1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 38/2017 ಕಲಂ: 87 Karnataka Police Act.
ದಿನಾಂಕ: 25-04-2017 ರಂದು
ಸಂಜೆ 5:15 ಗಂಟೆ ಸುಮಾರಿಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ.ಎಸ್.ಐ. ತಾವರಗೇರಾ ರವರು ತಮ್ಮ ಠಾಣಾ ವ್ಯಾಪ್ತಿಯ
ಮುದೇನೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು,
ಆ ಕಾಲಕ್ಕೆ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 8490=00, ಹಾಗೂ
52 ಇಸ್ಪಿಟ್ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ 05 ಜನ ಆರೋಪಿ 1) ಚಂದ್ರಪ್ಪ ತಂದೆ
ದುರುಗಪ್ಪ ಹರಿಜನ. ವಯ: 26 ವರ್ಷ. ಜಾತಿ: ಮಾದರ ಉ: ಕೂಲಿ. ಸಾ: ಮುದೇನೂರು. 2] ಶರಣಪ್ಪ ತಂದೆ ಮಹಾಂತಪ್ಪ ಹಾವಿನಾಳ. ವಯ: 43 ವರ್ಷ.
ಜಾತಿ: ಲಿಂಗಾಯತ. ಉ: ಒಕ್ಕಲುತನ. ಸಾ: ಮುದೇನೂರು.
3] ನಿಂಗಯ್ಯ ತಂದೆ ಸಿದ್ದಲಿಂಗಯ್ಯ ಹಿರೇಮಠ ವಯ: 40 ವರ್ಷ. ಜಾತಿ: ಜಂಗಮ. ಉ: ಕೂಲಿಕೆಲಸ.
ಸಾ: ಬನ್ನಟ್ಟಿ. 4] ಬಸವರಾಜ ತಂದೆ ಮಹಾಂತಪ್ಪ ಮಾಕಾಪುರ
ವಯ: 31 ವರ್ಷ. ಜಾತಿ: ಲಿಂಗಾಯತ. ಉ: ಕೂಲಿಕೆಲಸ. ಸಾ: ಮಾಕಾಪುರ. 5] ಗದ್ದೆಪ್ಪ ತಂದೆ ಯಲ್ಲಪ್ಪ ಕಠಾರಿ ವಯ: 43 ವರ್ಷ. ಜಾತಿ:
ಕುರುಬರು. ಉ: ಒಕ್ಕಲುತನ. ಸಾ: ಕೂಡ್ಲೂರು ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು
ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 67/2017 ಕಲಂ: 279, 338 ಐಪಿಸಿ 187
ಐ.ಎಂ.ವಿ. ಕಾಯ್ದೆ.
ದಿನಾಂಕ 25-04-207 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶರೀಪ್ ಸಾಬ ತಂದೆ ಗೈಬೂಸಾಬ ವಯ 36 ವರ್ಷ ಜಾತಿ ಮುಸ್ಲಿಂ ಉ.
