Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, June 2, 2017

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 47/2017 ಕಲಂ. 457, 380  ಐ.ಪಿ.ಸಿ  
ಫಿರ್ಯಾದಿದಾರರು ಹಾಗೂ ಅವರ ಮನೆಯವರು ನಿನ್ನೆ ದಿನಾಂಕ: 31-05-2017 ರಂದು ರಾತ್ರಿ 11-00 ಗಂಟೆ ಊಟ ಮಾಡಿ ಬೀಗ ಹಾಕಿಕೊಂಡು ತಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿಕೊಂಡು ನಂತರ ಇಂದು ದಿನಾಂಕ: 01-06-2017 ರಂದು ಬೆಳಗಿನ ಜಾವ 5-30 ಗಂಟೆಗೆ ಎದ್ದು ಕೆಳಗೆ ಬಂದು ಮನೆಯ ಬಾಗಿಲು ತೆಗಯಲು ಹೋದಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಬೆಡ್ ರೂಮಿನಲ್ಲಿಟ್ಟಿದ್ದ ತಿಜೂರಿಯನ್ನು ಹೊಡೆದು ತಿಜೂರಿಯಲ್ಲಿಟ್ಟಿದ್ದ 1] 4 ತೊಲೆಯ ಬಂಗಾರದ ತಾಳಿ ಸರ ಅಂ.ಕಿ: 1,10,000/- 2] 3 ತೊಲೆ ಬಂಗಾರದ ಚಪ್ಪಲ ಹಾರ ಅಂ.ಕಿ: 80,000/- 3] ಒಂದೊಂದು ತೊಲೆಯ ಬಂಗಾರದ 2 ಸುತ್ತು ಉಂಗುರು 50,000/- 4] 1/2 ತೊಲೆಯ ಬಂಗಾರದ 1 ಸುತ್ತು ಉಂಗುರ 12,500/- 5] 1/2 ತೊಲೆ ಬಂಗಾರದ ಬೋರು ಮಳ ಸರ 32 ಗುಂಡುಗಳು ಇರುವದು ಅಂ.ಕಿ: 12,500/- 6] 1/2 ತೊಲೆ ಬಂಗಾರದ ಬೆಂಡೋಲಿ ಅಂ.ಕಿ:12,500/- 7] ಸಣ್ಣ ಮಕ್ಕಳ 1/2 ತೊಲೆ 2 ಬಂಗಾರದ ಉಂಗುರುಗಳು ಅಂ.ಕಿ: 12,500/- 8] 25,000/- ನಗದು ಹಣ, 9] ಒಂದು ನೋಕಿಯಾ ಮೊಬೈಲ್ ಸೆಟ್ ಅದರಲ್ಲಿ ಐಡಿಯಾ ಸಿಮ್ ಕಾರ್ಡ ನಂ: 9611271569 ಇದ್ದದ್ದು, ಅಂ.ಕಿ: 200/- 10] ಒಂದು ಟೈಟಾನ್ ವಾಚ್ ಅಂ.ಕಿ: 500/- ಹೀಗೆ ಒಟ್ಟು 3,15,700/- ಬೆಲೆ ಬಾಳುವ ಬಂಗಾರದ ಸಾಮಾನು ಹಾಗೂ ನಗದು ಹಣ, ಮೊಬೈಲ್, ವಾಚ್ ತಿಜೂರಿಯಲ್ಲಿಟ್ಟಿದ್ದವುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬೀಗ ಹೊಡೆದು ಮನೆ ಪ್ರವೇಶಿಸಿ ಬೆಡ್ ರೂಮಿನಲ್ಲಿಟ್ಟಿದ್ದ ತಿಜೂರಿಯ ಬೀಗ ಹೊಡೆದು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ರಾತ್ರಿ ವೇಳೆಯಲ್ಲಿ ಮನೆ ಕಳ್ಳತನ ಮಾಡಿದ ಕಳ್ಳರನ್ನು ಪತ್ತ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅದೆ.
2]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 48/2017 ಕಲಂ. 457, 380  ಐ.ಪಿ.ಸಿ  

ಫಿರ್ಯಾದಿದಾರರು ಹಾಗೂ ಅವರ ಮಗ ನಿನ್ನೆ ದಿನಾಂಕ: 31-05-2017 ರಂದು ರಾತ್ರಿ 10-30 ಗಂಟೆ ಊಟ ಮಾಡಿ ಬೀಗ ಹಾಕಿಕೊಂಡು ತಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿಕೊಂಡು ನಂತರ ಇಂದು ದಿನಾಂಕ: 01-06-2017 ರಂದು ಬೆಳಗಿನ ಜಾವ 5-30 ಗಂಟೆಗೆ ಎದ್ದು ಕೆಳಗೆ ಬಂದು ಮನೆಯ ಬಾಗಿಲು ತೆಗಯಲು ಹೋದಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಅಡಿಗೆ ಮನೆಯಲ್ಲಿದ್ದ ತಿಜೂರಿಯನ್ನು ಹೊಡೆದು ತಿಜೂರಿಯಲ್ಲಿಟ್ಟಿದ್ದ 1] 1,50,000/- ನಗದು ಹಣ, 2] 1 ತೊಲೆ ಬಂಗಾರದ ಸುತ್ತು ಉಂಗುರ, ಅಂ.ಕಿ: 25,000/- 3] 1 ತೊಲೆ ಬಂಗಾರದ ಚೈನ್ ಅಂ.ಕಿ: 25,000/- 4] 5,000/- ಚಿಲ್ಲರೆ ಹಣ 5] ಒಂದು ಇಂಟೆಕ್ಸ್ ಮೊಬೈಲ್ ಅಂ.ಕಿ: 200/- 6] ಬ್ಯಾಂಕ್ ಪಾಸ್ ಬುಕ್ ಹಾಗೂ ಚೆಕ್ ಬುಕ್ ಹೀಗೆ ಒಟ್ಟು 2,05,200/- ಬೆಲೆ ಬಾಳುವ ಬಂಗಾರದ ಸಾಮಾನು ಹಾಗೂ ನಗದು ಹಣ, ಮೊಬೈಲ್, ಬ್ಯಾಂಕ್ ಪಾಸ್ ಬುಕ್ ಹಾಗೂ ಚೆಕ್ ಬುಕ್ ತಿಜೂರಿಯಲ್ಲಿಟ್ಟಿದ್ದವುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬೀಗ ಹೊಡೆದು ಮನೆ ಪ್ರವೇಶಿಸಿ ಅಡಿಗೆ ಮನೆಯಲ್ಲಿದ್ದ ತಿಜೂರಿಯ ಬೀಗ ಹೊಡೆದು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ಈ ವಿಷಯವನ್ನು ತವರು ಮನೆಗೆ ಹೋದ ನನ್ನ ಹೆಂಡತಿ ಶೈಲಜಾಳಿಗೆ ಫೋನ್ ಮಾಡಿ ವಿಷಯ ತಿಳಿಸಿ, ಹಿರಿಯರಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ರಾತ್ರಿ ವೇಳೆಯಲ್ಲಿ ಮನೆ ಕಳ್ಳತನ ಮಾಡಿದ ಕಳ್ಳರನ್ನು ಪತ್ತ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅದೆ.  

0 comments:

 
Will Smith Visitors
Since 01/02/2008