Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, June 23, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 157/2017 ಕಲಂ. 78(3) Karnataka Police Act.
ದಿನಾಂಕ: 22-06-2017 ರಂದು ಸಂಜೆ ನಾನು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಬರುವ ಶರಣ ಬಸವೇಶ್ವರ ಕ್ಯಾಂಪಿನಲ್ಲಿ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ರವರಿಗೆ ಬಂದ ಮೇರೆಗೆ  ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು ಹೋಗಿ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ರಾಜಾಸಾಬ ತಂದೆ ಮೀರಸಾಬ ಕಮಲಾಪೂರು, ವಯಸ್ಸು 32 ವರ್ಷ, ಜಾತಿ: ಮುಸ್ಲೀಂ ಉ: ಕೂಲಿ ಕೆಲಸ ಸಾ: ರಾಮಸಾಗರ ತಾ: ಕಂಪ್ಲಿ ಹಾಲಿವಸ್ತಿ: ಶರಣಬಸವೇಶ್ವರ ಕ್ಯಾಂಪ್. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 940/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
2]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ. 379 ಐ.ಪಿ.ಸಿ:.
ದಿನಾಂಕ 22-06-2017 ರಂದು ಬೆಳಿಗ್ಗೆ 9-30 ಎ ಎಮ್ ಗಂಟೆಗೆ ರವಿ ತಂದೆ ದೊಡ್ಡ ವಿರುಪಣ್ಣ ವಯಾ: 26 ವರ್ಷ ಜಾ: ಮಾದಿಗ ಉ: ಹಮಾಲಿ ಕೆಲಸ ಸಾ: ವಾರ್ಡ ನಂ 27 ಹರಿಜನವಾಡ, ಹಿರೇಜಂತಕಲ್, ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿ: 17-06-2017  ರಂದು ರಾತ್ರಿ 8-00 ಗಂಟೆಯಿಂದ 09-00  ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು   ಗಂಗಾವತಿ ನಗರದ ಅಗ್ರಿ ಸ್ಪೋರ್ಟ್ಸ ಕ್ಲಬ್ ಮುಂದುಗಡೆ ರಸ್ತೆಯ ಬಾಜು ನಿಲ್ಲಿಸಿದ  ಪಿರ್ಯಾಧಿದಾರರ ಹಿರೋ ಕಂಪನಿಯ ಪ್ಯಾಶನ್ ಪ್ರೋ ಸೈಕಲ್  ಮೋಟಾರ ನಂ ಕೆ,ಎ 37  X  3492  ಚಾಸ್ಸಿ ನಂ MBLHA10A6EHE32736 , ಇಂಜಿನ್  ನಂ  HA10ENEHE09096 ಇದ್ದು  ಸಿಲ್ವರ್   ಬಣ್ಣದ್ದು ಅಂ.ಕಿ 35,000-00. ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಗಣಕಿಕೃತ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ. 3 & 7 ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ 1955 ಮತ್ತು ಕಲಂ. 18 ಕರ್ನಾಟಕ ಸಾರ್ವಜನಿಕ ವಿತರಣಾ ಪದ್ದತಿ ನಿಯಂತ್ರಣಾದೇಶ 1992.
ದಿನಾಂಕ 22-06-2017 ರಂದು ಮಧ್ಯಾಹ್ನ 1-00 ಗಂಟೆಗೆ ಶ್ರೀಮತಿ ನಂದಾ ಗಂಡ ಪಂಪಾಪತಿ ಪಲ್ಲೇದ, ವಯಸ್ಸು 49 ವರ್ಷ,  ಜಾ: ಲಿಂಗಾಯತ, ಉ: ಆಹಾರ ನಿರೀಕ್ಷಕರು, ತಹಶೀಲ್ ಕಾರ್ಯಾಲಯ, ಗಂಗಾವತಿ ಸಾ: ವಿರುಪಾಪುರ ತಾಂಡಾ, ಗಂಗಾವತಿ ಇವರು ಠಾಣೆಗೆ ಹಾಜರಾಗಿ ಒಂದು ಫಿರ್ಯಾದಿಯನ್ನು ಸಲ್ಲಿಸಿದ್ದು, ಸಾರಾಂಶವೇನೆಂದರೆ, ಇಂದು ಬನ್ನಿಗಿಡದ ಕ್ಯಾಂಪಿನ ಬಸವೇಶ್ವರ ಹೌಸಿಂಗ್ ಕಾಲೋನಿಯ ಕೇದಾರನಾಥಸ್ವಾಮಿ ಎಂಬುವವರ ಮನೆಯಲ್ಲಿ  ಅಕ್ರಮವಾಗಿ ಸೀಮೆಎಣ್ಣೆ ಸಂಗ್ರಹಣೆ ಮಾಡಿರುವುದಾಗಿ ಬಾತ್ಮೀ ಬಂದಿದ್ದು ದಾಳಿ ಮಾಡುವ ಕುರಿತು ಪಿ.ಐ. ಗಂಗಾವತಿ ನಗರ ಪೊಲೀಸ್ ಠಾಣೆ ಮತ್ತು ಅವರ ಸಿಬ್ಬಂದಿಯವರಾದ ಪಿ.ಸಿ. 50, 151 ಮತ್ತು 387 ಇವರಿಗೆ ಹಾಗೂ ಪಂಚರಿಗೆ ಕರೆಯಿಸಿಕೊಂಡಿದ್ದು, ಅವರಿಗೆ ವಿಷಯವನ್ನು ತಿಳಿಸಿ ಎಲ್ಲರೂ ಕೂಡಿಕೊಂಡು ಗಂಗಾವತಿ ನಗರದ ಬನ್ನಿಗಿಡದ ಕ್ಯಾಂಪ್ ದಲ್ಲಿ ಹೋಗಿ ಬೆಳಿಗ್ಗೆ 9-00 ಗಂಟೆಗೆ ಕೇದಾರನಾಥಸ್ವಾಮಿ ಇವರ ಮನೆಯಲ್ಲಿ ದಾಳಿ ಮಾಡಿದ್ದು, ಚೆಕ್ ಮಾಡಿದಾಗ ಮನೆಯಲ್ಲಿ ಅಕ್ರಮವಾಗಿ ಪಡಿತರ ಸೀಮೆಎಣ್ಣೆಯನ್ನು ಕ್ಯಾನ್ ಗಳಲ್ಲಿ ಸಂಗ್ರಹಿಸಿರುವುದು ಕಂಡು ಬಂದಿದ್ದು, ಅಲ್ಲದೇ ಸೀಮೆಎಣ್ಣೆಯನ್ನು ಮೆಹಬೂಬ ಸಾ: ಇಸ್ಲಾಂಪುರ, ಗಂಗಾವತಿ ಇವನು ಹಳ್ಳಿಗಳಲ್ಲಿ ಸಂಗ್ರಹಿಸಿಕೊಂಡು ಬಂದು ತನಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದನು.  ಸಂಗ್ರಹಿಸಿಡಲಾಗಿದ್ದ ಕ್ಯಾನುಗಳನ್ನು ಪರಿಶೀಲಿಸಲಾಗಿ 5 ಕ್ಯಾನ್ ಗಳದ್ದು ಪ್ರತಿಯೊಂದು ಕ್ಯಾನ್ ದಲ್ಲಿ 35 ಲೀಟರಗಳಷ್ಟು ಸೀಮೆಎಣ್ಣೆಯನ್ನು  ತುಂಬಬಹುದಾಗಿದ್ದು, ಸದರಿ 5 ಕ್ಯಾನ್ ಗಳಲ್ಲಿ ಅಂದಾಜು 160 ಲೀಟರಗಳಷ್ಟು ಸೀಮೆಎಣ್ಣೆ ಇದ್ದು, ಸಬ್ಸಿಡಿ ರಹಿತ ಸೀಮೆಎಣ್ಣೆ ದರವು ಪ್ರತಿ ಲೀಟರ್ ಗೆ ರೂ. 35-00 ರಂತೆ ಅದರ ಬೆಲೆ ರೂ. 4,800-00 ಇರುತ್ತದೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 95/2017 ಕಲಂ. 379 ಐಪಿಸಿ ಮತ್ತು ಎಂ.ಎಂ.ಆರ್.ಡಿ 1957 ರೂಲ್ 4, 4(1),4(ಎ):
