1] ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 165/2017 ಕಲಂ. 279, 336 ಐ.ಪಿ.ಸಿ. .
ದಿನಾಂಕ : 26-06-2017 ರಂದು ರಂಜಾನ್ ಹಬ್ಬದ ಬಂದೋ ಬಸ್ತ
ಕುರಿತು ಪ್ರಕಾಶ ಮಾಳಿ ಪಿ.ಎಸ್.ಐ. ರವರು ಹಳ್ಳಿಗಳಲ್ಲಿ
ಪೆಟ್ರೋಲಿಂಗ್ ಕುರಿತು ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಹೆಚ್.ಸಿ- 173 ಹಾಗೂ ನಮ್ಮ
ಜೀಪ್ ಚಾಲಕ ಕೂಡಿ ನಮ್ಮ ಸರಕಾರಿ ಜೀಪ್ ನಂಬರ್ : ಕೆ.ಎ- 37 / ಜಿ- 307 ನೇದ್ದರಲ್ಲಿ
ಬಸಾಪಟ್ಟಣದ, ದಾಸನಾಳ ಗ್ರಾಮದಲ್ಲಿ ಪೆಟ್ರೋಲಿಂಗ ಮುಗಿಸಿಕೊಂಡು ಮುಕ್ಕುಂಪಿಯಲ್ಲಿ ಮದ್ಯಾಹ್ನ
1-00 ಗಂಟೆಯ ಸುಮಾರಿಗೆ ಇದ್ದಾಗ್ಗೆ ಗಂಗಾವತಿ ಕೊಪ್ಪಳ ಮುಖ್ಯ ರಸ್ತೆಯ
ಮೇಲೆ ಗಂಗಾವತಿ ಕಡೆಯಿಂದ ಒಬ್ಬ ಟ್ರ್ಯಾಕ್ಸ ಚಾಲಕ ತನ್ನ ಟ್ರ್ಯಾಕ್ಸನ್ನು ಅತೀ ವೇಗ
ಹಾಗೂ ಅಲಕ್ಷತನದಿಂದ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಇತರರ ಪ್ರಾಣಕ್ಕೆ ಅಪಾಯವಾಗುವ
ರೀತಿಯಲ್ಲಿ ಓಡಿಸಿಕೊಂಡು ಹೊರಿಟಿದ್ದಾಗ್ಗೆ ಕರ್ತವ್ಯದ ಮೇಲಿದ್ದ ನಾವು
ನೋಡಿ ಮುಂದೆ ಆಗುವ ಅನಾಹುತ ತಪ್ಪಿಸುವ ಉದ್ದೇಶದಿಂದ ಸದರ ಟ್ರ್ಯಾಕ್ಸ ವಾಹನ
ಚಾಲಕನಿಗೆ ವಾಹನವನ್ನು ನಿಲ್ಲಿಸುವಂತೆ ಹೇಳಿದೇವು. ನಂತರ ಸದರ್ ಟ್ರ್ಯಾಕ್ಸ ನಂಬರ್ ನೋಡಲು
ಅದರ ನಂಬರ್ ಕೆ.ಎ- 37 / ಎ- 0294 ಅಂತಾ ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ ನಾಗರಾಜ
ತಂದಿ ಹೊನ್ನಪ್ಪ ಕಬ್ಬೇರ ವಯಾ- 25 ವರ್ಷ ಜಾ- ಕಬ್ಬೇರ ಉ- ಟ್ರ್ಯಾಕ್ಸ ಚಾಲಕ ಸಾ-
ವಕೀಲ್ ಗೇಟ್ ಗಂಗಾವತಿ ಅಂತಾ ಹೇಳಿದನು. ಇವನನ್ನು ಹಾಗೆ ಬಿಟ್ಟಲ್ಲಿ ಮುಂದೆ ಹೊಗಿ ಯಾವುದಾದರು
ಅಪಘಾತಮಾಡುವ ಸಂಭವ ಹೆಚ್ಚಾಗಿ ಕಂಡುಬಂದಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈ ಗೊಂಡಿರುತ್ತಾರೆ.
2] ಹನುಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ. 67/2017 ಕಲಂ. 341, 323,
324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ: 26-06-2017 ರಂದು ಸಾಯಾಂಕಾಲ 18-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಮಲ್ಲವ್ವ ಗಂಡ ದುರಗಪ್ಪ ದೊಡ್ಡಮನಿ, ಸಾ: ಹಿರೇಗೊಣ್ಣಾಗರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರಪಡಿಸಿದ್ದರ ಸಾರಾಂಶವೇನೆಂದರೆ. ಫಿರ್ಯಾದಿದಾರರು ಮತ್ತು ಆರೋಪಿತರ ಹೊಲಗಳು ಅಕ್ಕಪಕ್ಕದಲ್ಲಿದ್ದು, ಆರೋಪಿತರು ಫಿರ್ಯಾದಿದಾರರ ಹೊಲವನ್ನು ಒತ್ತುವರಿ ಮಾಡಿ ಕಲ್ಲು ಕಿತ್ತು ಹಾಕಿದ್ದು, ಈ ಬಗ್ಗೆ ಇಬ್ಬರಲ್ಲಿ ಬಾಯಿ ಮಾತಿನ ಜಗಳವಾಗಿ ವೈಷಮ್ಯ ಬೆಳೆದಿದ್ದು, ದಿನಾಂಕ: 25-6-2017 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರು ಫಿರ್ಯಾದಿ ಹಾಗೂ ಅವರ ಗಂಡ, ಮಗಳು ಮತ್ತು ಫಿರ್ಯಾದಿಯ ತಂಗಿಯ ಮಗ ರಮೇಶ ರವರು ಕೂಡಿ ಹೊಲದಲ್ಲಿ ಕೆಲಸ
ಮುಗಿಸಿಕೊಂಡು ವಾಪಸ್ ಮನೆಗೆ ಹೊಲದ ಬದುವಿನ ಹತ್ತಿರ ಬರುವಾಗ ಆರೋಪಿತರು ಕೈಯಲ್ಲಿ ಕಟ್ಟಿಗೆ ಹಾಗೂ
ಕೊಡಲಿ ಕಾವು ಹಿಡಿದುಕೊಂಡು ಬಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆರೋಪಿ ಸೋಮಪ್ಪನು ಕಟ್ಟಿಗೆಯಿಂದ
ಫಿರ್ಯಾದಿಯ ಗಂಡನ ದುಬ್ಬಕ್ಕೆ ಹೊಡೆದಿದ್ದು, ಆರೋಪಿ ಸುರೇಶನು ಫಿರ್ಯಾದಿಯ ಗಂಡನ
ಬಲ ಕಿವಿಗೆ ಕೈಯಿಂದ ಗುದ್ದಿದ್ದು, ಆಗ ಬಿಡಿಸಲು ಹೋದ ಫಿರ್ಯಾದಿಗೆ ಆರೋಪಿ
ಸೋಮಪ್ಪನು ಕೈಯಿಂದ ದೂಕಿ ನೆಲಕ್ಕೆ ಕೆಡವಿದ್ದು, ಆಗ ಫಿರ್ಯಾದಿಯ ಮಗಳು
ಬಿಡಿಸಲು ಹೋದಾಗ ಆರೋಪಿ ವಿಠಲನು ಕೈಯಲ್ಲಿದ್ದ ಕೊಡಲಿ ಕಾವಿನಿಂದ ಫಿರ್ಯಾದಿಯ ಮಗಳ ಎಡಗಾಲಿಗೆ ಹೊಡೆದು
ಗಾಯ ಮಾಡಿದ್ದು, ಸೋಮಪ್ಪನು ಫಿರ್ಯಾದಿದಾರರಿಗೆ ಅವಾಚ್ಯ ಬೈದು,
ಜೀವ ಬೆದರಿಕೆ ಹಾಕಿದಾಗ ಅಲ್ಲೇ ಇದ್ದ ಬಸಪ್ಪ ಕೊಪ್ಪಳ, ಮತ್ತು ಮಲ್ಲಪ್ಪ ಕೊಪ್ಪಳ ಸಾ: ನರಸಾಪೂರ ರವರು ಜಗಳ ಬಿಡಿಸಿದ್ದು,
ಜಗಳದಲ್ಲಿ ಫಿರ್ಯಾದಿಯ ಗಂಡ ದುರಗಪ್ಪನಿಗೆ ದುಬ್ಬಕ್ಕೆ ಗಾಯವಾಗಿ, ಬಲಕಿವಿಗೆ ಮೂಖ ಪೆಟ್ಟಾಗಿದ್ದು, ನಂತರ ನಿನ್ನೆ ಮನೆಯಲ್ಲಿಯೇ
ಉಳಿದುಕೊಂಡು ಇಂದು ಹಿರಿಯರನ್ನು ವಿಚಾರಿಸಿ ತಡವಾಗಿ ಠಾಣೆಗೆ ಬಂದು ಆರೋಪಿತರ ವಿರುದ್ದ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
3] ಅಳವಂಡಿ
ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ: 87
karnataka Police Act.
ದಿನಾಂಕ: 26-06-2017 ರಂದು ಮಧ್ಯಾಹ್ನ 5-30 ಗಂಟೆಗೆ ಪಿ.ಎಸ್.ಐ. ರವರು ಇಸ್ಪೇಟ್ ಜೂಜಾಟದ ದಾಳಿಯಿಂದ
ವಾಪಸ್ ಠಾಣೆ ಬಂದು, ಮೂಲ ವರದಿಯೊಂದಿಗೆ ಇಸ್ಪೀಟ್ ಜೂಜಾಟದಲ್ಲಿ ಜಪ್ತಿ ಮಾಡಿದ ಮುದೇಮಾಲುಗಳನ್ನು ಹಾಗೂ
04 ಜನ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು, ಸದರಿ ವರದಿಯನ್ನು ಪರಿಶೀಲಿಸಿ ನೋಡಲಾಗಿ
ಫಿರ್ಯಾಧಿದಾರರಾದ ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆ ರವರು, ಹಾಗೂ ಸಿಬ್ಬಂದಿ,
ಪಂಚರು ಕೂಡಿಕೊಂಡು ದಿನಾಂಕ: 26-06-2017 ರಂದು ಮಧ್ಯಾಹ್ನ
3-45 ಗಂಟೆಗೆ ಠಾಣಾ ವ್ಯಾಪ್ತಿಯ ಅಳವಂಡಿ ಗ್ರಾಮ ಸೀಮಾ ಘಟ್ಟರಡ್ಡಿಹಾಳ ಗ್ರಾಮ ಸೀಮಾ ಗೌಸಸಾಬ ಗಡಾದ
ಎಂಬುವರ ಜಮೀನಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್
ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದ್ದು, 04 ಜನ ಆರೋಪಿತರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ
ಜೂಜಾಟಕ್ಕೆ ಬಳಸಿದ ನಗದು ಹಣ ರೂ. 3,750=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು, ಹಾಗೂ ಒಂದು ಪ್ಲಾಸ್ಟೀಕ್
ಬರ್ಕಾವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಬಂದು ಮೂಲ ಪಂಚನಾಮೆ
ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 122/2017 ಕಲಂ. 32, 34 ಕೆ.ಇ. ಕಾಯ್ದೆ:
ದಿನಾಂಕಃ-26-06--2017 ರಂದು
ಸಾಯಂಕಾಲ 6-45 ಗಂಟೆಯ ಸುಮಾರಿಗೆ ಹುಳ್ಕಿಹಾಳ ಗ್ರಾಮ ಆರೋಪಿ ರಾಜಕುಮಾರ ತಂದೆ ಭೀಮಯ್ಯ ಇತನು ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ
ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವಾಗ ಮಾನ್ಯ ಎ.ಎಸ್.ಐ. ಸಾಹೇಬರು ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ
ಸಮಕ್ಷಮ ದಾಳಿ ಮಾಡಿ ಆರೋಪಿ ರಾಜಕುಮಾರ ಈತನು ತನ್ನ ಮನೆಯಲ್ಲಿ ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ
1] 180 ಎಂ.ಎಲ್.ದ, 17 ಓಲ್ಡ್ ಟಾವರನ್ ಮದ್ಯದ ಬಾಟಲಿಗಳು ಅ.ಕಿ.ರೂ.1,165.52/- 2] 180 ಎಂ.ಎಲ್.ದ
14 8 ಪಿ.ಎಂ. ಮದ್ಯದ ಬಾಟಲಿಗಳು ಅ.ಕಿ.ರೂ. 959.84/- 3] 90 ಎಂ.ಎಲ್. 6 ಓರಿಜಿನಲ್ ಚ್ವಯಿಸ್
ಮದ್ಯದ ಬಾಟಲಿಗಳು ಅ.ಕಿ.ರೂ.168.78/- ಗಳು ಈಗ್ಗೆ ಒಟ್ಟು 37 ವಿವಿಧ ನಮೂನೆಯ ಮದ್ಯದ ಬಾಟಲಿಗಳು ಒಟ್ಟು
ಅ.ಕಿ.ರೂ. 2294=14 ಗಳ ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 123/2017 ಕಲಂ. 143, 147, 148, 341, 323, 324, 395, 504, 506 ಸಹಿತ 149 ಐ.ಪಿ.ಸಿ:
