Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, March 29, 2017

1]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ: 61/2017 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ : 28-03-2017 ರಂದು ಬೆಳಿಗ್ಗೆ 08.30 ಗಂಟೆ ಸುಮಾರಿಗೆ ನಮ್ಮ ಊರಾದ ಗುಮಗೇರಿ ಗ್ರಾಮದಿಂದ ಅಮವಾಸೆ ಪ್ರಯುಕ್ತ ರೋಣ ತಾಲೂಕಿನ ಇಟಗಿ ಭಿಮಾಂಬಿಕಾ ದೇವಸ್ಥಾನಕ್ಕೆ ಭೇಟಿ ಮಾಡಿ ಕಾಯಿ ಹೊಡಿಯಿಸಿಕೊಂಡು ವಾಪಸ್ ಗಜೇಂದ್ರಗಡ ಮೂಲಕ ಬ್ಯಾಲಿಹಾಳ ಸೀಮಾದ ಹತ್ತಿರ ಬೆಳಿಗ್ಗೆ 11 :00 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಸ್ನೇಹಿತನಾದ ಶರಣಪ್ಪ ತಂದಿ ದ್ಯಾಮಣ್ಣ ಕೊಂಡುಗುರಿ ಸಾ : ಹಿರೇಅರಳಿಹಳ್ಳಿ ಈತನು ತನ್ನ ಮೊಸೈ ಚೆಸ್ಸಿ ನಂ.ME4JC36KLD7344752 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದನು. ನಾನು ಹಿಂದೆ ಕೂಳಿತಿದ್ದು ನಮ್ಮ ಎದುರುಗಡೆಯಿಂದ ಅಂದರೆ ಕುಷ್ಟಗಿ ಕಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಎಡಗಡೆ ಹೊರಟಿದ್ದ ನಮ್ಮ ಬೈಕಿಗೆ ಟಕ್ಕರ್ ಕೊಟ್ಟು ಅಪಘಾತ ಪಡಿಸಿದ್ದರಿಂದ ನಾವು ಬೈಕ್ ಸಮೇತ ಕೆಳಗೆ ಬಿದ್ದಿದ್ದು ಇದರಿಂದ ನನಗೆ ಬಲಕೈ ಮೊಣಕೈ ಹತ್ತಿರ ರಕ್ತ ಗಾಯ, ಬಲಹಣೆ ಹತ್ತಿರ, ಬಲಕಪಾಳ ಹತ್ತಿರ ತೆರಚಿದ ಗಾಯ, ಬಲಕಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯ, ಮೊಣಕಾಲು ಮುಂಗಾಲು ಹತ್ತಿರ ಭಾರಿ ರಕ್ತಗಾಯ, ಬಲತೊಡೆಗೆ ಒಳಪೆಟ್ಟಾಗಿದ್ದು ಅದೆ. ನಂತರ ಶರಣಪ್ಪನನ್ನು ನೋಡಲಾಗಿ ಅವನಿಗೆ ಬಲಕಾಲು ಮೊಣಕಾಲು ಚಿಪ್ಪು ಕಿತ್ತು ಹೊಗಿ ಭಾರಿ ರಕ್ತಗಾಯವಾಗಿದ್ದು  ಬಲಕಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯ, ಬಲಕಾಲು ಪಾದದ ಮೇಲೆ ಭಾರಿ ರಕ್ತಗಾಯ, ತಲೆಯ ಮೇಲೆ ಹೊಡೆದು ರಕ್ತಗಾಯವಾಗಿದೆ, ಬಲಕಾಲು ಮೊಣಕಾಲಿಗೆ ತೆರಚಿದ ಗಾಯ, ಸೊಂಟಕ್ಕೆ ಮತ್ತು ಬಲಬುಜಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008