1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 44/2017 ಕಲಂ: 279, 337 ಐ.ಪಿ.ಸಿ
ದಿನಾಂಕ:
20-05-2017 ರಂದು ಸಾಯಾಂಕಾಲ 18-10 ಗಂಟೆಗೆ ಫಿರ್ಯಾದಿದಾರರಾದ ಬಸವರಾಜ ಕರಿಗಾರ ಸಾ: ಹಿರೇಓತಗೇರಿ, ಹಾ/ವ: ವಜ್ಜಲ್ ರವರು ಠಾಣೆಗ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 19-05-2017 ರಂದು ಹುಬ್ಬಳ್ಳಿಗೆ ಬಾಡಿಗೆ ಹೋಗಿ ವಾಪಸ್ ಇಲಕಲ್ಲಗೆ ಹೋಗುವಾಗ ಹನಮಸಾಗರ ದಾಟಿ 2 ಕಿ.ಮೀ ಅಂತರದಲ್ಲಿ ಇಲಕಲ್ಲ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿ ತಮ್ಮ ಟವೇರಾ ಕಾರಿಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು, ಅಪಘಾತದಲ್ಲಿ ಫಿರ್ಯಾದಿಗೆ ಹಾಗೂ ಕಾರಿನಲ್ಲಿ ಕುಳಿತ ಶ್ರೀದೇವಿ ರವರಿಗೆ ಸಾದಾ ಸ್ವರೂಪದ ಗಾಯವಾಗಿದ್ದು, ಟವೇರಾ ಕಾರು ಮುಂದಿನ ಬಲಗಡೆ ಗಾಲಿ, ಬಲಗಡೆ ಬಾನೆಟ್, ಬಲಗಡೆ ಎರಡೂ ಬಾಗಿಲು, ಬಲಗಡೆ ಡ್ರೈವರ್ ಬಾಗಿಲಿನ ಗ್ಲಾಸ್ ಹೊಡೆದು ಹಾನಿಯಾಗಿದ್ದು ಇರುತ್ತದೆ.
ಶ್ರೀದೇವಿ ಮನೆಯಲ್ಲಿಯೇ ಉಪಚಾರ ಮಾಡಿಸಿಕೊಂಡಿದ್ದು, ಫಿರ್ಯಾದಿದಾರರು ಇಂದು ತಡವಾಗಿ ಉಪಚಾರ ಮಾಡಿಸಿಕೊಂಡು ಮಾಲೀಕರನ್ನು ವಿಚಾರಿಸಿ ತಡವಾಗಿ ಮಾಲೀಕರೊಂದಿಗೆ ಠಾಣೆಗೆ ಬಂದಿದ್ದು, ಅಪಘಾತಪಡಿಸಿದ ಲಾರಿ ನಂ: ಕೆ.ಎ-29/ಎ-5151 ನೇದ್ದರ ಚಾಲಕನಾದ ಶರಣಪ್ಪ ತಂದೆ ಬಸಪ್ಪ ಮೇಳಿ ಸಾ: ತಳುವಗೇರಿ ಈತನು ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 110/2017 ಕಲಂ:
454, 457, 380 ಐ.ಪಿ.ಸಿ:
ದಿ:20.05.2017 ರಂದು ರಾತ್ರಿ 09.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗುರುಬಸಪ್ಪ ಪಲ್ಲೇದ, ಮುಖ್ಯೋಪಾಧ್ಯಾಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಶಾಂತನಗರ, ಗಿಣಗೇರಿ ಸಾ : ಭಾಗ್ಯನಗೆರ ಇವರು ಠಾಣೆಗೆ ಹಾಜರಾಗಿ
ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಿನ್ನೆ ದಿ: 19.05.2017 ರಂದು ಮಧ್ಯಾನ್ನ 01.30 ಗಂಟೆಯಿಂದ ಇಂದು ದಿ 20.05.2017 ರಂದು ಮಧ್ಯಾನ್ನ 12.45 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಗಿಣಗೇರಿ ಸ.ಹಿ.ಪ್ರಾಥಮಿಕ ಶಾಲೆಯ 6 ಮತ್ತು 7 ನೇ ತರಗತಿ ಕೊಠಡಿಗಳ
ಬೀಗ ಮುರಿದು ಒಳಗೆ ಹೋಗಿ 7 ನೇ ತರಗತಿ ಕೊಠಡಿಯಲ್ಲಿದ್ದ 1 ಯುಪಿಎಸ್ ಅಂಕಿ-3000/-, 2 ಬ್ಯಾಟರಿ ಅಂಕಿ-10000/-
ರೂ ಮತ್ತು 1 ಸ್ಪೀಕರ್ ಸೆಟ್ ಅಂಕಿ-2000/- ಎಲ್ಲಾ ಸೇರಿ ಒಟ್ಟು ಅಂಕಿ-15000/- ಬೆಲೆಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪ್ರಕರಣವನ್ನು ದಾಖಲಿಸಿ ತನಿಖೆ
ಕೈಗೊಂಡಿದ್ದು ಅದೆ.
0 comments:
Post a Comment