ದಿನಾಂಕ: 22-06-2017 ರಂದು 6-00 ಗಂಟೆ ಸುಮಾರಿಗೆ ಠಾಣೆ ವ್ಯಾಪ್ತಿಯ ಬೆಳಗಟ್ಟಿ ಗ್ರಾಮದಲ್ಲಿ ರಂಜಾನ ಹಬ್ಬದ ನಿಮಿತ್ಯ ಶಾಂತಿ ಸಭೆಯನ್ನು ಮುಗಿಸಿಕೊಂಡು ಪೆಟ್ರೋಲಿಂಗ್ ಮಾಡುತ್ತಾ ಬರುತ್ತಿರುವಾಗ ಬೋಚನಹಳ್ಳಿ ಕ್ರಾಸ ಹತ್ತಿರ ಆರೋಪಿ ನಂ: 01 ನೇದ್ದವರು ತನ್ನ ಲಾರಿ ನಂ: ಕೆ.ಎ-25/ಎಎ-1381 ನೇದ್ದರಲ್ಲಿ ಸರ್ಕಾರಕ್ಕೆ ಸೇರಿದ ತುಂಗಭದ್ರ ನದಿಯಲ್ಲಿಯ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಅಂದಾಜು 10,000-00 ರೂ. ಬೆಲೆ ಬಾಳುವ ಮರಳನ್ನು ಕಳ್ಳತನ ಮಾಡಿ, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ತಮ್ಮ ಲಾರಿಯಲ್ಲಿ ತುಂಬಿಕೊಂಡು ಬರುತ್ತಿರುವಾಗ ಶ್ರೀ ಶಂಕರಪ್ಪ ಎಲ್ ಪಿ.ಎಸ್.ಐ. ಅಳವಂಡಿ ರವರು ಸಿಬ್ಬಂದಿಯೊಂದಿಗೆ ಹಿಡಿದು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಲಾರಿ ಮತ್ತು ಆರೋಪಿತನನ್ನು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
5] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 96/2017 ಕಲಂ. 379 ಐಪಿಸಿ ಮತ್ತು ಎಂ.ಎಂ.ಆರ್.ಡಿ 1957 ರೂಲ್ 4, 4(1),4(ಎ):
ದಿನಾಂಕ:   22-06-2017 ರಂದು 9-00 ಗಂಟೆ ಸುಮಾರಿಗೆ ಠಾಣೆ ವ್ಯಾಪ್ತಿಯ ತಿಗರಿ ಕಡೆಯಿಂದ ಆರೋಪಿತರಾದ ಚಾಲಕ ಮತ್ತು ಮಾಲಿಕರು ತಮ್ಮ ಲಾರಿ ನಂ: ಕೆ.ಎ-53/ಬಿ- 676 ನೇದ್ದರಲ್ಲಿ ಸರ್ಕಾರಕ್ಕೆ ಸೇರಿದ ತಿಗರಿ ಗ್ರಾಮದ ಹತ್ತಿರ ತುಂಗಭದ್ರ ನದಿಯಲ್ಲಿಯ ಅಂದಾಜು 10,000-00 ರೂ. ಬೆಲೆ ಬಾಳುವ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಕಳ್ಳತನ ಮಾಡಿಕೊಂಡು, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಲಾರಿಯಲ್ಲಿ ತುಂಬಿಕೊಂಡು ಬರುತ್ತಿರುವಾಗ ಕಂಪ್ಲಿ ಗ್ರಾಮದ ಬೈರಾಪೂರ ಕ್ರಾಸನಲ್ಲಿ ಶ್ರೀ ಶಂಕರಪ್ಪ ಎಲ್ ಪಿ.ಎಸ್.ಐ. ರವರು ಸಿಬ್ಬಂದಿಯೊಂದಿಗೆ ಹಿಡಿದಿದ್ದು ಚಾಲಕನು ಸ್ಥಳದಿಂದ ಕತ್ತಲಲ್ಲಿ ತಪ್ಪಿಸಿಕೊಂಡು ಹೋಗಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಲಾರಿಯನ್ನು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 146/2017 ಕಲಂ. 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ ರೂಲ್ಸ್-1994.
