Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police
As per SO 1017 New beat system is introduced in Koppal District. Click on Links to know your area in charge officers ASI/HC/PC

Saturday, May 13, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 9/2017 ಕಲಂ: 457, 380 ಐ.ಪಿ.ಸಿ:.
ಪಿರ್ಯಾದುದಾರರು ಕೆ.ಪಿ.ಟಿ.ಸಿ.ಎಲ್ ನಲ್ಲಿ ಕಿರಿಯ ಅಬಿಯಂತರರಾಗಿದ್ದು ದಿನಾಂಕ 11-05-2017 ರಂದು 3-00 ಪಿ.ಎಂ.ಸುಮಾರಿಗೆ ಹಾಟ ಲೈನ್ ಉಪವಿಭಾಗ ಮುನಿರಾಬಾದನಲ್ಲಿ ಕೆಲಸಮಾಗಿಸಿಕೊಂಡು ಮನೆಗೆ ಹೋಇದದು  ದಿನಾಂಕ 12-05-2017 ರಂದು 01-00 ಎ.ಎಂ.ದಿಂದ 06-00 ಎ.ಎಂ.ಅವದಿಯಲ್ಲಿ ಯಾರೋ ಕಳ್ಳರು ಹಿಂದಿನ ಬಾಗಿಲು ಮುರಿದು ಇಳಗೆ ಹೋಗಿ ಆಫಿಸನಲ್ಲಿದ್ದ  ಎರಡು Tower type Saddles with 1,1/2 clamps ಮತ್ತು ನಾಲ್ಕು Tower type Saddles with 2' clamps ಹಾಗೂ ಒಂದು Tower & Flat Face Grounding Clamps ಅಂ.ಕಿ.24,000-00 ರೂ. ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಪ್ರಕರಣ ದಾಖಲಿಸಿಕೊಂಡು ತನಿಖೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 95/2017 ಕಲಂ: 279, 337 ಐ.ಪಿ.ಸಿ:.
ದಿನಾಂಕ 12-05-2017 ರಂದು ಪಿರ್ಯಾದುದಾರರು ,ಮ್ತತ್ತು ಮಗಳು ಅಳಿಯ, ಮೊಮ್ಮಗಳು ಹುಲಿಗೆಮ್ಮ ದೇವಿಯ ದರ್ಶನಕ್ಕೆಂದು ಹುಲಗಿಗೆ ಬಂದಿದ್ದು ದರ್ಶನ ಮಾಡಿಕೊಂಡು ವಾಪಾಸ್ ಊರಿಗೆ ಹೋಗಲು ದೇವಸ್ಥಾನದಿಂದ ನಡೆದುಕೊಂಡು ಹುಲಗಿ ಬಸ್ ನಿಲ್ದಣಕ್ಕೆ ಹೋಗುತ್ತಿರುವಾಗ ಬನ್ನಿ ಕಟ್ಟೆಯ ಹತ್ತಿ 407 ವಾಹನ ನಂ,ಕೆ.ಎ.22/ಎ.8001 ನೇದ್ದರ ಚಾಲಕನು ಅತೀ ವೇಗ ಮತತು ಅಲಕ್ಷತನದಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೊಮ್ಮಗಳಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದುದಾರರ ಮೊಮ್ಮಗಳಿಗೆ ಗಾಯ ಪೆಟ್ಟುಗಳಾಗಿರುತ್ತವೆ ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3] ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ: 2/2017 ಕಲಂ: 498(ಎ), 323, 504, 506  ಐ.ಪಿ.ಸಿ:.

ದಿನಾಂಕ: 12-05-2017 ರಂದು ಪಿರ್ಯಾಧಿ ರೇಣುಕಾ ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ 09 ವರ್ಷಗಳ ಹಿಂದೆ ಹಾರೋಗೇರಿ ಗ್ರಾಮದ ಚನ್ನಬಸಪ್ಪ ಬಜ್ಜೆಮ್ಮನವರ ರವರ ಸಂಗಡ ಸಂಪ್ರಾದಾಯದಂತೆ ಮದುವೆಯಾಗಿದ್ದು, ನಮಗೆ 02 ಮಕ್ಕಳಿರುತ್ತಾರೆ. ನಂತರ ನಾನು ನಮ್ಮ ಮಕ್ಕಳ ವಿದ್ಯಾಬ್ಯಾಸದ ಸಲುವಾಗಿ ಕೊಪ್ಪಳದ ಬೇಲ್ದಾರ ಕಾಲೋನಿಯಲ್ಲಿ ನಾನು ನನ್ನ ಗಂಡ ಮಕ್ಕಳು ವಾಸವಾಗಿದ್ದೆವು. ಆಗ ನನ್ನ ಗಂಡ ದುಷ್ಟನಾಗಿ ಕುಡಿದು ದುಡಿಯುವುದನ್ನು ಬಿಟ್ಟು ಬೇಕಾ ಬಿಟ್ಟಿ ನನ್ನೊಂದಿಗೆ ಅನಾವಶ್ಯಕವಾಗಿ ಹೊಡೆಯುವುದು, ಬಡೆಯುವುದು, ಅಲ್ಲದೆ ಮನೆಯಲ್ಲಿದ್ದ ಸಾಮಾನು ಬಂಗಾರದ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದಾನೆ ಆದರೂ ಸಹ ನಾನು ಸುಮ್ಮನಿದ್ದೆನು. ನಂತರ ಈಗ ನಾನು ದೂರು ಕೊಡುವುದಕ್ಕಿಂತ 2-3 ದಿನಗಳ ಹಿಂದೆ ನನ್ನ ಗಂಡ ನನಗೆ ಕುಡಿದು ಬಂದು ಬಡಿಯುವುದಲ್ಲದೆ ಹೊಟ್ಟೆಗೆ ಕಾಲಿನಿಂದ ಒದ್ದಿರುತ್ತಾನೆ. ನನಗೆ ಡಾಕ್ಟರ ಹತ್ತಿರ ಸಹ ತೋರಿಸದೇ ನಿರ್ಲಕ್ಷ ಮಾಡಿರುತ್ತಾನೆ. ನನಗೆ ಮತ್ತು ನನ್ನ ಮಕ್ಕಳಿಗೆ ಮನೆಗೆ ಏನೂ ತರದೇ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಂದು ತಿನ್ನು ಅಂತಾ ಬೈಯುತ್ತಾನೆ. ಇದನ್ನು ಕೇಳಿದಾಗ ಬೇರೆಯವರಿಂದ ಬುದ್ದಿ ಹೇಳಿಸಿದರೂ ಅದಕ್ಕೂ ಸಹ ನನಗೆ ಸಾಯಿಸಿ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ.    

0 comments:

 
Will Smith Visitors
Since 01/02/2008