Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, July 19, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 217/2017 ಕಲಂ. 20(b)(ii)(A) NDPS Act 1985.
ದಿನಾಂಕ:- 18-07-2017 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವಿರುಪಾಪೂರು ಗಡ್ಡಿಯ ಹಳೆಯ ಸೇತುವೆಯ ಕೆಳಗೆ  ಸಾರ್ವಜನಿಕರಿಗೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ಡಾ|| ಸೋಮಪ್ಪ, ಪಶು ವೈದ್ಯಾಧಿಕಾರಿಗಳು ಮತ್ತು ಸಹಾಯ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಗಂಗಾವತಿ ಮತ್ತು ಶ್ರೀ ದೀಪಕ ಬೂಸರೆಡ್ಡಿ ಸಿ.ಪಿ.ಐ. ಹಾಗೂ ಸಿಬ್ಬಂದಿಯವರಾದ  ಪಿ.ಸಿ. 358, 363, ಸಿ.ಹೆಚ್.ಸಿ. 80, 173, 191, ಎ.ಪಿ.ಸಿ. 211 ಬಸವರಾಜ ಮತ್ತು ನೋಟಿಸ್ ಮೂಲಕ ಬರಮಾಡಿಕೊಂಡ ಇಬ್ಬರು ಪಂಚರಾದ (1) ಶ್ರೀ ಆನಂದರೆಡ್ಡಿ  ಸಾ: ಹನುಮನಹಳ್ಳಿ   (2) ಶ್ರೀ ಮಲ್ಲೇಶ ಸಾ: ಹನುಮನಹಳ್ಳಿ ಇವರನ್ನು ಕರೆದುಕೊಂಡು ಸರಕಾರಿ ಜೀಪ್ ಗಳಲ್ಲಿ ಮಧ್ಯಾಹ್ನ 3:00 ಗಂಟೆಗೆ ಗಂಗಾವತಿಯಿಂದ ಹೊರಟು ಮಾಹಿತಿ ಇದ್ದ ಪ್ರಕಾರ ವಿರುಪಾಪೂರು ಗಡ್ಡಿ ಸೇತುವೆಯಿಂದ ಸ್ವಲ್ಪ ದೂರದಲ್ಲಿ ಜೀಪುಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲು ಹಳೆಯ ಸೇತುವೆಯ ಕೆಳ ಭಾಗದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದುಕೊಂಡು ಪೇಪರನ ಸಣ್ಣ ಸಣ್ಣ ಪೊಟ್ಟಣಗಳನ್ನು ಕೊಡುತ್ತಿದ್ದರು. ನಾವು ನೋಡಿ ಸಂಶಯ ಬಂದು ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಎಲ್ಲರು ಕೂಡಿಕೊಂಡು ದಾಳಿ ಮಾಡಿ ಸಾರ್ವಜನಿಕರು ಓಡಿ ಹೋಗಿದ್ದು, ಪೊಟ್ಟಣಗಳನ್ನು ಕೊಡುತ್ತಿದ್ದ ವ್ಯಕ್ತಿಗಳು ಸಿಕ್ಕಿಬಿದ್ದಿದ್ದು, ಅವರ ಹೆಸರು ವಿಚಾರಿಸಲು (1) ಪಂಪಾ ತಂದೆ ಹಳ್ಳಪ್ಪ, ವಯಸ್ಸು 30 ವರ್ಷ, ಜಾತಿ: ಚಲವಾದಿ ಉ: ಆಟೋ ಚಾಲಕ ಸಾ: ವಿರುಪಾಪೂರ ಗಡ್ಡಿ (2) ಕುಮಾರ ತಂದೆ ಶಿವಪ್ಪ ವಯಸ್ಸು 24 ವರ್ಷ, ಜಾತಿ: ಚಲವಾದಿ ಉ: ಡ್ರೈವರ್ ಸಾ: ವಿರುಪಾಪೂರು ಗಡ್ಡಿ ಎಂದು ತಿಳಿಸಿದ್ದು ಗೆಜೆಟೆಡ್ ಅಧಿಕಾರಿಗಳಾದ ಡಾ|| ಸೋಮಪ್ಪ ಇವರ ಸಮಕ್ಷಮ ಅವರಿಗೆ ಜಡ್ತಿ ಮಾಡಿ ಪರಿಶೀಲನೆ ಮಾಡಿ ನೋಡಲು ಪಂಪಾ ಇವನ ಹತ್ತಿರ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಪೇಪರನ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಎಲೆಯ ಹಾಗೂ ಹೂವಿನ ಒಣಗಿದ ಪುಡಿ ಪುಡಿಯಾದ ಒಣಗಿದ ಗಾಂಜಾ ಇದ್ದು,   ಕುಮಾರನ ಹತ್ತಿರ ಗಾಂಜಾ ಮಾರಾಟದಿಂದ ಬಂದ ಹಣ ರೂ. 