ದಿನಾಂಕ:-26-06-2017 ರಂದು ರಾತ್ರಿ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಸವರಾಜ ತಂದಿ
ಲಕ್ಷ್ಮಣ ಬಿಳಗಿ ವಯಾ-25 ವರ್ಷ ಜಾ.ಲಿಂಗಾಯತ ಸಾ. ಗುಡೂರು ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ
ಒಂದು ಲಿಖಿತ ದೂರು ನೀಡಿದ್ದು ದಿನಾಂಕ:-26-06-2017 ರಂದು ಸಾಯಂಕಾಲ 6-40 ಗಂಟೆಯ ಸುಮಾರಿಗೆ ನಾನು
ನನ್ನ ಸೋಮನಾಳ ಮೂಲಕ ನನ್ನ ಗದ್ದೆಗೆ ಹೋಗುವಾಗ ಮಾರ್ಗಮದ್ಯದಲ್ಲಿ ಸೊಮನಾಳ ಗ್ರಾಮದ ನಿವಾಸಿಗಳಾದ 1)
ಪರಸಪ್ಪ ತಂದಿ ಹನುಮಂತ ಪಚ್ಚಿ ಜಾ. ನಾಯಕ ಸಾ. ಸೋಮನಾಳ 2) ಗಿರಯಪ್ಪ ತಂದಿ ಹನುಮಂತ ಪಚ್ಚಿ ಜಾ. ನಾಯಕ
ಸಾ. ಸೋಮನಾಳ 3) ಭೀಮಪ್ಪ ತಂದಿ ಹನುಮಂತ ಪಚ್ಚಿ ಜಾ. ನಾಯಕ ಸಾ. ಸೋಮನಾಳ 4) ಲಚಮಪ್ಪ ತಂದಿ ಹನುಮಂತ
ಪಚ್ಚಿ ಜಾ. ನಾಯಕ ಸಾ. ಸೋಮನಾಳ 5) ಯಮನೂರ ತಂದಿ ಹನುಮಂತ ಪಚ್ಚಿ ಜಾ. ನಾಯಕ ಸಾ. ಸೋಮನಾಳ 6) ಯಮನೂರ
ತಂದಿ ಗಿರಿಯಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 7) ಬಸವರಾಜ ತಂದಿ ಗಿರಿಯಪ್ಪ ಪಚ್ಚಿ ಜಾ. ನಾಯಕ
ಸಾ. ಸೋಮನಾಳ, 8) ಶಿವಪ್ಪ ತಂದಿ ಗಿರಿಯಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 9) ಆಂಜನೇಯ ತಂದಿ
ಗಿರಿಯಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 10) ಶಿವಪ್ಪ ತಂದಿ ಹುಲಗಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ,
11) ಪರಸಪ್ಪ ತಂದಿ ಭೀಮಪ್ಪ ಪಚ್ಚಿ ಜಾ. ನಾಯಕ ಸಾ. ಸೋಮನಾಳ, 12) ಶರಣಬಸವ ಪಚ್ಚಿ ಜಾ. ನಾಯಕ ಸಾ.
ಸೋಮನಾಳ ಮತ್ತು ಇತರರು ಬಂದು ನನ್ನ ಬೈಕ ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ನಿಂದಿಸಿದ್ದಲ್ಲದೇ ನನ್ನನ್ನು
ಹೊಡೆ ಬಡೆ ಮಾಡಿ ಮರಣಾಂತಿವಾಗಿ ಹಲ್ಲೆ ಮಾಡಿ ನನ್ನ ತೆಲೆಗೆ ಮಚ್ಚಿನಿಂದ ಹೊಡೆದು ಹಣೆಗೆ ಕೈಕಾಲುಗಳಿಗೆ
ಗಾಯಗಳಾಗಿರುತ್ತವೆ ಹಾಗೂ ನನ್ನ ಜೇವಿನಲ್ಲಿದ್ದ ರೂ,30000=00 ಗಳನ್ನು ಮತ್ತು 20 ಗ್ರಾಂ ಚಿನ್ನದ
ಸರವನ್ನು ದೋಚಿದ್ದಾರೆ ನನ್ನ ಮೇಲೆ ಮರಣಾಂತಿವಾಗಿ ಹಲ್ಲೆ ಮಾಡುವಾಗ ನಾನು ಚಿರಾಡುವುದನ್ನು ಗಮನಿಸಿ
ಶಿವಪ್ಪ ತಂದಿ ಪಂಪಾಪತೆಪ್ಪ ಜೀನೂರ ಅಮರೇಗೌಡ ತಂದಿ ಆದನಗೌಡ ಮಾಲೀಪಾಟೀಲ್, ಇವರಿಬ್ಬರು ಬಂದು ಅವರಿಂದ
ರಕ್ಷಣೆ ಮಾಡಿದ್ದಾರೆ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆ
ಕುರಿತು ಹೋರಟಿದ್ದು ಮೇಲಿನವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment