Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, July 2, 2017

1] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 71/2017 ಕಲಂ. 87 Karnataka Police Act.
ದಿನಾಂಕ:-01.07.2017 ರಂದು ಮುಂಜಾನೆ 9:30 ಗಂಟೆ ಸುಮಾರಿಗೆ ಬೇವೂರ ಗ್ರಾಮದ ಹಾಲಿನ ಡೈರಿ ಹತ್ತಿರ ಊರ ಒಳಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 05 ಜನ ಆರೋಪಿತರು 1} ಮಲ್ಲಪ್ಪ ತಂದೆ ದ್ಯಾಮಪ್ಪ ಕರಡಿ ವಯ: 45 ವರ್ಷ ಜಾತಿ: ಗಾಣಿಗೇರ ಉ: ಒಕ್ಕಲುತನ ಸಾ: ಬೇವೂರ 2} ಶರಣಪ್ಪ ತಂದೆ ಬಸಪ್ಪ ತಳವಾರ ವಯ: 35 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಕುಡಗುಂಟಿ 3} ಹನುಮಂತಗೌಡ ತಂದೆ ತ್ರಿಪುರಾರಿಗೌಡ ಟಣಕನಕಲ ವಯ: 40 ವರ್ಷ ಜಾತಿ: ಗಾಣಿಗೇರ ಉ: ಒಕ್ಕಲುತನ   ಸಾ: ಬೇವೂರ 4) ಪತ್ರೆಪ್ಪ ತಂದೆ ನಿಂಗಪ್ಪ ಗಡಿಹಳ್ಳ ವಯ: 28 ವರ್ಷ ಜಾತಿ: ಗಾಣಿಗೇರ ಉ: ಒಕ್ಕಲುತನ ಸಾ: ಬೇವೂರ  5) ಲೇಷಪ್ಪ ತಂದೆ ಮಂಗಳೇಶಪ್ಪ ಜತ್ತಿ ವಯ: 52 ವರ್ಷ ಜಾತಿ: ಬಣಜಿಗ ಉ: ಒಕ್ಕಲುತನ ಸಾ: ಬೇವೂರ     ಇವರೆಲ್ಲರೂ ಸಿಕ್ಕಿ ಬಿದ್ದಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 3050=00 ರೂ ನಗದು ಹಣ ಹಾಗೂ ಇಸ್ಪೆಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ. 78 (iii) Karnataka Police Act.
ದಿನಾಂಕ 01-07-2017 ರಂದು ಮಧ್ಯಾಹ್ನ 1-20 ಗಂಟೆಯ ಸುಮಾರಿಗೆ ಆರೋಪಿತನಾದ ಶರೀಫ್ ಸಾಬ ತಂದೆ ಕಾಸಿಂ ಸಾಬ, ವಯಸ್ಸು 50 ವರ್ಷ, ಜಾ: ಮುಸ್ಲಿಂ ಉ: ಸೈಕಲ್ ರಿಕ್ಷಾ ಚಾಲಕ, ಸಾ: ಶರಣ ಬಸವೇಶ್ವರ ಕ್ಯಾಂಪ್ ತಾ: ಗಂಗಾವತಿ  ಇವನು ಗಂಗಾವತಿ ನಗರದ ಗಣೇಶ ಸರ್ಕಲ್ ದ ಸ್ವಸ್ತಿಕ್ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಪಿ.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (1) ನಗದು ಹಣ ರೂ. 430-00. (2) ಮಟ್ಕಾ ನಂಬರ ಬರೆದ 1 ಪಟ್ಟಿ (03) ಒಂದು ಬಾಲ್ ಪೆನ್ನು ಇವುಗಳು ದೊರೆತಿದ್ದು. ಆರೋಪಿತನಿಂದ ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದುಕೊಂಡು ಸದರಿಯವನ ಮೇಲೆ ಕಲಂ 78 (iii) ಕೆ.ಪಿ.ಆ್ಯಕ್ಟ್  ಅಡಿಯಲ್ಲಿ ಕ್ರಮ ಜರುಗಿಸುವಂತೆ ನೀಡಿದ ವರದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 135/2017  ಕಲಂ.78 (iii) ಕೆ.ಪಿ.ಆ್ಯಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 141/2017 ಕಲಂ. 32, 34 ಕೆ.ಇ. ಕಾಯ್ದೆ.
