Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, June 24, 2017

1]  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ. 78(3) Karnataka Police Act.
ದಿನಾಂಕ: 23-06-2017 ರಂದು ರಾತ್ರಿ 7-45 ಗಂಟೆ ಸುಮಾರಿಗೆ ಕುಕನೂರು ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರ ಸಿಂಡಿಕೇಟ್ ಬ್ಯಾಂಕ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಾರ್ವಜನಿಕ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕರೆದು ಹಚ್ಚೋರು ಹಚ್ಚೀರಿ ನಸೀಬದಾಟ ನಂಬರ್ ಬಿದ್ದರೆ 1 ರೂ.ಗೆ 80 ರೂ.ಕೊಡುತ್ತೇವೆ ಅಂತಾ ಕೂಗಿ ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು, ಓ.ಸಿ. ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿಯಲು ಓ.ಸಿ. ಮಟಕಾ ನಂಬರಗಳನ್ನು ಬರೆಯಿಸಲು ಬಂದಿದ್ದ ಇನ್ನೂಳಿದ ಆರೋಪಿ 08 ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ದಾಳಿ ಕಾಲಕ್ಕೆ ಮಟಕಾ ಜೂಜಾಟದ ನಗದು ಹಣ 13,490/-ರೂ., ಹಾಗೂ ಜೂಜಾಟದ ಸಾಮಾಗ್ರಿಗಳಾದ ಓ.ಸಿ. ಮಟಕಾ ನಂಬರ್ ಬರೆದ 01 ಚೀಟಿ, ಓ.ಸಿ. ಮಟಕಾ ಚಾರ್ಟ ಅಂ.ಕಿ, ಇಲ್ಲಾ, ಒಂದು ಬಾಲ್ ಪೆನ್ ಅಂ.ಕಿ. ಇಲ್ಲಾ. ಇವುಗಳೊಂದಿಗೆ ಸಿಕ್ಕಿಬಿದ್ದಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.
2]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 149/2017 ಕಲಂ. 279, 337 ಐ.ಪಿ.ಸಿ:.
ದಿನಾಂಕ : 23-06-2017 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ : ಕೆ.-21/-7768 ನೇದ್ದರಲ್ಲಿ ಸೊಲ್ಲಾಪೂರಲ್ಲಿ ಈರುಳ್ಳಿಯನ್ನು ಲೋಡ್ ಮಾಡಿಕೊಂಡು ನಾನು ಮತ್ತು ನಮ್ಮ ಲಾರಿಯ ಚಾಲಕನಾದ ಅನಿಲ ತಂದೆ ಚಂದ್ರು ವಯಾ : 27 ವರ್ಷ ಜಾತಿ : ಒಕ್ಕಲಿಗ ಸಾ : ಎಂ.ಹೊಸಕೊಪ್ಪಲು ಇಬ್ಬರೂ ಕೂಡಿ ವಿಜಯಪೂರ, ಹುನಗುಂದ, ಇಲಕಲ್ ಮಾರ್ಗವಾಗಿ ಶಿರಾಕ್ಕೆ ಹೋಗುತ್ತಿರುವಾಗ ನಮ್ಮ ಲಾರಿಯ ಚಾಲಕನಾದ ಅನಿಲ ಇತನು ತಾನು ನಡೆಸುತ್ತಿದ್ದ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಾತ್ರಿ 7-00 ಗಂಟೆಯ ಸುಮಾರಿಗೆ ಕುಷ್ಟಗಿಯ ಟೆಂಗುಂಟಿ ಕ್ರಾಸ್ ನಲ್ಲಿ ಇರುವ ರೋಡ್ ಹಂಪ್ಸನ್ನು ನೋಡದೇ ಲಾರಿಯನ್ನು ನಡೆಸಿ ಒಮ್ಮೊದ್ದೊಮ್ಮೆಲೆ ಬ್ರೇಕ್ ಮಾಡಿದ್ದರಿಂದ ಸದರಿ ಲಾರಿಯ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಬ್ರಿಡ್ಜ ತಡೆ ಗೊಡೆಗೆ ಟಕ್ಕರ ಮಾಡಿದ್ದರಿಂದ ಲಾರಿಯು ಇಲಕಲ್ ಕಡೆಗೆ ಮುಖವಾಗಿ ನಾಲ್ಕು ಗಾಲಿಗಳು ಮೇಲಾಗಿ ಬಿದ್ದಿದ್ದು ಇದರಿಂದ ನಮ್ಮ ಲಾರಿಯಲ್ಲಿದ್ದ ನನಗೆ ಯಾವುದೇ ಗಾಯ ವಗೈರಾ ಆಗಿರುವದಿಲ್ಲ, ಮತ್ತು ನಮ್ಮ ಲಾರಿಯ ಚಾಲಕನಾದ ಅನಿಲ ಇತನಿಗೆ ಬಲಗಾಲು ಮೊಣಕಾಲಿಗೆ  ತೆರಚಿದ ಗಾಯವಾಗಿದ್ದು ಇರುತ್ತದೆ. ಮತ್ತು ನಮ್ಮ ಲಾರಿಯ ಮುಂದಿನ ಕ್ಯಾಬಿನ್  ಪೂರ್ತಿ ಜಖಂಗೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
3]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 78/2017 ಕಲಂ. 279, 337 ಐ.ಪಿ.ಸಿ:.
ದಿನಾಂಕ: 23-06-2017 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ: 22-06-2017 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಆರೋಪಿತನು ತಮ್ಮ ಕಾರ್ ನಂ: ಕೆಎ-37 ಎಂ-8379 ನೇದ್ದನ್ನು ತೆಗೆದುಕೊಂಡು ತಮ್ಮ ಊರಾದ ಸೂಡಿ ಗ್ರಾಮಕ್ಕೆ ಹೋಗುತ್ತಿದ್ದಾಗ, ಆರೋಪಿತನು ಸಂಕನೂರು ಕ್ರಾಸ್ ದಾಟಿದ ನಂತರ ತಾನೂ ನಡೆಸುತ್ತಿದ್ದ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು, ವೇಗದ ಮೇಲೆ ನಿಯಂತ್ರಣ ತಪ್ಪಿ ರಸ್ತೆ ಎಡ ಬದಿಗೆ ತಗ್ಗಿನಲ್ಲಿ ಬಿದ್ದಿದ್ದು ಇರುತ್ತದೆ. ಇದರಿಂದ ಆರೋಪಿತನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಹಾಗೂ ಕಾರು ಮುಂದಿನ ಭಾಗ ಹಾಗೂ ಕಾರಿನ ಇನ್ನಿತರೆ ಭಾಗಗಳು ಸಂಪೂರ್ಣವಾಗಿ ಜಕಂಗೊಂಡಿರುತ್ತವೆ, ಕಾರಣ ಅಫಘಾತ ಪಡಿಸಿದ ಕಾರ ಚಾಲಕನಾದ ಅಭಿಷೇಕ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 33/2017 ಕಲಂ. 279, 338 ಐಪಿಸಿ:
ದಿನಾಂಕ. 23-06-2017 ರಂದು ಮದ್ಯಾಹ್ನ 3-30 ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿಯ ಹೇಳಿಕೆಯ ಸಾರಾಂಶವೆನೆಂದರೆ, ಇಂದು ದಿನಾಂಕ. 23-06-2017 ರಂದು ಬೆಳಿಗ್ಗೆ 8-20 ಗಂಟೆಗೆ ಗಾಯಾಳು ಸೀಜಾವುದ್ದೀನ್ ಇತನು ತನ್ನ ಮೋಟಾರ್ ಸೈಕಲ್ ನಂಬರ. KA-29/S-1245 ನೆದ್ದನ್ನು ಚಲಾಯಿಸಿಕೊಂಡು ಜಾವಾಹರ ರಸ್ತೆಯ ಮೇಲೆ ದುರುಗಮ್ಮನ ಗುಡಿಯ ಹತ್ತಿರ ರಸ್ತೆಯ ಮೇಲೆ ಬಂದು ಮಾರ್ಕೇಟ ಕಡೆಗೆ ಹೊಗುತ್ತಿರುವಾಗ ಅಜಾದ ಸರ್ಕಲ್ ಕಡೆಯಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ ನಂಬರ ಇರದ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಯಾಳುವಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಸೀಜಾವುದ್ದೀನ್ ಇತನಿಗೆ ಬಲಕಾಲ ಮೋಣಕಾಲ ಕೆಳಗೆ ಬಾರಿ ಒಳಪೆಟ್ಟು, ಬಲಕಣ್ಣಿನ ಹತ್ತಿರ ಳಪೆಟ್ಟು ಆಗಿರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
5] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 140/2017 ಕಲಂ. 78(3) Karnataka Police Act.
ದಿನಾಂಕ:   22-06-2017 ರಂದು 9-00 ಗಂಟೆ ಸುಮಾರಿಗೆ ಠಾಣೆ ವ್ಯಾಪ್ತಿಯ ತಿಗರಿ ಕಡೆಯಿಂದ ಆರೋಪಿತರಾದ ಚಾಲಕ ಮತ್ತು ಮಾಲಿಕರು ತಮ್ಮ ಲಾರಿ ನಂ: ಕೆ.ಎ-53/ಬಿ- 676 ನೇದ್ದರಲ್ಲಿ ಸರ್ಕಾರಕ್ಕೆ ಸೇರಿದ ತಿಗರಿ ಗ್ರಾಮದ ಹತ್ತಿರ ತುಂಗಭದ್ರ ನದಿಯಲ್ಲಿಯ ಅಂದಾಜು 10,000-00 ರೂ. ಬೆಲೆ ಬಾಳುವ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಕಳ್ಳತನ ಮಾಡಿಕೊಂಡು, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಲಾರಿಯಲ್ಲಿ ತುಂಬಿಕೊಂಡು ಬರುತ್ತಿರುವಾಗ ಕಂಪ್ಲಿ ಗ್ರಾಮದ ಬೈರಾಪೂರ ಕ್ರಾಸನಲ್ಲಿ ಶ್ರೀ ಶಂಕರಪ್ಪ ಎಲ್ ಪಿ.ಎಸ್.ಐ. ರವರು ಸಿಬ್ಬಂದಿಯೊಂದಿಗೆ ಹಿಡಿದಿದ್ದು ಚಾಲಕನು ಸ್ಥಳದಿಂದ ಕತ್ತಲಲ್ಲಿ ತಪ್ಪಿಸಿಕೊಂಡು ಹೋಗಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಲಾರಿಯನ್ನು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 147/2017 ಕಲಂ. 32, 34 ಕೆ.ಇ. ಕಾಯ್ದೆ:
ದಿನಾಂಕ: 23-06-2017 ರಂದು ಬೆಳಿಗ್ಗೆ 09-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಗೂ ಆರೋಪಿತನನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ, ಕುಷ್ಟಗಿ ಠಾಣಾ ವ್ಯಾಪ್ತಿಯ ಸಾಯಿ ಸ್ಟೀಲ್ ಪ್ಯಾಕ್ಟರಿಯ ಹತ್ತಿರ ಇರುವ  ಐಶ್ವರ್ಯ ಡಾಬಾದಲ್ಲಿ ಅನಧಿಕೃತವಾಗಿ ಯಾವುದೇ ಲೈಸನ್ಸ ವಗೈರಾ ಹೊಂದಿರದೇ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮೀ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಒಬ್ಬ ಆರೋಪಿತನನ್ನು ಹಾಗೂ  ಅವನಿಂದ 180 ಎಂ.ಎಲ್. ನ ಒಟ್ಟು 40 ಹೈವಾರ್ಡ್ಸ  ಸರಾಯಿ ಟೆಟ್ರಾಪ್ಯಾಕ್ ಅಂ.ಕಿ. 2250=80 ರೂ, ಮತ್ತು ನಗದು ಹಣ 200=00 ರೂ. ಗಳನ್ನು ಜಪ್ತು ಮಾಡಿಕೊಂಡು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


0 comments:

 
Will Smith Visitors
Since 01/02/2008