Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, April 21, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 88/2017 ಕಲಂ: 279, 337, 338  ಐಪಿಸಿ..
ದಿನಾಂಕ :20-04-2017 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿ ಜಿಂಕಪ್ಪ ತಂದೆ ಸಣ್ಣಪ್ಪ ಮೇಟಿ ವಯಾ: 33 ವರ್ಷ ಜಾತಿ: ಉಪ್ಪಾರ ಉ: ಒಕ್ಕಲುತನ ಸಾ: ನಿಡಶೇಸಿ ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೆನೆಂದರೆ,  ಪಿರ್ಯಾಧಿಯ ತಮ್ಮನು ದಿನಾಂಕ:20-04-2017 ರಂದು ಸಾಯಂಕಾಲ ನನ್ನ ತಮ್ಮನಾದ ತಿರುಪತಿ ಈತನು ನಮ್ಮ ಮೋಟಾರ ಸೈಕಲ್ ನಂ; ಕೆ.-26-ಹೆಚ್-4982 ನೇದ್ದನ್ನು ತೆಗೆದುಕೊಂಡು ಕುಷ್ಟಗಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು. ನಂತರ ಇಂದು ಸಂಜೆ 07-30 ಗಂಟೆಯ ಸುಮಾರಿಗೆ ಗಜೇಂದ್ರಗಡಾ-ಕುಷ್ಟಗಿ ರಸ್ತೆಯ ಕಮಾನಿನ ಹತ್ತಿರ ನನ್ನ ತಮ್ಮನಾದ ತಿರುಪತಿ ವಯಾ 27 ವರ್ಷ ಮೋಟಾರ ಸೈಕಲ್ ನಂ; ಕೆ.-26-ಹೆಚ್-4982 ನೇದ್ದರ ಸವಾರ  ಮತ್ತು ಇನ್ನೊಬ್ಬ ಮೋಟಾರ ಸೈಕಲ್ ನಂ :ಕೆ.-05-ಹೆಚ್.ಬಿ-1920 ನೇದ್ದರ ಸವಾರನಾದ ದುರಗಪ್ಪ ತಂದೆ ದುರಗಪ್ಪ ನಂದಾಪೂರ ಸಾ: ಗಜೇಂದ್ರಗಡಾ ಇವರಿಬ್ಬರೂ ತಮ್ಮ ತಮ್ಮ ಮೋಟಾರ ಸೈಕಲಗಳನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಮುಖಾಮುಖಿ ಟಕ್ಕರಕೊಟ್ಟು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಇಬ್ಬರೂ ಸವಾರರಿಗೆ ಮತ್ತು ಮೋಟಾರ ಸೈಕಲ್ ನಂ :ಕೆ.-05-ಹೆಚ್.ಬಿ-1920 ನೇದ್ದರ ಹಿಂದೆ ಕುಳಿತ ಶರಣಪ್ಪ ಗುಡಿಮನಿ ಸಾ: ಗಜೇಂದ್ರಗಡಾ ಮೂರು ಜನರಿಗೂ ಸಾದಾ ಮತ್ತು ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಸದರಿ ಇಬ್ಬರೂ ಮೋಟಾರ ಸೈಕಲ್ ಸವಾರರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 61/2017 ಕಲಂ.279, 337, 338 ಐ.ಪಿ.ಸಿ.
