Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, April 1, 2017

1]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ. ನಂ: 27/2017 ಕಲಂ: 78(3) Karnataka Police Act.
ದಿನಾಂಕ: 31-03-2017  ರಂದು ರಾತ್ರಿ 8-45 ಗಂಟೆಯ ಸುಮಾರಿಗೆ ಆರೋಪಿ ನಂ 01 ಈತನು ಕುದ್ರಿಕೋಟಗಿ  ಗ್ರಾಮದಲ್ಲಿ ಬರುವ ಬಸ್ಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಒಂದು ರೂಪಾಯಿಗೆ 80 ರೂಪಾಯಿಗಳು ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿ ನಂ 01 ನೇದ್ದವನ ಹತ್ತಿರ ಮಟಕಾ ಜೂಜಾಟದ ನಗದು ಹಣ 740/-ರೂ. ಹಾಗೂ  ನಂಬರ ಬರೆಯಿಸಲು ಬಂದಿದ್ದ ಆರೋಪಿ ನಂ:2 ಮತ್ತು 3 ನೇದ್ದವರ ಹತ್ತಿರ 70 ರೂಪಾಯಿ ಮತ್ತು 50 ರೂಪಾಯಿ ಹೀಗೆ ಒಟ್ಟು ಜೂಜಾಟದ ನಗದು ಹಣ 860 ರೂ ಒಂದು ಓ.ಸಿ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್  ಅ.ಕಿ ಇಲ್ಲ. ನೇದ್ದುವುಗಳೊಂದಿಗೆ ಸಿಕ್ಕಿಬಿದ್ದಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 73/2017 ಕಲಂ: 279, 337, 338(ಎ) ಐ.ಪಿ.ಸಿ:.
ದಿನಾಂಕ : 31-03-2017 ರಂದು ನಾನು ಮತ್ತು ನಮ್ಮ ಸಂಭಂದಿಕ ಬಸವರಾಜ ತಂದೆ ಹೊನ್ನೂರಸ್ವಾಮಿ ಹಾಗೂ ರಾಮಾಂಜನೇಯ ತಂದಿ ಈಶ್ವರಪ್ಪ ಜೂಟುರ್ ಕೂಡಿಕೊಂಡು ರಾಮಾಂಜನೇಯ ಈತನ ಮೊಟಾರ್ ಸೈಕಲ್ ನಂಬರ್ – ಕೆ.ಎ- 37 / ಕ್ಯೂ- 173 ನೇದ್ದರ ಮೇಲೆ  ನಮ್ಮೂರಿನಿಂದ ಶಿರಗೇರಿಗೆ ಗೊಬ್ಬರ ಏರಲೆಂದು  ಹೊಗಿದ್ದೆವು. ನಾವು ಗೊಬ್ಬರ ಕೆಲಸ ಮುಗಿಸಿಕೊಂಡು  ನಮ್ಮೂರಿಗೆ ಹೊಗಲೆಂದು  ಆನೆಗುಂದಿ ಮುಖಾಂತರ  ಅಂಜನಾದ್ರಿ ಬೇಟ್ಟ ದಾಟಿ ಸ್ವಲ್ಪ ಮುಂದೆ ತಿರುವು ರಸ್ತೆಯಲ್ಲಿ ನಮ್ಮ ಮೊಟಾರ್ ಸೈಕಲ್  ಚಾಲಕ ರಾಮಾಂಜನೇಯ ಇತನು ನಮಗೆ ಕೂಡ್ರಿಸಿಕೊಂಡು ನಿಧಾನವಾಗಿ ತಿರುವು ರಸ್ತೆಯಲ್ಲಿ ಹೊರಟಿದ್ದಾಗ್ಗೆ ಬಸಾಪೂರ ಕಡೆಯಿಂದ ಒಬ್ಬ ಲಾರಿಯ ಚಾಲಕ  ತಮ್ಮ ಲಾರಿಯನ್ನು ಅತೀ ವೇಗ  ಹಾಗೂ ಅಜಾಗೃಕತೆಯಿಂದ ತಿರುವು ರಸ್ತೆ ಇರುವದನ್ನು ಸರಿಯಾಗಿ ಗಮನಿಸದೆ ಓಡಿಸಿಕೊಂಡು ಬಂದು ನಮ್ಮ  ಮೊಟಾರ್ ಸೈಕಲ್ಲಿಗೆ  ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ನಾವು ಮೊಟಾರ್ ಸೈಕಲ್ ಸಮೇತ  ಕೆಳಗೆ ಬಿದ್ದೇವು. ಇದರಿಂದ ನನಗೆ ಬಲಗೈ ರಟ್ಟೆಗೆ ಹಾಗೂ ಮೊಣಕೈಗೆ ಮತ್ತು ಮೊಣಕಾಲಿಗೆ ಗಂಭೀರಗಾಯ ಮತ್ತು ಪೆಟ್ಟುಗಳಾಗಿರುತ್ತವೆ.  ರಾಮಾಂಜನೇಯ ಈತನಿಗೆ ತಲಗೆ  ಮುಖಕ್ಕೆ,  ಕೈ ಕಾಲುಗಳಿಗೆ ಗಂಭೀರಗಾಯ ಹಾಗೂ ಪೆಟ್ಟುಗಳಾಗಿದ್ದು,  ಬಸವರಾಜನಿಗೆ ತಲೆಗೆ ಬಲಗೈ ಹಾಗೂ ಮಲ ಬೊಣಕೈ ಹಾಗೂ ಇತರ ಕಡೆಗೆ  ಭಾರೀ ಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿರುವದಿಲ್ಲ. ಅಪಘಾತಪಡಿಸಿದ ಲಾರಿ ನಂಬರ್ ನೋಡಲು ಕೆ.ಎ- 01/ ಎ ಎಫ್- 3810 ಅಂತಾ ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ ಗದ್ದೆಪ್ಪ ತಂದಿ ಬಸಪ್ಪ ಚಿಕ್ಕಪ್ಪೂರ ತಾ- ಲಿಂಗಸೂರ ಅಂತಾ ಗೊತ್ತಾಯಿತು. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.  
3]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ. ನಂ: 57/2017 ಕಲಂ: 379 ಐ.ಪಿ.ಸಿ:.

ದಿನಾಂಕ 31-03-2017 ರಂದು ಸಾಯಂಕಾಲ 6-30 ಗಂಟೆಗೆ ಮಾನ್ಯ ಜೆ.ಎಂ.ಎಫ್.ಸಿ. ನ್ಯಾಯಾಲಯ ಕೊಪ್ಪಳದಿಂದ ಉಲ್ಲೇಖಿತ ಖಾಸಗಿ ಪಿರ್ಯಾದಿ ನಂ.79/2017 ನೇದ್ದನ್ನು ನ್ಯಾಯಾಲಯ ಕರ್ತವ್ಯದ ಪಿಸಿ-152 ರವರು ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಹೊಸನಿಂಗಾಪೂರದಲ್ಲಿರುವ ಕೆ.ಪಿ.ಟಿ.ಸಿ.ಎಲ್. ಪ್ರದೇಶದಲ್ಲಿ ಪಿರ್ಯಾದಿದಾರರು ವಿದ್ಯುತ್ ಪ್ರಸರಣದ ಎಲೆಕ್ಟ್ರಾನಿಕ್ ಉಪಕರಣಗಳಾದ ಅಂದಾಜು 8,70,514/- ಮೌಲ್ಯದ 220KV Isolator parts like 1] Earth Swiich Moving Contact Assembly for 220 KV 1250 Amps HDB Isolators (24 numbers in quantity) 2] Main Switch Moving Contact Assembly for 220 KV 1250 Amps HDB Isolators (07 numbers in quantity) ನೇದ್ದವುಗಳನ್ನು ಶೇಖರಿಸಿದ್ದು, ಸದರಿ ವಸ್ತುಗಳನ್ನು ದಿನಾಂಕ: 19-11-2016 ರಂದು ಕಳ್ಳತನವಾಗಿರುತ್ತವೆ. ಗುನ್ನೆ ನಂ. 57/2017 ಕಲಂ 379 ಐ.ಪಿ.ಸಿ. ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.   

0 comments:

 
Will Smith Visitors
Since 01/02/2008