1] ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ. 279, 304(ಎ), 201 ಐ.ಪಿ.ಸಿ ಮತ್ತು
187 ಐ.ಎಂ.ವಿ. ಕಾಯ್ದೆ:
ದಿ:24-05-17 ರಂದು 10-30 ಎ.ಎಮ್ ಕ್ಕೆ ಮೆತಗಲ್ ಸಮೀಪ
ವಾಹನ ಅಪಘಾತವಾದ ದೂರವಾಣಿ ಮೂಲಕ ಮಾಹಿತಿ ಬಂದಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ
ಸ್ಥಳದಲ್ಲಿದ್ದ ಮೃತ ಚನ್ನಪ್ಪ ಗಾರವಾಡ ಇವರ ಅಣ್ಣ ಯಲ್ಲಪ್ಪ ಇವರನ್ನು ವಿಚಾರಿಸಿದ್ದು ಸದರಿಯವರು
ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ದಿ:24-05-2017 ರಂದು 01-40 ಎ.ಎಮ್ ಸುಮಾರಿಗೆ ಫಿರ್ಯಾದಿದಾರರ ತಮ್ಮ ಮೃತ ಚನ್ನಪ್ಪನು ಹೊಸಪೇಟೆ-ಕುಷ್ಟಗಿ ಎನ್.ಹೆಚ್-50 ರಸ್ತೆಯ ಮೆತಗಲ್ ಸಮೀಪ ತನ್ನ ಮೋಟಾರ ಸೈಕಲ್ ನಂ: ಕೆಎ-37/ಇಬಿ-4730 ನೇದ್ದನ್ನು ಓಡಿಸಿಕೊಂಡು ಬರುವಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು
ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು
ತನ್ನ ತಮ್ಮ ಚನ್ನಪ್ಪನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ಯಾವುದೇ ಸಾಕ್ಷಿ ಪುರಾವೆ
ಸಿಗದಂತೆ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಚನ್ನಪ್ಪನಿಗೆ ತೀವ್ರ ಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು
ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment