1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ. 337, 338, 304(ಎ) ಐ.ಪಿ.ಸಿ:.
ದಿ:29.05.2017 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ
ಸಾರಾಂಶವೇನೆಂದರೇ, ದಿ:29-05-17 ರಂದು ಸಂಜೆ 5-45 ಗಂಟೆಯ ಸುಮಾರಿಗೆ ಓಜನಹಳ್ಳಿ ಸೀಮಾದಲ್ಲಿ ಫಿರ್ಯಾದಿ ಮತ್ತು ತನ್ನ ಅಣ್ಣ ರಮೇಶ ಕೂಡಿಕೊಂಡು ಓಜನಹಳ್ಳಿ
ಸೀಮಾದ ತಮ್ಮ ಹೊಲದಲ್ಲಿ ಕಸ ತೆಗೆಯಲು ಹೋದಾಗ, ಬಾಜು ಹಿರೇಹಳ್ಳದಲ್ಲಿ ಓಜನಹಳ್ಳಿ ಗ್ರಾಮದ ಟ್ರ್ಯಾಕ್ಟರ ಮಾಲೀಕ ಪ್ರಭುಗೌಡ ಈಶ್ವರಗೌಡ್ರ
ಹಾಗೂ ಚಾಲಕ ಹನುಮೇಶ ದೊಡ್ಡಮನಿ ಇವರುಗಳು ಗಿಳಿಯಪ್ಪ ಸಾ: ಹೊನ್ನುಣಸಿ ಹಾಗೂ ಶಿವರಾಜ @ ಶಿವಪ್ಪ ಸಾ: ಓಜನಹಳ್ಳಿ ಇವರುಗಳಿಗೆ ಮರಳನ್ನು ತುಂಬಲು
ಕರೆದುಕೊಂಡು ಹೋಗಿದ್ದು ಅಲ್ಲಿ ಮರಳನ್ನು ತುಂಬುವಾಗ ಮರಳು ಗುಡ್ಡೆ ಕುಸಿದು ಮರಳು ತುಂಬುವವರ
ಮೇಲೆ ಬೀಳುತ್ತದೆ ಅಂತಾ ಕಂಡುಬಂದರು ಕೂಡಾ ಟ್ರ್ಯಾಕ್ಟರ ಮಾಲೀಕ ಮತ್ತು ಚಾಲಕ ಇವರುಗಳು ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ ವಹಿಸಿದ್ದರಿಂದ
ಮರಳು ತುಂಬುತ್ತಿದ್ದ ಗಿಳಿಯಪ್ಪ ಮತ್ತು ಶಿವರಾಜನ ಮೇಲೆ ಮರಳಿನ ಗುಡ್ಡೆ [ಪಡಿ] ಕುಸಿದು ಬಿದ್ದು, ಗಿಳಿಯಪ್ಪನಿಗೆ ಸಾದಾಗಾಯ ಮತ್ತು ರಕ್ಷಣೆ ಮಾಡಲು ಹೋಗಿದ್ದ ಫಿರ್ಯಾದಿಯ
ಅಣ್ಣ ರಮೇಶನಿಗೆ ಭಾರಿ ಪೆಟ್ಟಾಗಿದ್ದು ಇರುತ್ತದೆ. ಅಲ್ಲದೇ ಶಿವರಾಜನಿಗೆ ಮರಳಿನ ಹತ್ತಿರ ಇದ್ದ
ಟ್ರ್ಯಾಕ್ಟರ ಟ್ರೇಲರ್ ಸಮೇತ ಮರಳಿನಲ್ಲಿ ಬಡಿದು ಭಾರಿ ಪೆಟ್ಟಾಗಿದ್ದರಿಂದ ಆತನಿಗೆ ಕೊಪ್ಪಳದ
ಖುಷಿ ಆಸ್ಪತ್ರೆಗೆ ಕರೆತಂದಾಗ ರಾತ್ರಿ 7-30 ಗಂಟೆಗೆ ಪರೀಕ್ಷಿಸಿದ ವೈದ್ಯರು ಬ್ರಾಟಡೆಡ್ ಆಗಿರುವ ಬಗ್ಗೆ ತಿಳಿಸಿದ್ದು ಇರುತ್ತದೆ. ಸದರ
ಟ್ರ್ಯಾಕ್ಟರ ಸೊನಾಲಿಕಾ ಕಂಪನಿಯದಿದ್ದು ನೋಡಿದಲ್ಲಿ ಗುರ್ತಿಸುತ್ತೇನೆ. ಕಾರಣ ಸದರಿ ಟ್ರ್ಯಾಕ್ಟರ
ಮಾಲೀಕ ಮತ್ತು ಚಾಲಕನ ನಿರ್ಲಕ್ಷತನವೇ ಶಿವರಾಜನ ಸಾವಿಗೆ ಕಾರಣವಾಗಿರುತ್ತದೆ. ಕಾರಣ ಟ್ರ್ಯಾಕ್ಟರ
ಮಾಲೀಕ ಮತ್ತು ಚಾಲಕ ನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ
ತಡವಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಸಲಿಸಿ ತಪಾಸಣೆ ಕೈಗೊಂಡಿದ್ದು ಅದೆ.
0 comments:
Post a Comment