1] ಕೊಪ್ಪಳ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 23/2017
ಕಲಂ. 279, 338 ಐ.ಪಿ.ಸಿ..
ದಿನಾಂಕ. 26-05-2017
ರಂದು ಮದ್ಯಾಹ್ನ 2-00 ಗಂಟೆಗೆ
ಫಿರ್ಯಾದಿ ಆನಂದ ತಂದೆ ಯಂಕಪ್ಪ ಮೆಡಕುಂದ ವಯ. 36 ಜಾತಿ. ಹಡಪದ ಉ. ಕಟಿಂಗ್ ಶಾಪ್ ಸಾ. ಸುಣಗಾರ ಓಣಿ, ವಾರ್ಡ ನಂ. 17 ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಸದರಿ ಹೇಳಿಕೆಯನ್ನು ಗಣಕೀಕರಣ
ಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ, ಮೊನ್ನೆ ದಿನಾಂಕ. 24-05-2017
ರಂದು ರಾತ್ರಿ 9-00 ಗಂಟೆ ಸುಮಾರು ಫಿರ್ಯಾದಿದಾರರ ಅಂಗಡಿಯಲ್ಲಿ ಕೆಲಸ ಮಾಡುವ ವೆಂಕಟೇಶ ಇವರು
ಭಾಗ್ಯನಗರದಲ್ಲಿರುವ ಅವರ ಅಳಿಯ ಪ್ರಕಾಶ ಇವರ ಮನೆಗೆ ಊಟಕ್ಕೆ ಹೋಗಿದ್ದು, ಊಟ ಮುಗಿಸಿಕೊಂಡು ರಾತ್ರಿ 11-30 ಗಂಟೆ ಸುಮಾರು ವಾಪಸ್
ಭಾಗ್ಯನಗೆರ-ಕೊಪ್ಪಳ ರಸ್ತೆಯ ಮೇಲೆ ಬರುತ್ತಿರುವಾಗ ಸಾಯಿಬಾಬ ಗುಡಿಯ ಹತ್ತಿರ ಬೈಕ್ ನಂ. ಕೆಎ-37/ಡಬ್ಲೂ-6743
ನೇದ್ದರ ಸವಾರ ಸುರೇಶ ಈತನು ಎದುರುಗಡೆಯಿಂದ
ತನ್ನ ವಾಹನವನ್ನು ಅತೀ ಜೋರಾಗಿ ಹಾಗೂ ನಿರ್ಲಕ್ಷ್ಯತನದಿಂದ ನಡೆಸಿ ವೆಂಕಟೇಶನಿಗೆ ಇವರಿಗೆ ಟಕ್ಕರ್
ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಿಂದ ವೆಂಕಟೇಶ ಇವರಿಗೆ ಎಡಗಾಲು ಮೊಣಕಾಲು ಕೆಳಗೆ ಭಾರಿ
ಒಳಪೆಟ್ಟಾಗಿದ್ದು,
ಎಡಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ ಹಾಗೂ ಎಡಕಪಾಳಕ್ಕೆ ತೆರಚಿದ
ಗಾಯಗಳಾಗಿದ್ದು,
ಸದರಿ ಅಪಘಾತದ ಬಗ್ಗೆ ವೆಂಕಟೇಶ ಇವರ ಮನೆಯಲ್ಲಿ ಹಿರಿಯರೊಂದಿಗೆ
ವಿಚಾರಿಸಿ ಇಂದು ಬಂದು ಫಿರ್ಯಾಧಿಸಿದ್ದು ಇರುತ್ತದೆ
ಅಂತಾ ಇದ್ದ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 24/2017 ಕಲಂ.
174 ಸಿ.ಆರ್.ಪಿ.ಸಿ.
ದಿ:26-05-2017 ರಂದು ಬೆಳಿಗ್ಗೆ 09-15 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಕರಿಯಮ್ಮ ಗಂಡ ಮಂಜುನಾಥ ಪಿನ್ನಿ. ಸಾ: ಇರಕಲಗಡಾ ಇವರು
ಘಟನಾಸ್ಥಳದಲ್ಲಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೇ, ಫಿರ್ಯಾದಿದಾರಳ ಗಂಡ ಮೃತ ಮಂಜುನಾಥ ಪಿನ್ನಿ ಇತನು ಒಕ್ಕಲುತನ
ಮಾಡಿಕೊಂಡಿದ್ದು, ಮನೆಯಲ್ಲಿ ಹಿರಿಯತನ
ಮಾಡುತ್ತಿದ್ದನು. ಮತ್ತು ಮೃತನ ತಂದೆ ಪಂಪಣ್ಣ ಇವರ ಹೆಸರಿನಲ್ಲಿ ಇರಕಲಗಡಾ ಸೀಮಾದಲ್ಲಿ ಸುಮಾರು 05 ಎಕರೆ ಜಮೀನು ಇದ್ದು, ಸದರಿ ಜಮೀನುದಲ್ಲಿ ರಿಗ್ ಬೋರ್ ನೀರು ಕಡಿಮೆಯಾಗಿ ಕನಕಾಂಬರಿ, ಮಲ್ಲಿಗೆ ಬೆಳೆ ಹಾನಿಯಾಗಿದ್ದು ಇರುತ್ತದೆ. ಸದರಿ ಜಮೀನಿನ ಮೇಲೆ ತನ್ನ
ತಂದೆ ಪ್ರಗತಿ ಕೃಷ್ಣಾ ಬ್ಯಾಂಕ್ ಇರಕಲಗಡಾ ದಲ್ಲಿ 02 ಲಕ್ಷ ರೂ ಬೆಳೆಸಾಲ ಮಾಡಿಕೊಂಡಿದ್ದು, ಮೃತನು ಕೈಸಾಲ 02 ಲಕ್ಷ ರೂ ಮಾಡಿಕೊಂಡಿದ್ದು
ಇರುತ್ತದೆ. ಇತ್ತೀಚೆಗೆ 04 ರಿಗ್ ಬೋರಗಳನ್ನು ಹಾಕಿಸಿದರು ನೀರು ಬಿದ್ದಿರುವುದಿಲ್ಲ. ಹೀಗಾಗಿ ಮೃತ ಮಂಜುನಾಥನು ಬರಗಾಲ
ಬಂದು ಸಾಲದ ಹಣ ಪಾವತಿ ಮಾಡಲು ಬಹಳ ತೊಂದರೆಯಾಗಿದೆ ಎಂದು ಚಿಂತಿಸಿ, ದಿ: 25-05-2017 ರಂದು ರಾತ್ರಿ 11-30 ರಿಂದ ದಿ:26-05-2017 ರಂದು ಬೆಳಿಗ್ಗೆ 06-30 ಗಂಟೆಯ ಅವಧಿಯಲ್ಲಿ ತಮ್ಮ ಹೊಲದಲ್ಲಿರುವ ಶ್ರೀ ತಾಯಮ್ಮ ದೇವಿಯ ಕಟ್ಟಿಯ ಮೇಲಿನ ಬೇವಿನ ಮರದ ಟೊಂಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 115/2017 ಕಲಂ.143,
147, 341, 323, 326, 504, 506, ಸಹಿತ 149 ಐ.ಪಿ.ಸಿ…
ದಿ:26-05-2017 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ, ನಿಂಗಪ್ಪ ಗೊಡೆಕರ, ಸಾ: ಕಿನ್ನಾಳ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಇಂದು ದಿ:26.05.2017 ರಂದು ಬೆಳಿಗ್ಗೆ 09-00 ಗಂಟೆಗೆ ಫಿರ್ಯಾದಿದಾರರು ತಮ್ಮ ಮನೆಯ ಹತ್ತಿರ ಇರುವಾಗ ಆರೋಪಿತರು ಅಕ್ರಮ ಗುಂಪು
ಕಟ್ಟಿಕೊಂಡು ಬಂದು ಹಳೇ ಮನೆಯಲ್ಲಿರುವ ಪರಸಪ್ಪ ಮಲಾಜೆ ಇವರಿಗೆ ಬಿಡಿಸಿ ತಮಗೆ ಮನೆ ಕೊಡುವಂತೆ
ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹಲ್ಲೆ ಮಾಡಿ ಫಿರ್ಯಾದಿಯ ತಮ್ಮ ನಾಗಪ್ಪ ನ ಮನೆಯ ಸಮೀಪ
ಮೇನಬಜಾರದ ಬಾಜು ಫೋನಿನ ಕಂಬಕ್ಕೆ ಫಿರ್ಯಾದಿಗೆ ಕಟ್ಟಿ ಕಟ್ಟಿಗೆ ಯಿಂದ ಹಲ್ಲೆ ಮಾಡಿದ್ದರಿಂದ
ಎಡಕಾಲಿಗೆ ಭಾರಿ ಪೆಟ್ಟಾಗಿದ್ದು ಇರುತ್ತದೆ. ಮತ್ತು ಸಮೀಪದ ನಾಗಪ್ಪನ ಮನೆಗೆ ಹೋಗಿ ಅವರ ಮನೆಯ
ಕದಕ್ಕೆ ಕಲ್ಲಿನಿಂದ ಹೊಡೆದು ಕಬ್ಬಿಣದ ಹಾರಿಯಿಂದ ಜಖಂ ಗೊಳಿಸಿ ಏ ಸೂಳೇ ಮಕ್ಕಳೆ ಕದ ತೆಗೆಯಿರಿಲೇ
ಆ ಮುದುಕನ್ನ ಕಟ್ಟಿವಿ ಈಗ ನಿಮ್ಮನ್ನೆಲ್ಲಾ ಹೊಡೆದು ಸಾಯಿಸುತ್ತೇವೆಂದು ಜೀವದ ಬೆದರಿಕೆ ಹಾಕಿ
ಅಲ್ಲಿಂದ ವಾಪಾಸ್ ಮುದುಕನ ಹತ್ತಿರ ಬಂದು ಕಂಬದಿಂದಾ ಆತನಿಗೆ ಬಿಚ್ಚಿ ಸದರ ಗ್ರಾಮದ ಕಾಮನಕಟ್ಟೆಯ
ಹತ್ತಿರ ಎಳೆದುಕೊಂಡು ಹೋಗಿ ಅವಮಾನ ಮಾಡಿದ್ದು ಇರುತ್ತದೆ. ಅಲ್ಲದೇ ಫಿರ್ಯಾಧಿಗೆ ಆರೋಪಿತರು ಲೇ
ಸೂಳೇಮಗನೇ ನಮ್ಮ ಪಾಲಿಗೆ ಬರುವ ಆಸ್ತಿಯನ್ನು ಬೇಗನೇ ಸರಿ ಮಾಡಿಕೊಡು ಇಲ್ಲದಿದ್ದರೆ ನಿನಗೆ ಹೊಡೆದು ಸಾಯಿಸುತ್ತೇವೆಂದು ಜೀವದ
ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ.304(ಎ) ಐ.ಪಿ.ಸಿ…
ದಿನಾಂಕ 26-05-2017
ರಂದು 4-00 ಪಿ.ಎಂ.ಕ್ಕೆ ಪಿರ್ಯಾದು ಶಂಕರ ತಂದೆ ನಾಗಪ್ಪ ಬಳಿಗಾರ ಸಾ: ಬೆಳವಡಿ ಜಿ: ಬೆಳಗಾಂ ಇವರಿಂದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ 26-05-2017 ರಂದು ಪಿರ್ಯಾದುದಾರರು ಮತ್ತು
ಅವರ ಸ್ನೇಹಿತರು ಕೂಡಿಕೊಂಡು ಹುಲಿಗಿಯ ಹುಲಿಗೆಮ್ಮ ದೇವಿದರ್ಶನ ಮಾಡಿಕೊಂಡು ಹಿಟ್ನಾಳ
ಗ್ರಾಮದಲ್ಲಿರುವ ಸ್ನೇಹಿತನಿಗೆ ಮಾತನಾಡಿಸಲು ಹೋದಾಗ ಹಿಟ್ನಾಳ ಬಸ್ ನಿಲ್ದಾಣದ ಹತ್ತಿರ
ನಿಂತಿರುವಾಗ ಅಲ್ಲೆ ಒಂದು ಕ್ರೇನ್ ನಂ.ಕೆ.ಎಲ್.11
/ 9068 ನೇದ್ದು ಕೆಟ್ಟಿದ್ದು ಅದನ್ನು ಆಪರೇಟರ್ ಕ್ರೇನ್ ಮೇಲಕ್ಕೆತ್ತಿದ್ದು
ಆಗ ಪಿರ್ಯಾದುದಾರರ ಸ್ನೇಹಿತ ಶೇಖರ ಇವನು ಅದರ ಕೆಳಗಡೆ ಹೋಗುತ್ತಿರುವಾಗ ಕ್ರೇನ್ ನ ಕೊಂಡಿಯು
ಕಳಚಿ ಒಮ್ಮೇಲೆ ಶೇಖರ್ ಇವನ ಮೇಲೆ ಬಿಳಲು ಶೇಖರ್ ನಿಗೆ ಬಾರಿ ರಕ್ತಗಾಯವಾಗಿದ್ದು ಚಿಕಿತ್ಸೆ
ಕೊಡಿಸಲು ಮುನಿರಾಬಾದ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ
ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
5] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 71/2017 ಕಲಂ.78(3) ಕೆ.ಪಿ. ಕಾಯ್ದೆ..
ದಿನಾಂಕ: 26-05-2017 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ
ಆರೋಪಿತನು ತಿಗರಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಫಿರ್ಯಾಧಿದಾರರು ತಮ್ಮ ಸಿಬ್ಬಂದಿ ಮತ್ತು
ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿ ರಾಮಣ್ಣ ತಂದೆ
ಲಕ್ಕಪ್ಪ ಟಣಕನಕಲ್ ಸಾ: ಹಟ್ಟಿ ಇತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 852=00 ರೂ.ಗಳನ್ನು
ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು, ನಂತರ ಆರೋಪಿತನಿಗೆ ಮಟಕಾ ನಂಬರ ಬರೆದ ಪಟ್ಟಿಯನ್ನು
ಯಾರಿಗೆ ಕೋಡುತ್ತಿಯಾ ಅಂತಾ ವಿಚಾರಿಸಿದಾಗ ಪಟ್ಟಿಯನ್ನು ಹಿರೇಸಿಂದೋಗಿ ಗ್ರಾಮದ ಹನಮಂತ ಕವಳಕೇರಿ ಇತನಿಗರ
ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ರಾತ್ರಿ 9-15 ಗಂಟೆಗೆ ಠಾಣೆಗೆ ಬಂದು ಆರೋಪಿತನ ಮೇಲೆ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
0 comments:
Post a Comment