1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ.
279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:27-05-17 ರಂದು ಸಾಯಂಕಾಲ 5-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಮೋಟಾರ ಸೈಕಲ್ ಓಡಿಸಿಕೊಂಡು
ಗುಳದಳ್ಳಿಯಿಂದ ಗಿಣಿಗೇರಿ ಕಡೆಗೆ ಅಂತಾ ಸಪ್ತಗಿರಿ ಪೆಟ್ರೋಲಬಂಕ್ ಹತ್ತಿರ ಬರುತ್ತಿದ್ದಾಗ ಅದೇ
ಸಮಯಕ್ಕೆ ಎದುರುಗಡೆ ಅಂದರೆ ಗಿಣಿಗೇರಿ ಕಡೆಯಿಂದ ಒಂದು ಲಾರಿ ಬರುತ್ತಿದ್ದು ಸದರಿ ಲಾರಿಯ
ಹಿಂದಿನಿಂದ ಟ್ರ್ಯಾಕ್ಸ ನಂ: ಕೆಎ-37/8163 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಲಾರಿಯನ್ನು ಓವರ ಟೇಕ್ ಮಾಡಿಕೊಂಡು ಬಂದು ಫಿರ್ಯಾದಿದಾರರ
ಮುಂದೆ ಹೊರಟಿದ್ದ ಹಿರೋ ಡೀಲಕ್ಸ ಹೊಸ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು
ಅಲ್ಲದೇ ರಸ್ತೆಯ ಬಾಜು ನಡೆದುಕೊಂಡು ಹೊರಟಿದ್ದ ಪಾದಚಾರಿಗೆ ಸಹ ಟಕ್ಕರ ಕೊಟ್ಟು ಅಪಘಾತ ಮಾಡಿ
ವಾಹನ ಸಮೇತ ಚಾಲಕನು ಓಡಿ ಹೋಗಿದ್ದು ಇರುತ್ತದೆ. ಅಪಘಾತ ಮಾಡಿದ ಚಾಲಕನಿಗೆ ನೋಡಿದಲ್ಲಿ
ಗುರ್ತಿಸುತ್ತೇನೆ. ಸದರಿ ಅಪಘಾತದಲ್ಲಿ ಮೋಟಾರ ಸೈಕಲ್ ಸವಾರ ಸಿದ್ದಪ್ಪ ಕಾಸನಕಂಡಿ ಸಾ:
ಗಿಣಿಗೇರಿ. ಇತನಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಮತ್ತು ಪಾದಚಾರಿ
ಮುದಿಯಪ್ಪ ಕಿಡದಾಳ. ಸಾ: ಸಂಗಾಪೂರ. ಇತನಿಗೆ ಸಹ ಭಾರಿ ಪೆಟ್ಟುಗಳಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದು ಇರುತ್ತದೆ. ಮತ್ತು ಮೋಟಾರ ಸೈಕಲ್ ಹಿಂಬದಿ ಸವಾರ ತಿರುಪತೆಪ್ಪ ಅರಕೇರಿ. ಸಾ:
ಗಿಣಿಗೇರಿ. ಇತನಿಗೆ ತೀವ್ರ ಗಾಯಗಳಾಗಿದ್ದರಿಂದ ಕೂಡಲೇ ಸಮೀಪದ ಗಿಣಿಗೇರಿ ಸರ್ಕಾರಿ ಆಸ್ಪತ್ರೆಗೆ
ಕರೆದುಕೊಂಡು ಹೋಗಿದ್ದು ಸಂಜೆ 5-30 ಗಂಟೆಗೆ ಬ್ರಾಟ್ ಡೆಡ್ ಆಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು
ಅದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 94/2017 ಕಲಂ.
143, 147, 148, 341, 323, 324, 395, 506 ಸಹಿತ 149 ಐ.ಪಿ.ಸಿ:
ದಿನಾಂಕ 27-05-2017 ರಂದು ರಾತ್ರಿ 9-00 ಗಂಟೆಗೆ ನಾನು, ನನ್ನ ಬೈಕ್ ದಲ್ಲಿ ಮನೆಗೆ ಬರುತ್ತಿರುವಾಗ
ಆಸೀಫ್ ಸಾ: ಪಂಪಾನಗರ ಹಾಗೂ ಇತರೇ 15 ಜನರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಚಾಕು, ಬಡಿಗೆಗಳನ್ನು
ತೆಗೆದುಕೊಂಡು, ಪಂಪಾನಗರ ಸರ್ಕಲ್, ವೀರೇಶ ಫೋಟೋ ಸ್ಟುಡಿಯೋ ಹತ್ತಿರ ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ
ನಿನ್ನನ್ನು, ನಿನ್ನ ಮನೆಯವರನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ, ನೀನೇನು ಸೆಂಟ
ಮಾಡುತ್ತಿ ಸೂಳೇಮಗನೆ ಅಂತಾ ಬೈದು ಎಲ್ಲರೂ ಹಲ್ಲೆ ಮಾಡಿದ್ದು, ನನ್ನ ಬಲಗಣ್ಣಿಗೆ ರಕ್ತಗಾಯವಾಗಿದ್ದು,
ಬಡಿಗೆಗಳಿಂದ ಹೊಡೆದಿದ್ದರಿಂದ ಹಣೆಗೆ, ತುಟಿಗೆ, ತಲೆಗೆ, ಬೆನ್ನಿಗೆ ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ.
ನನ್ನ ಕೊರಳಲ್ಲಿದ್ದ ಬಂಗಾರದ 4 ತೊಲೆ ಚೈನು, 5 ತೊಲೆ ಬ್ರಾಸ್ಲೈಟ್ ಕಿತ್ತುಕೊಂಡು ಹೋಗಿರುತ್ತಾರೆ.
