Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police
As per SO 1017 New beat system is introduced in Koppal District. Click on Links to know your area in charge officers ASI/HC/PC

Saturday, April 22, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 62/2017 ಕಲಂ: 447, 341, 323, 504, 506 r/w 34  IPC .
ದಿನಾಂಕ:-22-04-2017 ರಂದು ಬೆಳಗಿನ ಜಾವ 02-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶ್ರೀ ಶೆಖರಪ್ಪ ತಂದಿ ಕನಕಪ್ಪ ಗಿಣವಾರ ವಯಾ-55 ವರ್ಷ ಜಾ.ಕುರಬರು ಉ-ಒಕ್ಕಲುತನ ಸಾ. ವಾರ್ಡ ನಂ 4 ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖತ ದೂರು ನೀಡಿದ್ದು ಸದ್ರಿ ದೂರಿನಲ್ಲಿ ಕಾರಟಗಿಯ ಸರ್ವೆ ನಂ 303/2ಅ ನೆದ್ದರಲ್ಲಿಯ 2ಎ13ಗುಂ ಪೈಕಿ 37 ಗುಂಟೆ ಜಮೀನು ನನ್ನ ಸ್ವಾಧಿನ ಮತ್ತು ಪಟ್ಟಾದಾರರು ಇರುತ್ತೇನೆ ಸದ್ರಿ ಜಮೀನಿನಲ್ಲಿ ದಿನಾಂಕ:-21-04-2017 ರಂದು ರಾತ್ರಿ 11-50 ಗಂಟೆಯ ಸುಮಾರಿಗೆ ಆರೋಪಿತರು ಪದ್ಮಪ್ಪ ತಂದಿ ಅಯ್ಯಪ್ಪ ರೌಡಕುಂದಿ ಸಾ. ಕಾರಟಗಿ 2) ಅಯ್ಯಪ್ಪ ತಂದಿ ಪದ್ಮಪ್ಪ ಸಾ.ಕಾರಟಗಿ 3) ಶರಣಮ್ಮ ಗಂಡ ಪದ್ಮಪ್ಪ ಸಾ. ಕಾರಟಗಿ ಹಾಗೂ ಇತರರು ಸೇರಿ ನಮ್ಮ ಬೂಮಿಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಅರತಕ್ಷತೆ ಕಾರ್ಯಾಕ್ರಮದ ಸಲುವಾಗಿ ಪೆಂಡಾಲು ಹಾಕಲು ತೆಗ್ಗು ತೊಡುತ್ತಿದ್ದಾಗ್ಗೆ ನಾನು ನನ್ನ ಮಗ ಹೋಗಿ ಇದು ನಮ್ಮ ಜಾಗೆ ಇರುತ್ತದೆ ಅಂತಾ ಅಂದಿದ್ದಕ್ಕೆ ಇವರು ನನಗೆ ನನ್ನ ಮಗ ಮಂಜುನಾಥನಿಗೆ ಎಲ್ಲರೂ ಸೇರಿ ಹಿಡಿದುಕೊಂಡು ಎಳೆದಾಡಿ ಹಲ್ಲೆ ಮಾಡಿ ಅಶ್ಲೀಲ ಪದಗಳಿಂದ ಬೈದಾಡಿ ನಮ್ಮ ಜಾಗ ನಾವು ಏನು ಬೇಕಾದರೂ ಮಾಡಿಕೊಳ್ಳುತ್ತೇವೆ ಇಲ್ಲಿಗೆ ಬಂದರೆ ವಾಪಾಸ ಜೀವಂತ ಕಳುಹಿಸುವುದಿಲ್ಲಾ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 41/2017 ಕಲಂ.279, 304(ಎ) ಐ.ಪಿ.ಸಿ.
