1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 54/2017 ಕಲಂ: 392 ಐಪಿಸಿ.
ದಿನಾಂಕ: 24-04-2017 ರಂದು ರಾತ್ರಿ 11-45 ಗಮಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಶಾರದಾ ಗಂಡ ಸಿದ್ದಯ್ಯ
ನವಲಿಹಿರೇಮಠ ವಯ: 45 ವರ್ಷ ಜಾ: ಜಂಗಮ ಉ: ಮನೆಗೆಲಸ ಸಾ: ಪ್ರಗತಿ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ
ನೀಡಿದ ಗಣಕೀಕೃತ ಪಿರ್ಯಾಧಿಯ ಸಾರಾಂಶವೇನೆಂದರೆ, ದಿನಾಂಕ: 24-04-2017 ರಂದು ರಾತ್ರಿ 10-00 ಗಂಟೆಗೆ ತಮ್ಮ ಮಗಳಿಗೆ ಫೋನ್ ಮಾಡುವ ಸಲುವಾಗಿ ತಮ್ಮ ಮನೆಯ ಎದುರಿಗೆ
ಇರುವ ಕಟ್ಟೆಯ ಮೇಲೆ ಬಂದು ಕುಳಿತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಬಂದು ಇಲ್ಲಿ ಯಾಕೇ
ಕುಳಿತಿರುವಿರಿ ಅಂತಾ ಕೇಳಿದವನೇ ಪಿರ್ಯಾದಿದಾರರ ಕಣ್ಣಿಗೆ ಕಾರದ ಪುಡಿಯನ್ನು ಎರಚಿ
ಒಮ್ಮೆಲೇ ಕುತ್ತಿಗೆಗೆ ಕೈ ಹಾಕಿ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಹಿಡಿದುಕೊಂಡು
ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಆಗ ಪಿರ್ಯಾದಿದಾರರು ತಮ್ಮ ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ಸ್ವಲ್ಪ
ಮಾಂಗಲ್ಯ ಸರ ತಮ್ಮ ಕೈಯಲ್ಲಿದ್ದು ಇನ್ನು ಸ್ವಲ್ಪ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೊರಟು ಓಣಿಯ
ರಸ್ತೆಯ ಕಡೆಗೆ ಹೊರಟನು, ಅಷ್ಟರಲ್ಲಿ ಪಿರ್ಯಾದಿದಾರರು
ಕಳ್ಳ ಕಳ್ಳ ಅಂತಾ ಜೋರಾಗಿ ಕೂಗಿದಾಗ ಸುತ್ತಮುತ್ತಲಿನ ಮನೆಯವರು ಬಂದಿದ್ದು, ಆಗ ಅವರು ವಿಚಾರಿಸಿದಾಗ ಈ ವಿಷಯವನ್ನು ತಿಳಿಸಿದ್ದು ಕೂಡಲೇ ಈ ವಿಷಯವನ್ನು ತಮ್ಮಪತಿಗೆ
ತಿಳಿಸಿದ್ದು. ತಮ್ಮ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಯು ಸ್ವಲ್ಪ ದಪ್ಪಗೆ ಇದ್ದನು, ಕೆಂಪು ಕಲರ್ ಟಿ-ಶರ್ಟ ಮತ್ತು ನೀಲಿ ಜೀನ್ಸ್ ಪ್ಯಾಂಟ ಹಾಕಿದ್ದು ಮುಖಕ್ಕೆ ಮಂಕಿ ಕ್ಯಾಪ್
ಹಾಕಿದ್ದನು. ಯಾರೋ ಅಪರಿಚಿತ ದುಷ್ಕರ್ಮಿಯು
ಪಿರ್ಯಾದಿದಾರರ ಕೊರಳಲ್ಲಿದ್ದ ಮಾಂಗಲ್ಯ ಸರದಲ್ಲಿ ಅರ್ಧ ಮಾಂಗಲ್ಯ ಸರ ಅಂದಾಜು ತೂಕ 02 ತೊಲೆ ಒಟ್ಟು ಅಂ.ಕಿ.ರೂ: 45,000=00
ಬೆಲೆ ಬಾಳುವುದನ್ನು
ಬಲವಂತವಾಗಿ ಕಿತ್ತುಕೊಂಡು ಹೋದವರನ್ನು ಪತ್ತೇ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು
ವಿನಂತಿ ಅಂತಾ ಮುಂತಾಗಿ ಇರುವ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ
ಕೈಗೊಂಡಿದ್ದು ಅದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 70/2017 ಕಲಂ. 341, 354, 504, 506 ಐ.ಪಿ.ಸಿ.
