Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, June 12, 2017

1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ. 279, 337, 338, 304(ಎ) ಐ.ಪಿ.ಸಿ
ದಿನಾಂಕ. 11-06-2017 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಹುಣಸಿಹಾಳ-ಗುನ್ನಾಳ ರಸ್ತೆಯ ಮೇಲೆ ಗುನ್ನಾಳ ಸೀಮಾದ ಅಯ್ಯನಗೌಡ ಕೆಂಚಮ್ಮನವರ ಇವರ ಮಾವಿನ ತೋಟದ ಹತ್ತಿರ ಮೋ.ಸೈಕಲ ನಂ. ಕೆ.ಎ-35 ಎಕ್ಸ್-4386 ನೇದ್ದರ ಚಾಲಕ ಬಸವರಾಜನು ತನ್ನ ಮೋ.ಸೈ ಹಿಂದೆ ಫಿಯರ್ಾಧಿದಾರರನ್ನು ಕುಳಿಸಿಕೊಂಡು ಮೋ.ಸೈಕಲನ್ನು ಹುಣಸಿಹಾಳ ಕಡೆಯಿಂದ ಗುನ್ನಾಳ ಕಡೆಗೆ ಹಾಗೂ ಮೋ.ಸೈಕಲ ನಂ.ಕೆ.ಎ-37 ಇ.ಎ-7399 ನೇದ್ದರ ಚಾಲಕ ಹನುಮಂತನು ತನ್ನ ಮೋ.ಸೈಕಲನಲ್ಲಿ ಹಿಂದೆ ಬಾಳಪ್ಪನನ್ನು ಕುಳಿಸಿಕೊಂಡು ತನ್ನ ಮೋ.ಸೈಕಲನ್ನು ಗುನ್ನಾಳ ಕಡೆಯಿಂದ ಹುಣಸಿಹಾಳ ಕಡೆಗೆ ಇಬ್ಬರೂ ತಮ್ಮ ತಮ್ಮ ಮೋ.ಸೈಕಲಗಳನ್ನು ಅತಿವೇಗ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ, ರಸ್ತೆಯ ಮೇಲೆ ಅಡ್ಡಾದಿಡ್ಡಿಯಗಿ ಚಲಾಯಿಸಿಕೊಂಡು ಬಂದು ಇಬ್ಬರೂ ಮೋ.ಸೈಕಲ ಸವಾರರು ಒಬ್ಬರಿಗೊಬ್ಬರು ಸೈಡನ್ನು ಕೊಟ್ಟುಕೊಳ್ಳದೇ ರಸ್ತೆ ಮದ್ಯದಲ್ಲಿ ಮುಖಾಮುಖಿಯಾಗಿ ಠಕ್ಕರಕೊಟ್ಟುಕೊಂಡು ಅಪಘಾತ ಪಡಿಸಿಕೊಂಡಿದ್ದರಿಂದ, ಬಸವರಾಜ ಮತ್ತು ಬಾಳಪ್ಪನಿಗೆ ಭಾರಿ ಸ್ವರೂಪದ ಗಾಯ ಪೆಟ್ಟುಗಳಾಗಿದ್ದು, ಫಿಯರ್ಾದಿ ಹಾಗೂ ಹನುಮಂತನಿಗೆ ಸಾಧಾ ಸ್ವರೂಪದ ಗಾಯಪೆಟ್ಟುಗಳಾಗಿದ್ದು, ಬಸವರಾಜ ಈತನನ್ನು ಹೆಚ್ಚಿನ ಚಿಕಿತ್ಸೆ ಕುರಿತು ಗುನ್ನಾಳ ಆಸ್ಪತ್ರೆಯಿಂದ ಕೊಪ್ಪಳಕ್ಕೆ ಕರೆದುಕೊಂಡು ಹೋಗುವಾಗ ದಾರಿ ಮದ್ಯ ಮೃತಪಟ್ಟಿರುತ್ತಾನೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 140/2017 ಕಲಂ. 87 Karnataka Police Act.
ದಿನಾಂಕ:- 11-06-2017 ರಂದು ಮಧ್ಯಾಹ್ನ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಡೆಂಕನಕಲ್ ಗ್ರಾಮದ ಅಂಗನವಾಡಿ ಕೇಂದ್ರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರ ಮಾರ್ಗದರ್ಶನದಲ್ಲಿ ಶ್ರೀ ಕಾಶೀನಾಥ, ಎ.ಎಸ್.ಐ. ಇಬ್ಬರು ಪಂಚರನ್ನು ಬರಮಾಡಿಕೊಂಡು ಸಂಗಡ ಇದ್ದ ಸಿಬ್ಬಂದಿಯವರಾದ ಹೆಚ್.ಸಿ. 160, 80, 173, ಪಿ.ಸಿ. ನಂ: 110, 363, 180, 237  ಹಾಗೂ ಚೀಪ ಚಾಲಕ ಎ.ಹೆಚ್.ಸಿ 17 ಕನಕಪ್ಪ ರವರೊಂದಿಗೆ ಹೋಗಿ ಭಾತ್ಮೀ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ  ಅಂಗನವಾಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 4 ಜನರು ಸಿಕ್ಕಿಬಿದ್ದಿದ್ದು, ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 610/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 68/2017 ಕಲಂ. 87 Karnataka Police Act.
ದಿನಾಂಕ 11-06-2017 ರಂದು ಮಧ್ಯಾಹ್ನ 2-15 ಗಂಟೆಯಿಂದ 3-15 ಗಂಟೆಯವರೆಗೆ ಅವಧಿಯಲ್ಲಿ ಠಾಣಾ ವ್ಯಾಪ್ತಿಯ ಇಂಗಳದಾಳ ಗ್ರಾಮದ ರಸ್ತೆ ಪಕ್ಕದಲ್ಲಿ ನೀರಿನ ಟ್ಯಾಂಕ್ ಹತ್ತಿರದಲ್ಲಿರುವ ಯಂಕಪ್ಪ ಇವರ ಹೋಟಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಪೊಲೀಸ್ರು ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲಾಗಿ, ಜೂಜಾಟ ಆಡುತ್ತಿದ್ದ 8 ಜನರು ಸಿಕ್ಕಿದ್ದು, ಸದರಿ 8 ಜನರನ್ನು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ ರೂ. 8,350=00 ಗಳನ್ನು ಮತ್ತು ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ವಾಪಸ್ ಠಾಣೆಗೆ ಬಂದು ಎ.ಎಸ್.ಐ. ರವರು ವರದಿ ಕೊಟ್ಟ ಮೇರೆಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.   
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 70/2017 ಕಲಂ. 87 Karnataka Police Act.
ದಿನಾಂಕ: 11-06-2017 ರಂದು ಸಾಯಾಂಕಾಲ 4-10 ಗಂಟೆಯ ಸುಮಾರಿಗೆ ಮುಧೋಳ ಗ್ರಾಮದಲ್ಲಿ ಬರುವ ಸರಕಾರಿ ಹಿರಿಯ ಬಾಲಕೀಯರ ಸಾಲೆ ಹಿಂದುಗಡೆ ಸಾರ್ವಜನಿಕ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 4 ಜನರು ಸಿಕ್ಕಿ ಬಿದ್ದಿದ್ದು ಇನ್ನೂ 03 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3400/- ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ. ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
5]  ಅಳವಂಡಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 89/2017 ಕಲಂ. 87 Karnataka Police Act.

ದಿನಾಂಕ: 11-06-2017 ರಂದು ಸಂಜೆ 7-30 ಗಂಟೆಗೆ ಪಿ.ಎಸ್.ಐ. ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ವಾಪಸ್ ಠಾಣೆ ಬಂದು, ಜೂಜಾಟದಲ್ಲಿ ಜಪ್ತಿ ಮಾಡಿದ ಮುದೇಮಾಲುಗಳನ್ನು ಹಾಗೂ 07 ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು, ಸದರಿ ವರದಿಯನ್ನು ಪರಿಶೀಲಿಸಿ ನೋಡಲಾಗಿ ಫಿರ್ಯಾಧಿದಾರರಾದ ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆ ರವರು, ಹಾಗೂ ಸಿಬ್ಬಂದಿ, ಪಂಚರು ಕೂಡಿಕೊಂಡು ಇಂದು ದಿನಾಂಕ: 11-06-2017 ರಂದು ಸಾಯಂಕಾಲ 5-30 ಗಂಟೆಗೆ ಠಾಣಾ ವ್ಯಾಪ್ತಿಯ ಘಟ್ಟಿರಡ್ಡಿಹಾಳ ಗ್ರಾಮ ಮಸೀದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದ್ದು, 07 ಜನ ಆರೋಪಿತರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 3,040=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು, ಹಾಗೂ ಒಂದು ಪ್ಲಾಸ್ಟೀಕ್ ಬಕರ್ಾವನ್ನು ಜಪ್ತ ಮಾಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಗಿದೆ. 

0 comments:

 
Will Smith Visitors
Since 01/02/2008