Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police
As per SO 1017 New beat system is introduced in Koppal District. Click on Links to know your area in charge officers ASI/HC/PC

Sunday, April 2, 2017

1]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ. ನಂ: 28/2017 ಕಲಂ: 279, 337, 304(ಎ) ಐ.ಪಿ.ಸಿ:
ದಿನಾಂಕ: 01-04-2017 ರಂದು ಮದ್ಯಾಹ್ನ 2-50 ಗಂಟೆಯ ಸುಮಾರಿಗೆ ಪಿರ್ಯಾದಿದಾರನು ತನ್ನ ತಾಯಿಯಾದ ಶ್ರೀಮತಿ ಸುಗಂಧವ್ವ ಗಂಡ ಪರಸಪ್ಪ ಕಲಘಟಗಿ ಇವರನ್ನು ಮೋಟಾರ ಸೈಕಲ ನಂ : ಕೆ.-51/.ಎಂ-8233 ನೇದ್ದರಲ್ಲಿ ಹಿಂದುಗಡೆ ಕೂಡಿಸಿಕೊಂಡು ಸಂಕನೂರು ಕ್ರಾಸ, ಯಲಬುರ್ಗಾ ಮಾರ್ಗವಾಗಿ ಯಲಬುರ್ಗಾ-ಮಲಕಸಮುದ್ರ ರಸ್ತೆಯ ಮೇಲೆ ಮಲಕಸಮುದ್ರ ಸೀಮಾದಲ್ಲಿ ಬರುವ ದುರಗಪ್ಪ ಕುಡಗುಂಟಿ ಇವರ ಹೊಲದ ಹತ್ತಿರ ಕಿನ್ನಾಳ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮಲಕಸಮುದ್ರ ಗ್ರಾಮದ ಕಡೆಯಿಂದ ಆರೋಪಿತನಾದ ಮುತ್ತಪ್ಪ ತಂದೆ ಯಲ್ಲಪ್ಪ ಯಡಿಯಾಪೂರ ಸಾ|| ಚಿಕ್ಕಮ್ಯಾಗೇರಿ ಈತನು ಮೋಟಾರ  ಸೈಕಲ ನಂ ಕೆ.ಎ-29/ಕ್ಯೂ-6067 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾ-ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನು ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಜೋರಾಗಿ ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿದಾರ & ಆತನ ತಾಯಿ ಮಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ಪಿರ್ಯಾದಿದಾರನಿಗೆ ಎಡಗಡೆ ಚೆಪ್ಪಿಗೆ, ಎಡಗಾಲು ಮೊಣಕಾಲಿಗೆ ಒಳಪೆಟ್ಟಾಗಿದ್ದು ಹಾಗೂ ಆತನ ತಾಯಿ ಸುಗಂಧವ್ವ ಈಕೆಯ ತಲೆಯ ನೆತ್ತಿಗೆ ಭಾರಿ ಸ್ವರೂಪದ ಪೆಟ್ಟು ಬಿದ್ದು ರಕ್ತಗಾಯ, ಎಡಗೈ ರಟ್ಟೆಗೆ ಭಾರಿಸ್ವರೂಪದ ಒಳಪೆಟ್ಟಾಗಿ ಮುರಿದಿದ್ದು, ಎಡಗಾಲ ಪಾದದ ಕೀಲಿನ ಮೇಲ್ಭಾಗದಲ್ಲಿ ಭಾರಿ ಸ್ವರೂಪದ ಒಳಪೆಟ್ಟಾಗಿ, ಮತ್ತು ಬೆನ್ನಿಗೆ ತೆರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಹಾಗೂ ಆರೋಪಿತನಿಗೆ ಸಹ ಸಾಧಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 28/2017 ಕಲಂ: 279, 304[] .ಪಿ.ಸಿ. ಮತ್ತು 187 .ಎಮ್.ವ್ಹಿ. ಕಾಯ್ದೆ:.

ದಿನಾಂಕ: 01-04-2017 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾದರರಾದ ಶ್ರೀ ಪ್ರಕಾಶಗೌಡ ಗೌಡರ ಸಾ: ಹೂಲಗೇರಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ. ಫಿರ್ಯಾದಿಯ ತಮ್ಮನಾದ ಉಮೇಶನು ಹಾಗೂ ಪರಿಚಯದವರಾದ ಅಮರೇಶ ಓತಗೇರಿ ಈತನ ಗ್ಲಾಮರ್ ಮೋಟಾರ್ ಸೈಕಲ್ ಮೇಲೆ ಸೇಬಿನಕಟ್ಟಿ ಮುತ್ತೆನ ಕಟ್ಟೆ ಜಾತ್ರೆಗೆ ಹೋಗಿ ಬರುತ್ತೇನೆ ಅಂತಾ ಹೋಗಿದ್ದು, ನಂತರ ಸಾಯಂಕಾಲ 4-10 ಗಂಟೆಯ ಸುಮಾರಿಗೆ ಫಿರ್ಯಾದಿ ಊರಲ್ಲಿದ್ದಾಗ ಮಹಾಂತೇಶ ಪಲ್ಲೇದ ರವರು ಫೋನ ಮೂಲಕ ತಿಳಿಸಿದ್ದೆನೆಂದರೆ. ಹನಮಸಾಗರ ದಿಂದ ತಮ್ಮೂರಿಗೆ ಬರುವ ರೋಡಿನ ತಿರುಪತಿಗೆ ಹೋಗುವ ರಸ್ತೆಯ ಹತ್ತಿರ ರೋಡಿನಲ್ಲಿ ಮೋಟಾರ ಸೈಕಲಗೆ ಯಾವುದೋ ವಾಹನ ಟಕ್ಕರಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ನಿಮ್ಮ ತಮ್ಮ ಉಮೇಶನಿಗೆ ಕಾಲು ಕೈಗೆ ಹಾಗೂ ತಲೆಗೆ ಮತ್ತು ಮೂಗಲ್ಲಿ ಬಾಯಲ್ಲಿ ರಕ್ತ ಸೋರಿ ರೋಡಿನ ತೆಗ್ಗಿನಲ್ಲಿ ಬಿದ್ದಿರುತ್ತಾನೆ. ಅಂತಾ ತಿಳಿಸಿದ್ದರಿಂದ ಫಿರ್ಯಾದಿ ಕೂಡಲೇ ತನ್ನ ಮೋಟಾರ ಸೈಕಲ ಮೇಲೆ ಸ್ಥಳಕ್ಕೆ ಹೋಗಿ ನೋಡಿದ್ದು ಅಲ್ಲಿಗೆ ತಮ್ಮ ತಮ್ಮನ ಸಂಗಡ ಹೋದ ಅಮರೇಶ ಓತಗೇರಿ ಈತನನ್ನು ಸಾಯಾಂಕಾಲ 04-00 ಗಂಟೆಯ ಸುಮಾರು ತಮ್ಮ ತಮ್ಮ ಉಮೇಶನು ಮನ್ನೆರಾಳದಲ್ಲಿ ಬಿಟ್ಟು ಮೋಟಾರ ಸೈಕಲನ್ನು ತೆಗೆದುಕೊಂಡು ಹನಮಸಾಗರಕ್ಕೆ ಹೋಗಿ ಬರುತ್ತೇನೆ ಅಂತಾ ಹೋಗಿದ್ದು, ನಂತರ ಅಪಘಾತವಾದ ವಿಷಯ ತಿಳಿದು ಅಲ್ಲಿಗೆ ಬಂದಿದ್ದು ಆಗ ಫಿರ್ಯಾದಿ ಹಾಗೂ ಅಮರೇಶನು ಇಬ್ಬರು ಸೇರಿ ಉಮೇಶನು ಬದುಕಿರಬಹುದು ಅಂತಾ ಒಂದು ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಹನಮಸಾಗರಕ್ಕೆ ಬರುವಷ್ಟರಲ್ಲಿ ಉಮೇಶನು ಮೃತಪಟ್ಟ ಬಗ್ಗೆ ತಿಳಿದು ಉಮೇಶನ ಶವವನ್ನು ಅಮರೇಶನ ಸಂಗಡ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ತಾನು ವಾಪಾಸ್ ಘಟನಾ ಸ್ಥಳಕ್ಕೆ ಹೋಗಿ ನೋಡಲು ಉಮೇಶನು ನಡೆಸಿರುವ ಮೋಟಾರ್ ಸೈಕಲ್ ಗ್ಲಾಮರ್ ಬೈಕಿದ್ದು, ಅದು ಪೂರ್ತಿಯಾಗಿ ಡ್ಯಾಮೇಜಾಗಿ ಮುಂದಿನ ಡೂಮ್ ಹೊಲದಲ್ಲಿ ಬಿದ್ದಿದ್ದು, ಅದಕ್ಕೆ ನಂಬರ ಇರಲಿಲ್ಲಾ ಅದರ ಚೆಸ್ಸಿ ನಂಬರ ನೋಡಲಾಗಿ MBLJA06AMF9G21459, ಹಾಗೂ ಇಂಜನ್ ನಂ: JA06EJF9G21597 ಅಂತಾ ಇದ್ದು, ಉಮೇಶನು ಹೂಲಗೇರಿ ಕಡೆಯಿಂದ ಹನಮಸಾಗರಕ್ಕ ಬರುವಾಗ ಎದುರಗಡೆ ಹನಮಸಾಗರ ಕಡೆಯಿಂದ ಯಾವುದೋ ಒಂದು ವಾಹನ ಅತೀವೇಗ ಹಾಗೂ ಆಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಡೆಸಿಕೊಂಡು ಬಂದು ಉಮೇಶ ಮೋಟಾರ್ ಸೈಕಲ್ ಗೆ ಟಕ್ಕರಕೊಟ್ಟು ಅಪಘಾತಪಡಿಸಿ ವಾಹನ ನಿಲ್ಲಿಸದೇ ಹೋಗಿದ್ದು, ಅಪಘಾತ ಪಡಿಸಿ ಓಡಿ ಹೋದ ವಾಹನವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ. ಮುಂತಾಗಿ ಫಿರ್ಯಾದಿ ಅದೆ.

0 comments:

 
Will Smith Visitors
Since 01/02/2008