ದಿನಾಂಕ 21-04-2017 ರಂದು  ಸಂಜೆ 6-30 ಗಂಎಗೆ ಫಿರ್ಯಾಧಿದಾರಾದ ಶ್ರೀ ಯಮನೂರಪ್ಪ  ತಂದೆ ಯಮನೂರಪ್ಪ ತಳವಾರ, ವಯಾ 18 ವರ್ಷ ಜಾತಿ ವಾಲ್ಮೀಕಿ ಉ : ಕುರಿ ಕಾಯುವುದು ಸಾ : ನಾಗಲಾಪುರ ಈತನು ಠಾಣೆಗೆ ಬಂದು ಗಣಕಿಕೃತ ಮಾಡಿದ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 21-04-2017 ರಂದು ಸಂಜೆ 4-00 ಗಂಟೆಯಿಂದ ನಾನು ನಮ್ಮ ಕುರಿಗಳನ್ನು ಕನಕಗಿರಿ-ಮುಸಲಾಪೂರ ರಸ್ತೆಯ ಪಕ್ಕದಲ್ಲಿರುವ ನಾಗಲಾಪುರ ಸೀಮಾದ ನಾಗಪ್ಪ ಗೊಲ್ಲರ್ ರವರ ಹೊಲದಲ್ಲಿ ಮೇಯಿಸುತ್ತಿದ್ದಾಗ ಸಂಜೆ 5-00 ಗಂಟೆಯ ಸುಮಾರಿಗೆ ಮುಸಲಾಪೂರ ಕಡೆಯಿಂದ ಹಿರೋ ಹೊಂಡಾ ಪ್ಯಾಶನ್ ಪ್ರೋ ಮೋಟಾರ ಸೈಕಲ್ ನಂ.ಕೆಎ-36/ಇಡಿ-3769 ರ ಚಾಲಕ ಸಿದ್ದನಗೌಡ ತಂದೆ ಭೀಮನಗೌಡ ಮಾಲಿಪಾಟೀಲ್ ಸಾ : ಹಿರೋ ಸಿಂದೋಗಿ ಈತನು ಕನಕಗಿರಿ ಕಡೆಗೆ ನಡೆಸಿಕೊಂಡು ರಸ್ತೆಯ ಮೇಲೆ ಹಾಕಿದ ಕಂಕ್ಕರ್ ಮೇಲೆ ತನ್ನ ಮೊ.ಸೈ.ನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿ ನಾಗಲಾಪುರ ಸೀಮಾದ ನಾಗಪ್ಪ ಗೊಲ್ಲರ್ ಹೊಲದ ಪಕ್ಕದಲ್ಲಿ ನಿಯಂತ್ರಣ ಮಾಡಲಾಗದೇ ಸ್ಕೀಡ್ ಮಾಡಿ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದಾಗ ಸಂಜೆ 5-30 ಗಂಟೆಯ ಸುಮಾರಿಗೆ ಆಸ್ಪತ್ರೆ ಹತ್ತಿರ ದಾರಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ಫೀರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ: 13/2017 ಕಲಂ: 279, 337, 338 ಐ.ಪಿ.ಸಿ.
ದಿನಾಂಕ 21-04-2017 ರಂದು 10 -00 AM ಗಂಟೆಗೆ ಫಿರ್ಯಾದಿದಾರನಾದ ಅಮರಪ್ಪ ತಂದೆ ಮಹಾದೇವಪ್ಪ ಸಾ: ಗಂಗಾವತಿ ಇತನು ತನ್ನ ಜೆಸ್ಕಾಂ ಕಛೇರಿ ಎದರುಗಡೆ  ಇರುವ ಕಾಕನ  ಕಿರಾಣಿ ಅಂಗಡಿಯಲ್ಲಿ ಪೆನು ಖರೀದಿಸಿ ವಾಪಸ್ ಕಛೇರಿಗೆ ಹೋಗುವ ಕುರಿತು ರಸ್ತೆ ದಾಟುವಾಗ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ ಕೆಎ35 ಎಕ್ಸ್ 0877 ನೇದ್ದನ್ನು  ರಾಂಗ್ ಸೈಡ್ ನಿಂದ ಅಂದರೆ HRG ಕ್ರಾಸ್ ಕಡೆಯಿಂದ ಅತಿ ಜೋರಾಗಿ ಮತ್ತು ಅಲಕ್ಷತನ ದಿಂದ ಚಾಲನೆ ಮಾಡಿಕೊಂಡು ಬಂದು  ನಡೆದುಕೊಂಡು ಹೋಗುತ್ತಿದ ಫಿರ್ಯಾದಿದಾರನಿಗೆ ಎದರುಗಡೆಯಿಂದ ಟಕ್ಕರ್ ಕೊಟ್ಟಿದ್ದು ಇರುತ್ತದೆ ಇದರಿಂದ ಫಿರ್ಯಾದಿದಾರನಿಗೆ  ತೆಲೆಯ ಹಿಂಭಾಗಕ್ಕೆ  ಭಾರಿ ಸ್ವರೂಪದ ರಕ್ತಗಾಯವಾಗಿದ್ದು ಹಾಗೂ ಎಡಗಣ್ಣಿನ ಕೆಳಗೆ  ತೆರಿಚಿದ  ಗಾಯವಾಗಿರುತ್ತದೆ  ಸದರಿ ಘಟಣೆಯು ಬೆಳಗ್ಗೆ 10-15 AM ಗಂಟೆ ಸುಮಾರಿಗೆ ಜರುಗಿರುತ್ತದೆ ಕಾರಣ ಆರೋಪಿ ಈರಣ್ಣ ತಂದೆ ಈರಣ್ಣ ಸಾ: ಕಾರಿಗನೂರ ಹೊಸಪೇಟೆ ಇತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008