ದಿನಾಂಕ 20-04-207 ರಂದು ಬೆಳಿಗ್ಗೆ 9-45 ಗಂಟೆಗೆ  ಫಿರ್ಯಾದಿದಾರರಾದ ಶ್ರೀ ಅಯ್ಯಪ್ಪ ತಂದೆ ನಾಗಪ್ಪ ಕಡೇಮನಿ ವಯ 24 ವರ್ಷ ಜಾತಿ ಮಾದಿಗ . ಲಾರಿ ನಂ ಕೆಎ-23/7003 ನೇದ್ದರ ಚಾಲಕ ಸಾ. ಜಾಲಿಹಾಳ ತಾ.ಸಿಂಧನೂರ  ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸಿದ್ದು ಸದರ್ ದೂರಿನ ಸಾರಾಂಶವೆನಂದರೆ, ದಿನಾಂಕ 20-04-2017 ರಂದು ಬೆಳಗಿನ 4-00 ಗಂಟೆ ಸುಮಾರಿಗೆ ಗಂಗಾವತಿ- ಸಿಂದನೂರ ಮುಖ್ಯ ರಸ್ತೆಯ ಮೇಲೆ  ಕಾರಟಗಿಯ ಶ್ರೀ ಶರಣುಬಸವೇಶ್ವರ ಶಾಲೆಯ ಹತ್ತಿರ ನಮೂದು ಮಾಡಿದ ಆರೋಪಿ ಅನ್ವರ ತಂದೆ ಎಸ್. ಮರ್ತುಜಾ ಈತನು ತಾನು ನಡೆಸುತ್ತಿದ್ದ ಲಾರಿ ನಂ ಎ.ಪಿ-21/ಟಿ.ಎ-2248 ನೇದ್ದನ್ನು ಗಂಗಾವತಿ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಎರ್ರಾಬಿರ್ರಿಯಾಗಿ ನಡೆಯಿಸಿಕೊಂಡು ಬಂದು  ರಸ್ತೆಯ ಪಕ್ಕದಲ್ಲಿ ನಿಂತಿದ್ದ  ಫಿರ್ಯಾದಿದಾರರ ಲಾರಿಗೆ ಠಕ್ಕರ್ ಮಾಡಿದ್ದು ಅಲ್ಲದೆ ವಾಹನವನನ್ನು ನಿಯಂತ್ರಿದೇ  ಹಾಗೆಯೇ ನಡೆಯಿಸಿಕೊಂಡು ಹೋಗಿ ಮುದೆ ನಿಂತಿದ್ದ ಲಾರಿ ನಂ ಟಿ.ಎನ್.31/ಎಲ್-8346 ನೇದ್ದಕ್ಕೆ ಠಕ್ಕರ್ ಮಾಡಿ ಇದರ ಮುಂದೆ ನಿಂತಿದ್ದ ಎ.ಪಿ-28/ಟಿಡಿ-7290 ನೇದ್ದಕ್ಕೆ ಸಹ ಠಕ್ಕರ್ ಮಾಡಿ ಅಪಘಾತಪಡಿಸಿದ್ದರಿಂದ ಸದರ್ ಅಪಘಾತದಲ್ಲಿ ಒಟ್ಟು 4 ಲಾರಿಗಳು ಜಖಂಗೊಂಡಿದ್ದು ಅಲ್ಲದೆ ಅಲ್ಲದೆ ಪುಟ್ ಪಾತ್ ದಲ್ಲಿ ಇದ್ದ ಒಂದು ಚಹದ ಬಂಡಿ ಡ್ಯಾಮೇಜ್ ಆಗಿದ್ದು ಲಾರಿ ನಂ ಎ.ಪಿ-21/ಟಿ.ಎ-2248 ನೇದ್ದರ ಚಾಲಕ ಆರೋಪಿ ಅನ್ವರ್ ತಂದೆ ಎಸ್. ಮರ್ತುಜಾ ಸಾ. ಕರಪೀನ ಆತ್ಮಕುರು ಜಿಲ್ಲಾ ಕರ್ನೂಲ್ (ಆಂದ್ರಪ್ರದೇಶ) ಮತ್ತು ಇದರ ಕ್ಲೀನರ್ ಡಿ. ಸೋಮಣ್ಣ ತಂದೆ ರಾಮಣ್ಣ ಆನಂದಪುರಂ ಇಬ್ಬರಿಗೂ ಸಾದಾ ಹಾಗೂ ತೀವ್ರ  ಸ್ವರೂಪದ ಗಾಯಗಳಾಗಿದ್ದು ಸದರಿ ಲಾರಿ ನಂ ಎ.ಪಿ-21/ಟಿ.ಎ-2248  ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ್ಕಕೆ ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 52/2017 ಕಲಂ: 392 ಐ.ಪಿ.ಸಿ.
ದಿನಾಂಕ:-19-04-2017 ರಂದು ಸಾಯಂಕಾಲ 7-30 ಗಂಟೆಗೆ ಶ್ರೀಮತಿ ಶ್ರೀಮತಿ. ಜಯಮ್ಮ ಗಂಡ ದಿ: ಗವಿಸಿದ್ದಪ್ಪ  ದ್ಯಾಪನಗೌಡರ ವಯಾ 60 ವರ್ಷ ಜಾ: ಲಿಂಗಾಯತ ಉ: ಮನೆಗೆಲಸ ಸಾ: ಬಿ.ಟಿ ಪಾಟೀಲ್ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶಏನೆಂದರೆತನ್ನ ದಿನಾಂಕ: 19-04-2017 ರಂದು ಸಂಜೆ 05-00 ಗಂಟೆಗೆ ನಾನು ಟ್ರ್ಯಾಕ್ಸ್ನಲ್ಲಿ ವಾಪಸ್ ಕೊಪ್ಪಳಕ್ಕೆ ಬಂದು ಕವಲೂರು ಓಣಿಯಲ್ಲಿ ಇಳಿದು ನನ್ನ ಮಗನಾದ ರವಿಕುಮಾರ ಈತನಿಗೆ ಫೋನ ಮಾಡಿ ಕವಲೂರು ಓಣಿಗೆ ಬರುವಂತೆ ಹೇಳಿದ್ದು, ನನ್ನ ಮಗ ತನ್ನ ಮೊಟಾರ ಸೈಕಲ್ ಮೇಲೆ ಕವಲೂರು ಓಣಿಗೆ ಬಂದು ನನಗೆ ಕರೆದುಕೊಂಡು ಬಿ.ಟಿ ಪಾಟೀಲ್ ನಗರದ ಒಂದನೇ ಕ್ರಾಸ್ ಬಳಿ ನನ್ನನ್ನು ಬಿಟ್ಟು ಯಾವುದೋ ಕೆಲಸಕ್ಕೆ ಹೋಗಿದ್ದು, ನಂತರ ನಾನು ಸ್ವಲ್ಪ ದೂರದಲ್ಲೇ ಇದ್ದ ನಮ್ಮ ಮನೆಗೆ ನಡೆದುಕೊಂಡು ಹೋಗೋಣ ಅಂತಾ ಎರಡನೇ ಕ್ರಾಸ್ದಲ್ಲಿ ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಯಾವುದೋ ಒಂದು ದ್ವಿ-ಚಕ್ರ ವಾಹನ ನನ್ನ ಹತ್ತಿರ ಬರುವ ಶಬ್ದ ಕೇಳಿ ನಾನು ಹೊರಳಿ ನೋಡುವಷ್ಟರಲ್ಲಿ ದ್ವಿ-ಚಕ್ರ ವಾಹನ ಓಡಿಸುತ್ತಿದ್ದವನು ಒಮ್ಮೆಲೇ ನನ್ನ ಕುತ್ತಿಗೆಗೆ ಕೈ ಹಾಕಿ ನನ್ನ ಕೊರಳಲ್ಲಿದ್ದ 02 ಬಂಗಾರದ ಚಪ್ಲರ್ ಸರಗಳನ್ನು ಹಿಡಿದುಕೊಂಡು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಆಗ ನಾನು ಗಾಭರಿಯಾಗಿ ಜೋರಾಗಿ ಅವನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆ ವ್ಯಕ್ತಿಯು ದ್ವಿ-ಚಕ್ರ ವಾಹನದ ಮೇಲಿಂದ ನನ್ನ ಕೊರಳಲ್ಲಿದ್ದ ಬಂಗಾರದ 02 ಚಪ್ಲರ್ ಸರಗಳನ್ನು ಕಿತ್ತುಕೊಂಡು ಮೋಟಾರ ಸೈಕಲ್ ಮೇಲೆ ಜೋರಾಗಿ ಹೊರಟು ಕುಷ್ಟಗಿ ರಸ್ತೆ ಕಡೆಗೆ ಹೊರಟನು, ಅಷ್ಟರಲ್ಲಿ ನಾನು ಕಳ್ಳ ಕಳ್ಳ ಅಂತಾ ಜೋರಾಗಿ ಕೂಗಿದಾಗ ಸುತ್ತಮುತ್ತಲಿನ ಮನೆಯವರು ಬಂದಿದ್ದು, ಆಗ ಅವರು ವಿಚಾರಿಸಿದಾಗ ಈ ವಿಷಯವನ್ನು ತಿಳಿಸಿದೇನು. ಆಗ ಸಮಯ ಸಂಜೆ 6-45 ನಿಮಿಷವಾಗಿತ್ತು. ಕೂಡಲೇ ನಾನು ಈ ವಿಷಯವನ್ನು ನನ್ನ ಮಗ ರವಿಕುಮಾರನಿಗೆ ತಿಳಿಸಿದೇನು. ಮೋಟಾರ ಸೈಕಲ್ ಓಡಿಸುತ್ತಿದ್ದ ವ್ಯಕ್ತಿಯು ಸ್ವಲ್ಪ ದಪ್ಪಗೆ ಇದ್ದನು, ಆದರೆ ಮೋಟಾರ ಸೈಕಲ್ ಬಣ್ಣ ಗೊತ್ತಿರುವುದಿಲ್ಲ. ಹಾಗೂ ಮೋಟಾರ ಸೈಕಲ್ನ್ನು ಚಲಾಯಿಸುತ್ತಿದ್ದವನು ಬಿಳಿ ಕಲರ್ ಶರ್ಟ ಮತ್ತು ಕಪ್ಪು ಪ್ಯಾಂಟ ಹಾಕಿದ್ದು ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿದ್ದನು. ದಿನಾಂಕ: 19-04-2017 ರಂದು ಸಂಜೆ 6-45 ನಿಮಿಷಕ್ಕೆ ಯಾರೋ ಅಪರಿಚಿತ ದುಷ್ಕರ್ಮಿಯು ಫಿರ್ಯಾದಿ ಕೊರಳಲ್ಲಿದ್ದ ಬಂಗಾರದ 02 ಚಪ್ಲರ್ ಸರಗಳು ಅಂದಾಜು ತೂಕ 04 ತೊಲೆ ಒಟ್ಟು ಅಂ.ಕಿ.ರೂ: 1,08,000=00 ಬೆಲೆ ಬಾಳುವುದನ್ನು ಬಲವಂತವಾಗಿ ಕಿತ್ತುಕೊಂಡು ಹೋದವರನ್ನು ಪತ್ತೇ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 53/2017 ಕಲಂ: 380 ಐ.ಪಿ.ಸಿ.
ದಿನಾಂಕ: 20-04-2017 ರಂದು ಮದ್ಯಾಹ್ನ 01-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮೊತಿಲಾಲ್ ತಂದೆ ಕೃಷ್ಣಾ ಲಮಾಣಿ ವಯಾ: 34 ವರ್ಷ ಜಾ: ಲಂಬಾಣಿ ಉ: ಸಹಾಯಕ ನಿದರ್ೆಶಕರು [ಪ್ರಭಾರ] ಪ್ರವಾಸೋದ್ಯಮ ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರಪಡಿಸಿದ್ದು, ಸದರ ಫಿರ್ಯಾದಿಯ ಸಾರಾಂಶ ಏನೆಂದರೆ, ತಮ್ಮ ಕಚೇರಿಯಲ್ಲಿ 1] ವಿಠ್ಠಪ್ಪ ಆರ್. ಗೌಡ ರವರು ಏಕೈಕ ಖಾಯಂ ದ್ವಿತೀಯ ದಜರ್ೇ ಸಹಾಯಕರು. ಸಾ; ಹಂಪಿ 2] ನಿವೇದಿತ ಜಿ ತೆಗ್ಗಿನಮಠ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು. ಸಾ; ಇಲಕಲ್ 3] ಮಂಜುನಾಥ ನಾಯಕ ಕಂಪ್ಯೂಟರ್ ಆಫ್ರೇಟರ್ [ಬಾಹ್ಯ ಮೂಲಕ]  ಸಾ; ಹಿರೇಸೂಳಿಕೇರಿ ತಾಂಡಾ 4] ಫಕೀರಪ್ಪ ಹೆಬ್ಬಾಳ ಡಿ ದಜರ್ೇ ನೌಕರ [ಬಾಹ್ಯ ಮೂಲಕ] ಸಾ: ಭಾಗ್ಯನಗರ ಕೊಪ್ಪಳ 5] ರವಿ ಗುತ್ತುರ ಸಾ; ಇರಕಲಾಗಡಾ ಹೀಗೆ ಓಟ್ಟು 05 ಜನರು ಕರ್ತವ್ಯ ಮಾಡಿಕೊಂಡಿದ್ದು ಇದರಲ್ಲಿ ಮಂಜುನಾಥ ನಾಯಕ ಕಂಪ್ಯೂಟರ್ ಆಫ್ರೇಟರ್ [ಬಾಹ್ಯ ಮೂಲಕ] ಸಾ; ಹಿರೇಸೂಳಿಕೇರಿ ತಾಂಡಾ ಇತನನ್ನು 15 ದಿನಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿದ್ದು, ನಿವೇದಿತ ಜಿ ತೆಗ್ಗಿನಮಠ ಇವರು 2016 ಎಪ್ರೀಲ್ ತಿಂಗಳಿನಿಂದ ಹೆರಿಗೆ ರಜೆಯಲ್ಲಿರುತ್ತಾರೆ. ಮತ್ತು ಫಕೀರಪ್ಪ ಡಿ ದಜರ್ೇ ನೌಕರ [ಬಾಹ್ಯ ಮೂಲಕ] ಸಾ: ಭಾಗ್ಯನಗರ ಇವರಿಗೆ ಅಪಘಾತವಾಗಿದ್ದು ಜನವರಿ 26, 2016 ರಿಂದ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ ಆದ್ದರಿಂದ ಇವರನ್ನು ಕೆಲಸದಿಂದ ತೆಗೆದುಹಾಕಲಾಗಿರುತ್ತದೆ. ಪ್ರಸ್ತುತ ನನ್ನ ಕಚೇರಿಯಲ್ಲಿ 1] ವಿಠ್ಠಪ್ಪ ಆರ್. ಗೌಡ ರವರು ಏಕೈಕ ಖಾಯಂ ದ್ವಿತೀಯ ದಜರ್ೇ ಸಹಾಯಕರು. ಸಾ; ಹಂಪಿ ರವರು ಮತ್ತು 2] ರವಿ ಗುತ್ತುರ ಸಾ; ಇರಕಲಾಗಡಾ 2017 ಮಾರ್ಚ ತಿಂಗಳಿನಿಂದ ಕರ್ತವ್ಯ ಮಾಡಿಕೊಂಡಿರುತ್ತಾರೆ ಮತ್ತು ಕಚೇರಿಗೆ ಸಂಬಂಧಿಸಿದ ಖಡತಗಳನ್ನು ವಿಠ್ಠಪ್ಪ ಇವರಿಗೆ ನೋಡಿಕೊಳ್ಳುವಂತೆ ಮೌಖಿಕವಾಗಿ ಆದೇಶಿದ್ದು, ಆದೇಶದಂತೆ ಇವರು ನಿರ್ವಹಿಸಿಕೊಂಡು ಹೊಗುತ್ತಿರುತ್ತಾರೆ. ಪಿರ್ಯಾದಿದಾರರು ದಿನಾಂಕ:  23-03-2017 ರಂದು ಜಿಲ್ಲಾಧಿಕಾರಿಗಳ ಕಛೇರಿಯ ಕಟ್ಟಡದ ಎರಡನೆ ಮಹಡಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿದರ್ೇಶಕರ ಕಚೇರಿಯಲ್ಲಿ ಕಚೇರಿಗೆ ಸಂಬಂದಿಸಿದ ಎಲ್ಲ ಖಡತಗಳನ್ನು ಪರಿಶೀಲಿಸುತ್ತಿರುವಾಗ ಅದರಲ್ಲಿ 1] ಅನುಮೋದಿತ ಮೇಘಾ ಹೋಟೆಲ್ ಮೂಲ ಖಡತ 2] ಅನುಮೋದಿತ ಕೆಎಮ್ಎಸ್ ಹೋಟೆಲ್ ಮೂಲ ಖಡತ 3] ವಿಠ್ಠಪ್ಪ ಆರ್ ಗೌಡ ದ್ವಿತೀಯ ದಜರ್ೆ ಸಹಾಯಕರು ಇವರ ಮೇಲೆ ಸೂಕ್ತ ಕ್ರಮ ಜರುಗಿಸುವ ಕುರಿತು ಮಾನ್ಯ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಬರೆದ ಮೂಲ ಪತ್ರ. ಇವುಗಳು ಕಂಡುಬರಲಿಲ್ಲ. ನಂತರ ಕಚೇರಿಯಲ್ಲಿದ್ದ ಸಿಬ್ಬಂದಿಗಳಾದ ವಿಠ್ಠಪ್ಪ, ಮಂಜುನಾಥ, ನಿವೇದಿತ ಹಾಗೂ ರವಿ ಇವರುಗಳನ್ನು ವಿಚಾರಿಸಿದಾಗ ಯಾವುದೇ ಮಾಹಿತಿಯು ತಿಳಿದು ಬರಲಿಲ್ಲ. ಆದ್ದರಿಂದ ತಮ್ಮ ಕಚೇರಿಯಲ್ಲಿ ಪೇಬ್ರುವರಿ 2017-ಮಾರ್ಚ 2017 ರ ಅವಧಿಯಲ್ಲಿ ತಮ್ಮ ಕಚೇರಿಯಲ್ಲಿದ್ದ ಮೇಲ್ಕಂಡ ಮೂಲ ಖಡತಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳ್ಳತನ ಮಾಡಿದ ಯಾರೋ ಕಳ್ಳರನ್ನು ಮತ್ತು ಮೂಲ ಖಡತಗಳನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ: 53/2017 ಕಲಂ: 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 32/2017 ಕಲಂ: 279, 337, 338 ಐ.ಪಿ.ಸಿ.

ದಿನಾಂಕ: 20-04-2017 ರಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಫಿರ್ಯಾದಿ ಹಾಗೂ ಬಸವರಾಜ, ಕಳಕಪ್ಪ, ಶೇಖಪ್ಪ ಮತ್ತು ಮುತ್ತಪ್ಪ ರವರು ಟ್ರ್ಯಾಕ್ಸ ನಂ: ಕೆ.-35 ಎನ್-2200 ನೇದ್ದರಲ್ಲಿ ಹುಲಗೇರಿ ಮುಂದೆ ಪೆಟ್ರೋಲ್ ಬಂಕ ಹತ್ತಿರ ಪುರ್ತಗೇರಿ ಕೆಡೆಗೆ ರೋಡಿನಲ್ಲಿ ಟ್ರ್ಯಾಕ್ಸ ಚಾಲಕನು ಟ್ರ್ಯಾಕ್ಸನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೊರಟಾಗ ಟ್ರ್ಯಾಕ್ಸಿನ ಮುಂದಿನ ಗಾಲಿ ಬಸ್ಟಾಗಿ ಟ್ರ್ಯಕ್ಸ ಬ್ರೀಜ್ ಕೆಳಗೆ ಬಿದ್ದು ಅಪಘಾತವಾದಾಗ ಟ್ರ್ಯಾಕ್ಸಿನಲ್ಲಿ ಕುಳಿತ ಫಿರ್ಯಾದಿ ರಮೇಶನಿಗೆ ಎಡಗಾಲ ಮೋಣಕಾಲ ಹತ್ತಿರ ಬಾರಿ ರಕ್ತಗಾಯವಾಗಿ ಮುರಿದು ಬಾವು ಬಂದಿದ್ದು ಹಾಗೂ ಕಳಕಪ್ಪನಿಗೆ ತಲೆ, ಎರಡು ಮೋಣಕಾಲುಗಳ ಕೆಳಗೆ, ಬಲಗೈ ಹೆಬ್ಬೆರಳು ಹತ್ತಿರ ರಕ್ತಗಾಯ  ಹಾಗೂ ಎಡ ಬುಜದ ಹತ್ತಿರ ಒಳಪೆಟ್ಟಾಗಿದ್ದು  ಬಸವರಾಜನಿಗೆ ಸೊಂಟದ ಮೇಲೆ ಬೆನ್ನಿನ ಹತ್ತಿರ ಒಳಪೆಟ್ಟು ಶೇಖಪ್ಪನನ ಬೆನ್ನಿಗೆ ಒಳಪೆಟ್ಟು ಆಗಿರುತ್ತದೆ. ಮುತ್ತಪ್ಪನಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ. ನಂತರ ಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಇಲಕಲ ಕಠಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಮಾಡಿಸಿಕೊಂಡಿದ್ದು ಇರುತ್ತದೆ. ಕಾರಣ ಅಪಘಾತಪಡಿಸಿದ ಟ್ರ್ಯಾಕ್ಸ ನಂ: ಕೆ.-35 ಎನ್-2200 ನೇದ್ದರ ಚಾಲಕ ಪ್ರಭು ತಂದೆ ಅಂದಪ್ಪ ಮ್ಯಾಗೇರಿ ಸಾ: ರಾಂಪೂರ ಈತನ ಮೇಲೆ ಕಾನೂನುಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008