Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, April 24, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 90/2017 ಕಲಂ: 279, 337, 338  ಐಪಿಸಿ
ದಿನಾಂಕ :23-04-2017 ರಂದು ಮುಂಜಾನೆ 10-15 ಗಂಟೆಗೆ ಫಿರ್ಯಾದಿದಾರ ಮಂಜುನಾಥ ತಂದೆ ಹುಲ್ಲಪ್ಪ ಗುರಿಕಾರ ವಯಾ: 23 ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ಕಂದಕೂರ ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೆನೆಂದರೆಪಿರ್ಯಾಧಿಯ ತಂದೆ ನಿನ್ನೆ ದಿನಾಂಕ:22-04-2017 ರಂದು ಸಂಜೆ 07-30 ಗಂಟೆಯ ಸುಮಾರಿಗೆ ನನ್ನ ತಂದೆಯಾದ ಹುಲ್ಲಪ್ಪ ಇವರು ನನಗೆ ತಿಳಿಸಿದ್ದೇನೆಂದರೆ, ನಮ್ಮೂರ ಶಿವಪ್ಪ ಕುರ್ನಾಳ ರವರಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ನನ್ನ ಸಂಗಡ ಬಾ ಅಂತಾ ಕರೆದಿದ್ದು ನಾನು ಆತನ ಸಂಗಡ ಕುಷ್ಟಗಿ ಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಶಿವಪ್ಪ ರವರ ಮೋಟಾರ ಸೈಕಲ್ ನಂ: ಕೆ.-37-ಇಎ-9295 ನೇದ್ದರ ಮೋಟಾರ ಸೈಕಲ್ ಹಿಂದುಗಡೆ ಕುಳಿತು ಕುಷ್ಟಗಿಗೆ ಹೋಗುತ್ತೇವೆ ಅಂತಾ ಹೇಳಿ ಹೋದರು. ನಂತರ ನನಗೆ ನಿನ್ನೆ ರಾತ್ರಿ 08-00 ಗಂಟೆಯ ಸುಮಾರಿಗೆ ಕುಷ್ಟಗಿ-ಕಂದಕೂರ ರಸ್ತೆಯ ಮೇಲೆ ಎಂ..ಪಿ. ಆಫೀಸ್ ಹತ್ತಿರ  ನನ್ನ ತಂದೆಗೆ  ಅಪಘಾತವಾಗಿದೆ ಅಂತಾ ಸುದ್ದಿ ಕೇಳಿ ನಾನು ನಮ್ಮೂರ ರವಿಕುಮಾರ ತಂದೆ ಚಂದಪ್ಪ ಕುರ್ನಾಳ ಇಬ್ಬರೂ ಕೂಡಿ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಿದ್ದು ನನ್ನ ತಂದೆ ಹುಲ್ಲಪ್ಪನಿಗೆ ಬಲಗಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಂತೆ ಕಂಡು ಬಂದಿದ್ದು, ಬಲಪಕ್ಕಡಿಗೆ ಒಳಪೆಟ್ಟಾಗಿರುತ್ತದೆ. ನಂತರ ನಮ್ಮೂರ ಶಿವಪ್ಪ ತಂದೆ ನಿಂಗಪ್ಪ ಕುರ್ನಾಳ ರವರನ್ನು ನೋಡಲಾಗಿ ಈತನಿಗೆ ಬಲಗಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಂತೆ ಕಂಡು ಬಂದಿದ್ದು ಇರುತ್ತದೆನಂತರ ಟ್ರ್ಯಾಕ್ಟರನ್ನು ನೋಡಲಾಗಿ  ಟ್ರ್ಯಾಕ್ಟರಗೆ ನಂಬರ ಇರುವುದಿಲ್ಲಾ ಆದರೆ ಟ್ರ್ಯಾಕ್ಟರಗೆ 3030 NEW HOLLAND ಅಂತಾ ಇಂಗ್ಲೀಷನಲ್ಲಿದ್ದು ಇದರ ಇಂಜನ ನಂ:C37795, ಚೆಸ್ಸಿ ನಂ.4102634 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಚಾಲಕನ ಹೆಸರು ವಿಚಾರಿಸಲಾಗಿ ಬಸವರಾಜ ತಂದೆ ಯಲ್ಲಪ್ಪ ವಡ್ಡರ ಸಾ:ಕಂದಗಲ್ ಹಾ::ಕುಷ್ಟಗಿ ಅಂತಾ ಹೇಳಿದ್ದು ಅಂತಾ ಮುಂತಾಗಿದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 82/2017 ಕಲಂ. 295 ಐ.ಪಿ.ಸಿ.
ದಿನಾಂಕ 23-04-2017 ರಂದು 01-30 ಪಿ.ಎಂ.ಕ್ಕೆ  ಪಿರ್ಯಾದು ಮೈಲಾರಪ್ಪ ತಂದೆ ಮರಿಯಪ್ಪ ಹರಿಜನ ವಯ: 46 ವರ್ಷ ಜಾ: ಹರಿಜನ ಸಾ: ಇಂದರಿಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಇಂದರಗಿ ಗ್ರಾಮದಲ್ಲಿ ದಿನಾಂಕ 14-04-2017 ರಂದು ಅಂಬೇಡ್ಕರ ಜಯಂತಿ ಪ್ರಯುಕ್ತ ಅಂಬೇಡ್ಕರ್ ಇವರ ಭಾವಚಿತ್ರದ ಬ್ಯಾನರ್ ನ್ನು ಸರ್ಕಲ್ ದಲ್ಲಿ ಹಾಕಿದ್ದು ಸದರಿ ಬಾವಚಿತ್ರದ ಬ್ಯಾನರನ್ನು ದಿನಾಂಕ 22-04-17 ರಾತ್ರಿಯಿಂದ ದಿನಾಂಕ 23-04-17 ರಂದು ಬೆಳಗಿನ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು  ಬ್ಲೇಡಿನಿಂದ ಹರಿದು ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 34/2017 ಕಲಂ ಮನುಷ್ಯ ಕಾಣೆ
ಫಿರ್ಯಾದಿ ಹುಲಿಗೆವ್ವ ಗಂಡ ದುಂಡಪ್ಪ ಮಾದರ ವಯಾ: 38 ವರ್ಷ, ಜಾತಿ: ಮಾದರ, : ಕೂಲಿಕೆಲಸ, ಸಾ: ಬಳಗೋಡ, ತಾ: ರೋಣ, ಜಿ: ಗದಗ ಹಾ/: ಕೊಡ್ತಗೇರಿ ಇವರ ಗಂಡ ದುಂಡಪ್ಪ ತಂದೆ ದುರಗಪ್ಪ ಮಾದರ ವಯಾ: 45 ವರ್ಷ, ಜಾತಿ: ಮಾದರ, : ಕೂಲಿಕೆಲಸ, ಇತನು ಈಗ್ಗೆ ಸುಮಾರು 15 ವರ್ಷಗಳಿಂದ ಮಾನಸಿಕ ಅಸ್ವಸ್ತನಾಗಿದ್ದು, ದಿನಾಂಕ: 29-11-2016 ರಂದು ತಮ್ಮ ತವರು ಮನೆಯಾದ ಕೊಡ್ತಗೇರಿ ಗ್ರಾಮದಲ್ಲಿ ಹೆಚ್ಚಾಗಿ ಒದರಾಡುತ್ತಾ ಸಾಯಾಂಕಾಲ 6-30 ಗಂಟೆಗೆ ಮನೆಯಲ್ಲಿ ಚದಾರ ಹೆಗಲಿಗೆ ಹಾಕಿಕೊಂಡು ಹೋದವನು. ತಮ್ಮೂರಾದ ಬಳಗೋಡಕ್ಕೆ ಹೋಗದೆ ಎಲ್ಲಿಯೋ ಕಾಣೆಯಾಗಿದ್ದು, ಫಿರ್ಯಾದಿದಾರರು ಇಲ್ಲಿಯವರೆಗೂ ತಮ್ಮ ಸಂಭಂದಿಕರಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದರೂ ಸಿಗದೇ ಇರುವದರಿಂದ ತಡವಾಗಿ ಠಾಣೆಗೆ ಬಂದು ತಮ್ಮ ಗಂಡನನ್ನು ಹುಡುಕಿ ಕೊಡಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅರ್ಜಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 35/2017 ಕಲಂ: 379 ಐ.ಪಿ.ಸಿ.
ದಿನಾಂಕ: 23-04-2017 ರಂದು ಸಾಯಾಂಕಾಲ 18-00 ಗಂಟೆಗೆ ತುಗ್ಗಲದೋಣಿ ಕಡೆಯಿಂದ ಉಸುಕು ತುಂಬಿಕೊಂಡು ಮಾರಾಟ ಮಾಡಲಿಕ್ಕೆ ಹನಮನಾಳ ಕಡೆಗೆ ಹೊರಟಿದ್ದು, ಪಿ.ಎಸ್.ಐ. ಹನಮಸಾಗರ ರವರು ಹಾಗೂ ಸಿಬ್ಬಂದಿಯಾದ ಪಿ.ಸಿ-168, ರವರೊಂದಿಗೆ ಹನಮನಾಳ ದಾಟಿ ಶ್ಯಾಡಲಗೇರಿ ಕ್ರಾಸ್ ಹತ್ತಿರ ಸಾಯಾಂಕಾಲ 17-30 ಗಂಟೆಗೆ ಹೊರಟಾಗ ಖಚಿತ ಬಾತ್ಮಿ ಮೇರೆಗೆ ಸಾಯಾಂಕಾಲ 18-00 ಗಂಟೆಗೆ ಮರಳು ತುಂಬಿದ ಟ್ರ್ಯಾಕ್ಟರನ್ನು ನಿಲ್ಲಿಸಿದ್ದು, ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ನಿಲ್ಲಿಸಿ ಓಡಿ ಹೋಗಿದ್ದು, ಆಗ ಅಲ್ಲಿಗೆ ಬಂದ ಗೂಳಪ್ಪ ವನ್ನಳ್ಳಿ ಸಾ: ತುಗ್ಗಲದೋಣಿ ಈತನನ್ನು ವಿಚಾರಿಸಲು ಟ್ರ್ಯಾಕ್ಟರ ಚಾಲಕನ ಹೆಸರು ಯಮನೂರಪ್ಪ ತಂದೆ ಶರಣಪ್ಪ ಕುಣಮಿಂಚಿ ಸಾ: ತುಗ್ಗಲದೋಣಿ, ಟ್ರ್ಯಾಕ್ಟರ್ ಮಾಲೀಕ ಶರಣಪ್ಪ ತಂದೆ ಮಲ್ಲಪ್ಪ ಕುಣಮಿಂಚಿ ಸಾ: ತುಗ್ಗಲದೋಣಿ ಅಂತಾ ತಿಳಿಸಿದ್ದು, ಆಗ ಅಲ್ಲಿಗೆ ಬಂದ ಇಬ್ಬರು ಪಂಚರ ಸಮಕ್ಷಮ ಪರಿಶೀಲಿಸಲಾಗಿ ಟ್ರ್ಯಾಕ್ಟರ್ ನಂ:ಕೆ.ಎ-37/ಟಿಎ-2068 ಟ್ರ್ಯಾಲಿ ನಂ: ಕೆ.ಎ-37/ಟಿ-2069 ಅಂ:ಕಿ: 2 ಲಕ್ಷ ಆಗುತಿದ್ದು, ಸದರಿ ಟ್ರ್ಯಾಕ್ಟರ್ ಚಾಲಕ ಯಮನೂರಪ್ಪ ಮತ್ತು ಮಾಲೀಕ ಶರಣಪ್ಪ ಹೇಳಿದಂತೆ ಎಲ್ಲಿಯೋ ಉಸುಕನ್ನು ಅಕ್ರಮವಾಗಿ ಕಳ್ಳತನದಿಂದ ಉಸುಕು ಸಾಗಾಣಿಕೆ ಮಾಡಿದ್ದು, ಸದರ ಉಸುಕಿನ ಅಂ:ಕಿ: 1600-00 ರೂ/- ಆಗಬಹುದು. ಸದರಿ ಆಪಾದಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008