ನನ್ನ ಬೈಕ್ ಕೆಳಗೆ ಬಿದ್ದು, ನಾನು ಕೆಳಗೆ ಬಿದ್ದಾಗ ಎಲ್ಲರೂ ನನಗೆ ಕಾಲಿನಿಂದ ಒದ್ದು ಕೈಯಿಂದ ಗುದ್ದಿರುತ್ತಾರೆ. ನಾನು ನೋವಿನಿಂದ ಚೀರಾಡುತ್ತಿರುವಾಗ ನಿನ್ನನ್ನು ನಿನ್ನ ಮನೆಯವರನ್ನು ಮುಗಿಸಿಬಿಡುತ್ತೇವೆಂದು ಪ್ರಾಣ
ಬೆದರಿಕೆ ಒಡ್ಡಿರುತ್ತಾರೆ. ಆಗ ಅಲ್ಲಿದ್ದ ಜನರು ಹಾಗೂ ವೀರೇಶ ಗುಡೂರ ಇವರು ಬಂದಾಗ ಅವರೆಲ್ಲರೂ
ಓಡಿಹೋಗಿದ್ದು, ಹೋಗುವಾಗ ಈಗ ನೀನು ಉಳಿದುಕೊಂಡೆ, ಮುಂದೆ ನಿನ್ನನ್ನು ಬಿಡುವುದಿಲ್ಲವೆಂದರು.
ನಮ್ಮ ಮನೆಯವರು ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಪೂರ್ವದಲ್ಲಿ ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ.
ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ. 323, 324, 307, 504, 506, ಸಹಿತ 34
ಐ.ಪಿ.ಸಿ:.
ದಿನಾಂಕ: 27-05-2017 ರಂದು ಶನಿವಾರ ಸಂಜೆ 3-30 ಗಂಟೆ ಸುಮಾರಿಗೆ ಫಿರ್ಯಾದಿದಾರರು
ಮತ್ತು ಅವರ ಅಣ್ಣ ಬಾಳೇಶ್ ಇಬ್ಬರೂ ಕೂಡಿ ಇದ್ಲಾಪುರ ಕ್ರಾಸ್ನಿಂದ ಊರೋಳಗೆ ಹೋಗಲು ತಮ್ಮ ಮೋ.ಸೈಕಲ್
ತೆಗೆದುಕೊಂಡು ಹೊರಟಿದ್ದು ಆಗ ಗ್ರಾಮದ ದುರುಗಮ್ಮನ ಗುಡಿ ಹತ್ತಿರ ರಸ್ತೆಯಲ್ಲಿ ಅಡ್ಡವಾಗಿ ಹೋಗುತ್ತಿದ್ದ
ಆರೋಪಿತರಿಗೆ ಸೈಡ್ ಕೊಡಲು ಫಿರ್ಯಾದಿದಾರರು ಗಾಡಿಯ ಹಾರನ್ ಹಾಕಿದ್ದು, ಆಗ ತಿರುಗಿ ನೋಡಿದ ಆರೋಪಿ
ಶಂಕರಗೌಡನು ಲೇ ಸೂಳೆ ಮಕ್ಕಳೆ ನಮ್ಮ ಮೇಲೆ ಗಾಡಿ ಹಾಯಿಸಲು ಬರುತ್ತಿರೆನಲೇ ನಿಮ್ಮನ್ನು ಇವತ್ತು ಜೀವ
ಸಹಿತ ಉಳಿಸುವುದಿಲ್ಲ ಅಂತಾ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಕಲ್ಲುಗಳನ್ನು ಮೂವರು ತೆಗೆದುಕೊಂಡು
ಅದರಲ್ಲಿ ಶಂಕರಗೌಡನು ಫಿರ್ಯಾದಿದಾರರ ಎಡಕಿವಿಯ ಹತ್ತಿರ, ಚಂದ್ರಶೇಖರನು ತಲೆಯ ಮೇಲೆ, ರಮೇಶನು ಮೂಗಿನ
ಹತ್ತಿರ ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ. ಆಗ ಫಿರ್ಯಾದಿದಾರರನ್ನು ಬಿಡಿಸಲು
ಬಂದ ಅವರ ಅಣ್ಣ ಬಾಳೇಶನಿಗೂ ಕೂಡ ಕಲ್ಲನ್ನು ಎಸೆದಿದ್ದು ಆತನು ತಪ್ಪಿಸಿಕೊಂಡಿರುತ್ತಾನೆ. ಆಗ ಗ್ರಾಮದ
ಪಡಿಯಪ್ಪ ತಂದೆ ದುರುಗಪ್ಪ ಹರಿಜನ. ದೊಡ್ಡಬಸವ ತಂದೆ ನಾಗಪ್ಪ ಬೋಗಾಪುರ, ಮತ್ತು ಯಮನೂರಪ್ಪ ತಂದೆ ಹನುಮಪ್ಪ
ಬೋಗಾಪುರ ರವರು ಬಂದು ಜಗಳವನ್ನು ಬಿಡಿಸಿಕೊಂಡಿದ್ದು ಇರುತ್ತದೆ. ನಂತರ ಫಿಯರ್ಾದಿದಾರರನ್ನು ಅವರ ಅಣ್ಣ
ದುರುಗೇಶ, ಮತ್ತು ಬಾಳೇಶ್ ಕೂಡಿ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ತಾವರಗೇರಾ ಸರಕಾರಿ
ಆಸ್ಪತ್ರೆಯಲ್ಲಿ ಇಲಾಜು ಕುರಿತು ದಾಖಲು ಮಾಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು
ಕೈಕೊಂಡಿದ್ದು ಇರುತ್ತದೆ.
0 comments:
Post a Comment