ಎಕರೆ 9 ಗುಂಟೆ ಜಮೀನನ್ನು ಫಿರ್ಯಾದಿ
ಹಾಗೂ ಆಕೆಯ ಗಂಡ ಬಸಪ್ಪ ಹೆಸರಿಲೆ ಜಂಟಿ ಮಾಡಿಸಿದ್ದು, ಈಗ ದಿನಾಂಕ: 11-03-2017 ರಂದು ಬೆಳಿಗ್ಗೆ
7-00 ಗಂಟೆಗೆ ಫಿರ್ಯಾದಿ ತಮ್ಮ ಹೊಲದಲ್ಲಿ ಕಟ್ಟಿಗೆ ಮಾಡಲು ಹೋದಾಗ
ಆರೋಪಿತರೆಲ್ಲ ಅಲ್ಲಿಗೆ ಹೋಗಿ ಇದು ನಮ್ಮ ಹೊಲ ಲೇ ಸೂಳೆ ಹೊಲದಾಗ ಯಾಕ ಬಂದಿದಿ ಅಂತಾ ಅವಾಚ್ಯವಾಗಿ
ಬೈದಾಡಿ, ಪಕೀರಪ್ಪ ಮತ್ತು ಕಿರಣ ರವರು ಫಿರ್ಯಾದಿಯ ಕೊರಳಿಗೆ ಟಾವೆಲ್ ಹಾಕಿ ಜಗ್ಗಿ ಹಿಡಿದಿದ್ದು, ಬಸಪ್ಪ ಕಾಲಿನಿಂದ ಹೊಟ್ಟೆಗೆ ಹೊಡೆದಿದ್ದು, ಫಿರ್ಯಾದಿ ಕೆಳಗೆ ಬಿದ್ದಾಗ
ಸಿದ್ದವ್ವ ಹೊಟ್ಟೆಯ ಮೇಲೆ ಕಾಲು ಇಟ್ಟು, ಕೈಯಿಂದ ಕಪಾಳಕ್ಕೆ ಹೊಡೆದಾಗ
ಫಿರ್ಯಾದಿ ಚೀರಿದಾಗ ಪಕೀರಪ್ಪ ಮತ್ತು ಕಿರಣ ರವರು ಈಕೀನ ಜೀವ ಬಿಡುವುದು ಬ್ಯಾಡ ಅಂತಾ ಜೀವ
ಬೆದರಿಕೆ ಹಾಕಿದ್ದು,
ಫಿರ್ಯಾದಿ ಹಿರಿಯರಲ್ಲಿ ಹೇಳಿ ಹಿರಿಯರು ಬಗೆಹರಿಸುತ್ತೇವೆ ಅಂತಾ
ಹೇಳಿದ್ದರಿಂದ ಕಾದು ನೋಡಿ ತನಗೆ ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು
ಸದರಿ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ
ನೀಡಿದ್ದು ಇರುತ್ತದೆ.
0 comments:
Post a Comment