1] ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ: 22/2017
ಕಲಂ: 279, 338
ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 25-03-2017 ರಂದು ಮುಂಜಾನೆ 09 ಗಂಟೆ ಸುಮಾರಿಗೆ ಭೀಮಪ್ಪ ತಂದೆ ನಿಂಗಪ್ಪ ಕಸಾಳೆ
ಇತನು ತನ್ನ ಮೋಟಾರ್ ಸೈಕಲ್ ನಂ. ಕೆಎ-24/ಯು-3287 ನೇದ್ದರ ಮೇಲೆ ಸರ್ಕಾರಿ ಕೆಲಸದ ನಿಮಿತ್ಯ ಕೊಪ್ಪಳಕ್ಕೆ
ಹುಬ್ಬಳ್ಳಿ-ಕೊಪ್ಪಳ ಎನ್.ಹೆಚ್.-63 ರಸ್ತೆಯ ಮೇಲೆ ಹೋರಟಿದ್ದಾಗ ತಳಕಲ್ ಸೀಮಾದಲ್ಲಿ ಆರೋಪಿತನು ತಾನು
ಚಲಾಯಿಸುತಿದ್ದ ವಾಹನ ನಂ. ಕೆಎ-37/6610 ನೇದ್ದನ್ನು ಕೊಪ್ಪಳ ಕಡೆಯಿಂದ ಗದಗ ಕಡೆಗೆ ಅತಿಜೋರಾಗಿ
& ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ.
ಇದರಿಂದಾಗಿ ಭೀಮಪ್ಪನಿಗೆ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಆರೋಪಿತನು ವಾಹನವನ್ನು ಸ್ಥಳದಲ್ಲಿಯೇ
ಬಿಟ್ಟು ಹೋಗಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 59/2017 ಕಲಂ. 279,
337, 338, 283 ಐ.ಪಿ.ಸಿ:
ಫಿರ್ಯದಿದಾರರು ನಿನ್ನೆ ದಿನಾಂಕ :
25-03-2017 ರಂದು ನಾವೆಲ್ಲರೂ ತಮಿಳುನಾಡಿನಿಂದ ಮಹಾರಾಷ್ಠ್ರಕ್ಕೆ ನಮ್ಮ ಲಾರಿ ನಂ : ಟಿ.ಎನ್-34/ಎಕ್ಸ-3299 ನೇದ್ದರಲ್ಲಿ ಬೋರ್ ವೆಲ್ ಕೆಸಿಂಗ್ ಪೈಪ್ ಗಳನ್ನು ಲೋಡ ಮಾಡಿಕೊಂಡು
ಹೊಸಪೇಟೆ, ಕುಷ್ಟಗಿ
ಮಾರ್ಗವಾಗಿ ಸದರಿ ನಮ್ಮ ಲಾರಿಯ ಚಾಲಕನಾದ ಎ.ಸಿಂತಾಲಕುಮಾರ ತಂದೆ ಜಿ. ಆರ್ಮುಗಂ ವಯಾ : 41 ವರ್ಷ ಜಾತಿ : ಎಂ.ಪಿ.ಸಿ. ಸಾ : ಪಚ್ಚಾಪಲಯಂ ಪೊ : ಗಾಂಧಿ ಆಶ್ರಮ ತಾ : ತಿರುಚನಗೋಡೆ ಜಿ : ನಾಮಕಲ್ (ಟಿ.ಎನ್) ಇವರು ನಡೆಸಿಕೊಂಡು ಹೋಗುತ್ತಿರುವಾಗ ಇಂದು ದಿನಾಂಕ : 26-03-2017 ರಂದು
ಬೆಳಗಿನ ಜಾವ 4-00 ಗಂಟೆಯ
ಸುಮಾರಿಗೆ ಹೊಸಪೇಟ ಕುಷ್ಟಗಿ ರಸ್ತೆಯ ಕುರುಬನಾಳ ಹತ್ತಿರ ನಮ್ಮ ಲಾರಿಯನ್ನು ಅತೀವ ವೇಗವಾಗಿ
ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ ನಿಂತ ಒಂದು ಡಬ್ಬಿ ಲಾರಿಗೆ ಟಕ್ಕರ್ ಮಾಡಿ ಅಪಘಾತಪಡಿಸಿದ್ದು ಇದರಿಂದ ಸದರಿ
