Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, May 6, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ: 279, 337 304(ಎ) ಐ.ಪಿ.ಸಿ.
ಪಿರ್ಯಾಧಿ ಯಮನೂರಪ್ಪ ತಂದೆ ಕನಕಪ್ಪ ವಾಲಿಕಾರ ಸಾ: ಹಳೆ ಬಂಡಿ ಹರ್ಲಾಪೂರ ಮತ್ತು ಮೃತ ವೆಂಕಟರಮಣ ತಂದೆ ಸುಬ್ಬರೆಡ್ಡಿ ವಯ: 50 ವರ್ಷ ಸಾ: ಹಳೆಬಂಡಿ ಹರ್ಲಾಪೂರ ಇವರು ಹರ್ಲಾಪೂರದಲ್ಲಿರುವ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಇವರು ದಿನಾಲು ಹಳೆ ಬಂಡಿ ಹರ್ಲಾಪೂರದಿಂದ ಮೋ.ಸೈ.ನಲ್ಲಿ ಹೋಗಿ ಬರುತ್ತಿದ್ದರು ಎಂದಿನಂತೆ ದಿನಾಂಕ 05-05-2017 ರಂದು ಚಿಕನ್ ಅಂಗಡಿಗೆ ಹೋಗಿದ್ದು ಕೆಲಸ ಮುಗಿಸಿಕೊಂಡು ರಾತ್ರಿ 09-30 ಪಿಎಂ ಸುಮಾರಿಗೆ ವೆಂಕಟರಮಣ ಇವರ ಮೋ.ಸೈ ನಂ ಕೆ.ಎ.37/ ಕ್ಯು 601 ನೇದ್ದರಲ್ಲಿ ಅಗಳಿಕೇರಾ - ಗಂಗಾವತಿ ರಸ್ತೆಯ ಮೇಲೆ ಹಳೆ ಬಂಡಿ ಹರ್ಲಾಪೂರ ಗ್ರಾಮಕ್ಕೆ ಬರುತ್ತಿರುವಾಗ  ವೆಂಕಟರಮಣ ಇತನು ಮೋ.ಸೈ.ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ ಮಾಡಿ ಬಿಳಿಸಿದ್ದರಿಂದ ಇಬ್ಬರು ಕೆಳಗೆ ಬಿದ್ದಿದ್ದು ವೆಂಕಟರಮಣ ಇತನಿಗೆ ಹಣೆಯ ಮೇಲೆ ರಕ್ತಗಾಯವಾಗಿ ಎದೆಗೆ ಪಕ್ಕಡಿಗೆ ಒಳಪೆಟ್ಟಿದ್ದು ಮತ್ತು ಪಿರ್ಯಾದ್ಉದಾರರಿಗೆ ಎದೆಗೆ ,ಕಾಲಿಗೆ ಗಾಯಪೆಟ್ಟುಗಳಾಗಿದ್ದು ಚಿಕಿತ್ಸೆ ಕುರಿತು ಮುನಿರಾಬಾದ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾದಾಗ ವೆಂಕಟರಮಣನಿಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 114/2017 ಕಲಂ: 379, 5011 ಐ.ಪಿ.ಸಿ..
ದಿನಾಂಕ: 05-05-2017 ರಂದು ರಾತ್ರಿ 11-30 ಗಂಟೆಗೆ ಪಿ.ಎಸ್.. ಕುಷ್ಟಗಿ ಠಾಣೆರವರುಗೆ ಖಚಿತ ಭಾತ್ಮೀ ಬಂದ ಮೇರೆಗೆ ಬಳೂಟಗಿ ಗ್ರಾಮಕ್ಕೆ ಹೊರಟು ದೋಟಿಹಾಳ-ಮೂದೇನೂರ ರೋಡಿನ ಬಳೂಟಗಿ ಕ್ರಾಸ್ ನಲ್ಲಿ ಬಳೂಟಗಿ ಕಡೆಗೆ ವಾಹನವನ್ನು ತಿರುಗಿಸಿಕೊಂಡು ಬಳೂಟಗಿ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಸದರಿ ರಸ್ತೆಗೆ ಅಡ್ಡ ಬರುವ ಹಳ್ಳದ ಹತ್ತಿರ ಶಬ್ದ ಕೇಳಿ ಜೀಪನ್ನು ಅಲ್ಲಿಯೇ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಹೋಗಿ ನೋಡಲಾಗಿ ಬಳೂಟಗಿ ಹಳ್ಳದಲ್ಲಿ ಒಂದು ಜೆ.ಸಿ.ಬಿ. ಚಾಲಕನು ಜೆ.ಸಿ.ಬಿ.ಯಿಂದ ಹಳ್ಳದಲ್ಲಿನ ಮರಳನ್ನು ಅಲ್ಲಿಯೇ ನಿಂತಿದ್ದ ಒಂದು ಲಾರಿಯಲ್ಲಿ ಲೋಡ್ ಮಾಡುತ್ತಿದ್ದು, ನಾವು ಎಲ್ಲರೂ ಕೂಡಿ ಒಮ್ಮಲೇ ಹೋಗಿ ದಾಳಿ ಮಾಡಲಾಗಿ ಜೆ.ಸಿ.ಬಿ. ಚಾಲಕನು ತಪ್ಪಿಸಿಕೊಂಡು ಓಡಿ ಹೋಗಿದ್ದು ಲಾರಿಯಲ್ಲಿದ್ದ 2 ಜನರು ಸಿಕ್ಕಿಬಿದ್ದಿದ್ದು, ಸದರಿಯವರನ್ನು ವಿಚಾರಿಸಲಾಗಿ ಅವರು 1) ಈರಣ್ಣ ತಂದೆ ಯಂಕಪ್ಪ ಪೂಜಾರಿ ವಯಾ 26 ವರ್ಷ ಜಾ.ವಾಲ್ಮೀಕಿ ಉ.ಡ್ರೈವರ್ ಸಾ.ಕಮತಗಿ ತಾ.ಹುನಗುಂದ 2) ಶ್ರೀಕಾಂತ ತಂದೆ ಚೌಡಪ್ಪ ಲಮಾಣಿ ವಯಾ 25 ವರ್ಷ ಜಾ.ಲಮಾಣಿ ಉ.ಕ್ಲೀನರ್ ಸಾ.ಗದ್ದಿನಕೇರಿ ತಾಂಡಾ ತಾ.ಬಾಗಲಕೋಟ. ಅಂತಾ ಹೇಳಿದ್ದು, ಸದರಿಯವರಿಗೆ ಮರಳನ್ನು ಸಾಗಾಣಿಕೆ ಮಾಡಲು ಯಾವದೇ ಲೈಸೆನ್ಸ್ ವಗೈರೆ ಹೊಂದಿರುವ ಬಗ್ಗೆ ವಿಚಾರಿಸಲಾಗಿ ತಾವು ಯಾವದೇ ಲೈಸೆನ್ಸ್ ಹೊಂದಿರುವದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ, ಸದರಿಯವರು ಬಳೂಟಗಿ ಹಳ್ಳದಲ್ಲಿನ ಮರಳನ್ನು ಸರಕಾರದಿಂದ ಯಾವದೇ ಅನುಮತಿ ಪಡೆಯದೇ ಕಳ್ಳತನದಿಂದ ತಗೆದುಕೊಂಡು ಹೋಗುವ ಉದ್ದೇಶದಿಂದ ಜೆ.