ದಿನಾಂಕ: 01-07-2017 ರಂದು ರಂದು 7-15 ಗಂಟೆಗೆ ಆರೋಪಿ ಉಲ್ಲಾಸ ತಂದೆ ತಿಮ್ಮಣ್ಣ ಕೊಂಡಿಕಾರ, ವಯಾ: 32 ವರ್ಷ, ಜಾ: ಉಪ್ಪಾರ, ಉ: ಹೋಟೆಲ್ ಕೆಲಸ, ಸಾ: ಗುಂಡಮ್ಮ ಕ್ಯಾಂಪ್ ಗಂಗಾವತಿ ಇತನು ಗಂಗಾವತಿಯ ಗುಂಡಮ್ಮ ಕ್ಯಾಂಪಿ ಪರಿವಾರ ಬೇಕಾರಿ ಹಿಂದಿನ ಸಾರ್ವಜನಿಕ ರಸ್ತೆಯಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ 1] 214 ಓರಿಜಿನಲ್ ಚಾಯಿಸ್ ಡಿಲಕ್ಸ  ವಿಸ್ಕಿಯ 90 ಎಂ.ಎಲ್. ನ ಹಾಗೂ 2] 40 ಓರಿಜಿನಲ್ ಚಾಯಿಸ್ ಡಿಲಕ್ಸ  ವಿಸ್ಕಿಯ 180 ಎಂ.ಎಲ್. ಈಗೆ ಒಟ್ಟು 8270-62 ರೂ. ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಜಪ್ತಿಡಿಸಿಕೊಂಡಿದ್ದು ಇರುತ್ತದೆ ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.  175/2017 ಕಲಂ: 34 ಕರ್ನಾಟಕ ಅಬಕಾರಿ ಕಾಯ್ದೆ.
ದಿನಾಂಕ:- 01-07-2017 ರಂದು ಸಂಜೆ ದಾಸನಾಳ ಬ್ರಿಡ್ಜ ಹತ್ತಿರ ಬೆಟ್ಟಪ್ಪ ಎಂಬುವವರು ಅಕ್ರಮ ಮಧ್ಯ ಮಾರಾಟದಲ್ಲಿ ತೊಡಗಿರುವಾಗ ದಾಳಿ ಮಾಡಿದ ನಂತರ ಪುನ: ದಾಸನಾಳ ಬ್ರಿಡ್ಜ ಪಕ್ಕದಲ್ಲಿ ಸೈಯ್ಯದ್ ತಂದೆ ಹುಸೇನ್ ಸಾಬ ಎಂಬ ವ್ಯಕ್ತಿಯು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದಿದ್ದು, ಮುಂಚೆ ಸಿಕ್ಕಿದ್ದ ಬೆಟ್ಟಪ್ಪನ ಕಾವಲು ಕುರಿತು ಪಿ.ಸಿ. 328 ರಮೇಶ ಇವರನ್ನು ನೇಮಿಸಿ ದಾಳಿ ಮಾಡುವ ಕುರಿತು ಪಿ.ಸಿ. ನಂ: 180 ಶರಣಪ್ಪ, ಪಿ.ಸಿ. 43 ಸಂಗಮೇಶ, ಪಿ.ಸಿ. 363 ಮರಿಶಾಂತಗೌಡ, ಹೆಚ್.ಸಿ. 173 ವೆಂಕರೆಡ್ಡಿ ಹಾಗೂ ಇಬ್ಬರು ಪಂಚರನ್ನು ಸಂಗಡ ಕರೆದುಕೊಂಡು ನಡೆದುಕೊಂಡು ಹೊರಟು ಮಾಹಿತಿ ಇದ್ದ ಪ್ರಕಾರ ದಾಸನಾಳ ಬ್ರಿಡ್ಜ್ ಹತ್ತಿರ ಹೋಗಿ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ ಅಲ್ಲಿ ದಾಸನಾಳ ಬ್ರಿಡ್ಜ್ ಪಕ್ಕದಲ್ಲಿ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಪಕ್ಕದ ಮೌಲಾಸಾಬ ಗಂಗಾವತಿ ಎಂಬುವವರ ಶೆಡ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವನ ಹತ್ತಿರ ಇದ್ದ ಮಧ್ಯದ ಪಾಕೇಟಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಆಗ ಸಮಯ ಸಂಜೆ 5:00 ಗಂಟೆಯಾಗಿತ್ತು. ಕೂಡಲೇ ಸದರಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲಾಗಿ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದವನು ಸಿಕ್ಕಿಬಿದ್ದಿದ್ದು, ವಿಚಾರಿಸಲು ಅವನು ತನ್ನ ಹೆಸರು ಸೈಯ್ಯದ ತಂದೆ ಹುಸೇನ್ ಸಾಬ ಗಂಗಾವತಿ, ವಯಸ್ಸು 21 ವರ್ಷ, ಜಾತಿ: ಮುಸ್ಲೀಂ : ಮಧ್ಯ ಮಾರಾಟ ಸಾ: ಹೊಸ ಹಿರೇಬೆಣಕಲ್. ತಾ: ಗಂಗಾವತಿ ಅಂತಾ ತಿಳಿಸಿದನು. ಅವನಿಗೆ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಯಾವುದಾದರೂ ಅಧಿಕೃತ ಪರವಾನಿಗೆ/ ಲೈಸೆನ್ಸ್ ಇದೆಯೇ ? ಅಂತಾ ವಿಚಾರಿಸಲು ಅವನು ತನ್ನ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿದ್ದ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ ಮಧ್ಯದ ಟೆಟ್ರಾ ಪಾಕೇಟಗಳನ್ನು ಪರಿಶೀಲಿಸಲಾಗಿ ಅದರಲ್ಲಿ Old Tavern Whisky 180 ml 18  ಟೆಟ್ರಾ ಪಾಕೇಟಗಳು ( ಪ್ರತಿಯೊಂದರ ಬೆಲೆ ರೂ. 68.56)  ಅಂದಾಜು ಕಿಮ್ಮತ್ತು  ರೂ. 1,234.08/- ಬೆಲೆ ಉಳ್ಳ ಮಧ್ಯದ ಟೆಟ್ರಾ ಪಾಕೇಟಗಳು ಸಿಕ್ಕಿದ್ದು, ಹಾಗೂ ಮಧ್ಯ ಮಾರಾಟದಿಂದ ಬಂದ ನಗದು ಹಣ ರೂ. 2,500-00 ಗಳು ಸಿಕ್ಕಿದ್ದು ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
5] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ.  164/2017 ಕಲಂ: 107 ಸಿ.ಆರ್.ಪಿ.ಸಿ.

ದಿನಾಂಕ:01-07-2017 ರಂದುಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.. ಕುಷ್ಟಗಿ ಠಾಣೆ ರವರು  ಗುಮಗೇರಿ ಗ್ರಾಮದಲ್ಲಿ ಪೆಟ್ರೊಲಿಂಗ್ ಕುರಿತು ಹೋಗಿದ್ದಾಗ ಮಾಹಿತಿ ತಿಳಿದು ಬಂದಿದ್ದು, ಶಿವಪುತ್ರಪ್ಪ ತಾಯಿ ನರಸಮ್ಮ ವಯಾ: 45 ವರ್ಷ ಜಾತಿ: ಹರಿಜನ ಉ:ಒಕ್ಕಲುತನ ಸಾ:ಗುಮಗೇರಿ ತಾ: ಕುಷ್ಟಗಿಇತನು ಕುಷ್ಟಗಿ ಪೊಲೀಸ್ ಠಾಣೆಯ ರೌಡಿಶೀಟದಾರರಾಗಿದ್ದು, ಸದರಿಯವನು ಮುಂದೆ ಬರುವ ಗಣೇಶ ಚತುರ್ಥಿ ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಸಂಭವವಿರುವದರಿಂದ ಸದರಿಯವರ ವಿರುದ್ದ ಮುಂಜಾಗ್ರತಾ ಕ್ರಮವಾಗಿ ಕಲಂ.107 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008