ಒಕ್ಕಲುತನ ಸಾ. ನಾಗಕಲ್ ತಾ.ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸಿದ್ದು ಸದರ್ ದೂರಿನ
ಸಾರಾಂಶವೆನಂದರೆ, ದಿನಾಂಕ 24-04-2017 ರಂದು ಬೆಳಿಗ್ಗೆ
9-45 ಗಂಟೆ ಸುಮಾರಿಗೆ ಗಂಗಾವತಿ ಕಾರಟಗಿ ಮುಖ್ಯ ರಸ್ತೆಯ ಮೇಲೆ ಜೂರಟಗಿ ಹತ್ತಿರ ಫಿರ್ಯಾದಿದಾರರ ತಮ್ಮನಾದ
ಮರ್ದಾನಸಾಬ ಈತನು ತನ್ನ ಮೋಟಾರ್ ಸೈಕಲ್ ನಂ ಕೆಎ-37/ವಾಯ್-1039 ನೇದ್ದರಲ್ಲಿ ನಮ್ಮೂರಿನ ಅಬ್ದುಲ್
ಸಾಬ ಇಬ್ಬರೂ ಕೂಡಿಕೊಂಡು ರಸ್ತೆಯ ಮೇಲೆ ಮೋಟಾರ್ ಸೈಕಲ್ ಮೇಲೆ ಗಂಗಾವತಿ ಕಡೆಯಿಂದ
ಬರುತ್ತಿದ್ದಾಗ್ಗೆ ಹಳೇ ಜೂರುಟಗಿ ಏಕಲವ್ಯ ಟ್ಯೂಷನ್ ಕ್ಲಾಸಸ್ ಅಡ್ಡ ರಸ್ತೆಯಿಂದ ಲಾರಿ ಚೆಸ್ಸಿ ನಂ
388002JQQ120670 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ
ನಡೆಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಠಕ್ಕರ್ ಕೊಟ್ಟು ಅಪಘಾತಪಡಿಸಿ ಲಾರಿಯನ್ನು ಅಲ್ಲಿಯೇ ಬಿಟ್ಟು
ಓಡಿ ಹೋಗಿದ್ದು, ಸದರಿ ಅಪಘಾತದಿಂದ ಮೋಟಾರ್ ಸೈಕಲ್ ಮೇಲಿದ್ದ ಮರ್ದಾನಸಾಬ ತಂದೆ ಗೈಬೂಸಾಬ ವಯ 32 ಮತ್ತುಅಬ್ದುಲ್ ಸಾಬ ತಂದೆ ರಾಜಮಹಮ್ಮದ್
ವಯ 33 ವರ್ಷ ಸಾ. ನಾಗನಕಲ್ ಇಬ್ಬರಿಗೂ
ಗಂಬೀರ ಸ್ವರೂಪದ ಗಾಯಗಳಾಗಿದ್ದು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು
ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 95/2017 ಕಲಂ. 279, 337, 338 ಐ.ಪಿ.ಸಿ.
ದಿನಾಂಕ: 25-04-2017 ರಂದು 07-15 ಪಿ.ಎಂ.ಗಂಟೆಗೆ ಫಿರ್ಯಾದಿ ಶಿವಪ್ಪ ತಂದೆ ಸಿದ್ದಪ್ಪ ಡಂಬರ ವಯಾ: 34 ವರ್ಷ ಜಾತಿ: ಡಂಬರ ಉ: ಆಟೋಚಾಲಕ ಸಾ: ಸಂದೀಪನಗರ ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ
ಸಾರಾಂಶವೆನೆಂದರೆ, ದಿನಾಂಕ:25-04-2017 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ನನ್ನ ತಾಯಿ ಅಂಭಮ್ಮಳು ಕೂಲಿಕೆಲಸಕ್ಕೆ ಹೋಗಿದ್ದರು, ನಂತರ ಮದ್ಯಾಹ್ನ
12:15 ಗಂಟೆಯ ಸುಮಾರಿಗೆ
ನನ್ನ ಮಗ ಉಲ್ಲಾಸ ಮತ್ತು ನನ್ನ ತಮ್ಮ ಅಯ್ಯಪ್ಪ ಇಬ್ಬರೂ ಕೂಡಿ ನಮ್ಮ ತಾಯಿಯ ಹತ್ತಿರ ಹೋಗುವುದಾಗಿ
ಹೇಳಿ ಹೋದರು. ನಾನು ನಿಧಾನವಾಗಿ ಎಡಗಡೆ ಕಚ್ಚಾ ರಸ್ತೆಯಲ್ಲಿ
ಹೋಗಿರಿ ಅಂತಾ ಹೇಳಿ ಕಳಿಸಿದ್ದೇನು. ನಂತರ ಸ್ವಲ್ಪ ಹೊತ್ತಿನ ನಂತರ ಅಂದರೆ
ಮದ್ಯಾಹ್ನ 12-45 ಗಂಟೆಯ ಸುಮಾರಿಗೆ ಕುಷ್ಟಗಿ-ಗಜೇಂದ್ರಗಡಾ ರೋಡ ಅರಬಿಕ್ ಶಾಲೆಯ ಹತ್ತಿರ ನಿನ್ನ ಮಗನಿಗೆ ಅಪಘಾತವಾಗಿದೆ, ಅಂತಾ ಸುದ್ದಿ ಕೇಳಿ ನಾನು ಕೂಡಲೇ ಬಂದು ನೋಡಲಾಗಿ ವಿಷಯ ನಿಜವಿದ್ದು ನನ್ನ ಮಗ ಉಲ್ಲಾಸ
ಮತ್ತು ನನ್ನ ತಮ್ಮ ಅಯ್ಯಪ್ಪ ಇಬ್ಬರೂ ಕೂಡಿ ರಸ್ತೆಯ ಎಡಗಡೆ ಕಚ್ಚಾ ರಸ್ತೆಯ ಮೇಲೆ
ಹೋಗುತ್ತಿದ್ದಾಗ ಕುಷ್ಟಗಿ ಕಡೆಯಿಂದ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ
ನಡೆಯಿಸಿಕೊಂಡು ಎಡಗಡೆ ಕಚ್ಚಾ ರಸ್ತೆಯ ಮೇಲೆ ಹೋಗುತ್ತಿರುವ ನನ್ನ ಮಗ ಉಲ್ಲಾಸನಿಗೆ ಟಕ್ಕರಕೊಟ್ಟು
ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಹಾಗೇ ವಾಹನವನ್ನು ಚಾಲಾಯಿಸಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಗೊತ್ತಾಯಿತು, ನನ್ನ ತಮ್ಮ ಅಯ್ಯಪ್ಪ ವಯಾ 10 ವರ್ಷ ಈತನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ. ನನ್ನ ಮಗನನ್ನು ನೋಡಲು ನನ್ನ ಮಗ ಉಲ್ಲಾಸನಿಗೆ ಎಡಗಡೆ ಹಣೆಯ ಮೇಲೆ ಮತ್ತು ಎಡಕಣ್ಣಿನ ಹತ್ತಿರ
ಭಾರಿ ರಕ್ತಗಾಯವಾಗಿದ್ದು ಕೂಡಲೇ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ
ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದು ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
4] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 26/2017 ಕಲಂ. 279, 338 ಐ.ಪಿ.ಸಿ.
ದಿನಾಂಕ: 22-04-2017 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ
ತಾಳಕೇರಿ - ಚೌಡಾಪೂರ ರಸ್ತೆಯ ಮೇಲೆ ತಾಳಕೇರಿ ಸೀಮಾದಲ್ಲಿ ಆರೋಪಿ ಬಸವರಾಜ ತಂದೆ ನಿಂಗಪ್ಪ ಏಳಗುಡ್ಡ
ಸೈಕಲ್ ನಂ:ಕೆ.ಎ-37 ಇಸಿ-7374 ನೇದ್ದರ ಸವಾರ ಸಾ//ತಾಳಕೇರಿ ಇತನು ತಾನು ನಡೆಸುತ್ತಿದ್ದ ಮೋಟಾರ್
ಸೈಕಲ್ ನಂ: ಕೆ.ಎ-37 ಇಸಿ-7374 ನೇದ್ದನ್ನು ತಾಳಕೇರಿ
ಕಡೆಯಿಂದ ಚೌಡಾಪೂರ ಕಡೆಗೆ ಅತೀವಾಗವಾಗಿ ಹಾಗೂ ಆಲಕ್ಷತನದಿಂದ ನೆಡೆಸಿಕೊಂಡು ಹೋಗಿ ರಸ್ತೆಯ ಎಡಬದಿಗೆ
ಕಾಲ್ನಡಿಗೆಯಲ್ಲಿ ಹೊರಟಿದ್ದ ಶೇಖರಪ್ಪನಿಗೆ ಹಿಂದಿನಿಂದ ಬಲವಾಗಿ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು
ಇರುತ್ತದೆ, ಸದರಿ ಅಪಘಾತದಲ್ಲಿ ಶೇಖರಪ್ಪನ ತಲೆಗೆ
ಭಾರಿ ಸ್ವರೂಪದ ಒಳ ಪೆಟ್ಟಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,
0 comments:
Post a Comment