ಸಿ.ಬಿ. ಯಿಂದ ತಮ್ಮ ಲಾರಿಯಲ್ಲಿ ಮರಳನ್ನು ಲೋಡ್ ಮಾಡಿಕೊಳ್ಳುತ್ತಿದ್ದು, ಸದರಿ ಲಾರಿಯನ್ನು ಪರಿಶೀಲಿಸಿ ನೋಡಲಾಗಿ ಲಾರಿ ನಂ. ಕೆ..29/6330 ಇದ್ದು ಸದರಿ ಲಾರಿಯಲ್ಲಿ ಸುಮಾರು 8 ಕ್ಯೂಬಿಕ್ ನಷ್ಟು ಮರಳು ಇದ್ದು ಅದರ ಅಂ.ಕಿ. 3,200=00ರೂ. ಇದ್ದು ಸದರಿ ಲಾರಿ ಅಂ.ಕಿ. 5,00,000=00ರೂ ಇರುತ್ತದೆ, ನಂತರ ಜೆ.ಸಿ.ಬಿ. ನೋಡಲಾಗಿ ಇದು ಹಳದಿ ಬಣ್ಣದ್ದು ಇದ್ದು, ಅದರ ಮುಂದುಗಡೆ ಶ್ರೀ ಘನಮಠ ಅಂತಾ ಬರೆದಿದ್ದು, ಅದರ ಚೆಸ್ಸಿ ನಂ. HRA3DXSSU01893285 ಇದ್ದು ಅಂ.ಕಿ. 10,00,000=00 ರೂ ಇರುತ್ತದೆ, ಸದರಿ ಮರಳು ಲೋಡಿನ ಲಾರಿ ಮತ್ತು ಮರಳು ಲೋಡ್ ಮಾಡುತ್ತಿದ್ದ  ಜೆ.ಸಿ.ಬಿ.ಗಳನ್ನು ಹಾಗೂ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 46/2017 ಕಲಂ: 87 Karnataka Police Act.
ಶ್ರೀ ಶಾಂತಪ್ಪ ಬೆಲ್ಲದ ಎ.ಎಸ್.ಐ. ರವರಿಗೆ ದಿನಾಂಕ 05-05-2017 ರಂದು ಸಂಜೆ 6-00 ಗಂಟೆಯಿಂದ 7-00 ಗಂಟೆಯ ಅವಧಿಯಲ್ಲಿ ಠಾಣಾ ವ್ಯಾಪ್ತಿಯ ಕನಕಾಪೂರ ಗ್ರಾಮದ ಶ್ರೀ ಬೀರಲಿಂಗೇಶ್ವರ್ ಗುಡಿಯ ಹಿಂದೆ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟ ಆಡುತ್ತಿದ್ದ 8 ಜನರು 1) ಮರಿಯಪ್ಪ ತಂದೆ ಕಂಠೆಪ್ಪ ಹರಿಜನ ವಯಾ 55 ವರ್ಷ ಜಾತಿ ಹರಿಜನ ಸಾ : ಕನಕಾಪೂರ 
2] ಶಿವರಾಯ ತಾಯಿ ಕಂಠೇಮ್ಮ ಹರಿಜನ ವಯಾ 24 ವರ್ಷ ಜಾತಿ ಹರಿಜನ ಸಾ : ಹನುಮನಾಳ 3] ಗುಡದಪ್ಪ ತಂದೆ ಹೊಳಿಯಪ್ಪ ಬೂತ, ವಯಾ 60 ವರ್ಷ ಜಾತಿ ಕುರುಬರು ಉ : ಒಕ್ಕಲುತನ ಸಾ : ಕನಕಾಪೂರ 4] ದೀತಪ್ಪ @ ಲಕ್ಷ್ಮಣಗೌಡ ತಂದೆ ಶಿವಪ್ಪ ಮಾಲಿಪಾಟೀಲ್, ವಯಾ 55 ವರ್ಷ ಜಾತಿ ಕುರುಬರು ಸಾ :ಕನಕಾಪೂರ 5] ಹನುಮೇಶ ತಂದೆ ಮಲ್ಲಪ್ಪ ಹಡಪದ, ವಯಾ 30 ವರ್ಷ ಜಾತಿ ಹಡಪದ ಉ : ಕೂಲಿಕೆಲಸ ಸಾ : ಹುಲಿಹೈದರ 6] ವೆಂಕಟೇಶ ತಂದೆ ಯಲ್ಲಪ್ಪ ಭೋವಿ, ವಯಾ 35 ವರ್ಷ ಜಾತಿ ಭೋವಿ ಉ : ಒಕ್ಕಲುತನ ಸಾ : ಗೌರಿಪುರ 7] ಬಸವರಾಜ ತಂದೆ ನಿಂಗಪ್ಪ ಮಾಲಿಪಾಟೀಲ್, ವಯಾ 26 ವರ್ಷ ಜಾತಿ ಲಿಂಗಾಯತ ಸಾ : ಹನುಮನಾಳ 8] ಕರಿಯಪ್ಪ ತಂದೆ ದುರಗಪ್ಪ ಹರಿಜನ, ವಯಾ  24 ವರ್ಷ ಜಾತಿ ಹರಿಜನ  ಉ : ಒಕ್ಕಲುತನ ಸಾ : ಗೋಡಿನಾಳ ಇವರು ಸಿಕ್ಕಿದ್ದು, ಸದರಿ 8 ಜನರನ್ನು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ ರೂ.4200=00 ಗಳನ್ನು ಮತ್ತು ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 58/2017 ಕಲಂ: 399, 402 ಐ.ಪಿ.ಸಿ..

ದಿನಾಂಕ: 05-05-2017 ರಂದು ಮಧ್ಯರಾತ್ರಿ 01-00 ಗಂಟೆಯ ಸುಮಾರಿಗೆ ಶ್ರೀ. ರವಿ ಉಕ್ಕುಂದ ಪಿ.ಐ ನಗರ ಪೊಲೀಸ್ ಠಾಣೆ ಕೊಪ್ಪಳ ರವರು ದಿನಾಂಕ: 4-05-2017 ರಾಂದು ರಾತ್ರಿ 10-30 ಗಂಟೆಯ ಸುಮಾರಿಗೆ ಠಾಣೆಯಲ್ಲಿದ್ದಾಗ ಕೊಪ್ಪಳ ನಗರದ ಕುಷ್ಠಗಿ-ಕೊಪ್ಪಳ ರಸ್ತೆಯ ಹಿರೆಹಳ್ಳ ಕಾಲುವೆ ಹತ್ತಿರ ತೋಟಕ್ಕೆ ಹೊಗುವ ಡಾಂಬರ್ ರಸ್ತೆಯಲ್ಲಿ ಯಾರೋ 05 ಜನ ದುಷ್ಕರ್ಮಿಗಳು ಒಂದು ಕಾರಿನಲ್ಲಿ ಕುಳಿತುಕೊಂಡು ತಮ್ಮ ಕೈಯಲ್ಲಿ ಮಾರಕಾಸ್ತ್ರಗಳಾದ ಡ್ರ್ಯಾಗರ್ (ಚಾಕು),ಕಬ್ಬೀಣದ ರಾಡು, ಕಟ್ಟಿಗೆಯ ಬಡಿಗೆಗಳು ಹಾಗೂ ಖಾರದ ಪುಡಿಯನ್ನು  ಹಿಡಿದುಕೊಂಡು ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರನ್ನು ಅಡ್ಡ ಹಾಕಿ ದುಡ್ಡು, ಆಭರಣ, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ದೋಚಬೇಕೆಂಬ ಉದ್ದೇಶದಿಂದ ಹೊಂಚು ಹಾಕುತ್ತಿದ್ದಾರೆ ಎಂದು ಮಾಹಿತಿ ಬಂದಿದ್ದು, ಆಗ ಪಿ.ಐ ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ದಾಳಿ ಮಾಡಿ ಐದು ಜನ ಆರೋಪಿತರಲ್ಲಿ 1] ಉಮೇಶ ತಂದೆ ವಿಠ್ಠಲ ಕ್ಷತ್ರಿ ವಯಾ: 32 ವರ್ಷ ಜಾತಿ: ಕಡಬರ (ಮರಾಠ) ಉ: ಡ್ರೈವರ್ ಕೆಲಸ ಸಾ: ಬರಗುಡಿ ತಾ: ಇಂಡಿ ಜಿ: ವಿಜಯಪೂರ. 2] ಶ್ರೀಶೈಲ್ ತಂದೆ ಶರಣಪ್ಪ ಬಳವಂತಿ ವಯಾ: 35 ವರ್ಷ ಜಾತಿ: ಗಾಣಿಗ ಉ: ಡ್ರೈವರ್ ಸಾ: ಐರಸಂಗ ತಾ: ಇಂಡಿ ಜಿ: ವಿಜಯಪೂರ. 3] ಕುಮಾರ ತಂದೆ ಅಜರ್ುನ ವೀರಶೇಟ್ಟಿ ವಯಾ: 22 ವರ್ಷ ಜಾತಿ: ಪಂಚಮಸಾಲಿ ಉ: ಕೂಲಿಕೆಲಸ ಸಾ: ಪಡನೂರು ತಾ: ಇಂಡಿ ಜಿ: ವಿಜಯಪೂರ. ಈ ಮೂವರನ್ನು ಹಿಡಿದು ಕೊಂಡು ವಿಚಾರಿಸಿದಾಗ ಇನ್ನಿಬ್ಬರಾದ 4] ರವಿ ತಂದೆ ಶಾಂತಪ್ಪ ಶಿಂಧೆ ವಯಾ: 35 ಜಾ: ಕಡಬರ (ಮರಾಠ) ಉ: ಆಟೋ ಚಾಲಕ ಸಾ: ಮಳಗಾಂವ ಗುಡಿ ಹತ್ತಿರ ಚಡಚಣ ತಾ: ಚಡಚಣ ಜಿ: ವಿಜಯಪೂರ. 5] ಭೀಮಾಶಂಕರ ತಂದೆ ಕಾಮಣ್ಣ ಕ್ಷತ್ರಿ ವಯ: 22 ವರ್ಷ ಜಾ: ಕಡಬರ (ಮರಾಠ) ಉ: ಕೂಲಿ ಕೆಲಸ ಸಾ: ಬರಗೂಡಿ ತಾ: ಇಂಡಿ ಜಿ: ವಿಜಯಪೂರ ಇವರುಗಳು ಓಡಿ ಹೋಗಿರುವುದನ್ನ ತಿಳಿಸಿರುತ್ತಾರೆ. ಸದರಿ ಆರೋಪಿತರಿಂದ 1] ಒಂದು ಡ್ರಾಗರ್ (ಚಾಕು) 2] ಎರಡು ಕಬ್ಬಿಣದ ರಾಡು  3] ಖಾರದ ಪುಡಿ ಪೊಟ್ಟಣ. 4] ಎರಡು ಕಟ್ಟಿಗೆಯ ಬಡಿಗೆಗಳು. 5] ಒಂದು ಕಂದು ಬಣ್ಣದ ಮಂಕಿ ಕ್ಯಾಪ್. 6] ಎರಡು ಕಪ್ಪು ಬಣ್ಣದ ಹ್ಯಾಂಡ್ ಗ್ಲೌಸ್ಗಳು 7] ಒಂದು ಬಿಳಿ ಬಣ್ಣದ ಸ್ವೀಪ್ಟ್ ಕಾರ ನಂ ಎಮ್ಹೆಚ್ 13 ಎಜೆಡ್ 8999 ಅಂ.ಕಿ.ರೂ: 04,00,000=00  ನೇದ್ದವುಗಳನ್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008