1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 130/2017 ಕಲಂ. 279, 337, 338, 304(ಎ) ಐ.ಪಿ.ಸಿ
ದಿನಾಂಕ: 31-05-2017 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಗಂಗಾವತಿ-ಆನೇಗುಂದಿ
ರಸ್ತೆಯಲ್ಲಿ (1) ಅಮೀರಖಾನ್ ತಂದೆ ಜಲಾಲುದ್ದೀನ್ ಖಾನ್ -18 ವರ್ಷ ಸಾ: ಗೋಪಾಲಾ ತಾ: ಜದ್ದು
ಪಿಪ್ರಾ, ಜಿಲ್ಲೆ: ಮಹಾರಾಜಗಂಜ್ (ಯು.ಪಿ) (2) ಗೋಲು ತಂದೆ ಅನ್ವರ್ ಖಾನ್-19 ವರ್ಷ, ಸಾ: ಗೋಪಾಲಾ
ತಾ: ಜದ್ದು ಪಿಪ್ರಾ, ಜಿಲ್ಲೆ: ಮಹಾರಾಜಗಂಜ್ (ಯು.ಪಿ) (3) ಮನೋಜ ತಂದೆ ಚಿದಾರೂ-20 ವರ್ಷ, ಸಾ:
ಸಿಯಾರಾಹಿ ಬಹಾರ, ತಾ: ಹರಪುರ ತಿವಾರಿ ಜಿ: ಮಹಾರಾಜ ಗಂಜ್ (ಯು.ಪಿ) ಇವರುಗಳು ಆಂಜನೇಯ ಬೆಟ್ಟ ಹಾಗೂ
ಸುತ್ತಮುತ್ತಲಿನ ಸ್ಥಳಗಳನ್ನು ನೋಡಿಕೊಂಡು ವಾಪಸ್ ಟಿ.ವಿ.ಎಸ್. ವಿಕ್ಟರ್ ಮೋಟಾರ ಸೈಕಲ್ ನಂಬರ್: ಕೆ.ಎ-35/
ಕೆ-6040 ನೇದ್ದರಲ್ಲಿ ಗಂಗಾವತಿಗೆ ಬರುತ್ತಿರುವಾಗ ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಗೋಲು
ತಂದೆ ಅನ್ವರ್ ಖಾನ್ ಈತನು ಮೋಟಾರ ಸೈಕಲನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು
ಬಂದಿದ್ದರಿಂದ ಸಾಯಿನಗರ ಹತ್ತಿರ ರಸ್ತೆ ತಿರುವಿನಲ್ಲಿ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಎಡಗಡೆ
ಪಕ್ಕದ ತೆಗ್ಗಿನಲ್ಲಿ ಕಲ್ಲು ಬಂಡೆಗಳ ಮೇಲೆ ಮೋಟಾರ ಸೈಕಲ್ ಸಮೇತ ಬಿದ್ದು ಮೂವರು ತೀವ್ರವಾಗಿ ಗಾಯಗೊಂಡಿದ್ದು,
ಚಿಕಿತ್ಸೆಗಾಗಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಮೀರಖಾನ್ ಈತನು
ಸಂಜೆ 6:40 ಗಂಟೆಗೆ ಮೃತಪಟ್ಟಿರುತ್ತಾನೆ. ಉಳಿದಿಬ್ಬಿದ್ದರನ್ನು ಹೆಚ್ಚಿನ ಚಿಕಿತ್ಸೆ ಕುರಿತು ಕೊಪ್ಪಳ
ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇದೆ.
2] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ. 279, 337 ಐ.ಪಿ.ಸಿ:.
ದಿನಾಂಕ: 31-05-2017 ರಂದು
ರಾತ್ರಿ 8-45 ಗಂಟೆಯ ಸುಮಾರಿಗೆ ಆರೋಪಿ ಲಿಂಗರಾಜ ತಂದೆ ಸಿದ್ದಪ್ಪ ಸಾ||ಕೊತ್ಬಾಳ ಈತನು ಚಲಾಯಿಸುತ್ತಿದ್ದ
ಕೆ.ಎಸ್.ಆರ್.ಟಿ.ಸಿ ಬಸ್ಸ ನಂ;ಕೆ.ಎ-37/ಎಫ್.276 ನೇದ್ದನ್ನು ಗಜೇಂದ್ರಗಡ -ಬಳೂಟಗಿ ರಸ್ತೆಯ ಮೇಲೆ
ಬಳೂಟಗಿ ಸೀಮಾದಲ್ಲಿ ಬರುವ ವೀರನಗೌಡ ಪೊಲೀಸ ಪಾಟೀಲ ಇವರ ಹೊಲದ ಹತ್ತಿರ ಬಸ್ಸನ್ನು ಅತೀವೇಗವಾಗಿ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತಿರವುನ್ನು ಲೆಕ್ಕಿಸದೇ ವಾಹನ ನಿಯಂತ್ರಿಸಲಾಗದೇ ರಸ್ತೆಯ ಎಡಮಗ್ಗಲು
ತಗ್ಗಿನಲ್ಲಿ ಎಡಮಗ್ಗಲಾಗಿ ನಿಂತಿದ್ದರಿಂದ ಬಸ್ಸನಲ್ಲಿದ್ದ 5 ಜನರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು
ಹಾಗೂ ಇನ್ನಿತರ ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಅವರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಅಂತಾ
ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ:.
ಫಿರ್ಯಾದಿಯ
ಅಣ್ಣ ತಮ್ಮಂದಿರು ಒಟ್ಟು 6 ಜನ ಇದ್ದು, ಬೇರೆ ಬೇರೆಯಾಗಿ ಉಪಜೀವಿಸುತ್ತಿದ್ದು, ಫಿರ್ಯಾದಿಯ
ಪಾಲಿನ ಜಮೀನು ಹಿರಿಯ ಅಣ್ಣನ ಹೆಸರಿನಲ್ಲಿ ಇರುತ್ತದೆ. ಸದರ ಜಮೀನಿನಲ್ಲಿ ಫಿರ್ಯಾದಿಯು ತನ್ನ
ಪಾಲಿನ ಜಮೀನನ್ನು ತನಗೆ ಬಿಟ್ಟುಕೊಡಲು 3 ವರ್ಷಗಳಿಂದ ಕೇಳುತ್ತಿದ್ದರು ಸಹ ಬಿಟ್ಟುಕೊಡದೇ ಇದ್ದು,
ಇಂದು ದಿನಾಂಕ:31-05-2017 ರಂದು ಸಂಜೆ 4.30 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಪಾಲಿಗೆ
ಬರಬೇಕಾದ ಜಮೀನಿನಲ್ಲಿಯ ಮನೆಯ ಹತ್ತಿರ ಇದ್ದಾಗ ಆರೋಪಿತರು ಬಂದು ಫಿರ್ಯಾದಿಗೆ ನೀನು ನಮಗೆ ಏನು
ಸಂಬಂದ ನಿನ್ನ ಪಾಲಿನ ಜಮೀನು ಏಕೆ ಕೇಳುತ್ತಿ ಅಂತಾ ಅಂದು ಈ ಸೂಳೆ ಮಗನಿಗೆ ಏನು ಕೇಳುತ್ತಿ
ಒದೆಯಿರಿ ಅಂತಾ ಅವಾಚ್ಯವಾಗಿ ಬೈಯ್ದಾಡಿ ಬ್ಯಾಕೋಲು ಕಟ್ಟಿಗೆಯಿಂದ ತಲೆಗೆ ಹೊಡೆದು ಕಾಲಿನಿಂದ
ಎದೆಗೆ ಒದ್ದು, ಕಲ್ಲಿನಿಂದ ತಲೆಗೆ ಹೊಡೆದಿರುತ್ತಾರೆ. ಘಟನೆಯನ್ನು ನೋಡಿ ಬಿಡಿಸಲು ಬಂದ
ಅಮರೇಶನಿಗೂ ಸಹ ಕಲ್ಲಿನಿಂದ ಹೊಡೆದು ದುಃಖಾಪಾತಗೊಳಿಸಿರುತ್ತಾರೆ. ಫಿರ್ಯಾದಿಯ ಹೆಂಡತಿ ಹಾಗೂ
ಗೌಂಡಿಕೆಲಸ ಮಾಡುತ್ತಿದ್ದ ಸುರೇಶನು ಬಂದು ಆರೋಪಿತರಿಗೆ ಸಿಟ್ಟು ಮಾಡಿ ಜಗಳ ಬಿಡಿಸಿದಾಗ
ಇನ್ನೊಮ್ಮೆ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಸುವದಿಲ್ಲಾ ಅಂತಾ ಜೀವದ ಬೆದರಿಕೆ
ಹಾಕಿ ಹೋಗಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 62/2017 ಕಲಂ. 143, 147, 148, 341, 323, 324, 354,
504, 506 ಸಹಿತ 149 ಐ.ಪಿ.ಸಿ:.
ದಿನಾಂಕ: 31-05-2017 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು
ಹಾಗೂ ಆಕೆಯ ಗಂಡ ಬ್ಬರೂ ಚನ್ನಪ್ಪನಹಳ್ಳಿ ಸೀಮಾದಲ್ಲಿಯ ತನ್ನ ಮಾವನ (ಗಂಡನ ಅಣ್ಣ) ಹೆಸರಿನಲ್ಲಿರುವ
ಜಮೀನದಲ್ಲಿ ಬಿತ್ತಲು ಹೋದಾಗ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಹೋಗಿ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ
ಹೋಲದಲ್ಲಿ ಬಿತ್ತನೆ ಮಾಡದಂತೆ ತಕರಾರು ಅವಾಚ್ಯ ಶಬ್ದಗಳಿಂದ ಬೈದಾಡಿದ್ದು, ಆಗ ಪಿರ್ಯಾದಿದಾರರು ಹೊಟ್ಟೆಗೆ
ತಿನ್ನಲು ಏನು ಇಲ್ಲಾ, ಹೊಲದಲ್ಲಿ ಕೂಡ ಪಾಲು ಕೊಟ್ಟಿಲ್ಲ ನಾ ಏನು ಮಾಡಬೇಕು, ಬಿತ್ತನೆ ಮಾಡಲು ಅವಕಾಶ
ಮಾಡಿ ಕೊಡಿ ಅಂತಾ ಕೇಳಿದ್ದಕ್ಕೆ ಆರೋಪಿ ನಂ. 01 & 02 ನೇದವರು ಇನ್ನೂಳಿದವರಿಗೆ ಜಗಳ ಮಾಡುವಂತೆ
ಪ್ರಚೋದಿಸಿದ್ದು, ಆಗ ಆರೋಪಿ ನಂ. 03 ರಿಂದ 06 ನೇದವರು ಕಟ್ಟಿಗೆ ಬಡಿಗೆ ತೆಗೆದುಕೊಂಡು ಪಿರ್ಯಾದಿಯ
ಗಂಡನಿಗೆ ಹೊಡಿಬಡಿ ಮಾಡಿದ್ದು ಆಗ ಪಿರ್ಯಾದಿದಾರಳು ಜಗಳ ಬಿಡಿಸಲು ಹೋದಾಗ ಆರೋಪಿ ನಂ. 03 ನೇದವನು
ಪಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿ ಮೈ ಕೈ ಮುಟ್ಟಿ ಕೈಯಿಂದ ಬಡಿದು ನೂಕಿಸಿದ್ದು ಅದೆ. ಅದೇರೀತಿ
ಆರೋಪಿ ನಂ. 04 ನೇದವನು ಬಡಿಗೆಯಿಂದ ಪಿರ್ಯಾದಿದಾರಳ ತಲೆಗೆ ಬಡಿದು ರಕ್ತಗಾಯ ಮಾಡಿದ್ದು, ಆರೋಪಿ ನಂ.
05 ನೇದವನು ಇಟ್ಟಿಗೆಯಿಂದ ಪಿರ್ಯಾದಿದಾರಳ ಬಲಗೈ ರಟ್ಟೆಗೆ ಬಡಿದು ಪೆಟ್ಟು ಮಾಡಿದ್ದು, ಆರೋಪಿ ನಂ.
07 ನೇದವಳು ಪಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಡಿದಿರುತ್ತಾಳೆ. ನಂತರ ಆರೋಪಿತರೆಲ್ಲರೂ
ಪಿರ್ಯಾದಿದಾರರಿಗೆ ಜಮೀನಿನ ವಿಷಯಕ್ಕೆ ಬಂದರೆ ಇದೇ ಜಮೀನದಲ್ಲಿ ನಿಮ್ಮನ್ನು ಹೂತು ಹಾಕುತ್ತೇವೆ ಅಂತಾ
ಬೆದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment