Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, July 1, 2017

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 379 ಐ.ಪಿ.ಸಿ ಮತ್ತು MMRD 1957 Rule 4,  4(1), 4(A):.
ದಿನಾಂಕ: 30-06-2017 ರಂದು ಮಧ್ಯಾಹ್ನ 12-00 ಗಂಟೆಯ ಜಿಲ್ಲೆಯಲ್ಲಿ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿರುವ ಆಕ್ರಮ ಮರಳು ನಿಯಂತ್ರಣ ಕುರಿತು ತಮ್ಮ ಜೀಪ ನೇದ್ದರಲ್ಲಿ ಚಾಲಕ ರವರೊಂದಿಗೆ ಗಸ್ತು ತಿರುಗುತ್ತಿರುವ ಕಾಲಕ್ಕೆ ಠಾಣೆ ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಗರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ರಸ್ತೆಯಲ್ಲಿ ತುಂಗಭದ್ರ ನದಿ ಕಡೆಯಿಂದ 1] ಲಾರಿ ಕೆ.ಎ- 28/ಬಿ-0376 ರ ಚಾಲಕ / ಮಾಲಿಕ ದಸ್ತಗಿರಿ ಸಾಬ ಈತನು ಮತ್ತು 2] ಕೆ.ಎ.-26/ಎ-2336 ರ ಚಾಲಕ ಮಹ್ಮದಸಾಬ ಈತನು ತನ್ನ ಲಾರಿಯಲ್ಲಿ ಮಾಲಿಕರ ಒಪ್ಪಿಗೆಯ ಮೇರೆಗೆ ಮರಳು ತುಂಬಿಕೊಂಡು ಬಂದಿದ್ದು ನಂತರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಪಿ.ಎಸ್.ಐ. ಅಳವಂಡಿ ಠಾಣೆ ರವರನ್ನು ಸ್ಥಳಕ್ಕೆ ಬರಮಾಡಿಕೊಂಡು ಅವರ ಸಮಕ್ಷಮದಲ್ಲಿ ಮರಳಿನ ಬಗ್ಗೆ ಲಾರಿ ಚಾಲಕರನ್ನು ವಿಚಾರಿಸಲು ಸರಕಾರಕ್ಕೆ ಸೇರಿದ ಮತ್ತೂರ ಗ್ರಾಮದ ಹತ್ತಿರ ಬರುವ ತುಂಗಭದ್ರ ನದಿಯಿಂದ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೆ, ಮರಳನ್ನು ಮಾರಾಟ ಮಾಡಿ, ಲಾಭ ಗಳಿಸುವ ಉದ್ಧೇಶದಿಂದ ಮರಳನ್ನು ಕಳ್ಳತನ ಮಾಡಿಕೊಂಡು ಬಂದಿರುವದಾಗಿ ತಿಳಿಸಿದ್ದರಿಂದ ಎರಡು ಲಾರಿಗಳನ್ನು ಚಾಲಕರ ಸಮೇತ ವಶಕ್ಕೆ ತಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದಾರೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 151/2017 ಕಲಂ. 379 ಐ.ಪಿ.ಸಿ ಮತ್ತು  4 4(1) KMC Rules 1994:.
ದಿ:30-06-2017 ರಂದು ಬೆಳಿಗ್ಗೆ 10-45 ಗಂಟೆಗೆ ಕಿನ್ನಾಳ ಕಡೆಯಿಂದ ಆರೋಪಿತನು ಟಿಪ್ಪರ ವಾಹನದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುವಾಗ ಫಿರ್ಯಾದಿದಾರರು ಶ್ರೀ ಗುರುರಾಜ. ಪಿ.ಎಸ್.ಐ ಸಿಬ್ಬಂದಿಗಳ ಸಂಗಡ ಚಿಲವಾಡಗಿ ಗ್ರಾಮದ ಸಿಬಿರಕಟ್ಟಿ ಹತ್ತಿರ ಬಾತ್ಮಿ ಪ್ರಕಾರ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ, ಆರೋಪಿ ನಂ: 02 ನೇದ್ದವರು ತನ್ನ ಮಾಲೀಕತ್ವದ ಟಿಪ್ಪರ ನಂ: ಜಿಎ-04/ಟಿ-4477 ನೇದ್ದರಲ್ಲಿ ಕೊಪ್ಪಳ ತಾಲ್ಲೂಕಾ ಮಾದಿನೂರ ಸಮೀಪದ ಹಿರೇಹಳ್ಳದಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಕೊಟ್ಟಿದ್ದರಿಂದ ಆರೋಪಿ ನಂ: 01 ನೇದ್ದವರು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದಾ ಅಕ್ರಮವಾಗಿ ಮರಳು ಸಾಗಾಟ ಮಾಡುವಾಗ ಸಿಕ್ಕಿ ಬಿದ್ದಿದ್ದು ಇರುತ್ತದೆ. ಸದರಿ ಆರೋಪಿ ನಂ: 01 ನೇದ್ದವರಿಂದ ಪಂಚರ ಸಮಕ್ಷಮ ಸುಮಾರು 10,000=00 ರೂ. ಬೆಲೆಬಾಳುವ ಮರಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಟಿಪ್ಪರ ವಾಹನ ಅಂ,ಕಿ 2,00,000=00 ರೂ, ಬೆಲೆಬಾಳುವ ದನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2017 ಕಲಂ. 174 ಸಿ.ಆರ್.ಪಿ.ಸಿ:.

ದಿನಾಂಕ :30-06-2017 ರಂದು ಬೆಳಿಗ್ಗೆ 11-30 ಗಂಟೆಗೆ  ಫಿರ್ಯಾದಿದಾರರು ಫಿರ್ಯಾದಿ ನೀಡಿದ್ದು,  ನಮ್ಮ ತಂದೆಯವರು ಒಕ್ಕಲುತನ ಮಾಡುವ ಸಲುವಾಗಿ ಪ್ರಗತಿ ಗ್ರಾಮೀಣ ಬ್ಯಾಂಕ ದೋಟಿಹಾಳ ಇವರಲ್ಲಿ ಸುಮಾರು 45,000=00,ಸಾಲವನ್ನು ಮಾಡಿಕೊಂಡಿದ್ದು  ಹಾಗೂ 1993 ರಲ್ಲಿ ಕುಷ್ಟಗಿ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ದಿ ಬ್ಯಾಂಕ ನಿಯಮಿತ, ಕುಷ್ಟಗಿಯಲ್ಲಿ ಸುಮಾರು 44,000=00 ರೂ ಗಳಷ್ಟು  ಸಾಲ ಮಾಡಿದ್ದು ಇರುತ್ತದೆ. ಈಗ್ಗೆ ಸುಮಾರು 1 ವರ್ಷದ ಹಿಂದೆ ಸದರಿ ಬ್ಯಾಂಕಿನವರು ಬ್ಯಾಂಕ ಸಾಲ ಕಟ್ಟಲು ತಿಳಿಸಿದ್ದು, ನಮ್ಮ ತಂದೆ ಈಗ್ಗೆ 2-3 ವರ್ಷಗಳಿಂದ ಮಳೆ ಸರಿಯಾಗಿ ಆಗದೇ ಬೆಳೆಯು ಸರಿಯಾಗಿ ಬರದೇ ಇದ್ದುದ್ದರಿಂದ ನಮ್ಮ ತಂದೆಯವರು ಬ್ಯಾಂಕಿಗೆ ಸಾಲ ಕಟ್ಟಲು ಆಗುತ್ತಿಲ್ಲಾ ಅಂತಾ ಪೆಚಾಡುತ್ತಿದ್ದರು. ದಿನಾಂಕ:30-06-2017 ರಂದು ಮುಂಜಾನೆ 06-00 ಗಂಟೆಯ ಸುಮಾರಿಗೆ ನಮ್ಮ ತಂದೆಯು ಹೊಲಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದರು. ನಂತರ ಸುದ್ದಿ ಗೊತ್ತಾಗಿದ್ದೇನೆಂದರೆ ನಮ್ಮ ತಂದೆಯು ಹೊಲದಲ್ಲಿ ಯಾವುದೋ ಕ್ರಿಮಿನಾಷಕ ಔಷದಿ ಸೇವಿಸಿ ಅಸ್ತವ್ಯಸ್ತನಾಗಿರುತ್ಥಾನೆ. ಅಂತಾ ಗೊತ್ತಾಗಿ ಕೂಡಲೇ ನಾನು ಮತ್ತು ನಮ್ಮ ಅಣ್ಣನಾದ ಬಸನಗೌಡ ಇಬ್ಬರೂ ಕೂಡಿ  ಹೊಲಕ್ಕೆ ಹೋಗಿ ನೋಡಲಾಗಿ ವಿಷಯ ಸಂಗತಿ ನಿಜವಿದ್ದು ಕೂಡಲೇ ನಮ್ಮ ತಂದೆಯನ್ನು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಇಲಕಲ್ ಗೆ ಕರೆದುಕೊಂಡು ಹೋಗಿ ಉಪಚಾರ ,ಕುರಿತು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 08-20 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ

0 comments:

 
Will Smith Visitors
Since 01/02/2008