ದಿ:23-06-2017 ರಂದು 04-45 ಎ.ಎಮ್ ಕ್ಕೆ ಫಿರ್ಯಾದಿದಾರರು ತಮ್ಮ ಸಂಗಡ ಹೆಚ್.ಸಿ-37,208, ಪಿಸಿ-346 ರವರಿಗೆ ಸರ್ಕಾರಿ ಜೀಪ ನಂ: ಕೆಎ-37/ಜಿ-205 ನೇದ್ದರ ಚಾಲಕ ಶಿವಪ್ಪ ಎ.ಹೆಚ್.ಸಿ-04 ರವರ ಸಮೇತ ಮುಂಬರುವ ರಮಜಾನ್ ಹಬ್ಬದ ಪ್ರಯುಕ್ತ ಗ್ರಾಮಗಳಲ್ಲಿ ರಾತ್ರಿ ಪ್ಯಾಟ್ರೋಲಿಂಗ್ ಕರ್ತವ್ಯದಲ್ಲಿರುವಾಗ, ಠಾಣಾ ವ್ಯಾಪ್ತಿಯ ಹೊರತಟ್ನಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಚಿಕ್ಕಸೊಂದೋಗಿ ಕಡೆಯಿಂದ ಆರೋಪಿತನು ತನ್ನ ಟ್ರ್ಯಾಕ್ಟರ  ಇಂಜನ್ ನಂ: BHS337A85039 ಹಾಗೂ ಟ್ರೇಲರ್ ಚೆಸ್ಸಿ ನಂ: 023  ನೇದ್ದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದಾ ಮರಳನ್ನು ಸಾಗಾಟ ಮಾಡುವದನ್ನು ಕಂಡು ವಿಚಾರಿಸಿದಾಗ ಆರೋಪಿತನು ಕತ್ತಲಲ್ಲಿ ಓಡಿ ಹೋಗಿದ್ದು, ವಶಕ್ಕೆ ತೆಗೆದುಕೊಂಡ ಸುಮಾರು 1 ಲಕ್ಷ ರೂ. ಬೆಲೆಬಾಳುವ ಟ್ರ್ಯಾಕ್ಟರ ಮತ್ತು 3600=00 ರೂ. ಬೆಲೆಬಾಳುವ ಮರಳನ್ನು ಶ್ರೀ ಗುರುರಾಜ. ಪಿ.ಎಸ್.ಐ ರವರು ಇಬ್ಬರು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಕಾರಣ ಯಾವುದೇ ಪರವಾನಿಗೆ ಪಡೆಯದೇ ಕಳ್ಳತನದಿಂದಾ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಟ್ರ್ಯಾಕ್ಟರ ಚಾಲಕ ರಾಮಣ್ಣ ತಂದೆ ಭೀಮಣ್ಣ ಹರಿಜನ. ವಯ: 21, ಜಾ: ಮಾದಿಗ, ಉ: ಟ್ರ್ಯಾಕ್ಟರ ಚಾಲಕ, ಸಾ: ಹೊರತಟ್ನಾಳ. ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿನಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
7]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 155/2017 ಕಲಂ. 454, 457, 380 ಐಪಿಸಿ:.