ದಿನಾಂಕ 24-04-2017 ರಂದು
ಸಂಜೆ 5-30 ಗಂಟೆಗೆ ಶ್ರೀಮತಿ ತಾರಾ @ ತಿಪ್ಪಮ್ಮ ಗಂಡ ಪಂಪಾಪತಿ, ವಯಸ್ಸು 35 ವರ್ಷ, ಜಾ: ಮಡಿವಾಳರ,
ಉ: ಸ್ಟಾಫ್ ನರ್ಸ್, ಸಾ: ಉಪ್ಪಾರ ಓಣಿ, ಗಂಗಾವತಿ ಹಾ:ವ: ಸ್ಟಾಫ್ ಕ್ವಾಟರ್ಸ ಸರಕಾರಿ ಆಸ್ಪತ್ರೆ,
ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿಯನ್ನು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ,
ನನ್ನ ಗಂಡನು ಮೃತಪಟ್ಟಿದ್ದು ಅವರು ಜೀವಂತವಿರುವಾಗ ಅವರ ಪರಿಚಯದ ಅಕ್ಕಪ್ಪ ತಂದೆ ಸಾಬಣ್ಣ ಮಡಿವಾಳರ
ಸಾ: ಜಯನಗರ, ಗಂಗಾವತಿ ಇವರಿಗೆ ರೂ. 60,000-00 ಗಳನ್ನು ಕೊಟ್ಟಿದ್ದು ಇರುತ್ತದೆ. ನನಗೆ ಹಣದ ಅವಶ್ಯಕತೆ
ಇದ್ದುದರಿಂದ, ನಾನು ಹಾಗೂ ನನ್ನ ಪರಿಚಯದ ಶ್ಯಾಮಿದ್ಅಲಿ ಇವರೊಂದಿಗೆ ದಿನಾಂಕ 21-04-2017 ರಂದು ಮಧ್ಯಾಹ್ನ
1-00 ಗಂಟೆ ಸುಮಾರಿಗೆ ಅಕ್ಕಪ್ಪ ಇವರಿಗೆ ನನ್ನ ಗಂಡ ನೀಡಿದ ದುಡ್ಡನ್ನು ಕೊಡುವಂತೆ ಕೇಳಲು ಅವರಿದ್ದ
ಇಸ್ಲಾಂಪುರದಲ್ಲಿರುವ ಈರಣ್ಣ ದೇವಸ್ಥಾನಕ್ಕೆ ಒಂದು ಆಟೋರಿಕ್ಷಾದಲ್ಲಿ ಹೊರಟಿದ್ದು, ನಾನು ಎಸ್.ಬಿ.ಹೆಚ್.
ಬ್ಯಾಂಕ್ ಹತ್ತಿರ ರಸ್ತೆಯ ಮೇಲೆ ಹೊರಟಿದ್ದಾಗ ಅಲ್ಲಿಗೆ ಬೈಕ್ ಹೊಡೆದುಕೊಂಡು ಬಂದ ಅಕ್ಕಪ್ಪ ಇವನು
ನಾನಿದ್ದ ಆಟೋರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿ ಏಯ್ ನಿನ್ನ ಕಿರಿಕಿರಿ ಭಾಳ ಆಗೈತಿ, ನಿನ್ನ್ ರೊಕ್ಕಾ
ಕೊಡಂಗಿಲ್ಲ ಏನ್ಮಾಡ್ತಿ ಮಾಡ್ಕೋ ಹೋಗ್ ಅಂತಾ ಅಂದನು.
ಅದಕ್ಕೆ ನಾನು ನನ್ನ ಗಂಡ ತೀರಿಕೊಂಡಿರುತ್ತಾರೆ ಅದಕ್ಕೆ ನನಗೆ ಹಣದ ಅವಶ್ಯಕತೆ ಇದೆ ಕೊಡಿರಿ
ಅಂತಾ ಕೇಳಿದೆನು. ಅದಕ್ಕೆ ಅವನು ಏಕಾಏಕಿ ಸಿಟ್ಟಿಗೆ
ಬಂದು ಲೇ ನಿನ್ನ ಚಾಳಿ ಏನ್ ಅಂತ ಇಡೀ ಊರಿಗೆ ಗೊತ್ತೈತೀ ಅಂತಾ ಅನ್ನುತ್ತಾ ಆಟೋರಿಕ್ಷಾದಲ್ಲಿ ಕುಳಿತಿದ್ದ
ನನ್ನ ಕೈ ಹಿಡಿದು ಆಟೋರಿಕ್ಷಾದಿಂದ ಹೊರಗೆಳೆದು ಅಪಮಾನ ಮಾಡಿದನು. ಅಲ್ಲದೇ ಅಕ್ಕಪ್ಪನು ನೀ ಹಿಂಗ ನಾ ಇದ್ದಲ್ಲಿ ಬಂದ್ ನನ್ನ
ರೊಕ್ಕಾ ಕೊಡ ಅಂತ ಮರ್ಯಾದಿ ಕಳದಿ ಅಂದ್ರ, ನಿನ್ನ ಜೀವಂತ ಬಿಡಂಗಿಲ್ಲ ಹುಷಾರ್ ಅಂತಾ ಬೆದರಿಕೆ ಹಾಕುತ್ತಾ
ಹೊರಟು ಹೋದನು. ಆಗ ಸಮಯ ಮಧ್ಯಾಹ್ನ 1-30 ಗಂಟೆಯಾಗಿರಬಹುದು.
ನಂತರ ನಾನು ಭಯಗೊಂಡು ಪೊಲೀಸ್ ಸ್ಟೇಷನ್ಗೆ ಬರದೇ ಇದ್ದು, ಇಂದು ತಡವಾಗಿ ಬಂದು ಈ ಫಿರ್ಯಾಧಿಯನ್ನು
ಸಲ್ಲಿಸುತ್ತಿದ್ದುದು ಇದೆ. ಕಾರಣ ಸದರಿ ಅಕ್ಕಪ್ಪ
ತಂದೆ ಸಾಬಣ್ಣ ಮಡಿವಾಳರ ಸಾ: ಜಯನಗರ, ಗಂಗಾವತಿ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ್ ಪೊಲೀಸ್ ಠಾಣೆ ಗುನ್ನೆ ನಂ: 83/2017 ಕಲಂ. 279, 337 ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 24-04-2017 ರಂದು
1-30 ಎ.ಎಮ್.ಕ್ಕೆ ಫಿರ್ಯಾದಿದಾರನಾದ
ಮಂಜು ತಂದೆ ಟಿ.ವ್ಹಿ ದಯಾನಂದ ಸಾ: ಹೊಸಪೇಟಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯನ್ನು
ಹೇಳಿ ಬರೆಸಿದ್ದರ ಸಾರಾಂಶವೇನೆಂದರೆ, ದಿನಾಂಕ:
22/04/2017 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಗಾಯಾಳು ತನ್ನ ತಮ್ಮನಾದ ಗಾಯಾಳು ರವಿ
ಇವನು ಹೊಸಪೇಟಿಯಲ್ಲಿ ಚಾಲಕ ಕರ್ತವ್ಯ ಮುಗಿಸಿಕೊಂಡು ತನ್ನ ಮೋಟರ ಸೈಕಲ ನಂ: ಕೆ.ಎ.03/ಇಕೆ 7305 ನೇದ್ದರ ಮೇಲೆ ಹೊಸಪೇಟಿಯಿಂದ ಎನ್.ಎಚ್-50
ರಸ್ತೆಯಲ್ಲಿ ಹೊಸಳ್ಳಿಗೆ ಮನೆಗೆ ಹೋಗುತ್ತಿರುವಾಗ
ಹೊಸಳ್ಳಿ ಗ್ರಾಮದ ಹತ್ತಿರ ಎನ್.ಎಚ್-50 ರಸ್ತೆಯಲ್ಲಿರುವ ಸಿದ್ದಾರ್ಥ ಪೆಟ್ರೋಲ ಬಂಕ ಎದುರುಗಡೆ
ಒಂದು ಲಾರಿಯನ್ನು ಯಾವೂದೆ ಸೂಚನೆ ರಸ್ತೆಯಲ್ಲಿ ನಿಲ್ಲಿಸಿದ್ದು ಸದರ ಲಾರಿ ನಿಲ್ಲಿಸಿದ್ದು ರವಿ ಇವನು
ಬೈಕನ್ನು ಲಾರಿ ಕಾಣಿಸದೆ ಲಾರಿಯ ಹಿಂದಿನ ಭಾಗಕ್ಕೆ ಡಿಕ್ಕಿ ಹೊಡೆಸಿದ್ದು ಇದರಿಂದ ರವಿಗೆ ಹಣೆಗೆ
ಮತ್ತು ಎಡ ಶೊಲ್ಡರ್ ಗೆ ಗಾಯ ಪೆಟ್ಟುಗಳಾಗಿರುತ್ತವೆ.
ಚಾಲಕನ ಹೆಸರು ಗೊತ್ತಾಗಿರುವದಿಲ್ಲ ಕಾರಣ ಸದರ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಲು ವಿನಂತಿ
ಎಂದು ವಗೈರೆ ದೂರು ಇದ್ದ ಮೇರೆಗೆ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment