Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, July 20, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 218/2017 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ:- 19-07-2017 ರಂದು 6:45 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ನಿಂಗಮ್ಮ ಗಂಡ ದುರಗಪ್ಪ, ವಯಸ್ಸು 35 ವರ್ಷ, ಜಾತಿ: ಗೊಲ್ಲರು ಸಾ: ಇಂದ್ರಗಿ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ನನ್ನ ಗಂಡನ ಸಹೋದರನ ಮಗನಾದ ಪಂಪಾಪತಿ ತಂದೆ ಹನುಮಂತಪ್ಪ ಗೊಲ್ಲರ, ವಯಸ್ಸು 18 ವರ್ಷ, ಉ: ದನ ಮತ್ತು ಕುರಿ ಕಾಯುವುದು ಸಾ: ರಾಮದುರ್ಗ ಈತನು ಇಂದು ದಿನಾಂಕ:- 19-07-2017 ರಂದು ಸಂಜೆ 6:00 ಗಂಟೆಗೆ ಕುರಿ ಮತ್ತು ದನಗಳನ್ನು ಮೇಯಿಸಿಕೊಂಡು ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ದಾಸನಾಳ ಬ್ರಿಡ್ಜ ದಾಟಿ ಚೆಕ್ ಪೋಸ್ಟ್ ಹತ್ತಿರ ರಸ್ತೆಯ ಎಡ ಬದಿಗೆ ನಡೆದುಕೊಂಡು ಬರುತ್ತಿರುವಾಗ ಕೊಪ್ಪಳ ಕಡೆಯಿಂದ ಬಂದ ಲಾರಿ ನಂಬರ್: ಟಿ.ಎನ್-52/ ಎಫ್-7814 ನೇದ್ದರ ಚಾಲಕ ಮುರುಘನ್ ತಂದೆ ಓಚ್ಚಾ ತೇವರ್ ಸಾ: ತಮಿಳುನಾಡು ಈತನು ಲಾರಿಯನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪಂಪಾಪತಿಗೆ ಟಕ್ಕರ್ ಕೊಟ್ಟು ಅಪಘಾತಮಾಡಿದ್ದು, ಇದರಿಂದ ಪಂಪಾಪತಿಯ ತಲೆಗೆ ಹಾಗೂ ಹೊಟ್ಟೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.   
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 215/2017 ಕಲಂ. 379 ಐ.ಪಿ.ಸಿ ಹಾಗೂ 4(1), 4(1ಎ), 21 MMRD Act 1957:
ದಿನಾಂಕ:19-07-2017 ರಂದು ಶ್ರೀ ವಿಶ್ವನಾಥ ಹೆಚ್ ಹಿರೇಗೌಡರ ಪಿ.ಎಸ್.ಐ ಕುಷ್ಟಗಿ ಪೊಲೀಸ್ ಠಾಣೆ, ರವರು ಸರಕಾರಿ ತರ್ಪೇ ಪಿರ್ಯಾದಿಯೊಂದಿಗೆ ಮೂಲ ಪಂಚನಾಮೆ ಹಾಗೂ ಮುದ್ದೆಮಾಲು ಮತ್ತು ಮೂರು ಜನ ಲಾರಿ ಚಾಲಕರನ್ನು ಹಾಜರಪಡಿಸಿದ್ದು ಪಿರ್ಯಾದಿಯ ಸಾರಾಂಶವೆನೆಂದರೆ, ಖಚಿತ ಬಾತ್ಮಿ ಕುಷ್ಟಗಿ–ತಾವರಗೇರಾ ರೋಡಿನಲ್ಲಿ ಮಾರುತಿ ಡಾಬಾದ ಹತ್ತಿರ ತಾವರಗೇರಾ ಕಡೆಯಿಂದ ಮೂರು ಲಾರಿಗಳಲ್ಲಿ ಆರೋಪಿತರಾದ 1) ಮಲ್ಲಿಕಾರ್ಜುನ ತಂದೆ ಗೋವಿಂದ ಕಮ್ಮೂರಿ ವಯಾ 26 ವರ್ಷ ಜಾ: ಬಡಿಗೇರ, ಉ: ಲಾರಿ ಎ.