150-00 ಗಳು ಸಿಕ್ಕವು.  ತೂಕ ಮಾಡಿಸಲಾಗಿ  ಒಟ್ಟು 146 ಗ್ರಾಂ ಗಾಂಜಾ  ಅಂದಾಜ ಕಿಮ್ಮತ್ತು ರೂ. 500-00 ಇದ್ದು, ಪೊಟ್ಟಣ ಕಟ್ಟಿದ ಖಾಲಿ ಹಾಳೆಗಳನ್ನು ತೂಕ ಮಾಡಲು ಅವು ಒಟ್ಟು 74 ಗ್ರಾಂ ಇರುತ್ತವೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ :17-07-2017 ರಂದು ಬಸಪ್ಪ ಇವರ ಸ್ಪ್ಲೇಂಡರ್ ಮೋಟಾರ ಸೈಕಲ್ ನಂ : ಕೆ.-17-ಆರ್-644 ನೇದ್ದರ ಮೇಲೆ ಹುಲ್ಲಪ್ಪ ತಂದೆ ಹನುಮಪ್ಪ ಹಿಂದೆ ಕುಳಿತುಕೊಂಡು ಕುಷ್ಟಗಿಗೆ ಬಂದು ತಹಶೀಲ ಕಛೇರಿಯಲ್ಲಿ ಪಹಣಿ ಪತ್ರಿಕೆ ತೆಗೆಯಿಸಿಕೊಂಡು ಹನುಮಸಾಗರ ಮಾರ್ಗವಾಗಿ ನಮ್ಮೂರಿಗೆ ಹೋಗುತ್ತಿರುವಾಗ ತಳುವಗೇರಿ ದಾಟಿದ ನಂತರ ಎದುರುಗಡೆಯಿಂದ  ಒಂದು ವಾಹನವನ್ನು ಅದರ ಚಾಲಕನು ಅಲಕ್ಷ್ಯತನದಿಂದ ಅತಿವೇಗವಾಗಿ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ ನಡೆಸುತ್ತಿದ್ದ ಬಸಪ್ಪನ ಮೋಟಾರ ಸೈಕಲಗೆ ಡಿಕ್ಕಿಕೊಟ್ಟಿದ್ದರಿಂದ ನಾವಿಬ್ಬರೂ ಕೆಳಗೆ ಬಿದ್ದೇವು. ಸದರಿ ವಾಹನ ನಿಲ್ಲಿಸಿದೇ ಕುಷ್ಟಗಿ ಕಡೆಗೆ ಹೊರಟು ಹೋಯಿತು ಸದರೊ ವಾಹನ ನೋಡಲಾಗಿ ಮೋಟರ ಎತ್ತುವ ವಾಹನವಿದ್ದು ಅದರ ನಂಬರ ವಗೈರೆ ನೋಡಿರುವುದಿಲ್ಲಾ. ಸದರಿ ಘಟನೆಯಿಂದ ನನ್ನ ಬಲತೊಡೆ ಮುರಿದಿದ್ದು ನನ್ನ ಮುಂಗೈ ಹಿಂದೆ ಮುರಿದಿದೆ. ಬಸಪ್ಪ ಗುಡದೂರ ಇತನಿಗೆ ಎಡ ಹಣೆಗೆ ಮತ್ತು ಬಲಹಣೆಗೆ ಗಾಯಗಳಾಗಿದ್ದು ಮೂಗಿನ ಮೇಲೆ ಮತ್ತು ಕೆಳಗೆ ತೆರಚಿದ ರಕ್ತಗಾಯವಾಗಳಾಗಿ, ಎಡಕಪಾಳಕ್ಕೆ ತೆರಚಿದ ಗಾಯ ಗದ್ದಕ್ಕೆ ರಕ್ತಗಾಯವಾಗಿ, ಬಲಗೈ ತೋರಬೆರಳು, ಹೆಬ್ಬೇರಳು, ಎಡಗೈ ಮುಂಗೈ ಹತ್ತಿರ ಮತ್ತು ಬೆರಳುಗಳಿಗೆ ತೆರಚಿದ ರಕ್ತಗಾಯಗಳಾಗಿದ್ದು, ಬಲಗಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯವಾಗಿ ಮೊಣಕಾಲು ಚಿಪ್ಪು ಕಿತ್ತಿ ಭಾರಿ ರಕ್ತ ಗಾಯವಾಗಿರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 191/2017 ಕಲಂ. 279, 337 ಐ.ಪಿ.ಸಿ:

ದಿನಾಂಕ 23-01-2017 ರಂದು ಸಂಜೆ 6-30 ಪಿ.ಎಂ ಸುಮಾರಿಗೆ ಪಿರ್ಯಾದುದಾರರು ಕಾಸನಕಂಡಿ – ಬಗನಾಳ ರಸ್ತೆಯೆ ಮೇಲೆ ಹರೆಕೃಷ್ಣ ಫ್ಯಾಕ್ಟರಿಯ ಹತ್ತಿರ ರಸ್ತೆಯ ಪಕ್ಕದಲ್ಲಿ ನಿಂತಿರುವಾಗ  ಲಾರಿ ನಂ ಕೆ.ಎ.35/ ಬಿ 7606 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಬಲಗಾಲಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದುದಾರರ ಬಲಗಾಲ ಪಾದಕ್ಕೆ ರಕ್ತಗಾಯವಾಗಿರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

0 comments:

 
Will Smith Visitors
Since 01/02/2008