Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, July 15, 2017

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 174/2017 ಕಲಂ. 379  ಐ.ಪಿ.ಸಿ:
ದಿನಾಂಕ 14-07-2017 ರಂದು ಸಾಯಂಕಾಲ 5-00 ಗಂಟೆಗೆ ಗವಿಸಿದ್ದೇಶ ತಂದೆ ಚಿನ್ನಪ್ಪ ಅಕ್ಕಿ ವಯಸ್ಸು 42 ವರ್ಷ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ 379 ಐ.ಪಿ.ಸಿ. ಪ್ರಕರಣದಲ್ಲಿ ಜಪ್ತಿ ಪಡಿಸಿದ ಹಿರೋ ಕಂಪನಿಯ ಫ್ಯಾಶನ್ ಪ್ರೋ ಮೋಟಾರ ಸೈಕಲ್ ನಂ. ಕೆ.ಎ 36 ವಾಯ್, 1469 ( ನಂಬರ ಬದಲಾಯಿಸಿದೆ) ( ವಾಹನದ ಮೂಲ ನೊಂದಣಿ ಸಂ. ಕೆ.ಎ.35/ಎಕ್ಸ್-2571 ) ಚಾಸ್ಸಿ ನಂ :MBLHA10AWCHL53511 ಇಂಜಿನ್ ನಂ : HA10ENCHL14273 ಅಂ.ಕಿ. ರೂ 30,000-00 ಬೆಲೆ ಬಾಳುವದನ್ನು ನೋಡಿ ತಮ್ಮದೆಂದು ಗುರುತಿಸಿ ಸದರಿ ಮೋಟಾರ ಸೈಕಲ್ ನ್ನು  ದಿನಾಂಕ 30-06-2015 ರಂದು ಸಾಯಂಕಾಲ 7-00 ಗಂಟೆಯಿಂದ 7-30 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿದಾರರ ಮೋಟಾರ ಸೈಕಲ್ ನ್ನು ಅವರ ಸಹೋದರನು ತೆಗೆದುಕೊಂಡು ಹೋಗಿ ಅದನ್ನು ಗಂಗಾವತಿ ನಗರದ ಆನೇಗುಂದಿ ರಸ್ತೆಯ ರಾಮದೇವರ ಗುಡಿ ಹತ್ತಿರ ಇರುವ ವೀಣಾ ಡಾಕ್ಟರ್ ಆಸ್ಪತ್ರೆ ಮುಂದೆ ನಿಲ್ಲಿಸಿರುವುದನ್ನು (01) ರಾಜಾ @ ರಾಜಾಹುಸೇನ @ ಚಂಡ್  ತಂದೆ ಶ್ರೀನಿವಾಸ @  ದಾವಲಸಾಬ ವಯ 25 ವರ್ಷ ಜಾ: ಮುಸ್ಲಿಂ ಉ: ಡ್ರೈವರ ಸಾ: ಝಂಡಾ ಕಟ್ಟೆ ಹತ್ತಿರ ಇಸ್ಲಾಂಪುರ, ಗಂಗಾವತಿ. (02) ಸದ್ದಾಂ @ ರಿಯಾಜ್ ತಂದೆ ರಫೀಕಸಾಬ ಸಾ: ಮಹಿಬೂಬು ನಗರ, ಗಂಗಾವತಿ ರವರು ಕಳ್ಳತನ ಮಾಡಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 176/2017 ಕಲಂ. 143, 147, 148, 323, 324, 395, 506 ಸಹಿತ 149  ಐ.ಪಿ.ಸಿ:
ದಿನಾಂಕ 14-07-2017 ರಂದು ರಾತ್ರಿ 11-30 ಗಂಟೆಗೆ ಮನೋಹರಸ್ವಾಮಿ ತಂದೆ ಅಯ್ಯಸ್ವಾಮಿ ಹಿರೇಮಠ ಜಾ: ಲಿಂಗಾಯತ ಸಾ: ಇಸ್ಲಾಂಪುರ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ 14-07-2017 ರಂದು ರಾತ್ರಿ 10-12 ಗಂಟೆಗೆ ಫಿರ್ಯಾದಿದಾರರು ಸಿ.ಬಿ.ಎಸ್. ಗಂಜದಲ್ಲಿರುವ ತಮ್ಮ ಅಂಗಡಿಯಲ್ಲಿರುವಾಗ ಆರೋಪಿತರಾದ ನವೀನ ಹಾಗೂ ಇತರರು ಅಕ್ರಮ ಕೂಟ ರಚಿಸಿಕೊಂಡು ದಿಢೀರನೆ ಫಿರ್ಯಾದಿದಾರರ ಅಂಗಡಿಯೊಳಗೆ ಹೋಗಿ ಫಿರ್ಯಾದಿದಾರರಿಗೆ ಮಾರಣಾಂತಿಕ ಹಲ್ಲೆ ಮಾಡಿ ಇವನನ್ನು ಮುಗಿಸಿ ಬಿಡೋಣವೆಂದು ಚಾಕುವಿನಿಂದ ಕೊಲೆಯತ್ನ ಮಾಡಿ ಹೊಡಿ-ಬಡಿ ಮಾಡಿ ಫಿರ್ಯಾದಿದಾರರ 05 ತೊಲೆಯ ಬಂಗಾರದ ಚೈನ, ಉಂಗುರ ಮತ್ತು ಬ್ರಾಸಲೈಟ್ ಮತ್ತು ನಗದು ಹಣ ರೂ.3,000-00 ಮತ್ತು ದಾಖಲೆಗಳನ್ನು ದೋಚಿಕೊಂಡು ಹೋಗಿರುತ್ತಾರೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ. 78(3) Karnataka Police Act.

ದಿನಾಂಕ: 14-07-2017 ರಂದು ರಾತ್ರಿ 9:30 ಗಂಟೆಗೆ ಎ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ತಾವರಗೇರಾ ಪಟ್ಟಣದ ಸಿಂಧನೂರು ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ವ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 1770=00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಒಬ್ಬ ಆರೋಪಿ ಕೃಷ್ಣಪ್ಪ ತಂದೆ ಮಾನಪ್ಪ ಬಡಿಗೇರಾ ಸಾ: ತಾವರಗೇರಾ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಗುನ್ನೆ ದಾಖಲಿಸಿಕೊಂಡು ತಪಾಸಣೆಯನ್ನು ಕೈ ಕೊಂಡಿದ್ದು ಇರುತ್ತದೆ.    

0 comments:

 
Will Smith Visitors
Since 01/02/2008