ಪಿ.21-ಟಿ.ಡಬ್ಯೂ-3037  ನೇದ್ದರ ಚಾಲಕ ಸಾ: 1-43 ಎರಕುಲ ಚಿರುವು, ಮಂಡಲಂ: ಕೃಷ್ಣಗಿರಿ ತಾ:ಜಿ: ಕರ್ನೂಲ್ ರಾಜ್ಯ:ಆಂದ್ರಪ್ರದೇಶ 2) ಹನುಮಂತು ಕುರುವ, ಲಾರಿ ಎ.ಪಿ.21-ಟಿ.ಡಬ್ಯೂ-3037  ನೇದ್ದರ ಲಾರಿ ಮಾಲೀಕ 3) ವೀರೇಶ ತಂದೆ ವೀರಣ್ಣ ಕುಮ್ಮಾರಿ, ವಯಾ 40 ವರ್ಷ ಜಾ: ಕುಮ್ಮಾರಿ ಉ: ಲಾರಿ ಎ.ಪಿ-02-ಟಿ.ಬಿ-5256 ನೇದ್ದರ ಚಾಲಕ ಸಾ: ಕಂಪಾಡು, ಮಂಡಲಂ: ಸಿ.ಬೆಲಗಲ ತಾ:ಕೋಡುಮುರು ಜಿ: ಕರ್ನೂಲ ರಾಜ್ಯ: ಆಂದ್ರಪ್ರದೇಶ 4) ಮಸ್ತಾನಶೇಖ ತಂದೆ ಮೀರಾಸಾಬ ಲಾರಿ ಎ.ಪಿ-02-ಟಿ.ಬಿ-5256 ನೇದ್ದರ ಮಾಲೀಕ ಸಾ: ನೆಲ್ಲೂರು  5) ಸುಭಾನ ಬಾಷ ತಂದೆ ಮದಾರಸಾಹೇಬ ನೂರ, ವಯಾ 27 ವರ್ಷ, ಜಾತಿ: ಮುಸ್ಲಿಂ, ಉ: ಲಾರಿ .ಪಿ-26-ಟಿ.ಟಿ.7277 ನೇದ್ದರ ಚಾಲಕ, ಸಾ: ಅರ್.ಟಿ.ಸಿ. ಕಾಲೋನಿ ಆದೋನಿ 6) ಹುಸೇನ ತಂದೆ ಮದರಸಾಹೇಬ ಲಾರಿ .ಪಿ-26-ಟಿ.ಟಿ.7277 ನೇದ್ದರ ಮಾಲೀಕ ಸಾ: ಗುಡುರು. ಜಿಲ್ಲಾ: ನೆಲ್ಲೂರು ಇವರುಗಳ ಪೈಕಿ ಕ್ರ.ಸಂ 01,03,05 ನೇದ್ದವರು ಕ್ರ.ಸಂ 02,04,06 ನೇದ್ದವರ ಸೂಚನೆ ಮೇರೆಗೆ ಇವರ ಮೂರು ಲಾರಿಗಳಲ್ಲಿ ಚಾಲಕರು ಯಾವುದೇ ಪರವಾನಿಗೆಯನ್ನು ಮತ್ತು ದಾಖಲಾತಿಗಳನ್ನು ಹಾಗೂ ಇತರೇ ಕಾಗದ ಪತ್ರಗಳನ್ನು ಹೊಂದದೆ ಅನಧಿಕೃತವಾಗಿ ಆಂದ್ರಾ ಪ್ರದೇಶ ರಾಜ್ಯದ ಪತ್ತಿಕೊಂಡ ಸೀಮಾಂತರದ ಚಕ್ರಾಲಾ ವೆಂಕಟೇಶ್ವರ ರೆಡ್ಡಿ ಕ್ವಾರಿ ಎಸ್.ಕೆ.ಹೆಚ್. ಗ್ರಾನೈಟ್ ಕ್ವಾರಿಯಲ್ಲಿಂದ ಮತ್ತು ಕಲ್ಲಕುಂಟಾದ ಮನೋಹರ ಕರವ ರವರ ಕ್ವಾರಿಯಿಂದ ಕಳ್ಳತನದಿಂದ ಲೋಡಮಾಡಿಕೊಂಡು ತಮ್ಮ ಲಾಭಕೊಸ್ಕರ ಮಾರಾಟ ಮಾಡಲು  ಕುಷ್ಟಗಿ  ಶ್ರೀರಾಮ ಗ್ರಾನೈಟ ಪ್ಯಾಕ್ಟರಿಗೆ ಬರುತ್ತಿರುವಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದುಕೊಂಡು ಮೂರು ಲಾರಿಗಳಲ್ಲಿ ಇದ್ದ ಕಲ್ಲು ಗಳ ಅಂದಾಜು ಕಿಮ್ಮತ್ತು 1,65,000=00 ರೂ ಬೆಲೆಬಾಳುವುದನ್ನು ಜಪ್ತಿ ಮಾಡಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


0 comments:

 
Will Smith Visitors
Since 01/02/2008