ದಿನಾಂಕ : 22-06-2017 ರಂದು ಬೆಳಗ್ಗೆ 9-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳಾದ ಶ್ರೀಮತಿ ಶ್ರೀಮತಿ  ಭವಾನಿ ಗಂಡ ಸತ್ಯನಾರಾಯಣ  ಬಲ್ಲೆಮಪಲ್ಲಿ  ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನುಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ದಿನಾಂಕ : 08-06-2017 ರಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ಅದರ ಚಾವಿಯನ್ನು ನಮ್ಮ ಕೈಯಲ್ಲಿ  ಕೊಟ್ಟು ಮನೆಕಡೆ ನೋಡಿಕೊಳ್ಳುವಂತೆ ಹೇಳಿ ಹೊಗಿದ್ದರು. ನನ್ನ ಗಂಡ ಹಾಗೂ ನಾನು ಗಂಗಾವತಿಯಿಂದ ಆಗಾಗ್ಗೆ ಸಂಗಾಪೂರಕ್ಕೆ ಬಂದು ನಮ್ಮ ತಮ್ಮನ ಮನೆಯನ್ನು ನೋಡಿಕೊಂಡು ಹೊಗುತ್ತಿದ್ದೇವು. ಸದರಿ ಮನೆಯ ಕಸ ಕೂಡಿಸಲೆಂದು ರಾಜೇಶ್ವರಿ ಗಂಡ ರಾಜು  ಸಾ- ಸಂಗಾಪೂರ ಇಕೆಗೆ ಹೇಳಿದ್ದೇವು. ನಿನ್ನೆ ದಿನಾಂಕ : 21-06-2017 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನನ್ನ ಗಂಡ ಸತ್ಯನಾರಾಯಣ ಇವರು ನಮ್ಮ ತಮ್ಮನ ಮನೆ ಕಡೆ ಬಂದು ನೋಡಿಕೊಂಡು  ಹೊಗಿದ್ದರು.  ದಿನಾಂಕ : 22-06-2017 ರಂದು ಮನೆಯ ಮುಂದಿನ ಕಸಗುಡಿಸಲೆಂದು ಬಂದಿದ್ದ  ರಾಜೇಶ್ವರಿ ಗಂಡ  ರಾಜು ಇವರು ಬೆಳಗ್ಗೆ 7-00 ಗಂಟೆಯ ಸುಮಾರಿಗೆ ನೋಡುವಷ್ಟರಲ್ಲಿ ಯಾರೋ. ಕಳ್ಳರು ಸತೀಶಕುಮಾರ  ರವರ ಮನೆಯ ಬಾಗಿಲದ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ತಿಳಿಸಿದ್ದರಿಂದ   ನಾನು ಹಾಗೂ ನನ್ನ ಗಂಡ ಗಾಭರಿಯಾಗಿ ಬಂದು ನೋಡಲು  ವಿಷಯ ನಿಜವಿತ್ತು. ನನ್ನ ತಮ್ಮನಿಗೆ ಪೋನ್ ಮಾಡಿ ವಿಚಾರಿಸಿದ್ದು, ಮನೆಯಲ್ಲಿ ಅಲಮಾರದಲ್ಲಿಟ್ಟಿದ್ದ  1) 15 ಗ್ರಾಂ ತೂಕದ ಬಂಗಾರದ ಎರಡು ಜೊತೆ ಬೆಂಡೋಲೆ ಅಂ.ತೂ- 1½  ತೊಲೆ ಅ. ಕಿ- 24,000=00 ರೂ.ಗಳು 2)  ಅರಳಿನ ಒಂದು ತೊಲೆ ಬಂಗಾರದ ಉಂಗುರು  ಅಂ.ಕಿ- 16,000=00 ರೂ. 3) 5 ಗ್ರಾಂ ತೂಕದ ಒಂದು ಬಂಗಾರದ ಸಾದಾ ಉಂಗರು ಅಂ.ಕಿ- 8,000=00 ರೂ. ಗಳು  4)  5 ಗ್ರಾಮ್  ತೂಕದ ಒಂದು ಬಂಗಾರದ ಚೈನ್ ಸರ ಅಂ.ಕಿ- 8,000=00 ರೂ.ಗಳು 5) ಬೆಳ್ಳಿಯ ಕುಂಕುಮಭರಣಿ ಹಾಗೂ 2 ಬಟ್ಟಲುಗಳು ಸೇರಿ ಅಂ.ತೂ-250 ಗ್ರಾಂ. ಅ.ಕಿ 10,000=00  6) ನಗದು ಹಣ 10000=00 ರೂ.ಗಳು ಸೇರಿದಂತೆ ಒಟ್ಟು ಅಂ.ಕಿ 76,000=00 ರೂ. ಬೆಲೆಬಾಳುವ ಬಂಗಾರ, ಬೆಳ್ಳಿ, ನಗದು ಕಳ್ಳತನ ಮಾಡಿಕೊಂಡು ಹೊಗಿದ್ದು, ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರತ್ತದೆ.

0 comments:

 
Will Smith Visitors
Since 01/02/2008