ಲಾರಿಯಲ್ಲಿದ್ದ ನನಗೆ ಹಾಗೂ ಶ್ರೀರಾಮ ಗೋಣ, ಕುಮಾರ ಬತರಾ, ಲಾರಿಯ ಚಾಲಕನಾದ ಎ.ಸಿಂತಾಲಕುಮಾರ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು
ಇನ್ನೂಳಿದ ಸಂತೊಷ, ಕಾರ್ತಿಕ, ಗೋನೋ ಮತ್ತು
ಅನಂತ ಇವರಿಗೆ ಯಾವುದೇ ಗಾಯ ವಗೈರಾ ಆಗಿರುವದಿಲ್ಲ. ನಂತರ ಡಬ್ಬಿ ಲಾರಿ ನಂಬರ ನೋಡಲಾಗಿ ಲಾರಿ ನಂ : ಎಂ.ಪಿ-09/ಹೆಚ್.ಜಿ-9603 ಅಂತಾ ಇದ್ದು. ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ರಸ್ತೆಯ ಮೇಲೆ ಯಾವುದೇ
ಸಿಗ್ನಲ್ ಹಾಕದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ರಸ್ತೆಯ ಮೇಲೆ ನಿಲ್ಲಿಸಿದ್ದು
ಇರುತ್ತದೆ. ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡೆನು.
3] ಕೊಪ್ಪಳ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 57/2017 ಕಲಂ. 341, 307, 504, 109 ಸಹಿತ 34 ಐ.ಪಿ.ಸಿ:
ದಿ:25-03-2017 ರಂದು ಮದ್ಯಾನ್ಹ 2-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಹೊಲದ ಸಮೀಪದ
ನರೇಗಲ್-ಓಜನಹಳ್ಳಿ ರಸ್ತೆಯಲ್ಲಿರುವಾಗ, ಆರೋಪತರು ಬಂದು ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಲೇ ಸೂಳೇಮಗನೇ ನೀನು ನಮಗೆ
ಎ.ಪಿ.ಎಮ್.ಸಿ ಚುನಾವಣೆ ಯಲ್ಲಿ ಬೆಂಬಲ ನೀಡಿರುವುದಿಲ್ಲ ಆದರೂ ಸಹ ಗೆದ್ದು ಬಂದಿದ್ದೆವೆ ಲೇ
ಸೂಳೇಮಗನೇ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿ ರಾಜು ಇತನು ತನ್ನ ತಂದೆಗೆ ಈ ಮುದೇ ಸೂಳೇಮಗ ಒಬ್ಬನೇ
ಸಿಕ್ಕಿದ್ದಾನೆ ಹೊಡೆದು ಮುಗಿಸು ಎಂದು ಪ್ರಚೋದನೆ ಮಾಡಿದಾಗ ಆರೋಪಿ ಬಸವರಾಜನು ತನ್ನ ಕೈಯಲ್ಲಿದ್ದ
ಕೊಡ್ಲಿಯಿಂದ ಜೋರಾಗಿ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ತಲೆಗೆ ಭಾರಿ
ರಕ್ತಗಾಯವಾಗಿದ್ದು ಇರುತ್ತದೆ. ಅಲ್ಲದೇ ಬಿಡಿಸಲು ಬಂದವರಿಗೆ ಸಹ ಆರೋಪಿತರು ನೀವ್ಯಾರಲೇ
ಸೂಳೇಮಕ್ಕಳೆ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು, ಅಲ್ಲದೇ ನೀವೆಲ್ಲಾ ಬರದಿದ್ದರೇ ನಿನಗೆ ತಂದ ಕೊಡ್ಲಿಯಿಂದ ಕಡಿದು
ತುಂಡು ಮಾಡಿ ಸಾಯಿಸಿಬಿಡುತ್ತಿದ್ದೆವು. ಎಂದು ಫಿರ್ಯಾದಿಗೆ ಜೀವದ ಬೆದರಿಕೆ ಹಾಕಿ ಹೋಗಿದ್ದು
ಇರುತ್ತದೆ. ಕಾರಣ ಸದರಿ ಬಸವರಾಜ ಹಾಗೂ ಅವರ ಮಗ ರಾಜು ಇವರ ಮೇಲೆ ಸೂಕ್ತ ಕಾನೂನು ಕ್ರಮ
ಕೈಗೊಳ್ಳುವಂತೆ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 60/2017 ಕಲಂ. 307, 504, 506 ಐ.ಪಿ.ಸಿ:
ಫಿರ್ಯಾದಿದಾರಳ ಗಂಡ ಗಂಗಾಧರ ಜೀನ ಇತನು ಮನೆಯಲ್ಲಿ ಸರಿಯಾಗಿ ಇರದೇ, ಹೊರಗಡೆ ತಿರುಗಾಡುತ್ತಾ, ವಿನಾಕಾರಣ ಸಂಸಾರಿಕ ವಿಚಾರವಾಗಿ ಫಿರ್ಯಾದಿಯೊಂದಿಗೆ ನ್ಯಾಯ ಮಾಡುತ್ತಾ ಇದ್ದನು. ನಂತರ ದಿ:25-03-2017 ರಂದು ಸಂಜೆ ಗಿಣಿಗೇರಿ ಗ್ರಾಮದಲ್ಲಿ ಆರೋಪಿತನು ತನ್ನ ಕೈಯಲ್ಲಿ ಒಂದು
ಪೇಪರ ಹಿಡಿದುಕೊಂಡು ಫಿರ್ಯಾದಿದಾರಳ ಬಟ್ಟೆ ಅಂಗಡಿಗೆ ಹೋಗಿ ಅದಕ್ಕೆ ಸಹಿ ಹಾಕಿಕೊಡು ನಿನಗೆ ನನಗೆ
ಇನ್ನುಮುಂದೆ ಯಾವುದೆ ಸಂಬಂಧ ಇಲ್ಲಾ ಎಂದು ಸಿಟ್ಟಿನಿಂದ ಹೇಳಿ ಜಗಳ ತೆಗೆದು ಕೊರಳಲ್ಲಿಯ ಮಾಂಗಲ್ಯ
ದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಅಲ್ಲದೇ ಮನೆಯಲ್ಲಿದ್ದ ತನ್ನ ಮೂರು ಜನ ಮಕ್ಕಳಾದ, 1] ರೇಣುಕಾ, 2] ತೇಜಸ್ವಿನಿ ಹಾಗೂ 3] ಅಜಯಕುಮಾರ ಇವರಿಗೆ ಗಿಣಿಗೇರಿ ಸೀಮಾದ ತಮ್ಮ ಹೊಲದಲ್ಲಿ ಕರೆದುಕೊಂಡು ಹೋಗಿ ದಿ:25-03-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಜ್ಯೂಸದಲ್ಲಿ ಯಾವುದೋ ಒಂದು ಬಿಳಿಯ ವಿಷದ ಪುಡಿ ಹಾಕಿ ಕುಡಿಯಿರಿ
ಇಲ್ಲದಿದ್ದರೆ ನಿಮಗೆ ಕುತ್ತಿಗೆ ಹಿಚುಕಿ ಸಾಯಿಸುತ್ತೇನೆ ಎಂದು ಹೆದರಿಸಿ ಜ್ಯೂಸದಲ್ಲಿ ವಿಷ ಹಾಕಿ
ಕುಡಿಸಿದ್ದು ಅಲ್ಲದೇ ತಾನೂ ಸಹ ವಿಷ ಸೇವಿಸಿದ್ದು ಇರುತ್ತದೆ. ಕಾರಣ ಆರೋಪಿತನು ಮಕ್ಕಳಿಗೆ
ಸಾಯಿಸುವ ಉದ್ದೇಶದಿಂದಾ ತನ್ನ ಮೂರು ಮಕ್ಕಳಿಗೆ ವಿಷ ಸೇವನೆ ಮಾಡಿಸಿ ಸಾಯಿಸಲು
ಪ್ರಯತ್ನಿಸಿದ್ದರಿಂದ ಸದರಿ ಗಂಗಾಧರ ಜೀನ ಸಾ:ಗಿಣಿಗೇರಿ ಇವರ ಮೇಲೆ ಸೂಕ್ತ ಕಾನೂನು ಕ್ರಮ
ಕೈಗೊಳ್ಳುವಂತೆ ಸಲ್ಲಿಸಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment