1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 121/2017 ಕಲಂ. 279, 337, 338, 304(ಎ) ಐ.ಪಿ.ಸಿ ಮತ್ತು 181(3) ಎಂ.ವಿ. ಕಾಯ್ದೆ:.
ದಿ:30.05.2017 ರಂದು ನಮ್ಮ ಠಾಣೆಯ ಕೊರ್ಟ
ಕರ್ತವ್ಯದ ಸಿಪಿಸಿ-25 ಬಾಲಚಂದ್ರ ರವರು
ತೆಗೆದುಕೊಂಡು ಬಂದ ಮಾನ್ಯ ಜೆ.ಎಮ್.ಎಫ್.ಸಿ ಘನ ನ್ಯಾಯಾಲಯ ಕೊಪ್ಪಳದ ಪಿ.ಸಿ-ನಂ:125/2017. ನೇದ್ದರ ಖಾಸಗಿ ಫಿರ್ಯಾದಿಯು ಮಾನ್ಯ ಸಿಪಿಐ ಕೊಪ್ಪಳ ಗ್ರಾಮಿಣ ವೃತ್ತ
ರವರ ಕಚೇರಿಯಿಂದ ದಿ-30.05.2017 ರಂದು ಬೆಳೆಗ್ಗೆ 11.00 ಗಂಟೆಗೆ ಠಾಣೆಗೆ ಸ್ವೀಕೃತಿಯಾಗಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ದಿನಾಂಕ-18.03.2015 ರಂದು ಸಂಜೆ 05.30 ಗಂಟೆಗೆ ಕಿನ್ನಾಳ ಗ್ರಾಮದಿಂದ
ಮಂಗಳೂರ ರಸ್ತೆಯ ಕಡೆ ಫಿರ್ಯಾದಿ ಮತ್ತು ಅವರ ತಮ್ಮ ಮೃತ ಅಂದಾನಪ್ಪ ಇಬ್ಬರೂ ವಾಕಿಂಗ್ ಹೊರಟಾಗ
ಹಿಂದುಗಡೆಯಿಂದ ಬಸವರಾಜ ತಂದೆ ಧರ್ಮನಗೌಡ ಪೊಲೀಸ್ ಪಾಟೀಲ್ ವಯ:32, ಸಾ:ಚಿಕ್ಕಬಿಡನಾಳ ಈತನು ತನ್ನ ಟಿವಿಎಸ್ ಸ್ಟಾರ್ ಸ್ಪೋರ್ಟ ದ್ವಿಚಕ್ರ
ವಾಹನ ಸಂಖ್ಯೆ: ಕೆಎ-37-ಯು-0292 ನೇದ್ದನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಫಿರ್ಯಾದಿ ತಮ್ಮ ಅಂದಾನಪ್ಪ ಇವರಿಗೆ ಹಿಂದಿನಿಂದ
ಜೋರಾಗಿ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ಅಂದಾನಪ್ಪ ಇವರ ಬಲಗಾಲು ಪೂರ್ತಿ ಮುರಿದು
ತಲೆಗೆ ಭಾರಿ ಪೆಟ್ಟಾಗಿ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಂದು
ನಂತರ ಹೆಚ್ಚಿನ ಇಲಾಜ ಕುರಿತು ಬೆಳಗಾಂವ ಕೆ.ಎಲ್.ಇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ದಿ-18.03.2015 ರಂದು ಅಪಘಾತಪಡಿಸಿ ನನ್ನ ತಮ್ಮ ಅಂದಾನಪ್ಪನ ಸಾವಿಗೆ ಕಾರಣನಾದ ಬಸವರಾಜ ತಂದೆ ಧರ್ಮನಗೌಡ
ಪೊಲೀಸ್ ಪಾಟೀಲ್ ವಯ:32, ಸಾ: ಚಿಕ್ಕಬಿಡನಾಳ ಈತನ ಮೇಲೆ
ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತಪಾಸಣೆ
ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 122/2017 ಕಲಂ. 279, 338 ಐ.ಪಿ.ಸಿ:.
ದಿ:30-05-17 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿದಾರರು ಆರೋಪಿ ಬಸವರಾಜ ನ ಮೋಟಾರ ಸೈಕಲ್ ನಂ: ಕೆಎ-37/ಇಬಿ-0216 ನೇದ್ದರ ಹಿಂದೆ ಕುಳಿತುಕೊಂಡು ಹಂದ್ರಾಳದಿಂದಾ ವಾಪಾಸ್ ಕೊಪ್ಪಳಕ್ಕೆ ಅಂತಾ ಮಿಲೆನಿಯಮ್
ಕಾಲೇಜ ಸಮೀಪ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯಲ್ಲಿ ಬರುತ್ತಿದ್ಧಾಗ ಸದರಿ ಬಸವರಾಜ ಇತನು ತನ್ನ ಮೋಟಾರ ಸೈಕಲ್ ನ್ನು ಹಲಿಗೇರಿ
ಕಡೆಯಿಂದ ಕೊಪ್ಪಳದ ಕಡೆಗೆ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಓಡಿಸುತ್ತಾ ಕರ್ವಿಂಗ್ ನ್ನು
ಗಮನಿಸದೆ ರಸ್ತೆಯ ಎಡಬಾಜು ಪಲ್ಟಿ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿ ಮತ್ತು
ಆರೋಪಿತನಿಗೆ ಭಾರಿ ಗಾಯವಾಗಿರುತ್ತವೆ. ಕಾರಣ ಅಪಘಾತ ಮಾಡಿದ ಮೋಟಾರ ಸೈಕಲ್ ಸವಾರ ಬಸವರಾಜ ಹಡಪದ.
ಸಾ: ಹನುಮಸಾಗರ. ತಾ: ಮುಂಡರಗಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು
ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ. 279, 336, 338 ಐ.ಪಿ.ಸಿ:.
ದಿನಾಂಕ:-30-05-2017
ರಂದು ರಾತ್ರಿ 9-15 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ
ಬೇಟಿ ನೀಡಿ ವಾಹನ ಅಪಗಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹನುಮಂತಪ್ಪ ತಂದಿ ಭೀಮಪ್ಪ ಬಳ್ಳಾರಿ
ವಯಾ-48ವರ್ಷ ಜಾ.ಕುರುಬರು ಉ-ಒಕ್ಕಲುತನ ಸಾ. ನಂದಿಹಳ್ಳಿ ಪಿರ್ಯಾದಿದಾರರು
ಮತ್ತು ಪಿರ್ಯಾದಿ ಮಗ ಮಂಜುನಾಥ ಕೂಡಿ ತಮ್ಮ ಮೋಟಾರ್ ಸೈಕಲ್ ನಂ KA-37EA8659 ನೆದ್ದನ್ನು ತೆಗೆದುಕೊಂಡು
ಹುಲಿಗಿಗೆ ಹೋಗಿ ದರ್ಶನಮಾಡಿಕೊಂಡು ವಾಪಸ ನಂದಿಹಳ್ಳಿಗೆ ಹೊರಟಗಿದ್ದಾಗ್ಗೆ ಗಂಗಾವತಿ- ಕಾರಟಗಿ ರಸ್ತೆಯ
ದಿನಾಂಕ:-30-05-2017 ರಂದು ರಾತ್ರಿ 8-30 ಗಂಟೆಗೆ ಸಿದ್ದಾಪೂರದ ಈಳಿಗನೂರು ಕ್ರಾಸ್ ಹತ್ತಿರ ಕಾರ್
ನಂ AP-28DR-9898 ನೆದ್ದರ ಚಾಲಕ ನರಸಿಂಹ ತಂದಿ ಉತ್ತಪ್ಪ ಈತನು ಕಾರಟಗಿ
ಕಡೆಯಿಂದ ತನ್ನ ಕಾರನ್ನು ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ಅತೀ ವೇಗ ಅಜಾಗುರುಕತೆಯಿಂದ ಎರ್ರಾಬಿರ್ರಿಯಾಗಿ ರಸ್ತೆಯಲ್ಲಿ ಚಲಾಯಿಸಿಕೊಂಡು
ಪಿರ್ಯಾದಿದಾರರ ಮಗ ಮಂಜುನಾಥ ಈತನು ಚಲಾಯಿಸಿಕೊಂಡು ಹೋರಟಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟು
ಅಪಘಾತ ಪಡಿಸಿದ್ದರಿಂದ ಪಿರ್ಯಾದಿ ಹನುಮಂತಪ್ಪನಿಗೆ ಎಡಗಾಲು ಪಾದಕ್ಕೆ ಗಂಬೀರ ರಕ್ತಗಾಯ ಮತ್ತು ಸೊಂಟಕ್ಕೆ
ಒಳಪೆಟ್ಟು ಮೋ.ಸೈ ಚಾಲಕ ಮಂಜುನಾಥನಿಗೆ ಎಡಗಾಲಿಗೆ ಒಳಪೆಟ್ಟಾಗಿರುತ್ತದೆ ಕಾರ್ ಚಾಲಕ ಕಾರ ಚಾಲು ಮಾಡಿಕೊಂಡು
ಹೋಗಿರುತ್ತಾನೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment