1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ:
279, 304(ಎ) ಐ.ಪಿ.ಸಿ
ದಿನಾಂಕ 19-05-2017 ರಂದು 9-30 ಎ.ಎಂ.ಕ್ಕೆ ಪಿರ್ಯಾದುದಾರರು ಠಾಣೆಗೆ ಬಂದು ಲಿಖಿತ
ಪಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 16-05-2017 ರಂದು ಪಿರ್ಯಾದುದಾರರ
ಚಿಕ್ಕಮ್ಮ ಇವರು ಹಿರೇಬಗನಾಳ ಗ್ರಾಮಕ್ಕೆ ತಮ್ಮ ಮಗಳನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದು
ಮಾತನಾಡಿಸಿಕೊಂಡು ವಾಪಾಸ್ ತಮ್ಮ ಅಳಿಯನಾದ ರವಿ ಕುಮಾರ ಇತನ ಬಜಾಜ್ ಡಿಸ್ಕವರಿ ಹೊಸ ನಂಬರ ಇಲ್ಲದ
ಮೋಸೈನಲ್ಲಿ ಬರುತ್ತಿದ್ದಾಗ ಹಿರೆಬಗನಾಳ ಹತ್ತಿರ ಇರುವ ಪೆಟ್ರೊಲ್ ಬಂಕ್ ನಲ್ಲಿ ಪೆಟ್ರೊಲ್
ಹಾಕಿಸಿಕೊಂಡು ಸ್ವಲ್ಪ ಮುಂದೆ ಹೋಗುತ್ತಿರುವಾಗ ಹಿರೆಬಗನಾಳ - ಗಿಣಿಗೇರಾ ರಸ್ತೆಯ ಮೇಲೆ
ಮೋ.ಸೈ.ನ್ನು ಅಳಿಯ ರವಿಕುಮಾರನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋ,ಸೈ.ನ್ನು ಸ್ಕೀಡ್ ಮಾಡಿ ಬಿದ್ದಿದ್ದರಿಂದ ಮೋ.ಸೈ.ನಲ್ಲಿ ಹಿಂದೆ ಕುಳಿತಿದ್ದ ಪಿರ್ಯಾದುದಾರರ
ಚಿಕ್ಕಮ್ಮಳಿಗೆ ,ತಲಗೆ ಬಾರಿ ರಕ್ತಗಾಯವಾಗಿದ್ದು ಬೆನ್ನಿಗೆ ಒಳಪೆಟ್ಟಾಗಿರುತ್ತವೆ ಚಿಕಿತ್ಸೆ ಕುರಿತು
ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ
ದಿನಾಂಕ 18-05-2017 ರಂದು 6-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ:
87 Karnataka Police Act.
ದಿನಾಂಕ: 19-05-2017 ರಂದು
ಸಾಯಾಂಕಾಲ 4-50 ಗಂಟೆಯ ಸುಮಾರಿಗೆ ವಜ್ರಬಂಡಿ ಗ್ರಾಮದ ಸಮುದಾಯ
ಆರೋಗ್ಯ ಕೇಂದ್ರದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು
ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ
ದಾಳಿ ಮಾಡಿ ಹಿಡಿದಿದ್ದು 8 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ
ಮತ್ತು ಕಣದಲ್ಲಿದ್ದ ಒಟ್ಟು 8950/- ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ
ಸಿಕ್ಕಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈ ಗೊಂಡಿರುತ್ತಾರೆ.
0 comments:
Post a Comment