1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 93/2017
ಕಲಂ. 143, 147, 148, 323, 324 504, 506 ಐ.ಪಿ.ಸಿ ಸಹಿತ 149 ಮತ್ತು 3(1)(10) ಎಸ್.ಸಿ/ಎಸ್.ಟಿ.
ಕಾಯ್ದೆ:
ದಿನಾಂಕ 24-05-2017 ರಂದು ರಾತ್ರಿ 11-30 ಗಂಟೆಗೆ ಪಾಮಣ್ಣ ತಂದೆ ಭೀಮಪ್ಪ, ವಯಸ್ಸು
23 ವರ್ಷ, ಜಾ: ಮಾದಿಗ, ಉ: ಕೂಲಿಕೆಲಸ, ಸಾ: ಗಾಂಧಿನಗರ, ನಾನು, ನನ್ನ ವೈಯಕ್ತಿಕ ಕೆಲಸದ ನಿಮಿತ್ಯ
ಬಂಬೂಬಜಾರ್ ಗೆ ಹೋಗಿದ್ದು, ಅಲ್ಲಿ ನಿನ್ನೆ ದಿನಾಂಕ 23-05-2017 ರಂದು ಸಂಜೆ 5-00 ಗಂಟೆ ಸುಮಾರಿಗೆ
ನನ್ನ ಚಿಕ್ಕಪ್ಪನ ಮಗನಾದ ರಮೇಶ ತಂದೆ ಪಾಮಣ್ಣ ಇವನ ವಿಚಾರವಾಗಿ ಠಾಣೆಗೆ ದೂರು ನೀಡುವ ಸಂಬಂಧವಾಗಿ
ಇಂದು ರಾಘವೇಂದ್ರ (ಚಿನ್ನೋಡ) (2) ಸದ್ದಾಮ (3) ರಿಯಾಜ (ರೊಡ್ಡ) (4) ಉಮರ್ (5) ರಸೂಲ ಮತ್ತು ಇತರೇ
25 ರಿಂದ 30 ಜನರು ಎಲ್ಲರೂ ಸಾ: ಗಂಗಾವತಿ ಇವರು ಗುಂಪು ಸೇರಿ ಬಂದು ಜಾತಿ ನಿಂದನೆ ಮಾಡಿ ನನಗೆ
ಹೊಡೆಬಡೆ ಮಾಡಿ ಕಲ್ಲು, ಕಟ್ಟಿಗೆ ಹಾಗೂ ಕೈಗೆ ಸಿಕ್ಕ ಆಯುಧಗಳಿಂದ ಹಲ್ಲೆ ಮಾಡಿರುತ್ತಾರೆ. ಕಾರಣ ಸದರಿಯವರ
ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ. 279, 338, 283 ಐ.ಪಿ.ಸಿ ಮತ್ತು 187
ಐ.ಎಂ.ವಿ. ಕಾಯ್ದೆ:
ದಿ:24-05-2017 ರಂದು 9-20 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ
ಭೇಟಿ ನೀಡಿ ಗಾಯಾಳು ಮಹ್ಮದ್ ಶೇಖ್ ಉಸ್ಮಾನ ಇವರ ಆರೈಕೆಯಲ್ಲಿದ್ದ ಶಾಬುದ್ದೀನ್ ಜವಳಗೇರಿ
ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು ದಿ:24-05-17 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಮಹ್ಮದ್
ಶೇಖ್ ಉಸ್ಮಾನ ಇತನು ತನ್ನ ಮೋಟಾರ ಸೈಕಲ್ ನಂ: ಕೆಎ-37/ಎಲ್-6001 ನೇದ್ದನ್ನು ಕೊಪ್ಪಳದ ಕಡೆಯಿಂದ ಭಾನಾಪೂರ ಕಡೆಗೆ ಹಲಿಗೇರಿ ಸಮೀಪದಲ್ಲಿ ಅತೀವೇಗವಾಗಿ ಹಾಗೂ
ಅಲಕ್ಷ್ಯತನದಿಂದಾ ಚಲಾಯಿಸಿಕೊಂಡು ಹೋಗುವಾಗ ತನ್ನ ಮುಂದೆ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ ನಂ: ಕೆಎ-37/ಟಿಬಿ-1727 ನೇದ್ದನ್ನು ಗಮನಿಸದೆ ಅದರ ಹಿಂದೆ ಟಕ್ಕರ ಕೊಟ್ಟು ಅಪಘಾತ ಮಾಡಿಕೊಂಡಿದ್ದರಿಂದ ಸವಾರನ ತಲೆಗೆ
ಮತ್ತು ಎಡಕಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಮತ್ತು ಸದರ ಟ್ರ್ಯಾಕ್ಟರ
ಚಾಲಕನು ತನ್ನ ವಾಹನವನ್ನು ರಸ್ತೆಯಲ್ಲಿ ಹೋಗಿ ಬರುವ ವಾಹನಗಳಿಗೆ ಯಾವುದೇ ಸೂಚನೆಗಳನ್ನು ನೀಡದೇ
ರಸ್ತೆಯ ಮದ್ಯದಲ್ಲಿ ನಿಲ್ಲಿಸಿ ರಸ್ತೆಯ ಸಂಚಾರಕ್ಕೆ ಅಡ್ಡಿಪಡಿಸಿ ವಾಹನ ಬಿಟ್ಟು ಓಡಿ ಹೋಗಿದ್ದು
ಇರುತ್ತದೆ. ಕಾರಣ ಅಪಘಾತ ಮಾಡಿದ ಮೋಟಾರ ಸೈಕಲ್ ಚಾಲಕ ಮತ್ತು ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment