1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ. ನಂ: 25/2017
ಕಲ0: 78(3) Karnataka Police Act.
ದಿನಾಂಕ 14-03-2017 ರಂದು ಸಂಜೆ 7-00 ಗಂಟೆಯಿಂದ 8-00 ಗಂಟೆಯ ಅವಧಿಯಲ್ಲಿ ಕನಕಗಿರಿ ನಗರದಲ್ಲಿಯ
ಅಯ್ಯಪ್ಪ ಸ್ವಾಮಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಸಾರ್ವಜನಿಕರಿಂದ ಹಣ ಪಡೆದು
ಅವರಿಗೆ ಮಟಕಾ ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಶ್ರೀ ವೀರಾರೆಡ್ಡಿ, ಪಿ.ಎಸ್.ಐ. ಮತ್ತು ಪಂಚರ
ಸಮೇತ ದಾಳಿ ಮಾಡಿ ಹಿಡಿದು ಅವನಿಂದ ನಗದು ಹಣ ರೂ.1060/-, ಮಟಕಾ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ
ಜಪ್ತ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 63/2017
ಕಲ0: 143, 147, 148, 323, 326, 504, 506 ಸಹಿತ 149 ಐ.ಪಿ.ಸಿ:
ದಿನಾಂಕ:- 14-03-2017 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಮಲ್ಲಿಕಾರ್ಜುನ ಈತನು
ನನಗೆ ಫೋನ್ ಮಾಡಿ ರವಿ ಮೇಸ್ತ್ರಿ ಹೇಳಿದ ಪ್ರಕಾರ ಹೊಸಕೇರಾ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಬೂಬಸಾಬನ
ಹತ್ತಿರ ಬಲೀಸ್ ಗಳನ್ನು ತೆಗೆದುಕೊಂಡು ಬರಲು ಹೋಗಿದ್ದೆನು. ಆದರೆ ಆತನು ಬಲೀಸಗಳನ್ನು ಕೊಡಲಿಲ್ಲಾ.
ಇದರಿಂದ ಇಬ್ಬರಲ್ಲಿಯೂ ಜಗಳ ಆಗಿರುತ್ತದೆ ಅಂತಾ ಹೇಳಿದನು. ಆಗ ನಾನು ಕೋಟಯ್ಯ ಕ್ಯಾಂಪಿಗೆ ಹೋಗಿ ಅಲ್ಲಿದ್ದ
ಮಲ್ಲಿಕಾರ್ಜುನನ್ನು ನನ್ನ ಸಂಗಡ ಕರೆದುಕೊಂಡು ಪ್ರಗತಿನಗರಕ್ಕೆ ಬಂದೆನು. ನಂತರ ಬೆಳಿಗ್ಗೆ 11:30
ಗಂಟೆಯ ಸುಮಾರಿಗೆ ನಾನು ಮತ್ತು ಮಲ್ಲಿಕಾರ್ಜುನ ಇಬ್ಬರೂ ಶರಣಬಸವೇಶ್ವರ ಗುಡಿಯ ಹತ್ತಿರ ಇದ್ದಾಗ
(1) ಮಹಿಬೂಬ ಸಾಬ ತಂದೆ ರಸೂಲ್ ಸಾಬ, 48 ವರ್ಷ ಹಾಗೂ ಆತನ ಸಂಬಂಧಿಕರಾದ (2) ಮುರ್ತುಜಾ ಸಾಬ
ತಂದೆ ರಸೂಲ್ ಸಾಬ-45 ವರ್ಷ (3) ಬಾಬಾ ಖಾದ್ರಿ ತಂದೆ ಮಹಿಬೂಬ ಸಾಬ-23 ವರ್ಷ (4) ಖಾಸಿಂ
(5) ದಸ್ತಗಿರಿ ತಂದೆ ಮಹಿಬೂಬಸಾಬ-20 ವರ್ಷ (6) ಬಸವರಾಜ ತಂದೆ ಬುಡ್ಡಪ್ಪ-20 ವರ್ಷ, ಜಾತಿ:ಉಪ್ಪಾರ
ಎಲ್ಲರೂ ಸಾ: ಪ್ರಗತಿನಗರ ಇವರೆಲ್ಲರೂ ಕೂಡಿಕೊಂಡು ಬಂದು ಮಲ್ಲಿಕಾರ್ಜುನನಿಗೆ “ ಲೇ ಸೂಳೇ ಮಗನೇ ನಿನ್ನ
ತಿಂಡಿ ಜಾಸ್ತಿಯಾಗಿದೆ ಮಗನೇ ಮಹಿಬೂಬಸಾಬನೊಂದಿಗೆ ಜಗಳ ಮಾಡುತ್ತೀಯೇನಲೇ ” ಅಂತಾ ಬಾಯಿಗೆ ಬಂದಂತೆ
ಅವಾಚ್ಯವಾಗಿ ಬೈದು ಅವರಲ್ಲಿ ಬಾಬಾ ಖಾದ್ರಿ ಮತ್ತು ದಸ್ತಗಿರಿ ಇವರಿಬ್ಬರೂ ಇವರಿಬ್ಬರೂ ತಮ್ಮ ಕೈಗಳಲ್ಲಿ
ಹಿಡಿದುಕೊಂಡು ಬಂದಿದ್ದ ಕಟ್ಟಿಗೆಯಿಂದ ತಲೆಗೆ ಹಾಗೂ ಹೊಟ್ಟೆಗೆ ಹೊಡೆದರು. ಉಳಿದವರು ಮನಬಂದಂತೆ ಮರ್ಮಾಂಗಕ್ಕೆ
ಹಾಗೂ ಹೊಟ್ಟೆಗೆ ಮತ್ತು ಮುಖಕ್ಕೆ ಕಾಲಿನಿಂದ ಒದ್ದು, ಕೈಗಳಿಂದ ಬಡಿದರು. ನಂತರ ಅವರು ಮಲ್ಲಿಕಾರ್ಜುನನಿಗೆ
“ ಲೇ ಸೂಳೇ ಮಗನೇ ಇನ್ನೊಂದು ಬಾರಿ ನನ್ನ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲಾ”
ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಅವರು ಹೊಡಿ-ಬಡಿದ್ದರಿಂದ ಮಲ್ಲಿಕಾರ್ಜುನನ ತಲೆಗೆ ಭಾರೀ ಒಳಪೆಟ್ಟಾಗಿ
ಆತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ನಂತರ ಯಾವುದೋ ಒಂದು ಆಟೋರಿಕ್ಷಾದಲ್ಲಿ ಚಿಕಿತ್ಸೆಗಾಗಿ
ಕರೆದುಕೊಂಡು ಬಂದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಆತನಿಗೆ ಸ್ಕ್ಯಾನಿಂಗ್
ಮಾಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ.
ಕಾರಣ ಮೇಲ್ಕಂಡ 6 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಇದ್ದ ದೂರಿನ
ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment