1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 44/2017 ಕಲಂ:
87 Karnataka Police Act:.
ದಿನಾಂಕ: 10-05-2017 ರಂದು ಬೆಳಿಗ್ಗೆ
10:30 ಗಂಟೆಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ,
ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ 08 ಜನ ಆರೋಪಿತರನ್ನು ಹಾಜರಪಡಿಸಿದ್ದು, ವರದಿಯಲ್ಲಿ
ಹುಲಿಯಾಪುರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು,
ಆ ಕಾಲಕ್ಕೆ ಅಧಿಕಾರಿರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.3720=00,
ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ 08 ಜನ ಆರೋಪಿತರ ವಿರುದ್ದ
ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 45/2017 ಕಲಂ: 302 ಐ.ಪಿ.ಸಿ..
ಆರೋಪಿತನಾದ ಬಾಲಜ್ಜನು ಈಗ್ಗೆ ಸುಮಾರು
ವರ್ಷಗಳಿಂದ ತನ್ನ ಹೆಂಡತಿಯಾದ ಗಿರಿಜವ್ವ @ ಮರಿತಂಗೆವ್ವ ಈಕೆಯ ಶೀಲದ ಮೇಲೆ ಸಂಶಯ ಮಾಡುತ್ತಾ
ಜಗಳ ಮಾಡುತ್ತಾ ಬಂದಿದ್ದು ಇದರಿಂದ ಮೃತ ಗಿರಿಜವ್ವಳು
ಬೇಸತ್ತು
ತನ್ನ
ಮಕ್ಕಳೊಂದಿಗೆ
ತನ್ನ
ತವರು ಮನೆ ತಿಮ್ಮಾಪೂರಕ್ಕೆ ಹೋಗಿ ಬೇರೆ ಮನೆ ಮಾಡಿ ಕೂಲಿಕೆಲಸ ಮಾಡಿಕೊಂಡಿದ್ದಳು. ತನ್ನ ಮಗ ಶರಣಪ್ಪನು ಕೂಲಿ ಮಾಡುವಾಗ ಬಿದ್ದು 2 ಕಾಲು ಮುರಿದಿದ್ದರಿಂದ
ಅವನ ದವಾಖಾನೆ ಖರ್ಚಿಗೆ ಹಣ ಕೇಳಲು ನಿನ್ನೆ ದಿನಾಂಕ. 09-05-2017 ರಂದು ಚಿಕ್ಕಮ್ಯಾಗೇರಿಗೆ
ಬಂದಿದ್ದು ಇರುತ್ತದೆ. ಇಂದು ದಿನಾಂಕ. 10-05-2017 ರಂದು ಬೆಳಿಗ್ಗೆ 07-30 ಗಂಟೆ ಸುಮಾರಿಗೆ ಮಗನ ಚಿಕಿತ್ಸೆಗಾಗಿ
ಖರ್ಚಿಗೆ ಹಣ
ಕೇಳಿದಾಗ ಆರೋಪಿ ಬಾಲಜ್ಜನು
ಜಗಳ ಮಾಡಿ ಕೊಡುವುದಿಲ್ಲ ಅಂತಾ ಹೇಳಿದ್ದರಿಂದ ಗಿರಿಜವ್ವಳು
ಸಿಟ್ಟಿನಲ್ಲಿ
ನೀನು ಕೋಡದಿದ್ದರೇನು ನನ್ನ ಮಿಂಡ ಕೋಡುತ್ತಾನೆ ಅಂತಾ ಅಂದಿದ್ದಕ್ಕೆ ಆರೋಪಿತನು ಸಿಟ್ಟಿನಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ.
ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 61/2017 ಕಲಂ: 392 ಐ.ಪಿ.ಸಿ:.
ಪಿರ್ಯಾದಿದಾರರಾದ ಶ್ರೀಮತಿ ಪ್ರತಿಭಾ ಗಂಡ ಬಲಭೀಮ್ ಬಾಯ್ಕೊರ್ ಇವರು ಪಿರ್ಯಾಧಿ ನೀಡಿದ್ದು, ದಿನಾಂಕ: 10-05-2017 ರಂದು ರಾತ್ರಿ 08 ಗಂಟೆಗೆ ತಮ್ಮ ತಾಯಿ ಹಾಗೂ ಪಿರ್ಯಾದಿದಾರರು ಸೇರಿಕೊಂಡು ಕೊಪ್ಪಳ ನಗರದ
ಕಲ್ಯಾಣ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೊಗಿ ವಾಪಸ್ ಟೀಚರ್ಸ ಕಾಲೋನಿಯಲ್ಲಿರು ತಮ್ಮ
ಮನೆಗೆ ಹೋಗಲು ಆಟೋ ಮೂಲಕ ಕಿನ್ನಾಳ ಮುಖ್ಯ ರಸ್ತೆಗೆ ಬಂದು ಆಟೋ ಇಳಿದು ಸ್ವಲ್ಪ ದೂರದಲ್ಲಿಯೇ
ಇದ್ದ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಒಂದು ಕಪ್ಪು ಬಣ್ಣದ ಬೈಕನಲ್ಲಿ
ಬಂದ ಸುಮಾರು 35-40 ವರ್ಷ ವಯಸ್ಸಿನ ತನ್ನ
ಮುಖಕ್ಕೆ ಮಂಕಿ ಕ್ಯಾಪನ್ನು ಹಾಕಿಕೊಂಡಿದ್ದ ಒಬ್ಬ ದಪ್ಪನೆಯ ವ್ಯಕ್ತಿಯು ತಮ್ಮ
ಕೊರಳಲ್ಲಿದ್ದ ಒಂದು ಬಂಗಾರದ ಮಾಂಗಲ್ಯ ಸರ ಅಂದಾಜು ತೂಕ 27 ಗ್ರಾಂ ಮತ್ತು ಒಂದು ಬಂಗಾರದ ಸರ ಅಂದಾಜು ತೂಕ 08 ಗ್ರಾಂ ಒಟ್ಟು ಅಂದಾಜು ತೂಕ 35 ಗ್ರಾಂ ಅಂ.ಕಿ ರೂ 95000=00 ಬೆಲೆ ಬಾಳುವುದನ್ನು ಕಿತ್ತುಕೊಂಡು ಕಿನ್ನಾಳ ರಸ್ತೆ ಮಾರ್ಗವಾಗಿ ಹೊಗಿದ್ದು ಸದ್ರಿ ವ್ಯಕ್ತಿಯು
ಬಿಳಿ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಮೊಟಾರ್ ಸೈಕಲ್ ನಂ
ನೋಡಿರುವುದಿಲ್ಲ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment